ವಿಶೇಷ ಲೇಖನ

FIRಗಳೇ ಇಲ್ಲದೇ RSS ಗಲಭೆಯನ್ನು ಹೇಗೆ ರೂಪಿಸುತ್ತೆ ? ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿಕೆಯ ಅಸಲಿಯತ್ತೇನು?

Reading…
Follow Us

ಲೇಖನ: ನವೀನ್ ಸೂರಿಂಜೆ

ಆರ್​​ಎಸ್​​ಎಸ್​ ಸಂಘಟನೆಯ ವಿರುದ್ಧ ದಾಖಲಾದ ಪ್ರಕರಣವೆಷ್ಟು ? ಸದರೀ ಸಂಘಟನೆಯು ಯಾವುದಾದರೂ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದೆಯೇ ? ರಾಜ್ಯದಲ್ಲಿ ಸದರಿ ಸಂಘಟನೆಯ ಪಥ ಸಂಚಲನ ಅಥವಾ ಶಾಖೆ ನಡೆಸುವ ಸಂದರ್ಭದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ಜರುಗಿದ ಪ್ರಕರಣಗಳು ಬೆಳಕಿಗೆ ಬಂದಿವೆಯೇ ? ಎಂದು ವಿಧಾನಪರಿಷತ್ತಿನಲ್ಲಿ ನಾರಾಯಣಸ್ವಾಮಿ ಅನ್​​​ ಸ್ಟಾರ್ಡ್​​ ಪ್ರಶ್ನೆ ಕೇಳಿದ್ದಾರೆ. ಈ ಪ್ರಶ್ನೆಗೆ ಗೃಹ ಸಚಿವ ಪ್ರಿಯಾಂಕ್​ ಖರ್ಗೆಯವರು ‘ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ’ ಎಂಬ ಒಂದು ವಾಕ್ಯದ ಲಿಖಿತ ಉತ್ತರ ಒದಗಿಸಿದ್ದಾರೆ. ಈ ತಾಂತ್ರಿಕ ಪ್ರಶ್ನೆ- ಉತ್ತರದ ಪ್ರತಿಯನ್ನು ಬಿಜೆಪಿಯ ಬಹುತೇಕ ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಗೃಹ ಸಚಿವರನ್ನು ಟ್ರೋಲ್ ಮಾಡುತ್ತಿದ್ದಾರೆ. ‘ಆರ್​ಎಸ್ಎಸ್​ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುವ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರೇ ಆರ್​ಎಸ್​​ಎಸ್​ ಗಲಭೆ ಮಾಡಿಲ್ಲ, ಎಫ್​ಐಆರ್ ಇಲ್ಲ, ಯಾವ ಪ್ರಕರಣದಲ್ಲೂ ಭಾಗಿಯಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ’ ಎಂದು ಸಂಭ್ರಮಿಸಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾವರು ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ‘ಕುಡಿದಾಗ ಒಂದು ರೀತಿಯ ಹೇಳಿಕೆ, ನಶೆ ಇಳಿದಾಗ ಒಂದು ರೀತಿಯ ಹೇಳಿಕೆ’ ಎಂದು ಟೀಕಿಸಿದ್ದಾರೆ.

ಹಾಗಿದ್ದರೆ ಆರ್.ಎಸ್.ಎಸ್ ಶಾಖೆ, ಪಥಸಂಚಲನದಲ್ಲಿ ಗಲಭೆ ರೂಪುಗೊಳ್ಳುವುದೇ ಇಲ್ಲವೇ ? ಆರ್.ಎಸ್.ಎಸ್ ಗಲಭೆಗಳನ್ನು ಯಾರಿಗಾಗಿ, ಹೇಗೆ, ಯಾರಿಂದ ಮಾಡಿಸಲಾಗುತ್ತದೆ ? ಪೊಲೀಸರು ಸೂತ್ರದಾರಿಗಳ ಮೇಲೆ ಯಾಕೆ ಎಫ್​ಐಆರ್ ದಾಖಲಿಸುವುದಿಲ್ಲ. ರಾಜ್ಯದಲ್ಲಿ ನಡೆದಿರುವ ನೂರಾರು ಗಲಭೆ ಪ್ರಕರಣಗಳಲ್ಲಿ ಆರ್​ಎಸ್​ಎಸ್ ಪಾತ್ರವಿಲ್ಲವೇ? ಹಾಗಿದ್ದರೂ ಆರ್​ಎಸ್​ಎಸ್​ ತನಕ ಪೊಲೀಸ್ ತನಿಖೆ ಯಾಕೆ ಹೋಗಿಲ್ಲ ? ಹೋಗಲ್ಲ ? ಆರ್​ಎಸ್​​ಎಸ್ ಪಿತೂರಿಕೋರತನದ ಒಂದು ಸಣ್ಣ ಉದಾಹರಣೆ ಬಗ್ಗೆ ಭಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರ ಆತ್ಮಕತೆ ‘ನಡುಬಗ್ಗಿಸದ ಎದೆಯ ದನಿ’ ಪುಸ್ತಕದಲ್ಲಿ ಬಯಲು ಮಾಡಲಾಗಿದೆ. ಈ ಪುಸ್ತಕವನ್ನು ಲಡಾಯಿ ಪ್ರಕಾಶನ ಹೊರತಂದಿದೆ.

ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು
ವೀಡಿಯೊ

ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು

CJP ಒಂದೆರಡು ರಾಜ್ಯಗಳಲ್ಲಿ ಅಧಿಕಾರ ಹಿಡಿದರೆ ಅಚ್ಚರಿಯೇನಿಲ್ಲ; ರಾಷ್ಟ್ರೀಯ ಮಟ್ಟದಲ್ಲಿ ‘ತೃತೀಯ ಶಕ್ತಿ’ಯಾಗುವುದು ಅನುಮಾನ: ಪಿ. ಚಿದಂಬರಂ
ರಾಷ್ಟ್ರೀಯ ಸುದ್ದಿ

CJP ಒಂದೆರಡು ರಾಜ್ಯಗಳಲ್ಲಿ ಅಧಿಕಾರ ಹಿಡಿದರೆ ಅಚ್ಚರಿಯೇನಿಲ್ಲ; ರಾಷ್ಟ್ರೀಯ ಮಟ್ಟದಲ್ಲಿ ‘ತೃತೀಯ ಶಕ್ತಿ’ಯಾಗುವುದು ಅನುಮಾನ: ಪಿ. ಚಿದಂಬರಂ

ಕೋಮು ಸೌಹಾರ್ದತೆ ಕೆಡಿಸಲು ಯತ್ನ: ಪುನೀತ್ ಕೆರೆಹಳ್ಳಿ ಸೇರಿ 9 ಮಂದಿ ಬಂಧನ
ರಾಜ್ಯ ಸುದ್ದಿ

ಕೋಮು ಸೌಹಾರ್ದತೆ ಕೆಡಿಸಲು ಯತ್ನ: ಪುನೀತ್ ಕೆರೆಹಳ್ಳಿ ಸೇರಿ 9 ಮಂದಿ ಬಂಧನ

ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ
ವೀಡಿಯೊ

ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ

ಗಂಗಾಜಲ ಹಿಡಿದು ‘ಲಂಚ ಹಂಚಿಕೆ’ ಪ್ರಮಾಣ ವಚನ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿಡಿಯೋ ವೈರಲ್, ತನಿಖೆಗೆ ಆದೇಶ
ವೀಡಿಯೊ

ಗಂಗಾಜಲ ಹಿಡಿದು ‘ಲಂಚ ಹಂಚಿಕೆ’ ಪ್ರಮಾಣ ವಚನ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿಡಿಯೋ ವೈರಲ್, ತನಿಖೆಗೆ ಆದೇಶ

ತಾಲಿಬಾನ್ ವಿರೋಧಿ ಹೋರಾಟಗಾರ್ತಿ ಮಲಾಲಾ ಆತ್ಮಚರಿತ್ರೆ ಓದುಗರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ
ರಾಷ್ಟ್ರೀಯ ಸುದ್ದಿ

ತಾಲಿಬಾನ್ ವಿರೋಧಿ ಹೋರಾಟಗಾರ್ತಿ ಮಲಾಲಾ ಆತ್ಮಚರಿತ್ರೆ ಓದುಗರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ

ವಿಪಕ್ಷಗಳ ವ್ಯಂಗ್ಯಕ್ಕೆ ಭಕ್ತಿಗೀತೆಯ ಬಳಕೆ: ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ ಬಿಜೆಪಿ
ಸಾಮಾಜಿಕ ತಾಣ

ವಿಪಕ್ಷಗಳ ವ್ಯಂಗ್ಯಕ್ಕೆ ಭಕ್ತಿಗೀತೆಯ ಬಳಕೆ: ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ ಬಿಜೆಪಿ

ನೇಪಾಳ ಪ್ರವಾಹ: ಸಾವಿನ ಸಂಖ್ಯೆ 626ಕ್ಕೆ ಏರಿಕೆ; 2,478 ಮಂದಿ ನಾಪತ್ತೆ
ಅಂತಾರಾಷ್ಟ್ರೀಯ

ನೇಪಾಳ ಪ್ರವಾಹ: ಸಾವಿನ ಸಂಖ್ಯೆ 626ಕ್ಕೆ ಏರಿಕೆ; 2,478 ಮಂದಿ ನಾಪತ್ತೆ

“ಕುಮಾರಸ್ವಾಮಿಯವರೇ, ನನ್ನ ಮೈಗೆ ಕೆಸರು ಅಂಟಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ” : ಕೆಪಿಎಸ್‌ಸಿ ಅಕ್ರಮದ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು
ರಾಜ್ಯ ಸುದ್ದಿ

“ಕುಮಾರಸ್ವಾಮಿಯವರೇ, ನನ್ನ ಮೈಗೆ ಕೆಸರು ಅಂಟಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ” : ಕೆಪಿಎಸ್‌ಸಿ ಅಕ್ರಮದ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

ಸೌದಿ, ಟರ್ಕಿ ಜೊತೆ ರಕ್ಷಣಾ ಒಪ್ಪಂದದ ಬೆನ್ನಲ್ಲೇ ಕುವೈತ್ ಜೊತೆಗೂ ಪಾಕಿಸ್ತಾನ ರಕ್ಷಣಾ ಒಪ್ಪಂದ
ಅಂತಾರಾಷ್ಟ್ರೀಯ

ಸೌದಿ, ಟರ್ಕಿ ಜೊತೆ ರಕ್ಷಣಾ ಒಪ್ಪಂದದ ಬೆನ್ನಲ್ಲೇ ಕುವೈತ್ ಜೊತೆಗೂ ಪಾಕಿಸ್ತಾನ ರಕ್ಷಣಾ ಒಪ್ಪಂದ

‘ಮಹೇಂದ್ರ ಕುಮಾರ್ ನಡು ಬಗ್ಗಿಸದ ಎದೆಯ ದನಿ’

ಲೇಖಕರು : ನವೀನ್ ಸೂರಿಂಜೆ

ಪ್ರಕಾಶಕರು : ಬಸೂ, ಲಡಾಯಿ ಪ್ರಕಾಶನ, ಗದಗ

ಮುಂದಿನದ್ದು ಮಹೇಂದ್ರ ಕುಮಾರ್ ಮಾತುಗಳು :

1999 ರಲ್ಲಿ ಮಹತ್ವದ ಬೈಠಕ್ ನಡೆಯಿತು. ನಾನು ಆ ಬೈಠಕ್‌ನ ಉಸ್ತುವಾರಿ ವಹಿಸಿಕೊಳ್ಳುವಂತೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನನಗೆ ಸೂಚಿಸಿತ್ತು. ಸಂಘಪರಿವಾರದ ಕಾರ್ಯಕರ್ತನೊಬ್ಬನೊಬ್ಬನಿಗೆ ಈ ರೀತಿ ಬೈಠಕ್‌ನ ಉಸ್ತುವಾರಿ ವಹಿಸುವುದೆಂದರೆ ಸ್ವರ್ಗಕ್ಕೆ ಮೂರೇ ಗೇಣು.

ಬೈಠಕ್ ಯಾವುದೇ ರೀತಿ ಕುಂದುಕೊರತೆ ಆಗದಂತೆ ವ್ಯವಸ್ಥೆ ಮಾಡಿದ್ದೆ. ಬೈಠಕ್‌ನಲ್ಲಿ ಭಾಗವಹಿಸುವ ಎಲ್ಲಾ ರಾಷ್ಟ್ರೀಯ, ರಾಜ್ಯ ಮುಖಂಡರುಗಳಿಗೆ ವಸತಿ, ಊಟ ವ್ಯವಸ್ಥೆಯ ಜೊತೆಗೆ ಅಚ್ಚುಕಟ್ಟಾಗಿ ಸಭೆಗಳಿಗೆ ವ್ಯವಸ್ತೆ ಮಾಡಿದ್ದೆ.

ಈ ಮಹತ್ವದ ಬೈಠಕ್‌ಗೆ ಭಜರಂಗದಳದ ರಾಷ್ಟ್ರೀಯ ಸಂಸ್ಥಾಪಕ ಸಂಚಾಲಕ ವಿನಯ್ ಕಟಿಯಾರ್, ಪ್ರಮೋದ್ ಮುತಾಲಿಕ್, ವಿಶ್ವ ಹಿಂದೂ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶೀ ಕೇಶವ ಹೆಗಡೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಂಚಾಲಕ ಡಾ ಶ್ರೀರಾಮ ಜೋಶಿ, ಕಲ್ಲಡ್ಕ ಪ್ರಭಾಕರ ಭಟ್, ಸುನೀಲ್ ಕುಮಾರ್ ಬಂದಿದ್ದರು. ವಿಶೇಷ ಎಂದರೆ ಅಂದಿನ ಬೈಠಕ್‌ನಲ್ಲಿ ನಾನು ಮತ್ತು ವಿನಯ್ ಕಟಿಯಾರ್ ಹೊರತುಪಡಿಸಿದರೆ ಉಳಿದವರಲ್ಲಿ ಹೆಚ್ಚಿನವರು ಬ್ರಾಹ್ಮಣರು. ರಾಷ್ಟ್ರಮಟ್ಟದಲ್ಲಿ ಭಜರಂಗದಳದ ಸ್ಥಾಪಕರಾದ ಅಧ್ಯಕ್ಷ ಕಟಿಯಾರ್ ಹಿಂದುಳಿದ ವರ್ಗದ ಕುರ್ಮಿ ಸಮುದಾಯಕ್ಕೆ ಸೇರಿದ್ದರೆ ನಾನು ಒಕ್ಕಲಿಗನಾಗಿದ್ದೆ. ಉಳಿದಂತೆ ಕೇಶವ ಹೆಗಡೆ, ರಾಮ ಜೋಶಿ, ಪ್ರಮೋದ್ ಮುತಾಲಿಕ್, ಪ್ರಭಾಕರ ಭಟ್ ಸೇರಿದಂತೆ ಬಹುತೇಕ ಪ್ರಮುಖರು ಬ್ರಾಹ್ಮಣರಾಗಿದ್ದರು. ಇದು ಯಾಕೆ ಇಷ್ಟೊಂದು ಪ್ರಮಾಣದಲ್ಲಿ ಬ್ರಾಹ್ಮಣ ನಾಯಕರೇ ಬಂದಿದ್ದಾರೆ ಎಂದು ನನಗೂ ಅರ್ಥವಾಗಲಿಲ್ಲ. ಅರ್ಥವಾಗುವಷ್ಟು ವಯಸ್ಸಾಗಲೀ, ಮೆದುಳು ಪ್ರಭುದ್ಧತೆಯನ್ನಾಗಲೀ ನನಗಿರಲಿಲ್ಲ. ಆ ಕುರಿತು ಯೋಚಿಸಲೂ ಆಗ ಮನಸಿರಲಿಲ್ಲ ಎಂಬುದೂ ಸತ್ಯವೇ.

ದತ್ತಪೀಠ ಹೋರಾಟ ಈ ವರೆಗೆ ನಡೆದುಕೊಂಡು ಬಂದ ರೀತಿ, ಭಜರಂಗದಳವನ್ನು ಕಟ್ಟಿದ ರೀತಿ, ಶೋಭಾಯಾತ್ರೆ, ಲಾಠಿಚಾರ್ಜ್​​ಗಳು, ಕೇಸುಗಳ ಮಧ್ಯೆಯೂ ನಡೆದ ದತ್ತಪೀಠ ಹೋರಾಟವನ್ನು ಕಲ್ಲಡ್ಕ ಪ್ರಭಾಕರ ಭಟ್ಟರು ಬೈಠಕ್ ನಲ್ಲಿ ಮಂಡಿಸಿದರು.

ಆ ಬಳಿಕ ಅಂದಿನ ಬೈಠಕ್ ಅನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಂಚಾಲಕ ಡಾ ಶ್ರೀರಾಮ ಜೋಶಿಯವರೇ ನಡೆಸಿಕೊಟ್ಟರು. ರಾಮ ಜೋಶಿಯವರು ಮಾತನಾಡುತ್ತಾ ‘ನಾವು ದತ್ತಪೀಠ ಹೋರಾಟವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಬೇಕಿದೆ. ಏನೇ ಹೋರಾಟ ಮಾಡಿದರೂ ದತ್ತಪೀಠ ಇನ್ನೂ ಮುಸಲ್ಮಾನರ ಕೈಯ್ಯಲ್ಲೇ ಇದೆ. ಒಮ್ಮೆಲೆ ನಾವು ಮುಸಲ್ಮಾರ ಕೈಯಿಂದ ಪಡೆಯುವುದು ಸಾಧ್ಯವಿಲ್ಲ. ಹಾಗೆ ಏಕಾಏಕಿ ಪಡೆಯುವುದೂ ಬೇಕಾಗಿಲ್ಲ. ಹಂತ ಹಂತವಾಗಿ ದತ್ತಪೀಠವನ್ನು ನಮ್ಮದಾಗಿಸಿಕೊಳ್ಳಬೇಕು’ ಎಂದರು.

ಮುಂದುವರೆದು ಮಾತನಾಡಿದ ಡಾ ಶ್ರೀರಾಮ ಜೋಶಿಯವರು ‘ನೋಡಿ, ಈಗ ದತ್ತಪೀಠದಲ್ಲಿ ದತ್ತ ಇದ್ದ ಎನ್ನುವುದಕ್ಕೆ ಕುರುಹುಗಳೂ ಇಲ್ಲ ಎಂದು ಹೇಳುತ್ತಿದ್ದೀರಿ. ದತ್ತಪೀಠದಲ್ಲಿ ಮುಸಲ್ಮಾನ್ ಮೌಲ್ವಿಗಳೇ ಪೂಜೆ ಮಾಡುತ್ತಿದ್ದಾರೆ. ಹಾಗಾಗಿ ನಾವು ದತ್ತಪೀಠದಲ್ಲಿ ಬ್ರಾಹ್ಮಣ ಅರ್ಚಕರನ್ನೂ ಪೂಜೆಗೆ ನೇಮಿಸಬೇಕು ಎಂದು ಆಗ್ರಹಿಸಿ ಹೋರಾಟ ನಡೆಸಬೇಕು’ ಎಂದರು.

ಡಾ ಶ್ರೀರಾಮ ಜೋಶಿಯವರ ಮಾತು ಕೇಳಿ ನಮಗೂ ‘ಹೌದಲ್ವಾ?’ ಎಂದು ಅನ್ನಿಸಿತು. ದತ್ತಪೀಠ ನಮ್ಮದಾಗಬೇಕು ಎಂದರೆ ಮೊದಲ ಹಂತವಾಗಿ ಅಲ್ಲಿ ಬ್ರಾಹ್ಮಣ ಅರ್ಚಕರು ಪೂಜೆ ಮಾಡುತ್ತಿರಬೇಕು. ಮೌಲ್ವಿಗಳು ಬಾಬಾಬುಡನ್ ದರ್ಗಾಕ್ಕೆ ಪೂಜೆ ಮಾಡಲಿ, ಬ್ರಾಹ್ಮಣ ಅರ್ಚಕರು ದತ್ತನಿಗೆ ಪೂಜೆ ಮಾಡಲಿ ಎಂದುಕೊಂಡೆವು. ಸಂಘದ ಬಗ್ಗೆ ನಮಗೆ ಹೆಮ್ಮೆ ಅನ್ನಿಸಿತು. ನಾವು ಇನ್ನೂ ದತ್ತಪಾದುಕೆ ಅದೂ ಇದು ಅಂತ ನಕಲಿ ಮಾಡಿಕೊಂಡು ಹೋರಾಟ ಮಾಡುತ್ತಿರುವಾಗ ಸಂಘದ ಮುಖಂಡರು ಎಂಥಹಾ ಒಳ್ಳೆಯ ಸಬ್ಜೆಕ್ಟ್ ಕೊಟ್ಟರು ಎಂದು ಸಂಘದ ಬಗ್ಗೆ ಹೆಮ್ಮೆ ಅನ್ನಿಸಿತು.

‘ಅಲ್ಲಾ.. ಈ ದತ್ತಪೀಠಕ್ಕೆ ಬ್ರಾಹ್ಮಣ ಅರ್ಚಕರನ್ನೇ ಯಾಕೆ ನೇಮಿಸಬೇಕು ? ಅಲ್ಲೇನು ವಂಶಪಾರಂಪರ‍್ಯ ಅರ್ಚಕತನವಿಲ್ಲ. ಹಾಗಾಗಿ ಶೂದ್ರ, ದಲಿತರನ್ನೂ ಅರ್ಚಕರನ್ನಾಗಿ ನೇಮಿಸಬಹುದಲ್ವಾ ?’ ಎಂಬ ಪ್ರಶ್ನೆ ಆಗ ನಮಗ್ಯಾರಿಗೂ ಹೊಳೆದಿರಲಿಲ್ಲ.

ಬೈಠಕ್ ಮುಗಿಯುತ್ತಿದ್ದಂತೆ ದತ್ತಪೀಠಕ್ಕೆ ಬ್ರಾಹ್ಮಣ ಅರ್ಚಕರನ್ನು ನೇಮಿಸಿ ಎಂಬ ಹೋರಾಟವನ್ನು ಕೈಗೆತ್ತಿಕೊಂಡೆ. ತಿಂಗಳುಗಟ್ಟಲೆ ನಿರಂತರ ಹೋರಾಟ ನಡೆಯಿತು. ಹಲವು ಬಾರಿ ಲಾಠಿಚಾರ್ಜ್ ನಡೆಯಿತು. ನನ್ನ ಜೊತೆ ಇದ್ದ ಅವಳ್ಳಿ ಗಿರೀಶ್‌ಗೆ ಚೂರಿ ಇರಿತವಾಯಿತು. ಆ ಚೂರಿ ಇರಿತ ಹೇಗಾಯಿತು ಎಂಬುದೂ ನಮಗೆ ಗೊತ್ತಿರಲಿಲ್ಲ. ಮುಸಲ್ಮಾನರು ಚೂರಿ ಇರಿದರು ಎಂದು ಇನ್ನಷ್ಟೂ ಗದ್ದಲ ಮಾಡಿದೆವು. ಪೊಲೀಸರು ಬಂಧಿಸುವುದು, ಎರಡು ದಿನದಲ್ಲಿ ಜಾಮೀನು ಪಡೆದು ಬರುವುದು, ಮತ್ತೆ ಹೋರಾಟ ಮಾಡುವುದು ಸಾಮಾನ್ಯವಾಯಿತು. ಈ ರೀತಿ ತಿಂಗಳುಗಟ್ಟಲೆ ಲಾಠಿ ಏಟು ತಿಂದು ಹೋರಾಟ ನಡೆಸುತ್ತಿದ್ದೆವು.

ಅದೊಂದು ದಿನ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ನಮ್ಮ ಭಜರಂಗದಳದ ಹುಡುಗರು ಸಿಕ್ಕ ಸಿಕ್ಕ ಗೂಡಂಗಡಿಗಳಿಗೆ ಬೆಂಕಿ ಇಟ್ಟಿದ್ದರು. ಇಡೀ ಚಿಕ್ಕಮಗಳೂರು ಬೆಂಕಿಯಂತಾಗಿತ್ತು.

ಜಾತ್ಯಾತೀತ ಸರಕಾರವೇ ಅಲ್ಲಾಡಿಹೋಗುವಷ್ಟರ ಮಟ್ಟಿಗೆ ನಮ್ಮ ಹೋರಾಟ ಉಗ್ರ ಸ್ವರೂಪವನ್ನು ಪಡೆದಿತ್ತು. ಚಿಕ್ಕಮಗಳೂರಿಗೆ ಬೆಂಕಿ ಇಕ್ಕಿದ್ದ ಈ ಹೋರಾಟದ ನೇತೃತ್ವ ವಹಿಸಿ ನಾನು ಪಿನ್ ಟು ಪಿನ್ ಸಂಘದ ವರಿಷ್ಠರಿಗೆ ಮಾಹಿತಿ ನೀಡುತ್ತಿದ್ದೆನು.

ಭಜರಂಗದಳದ ಹುಡುಗರು ರಸ್ತೆ ಬದಿಯಲ್ಲಿ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮುಸಲ್ಮಾರ ಮೇಲೆ ದಾಳಿ ನಡೆಸಿದರು. ಮುಸಲ್ಮಾನರ ತಳ್ಳು ಗಾಡಿಗಳಿಗೆ ಬೆಂಕಿ ಹಾಕಿದರು. ಇದ್ಯಾಕೋ ನನಗೆ ಸರಿ ಕಾಣಲಿಲ್ಲ. ‘ಬಡ ಮುಸ್ಲೀಮರಿಗೆ ತೊಂದರೆ ಕೊಡಬೇಡಿ. ಪಾಪ ದಿನ ಐವತ್ತು ರೂಪಾಯಿ ದುಡಿದು ಮನೆಗೆ ಕೊಂಡೊಯ್ಯವವರಿಗೆ ಏನೂ ಮಾಡಬೇಡಿ. ನಮ್ಮವರಿಗೆ ಚೂರಿ ಹಾಕಲು ಫಂಡಿಂಗ್ ಮಾಡ್ತಾರಲ್ಲ.. ಅಂತಹ ಮುಸ್ಲೀಮರನ್ನು ಟಾರ್ಗೆಟ್ ಮಾಡಿ’ ಎಂದೆ. ಬಡ ಮುಸ್ಲಿಂ ವ್ಯಾಪಾರಿಗಳ ರಕ್ಷಣೆಗೆಂದು ನಾನು ಅಷ್ಟೇ ಹೇಳಿದ್ದು, ಭಜರಂಗದಳದ ಹುಡುಗರು ಶ್ರೀಮಂತ ಮುಸ್ಲೀಮರನ್ನು ಟಾರ್ಗೆಟ್ ಮಾಡಿದರು. ಮುಸ್ಲೀಮರ ಸಾ ಮಿಲ್‌ಗಳು ಧಗಧಗನೇ ಉರಿಯಲಾರಂಬಿಸಿದವು. ಮರದ ವ್ಯಾಪಾರ ಮಾಡುತ್ತಿದ್ದ ಸಾ ಮಿಲ್‌ಗಳಿಗೆ ತೆರಳಿ ಬೆಂಕಿ ಇಟ್ಟರು. ದೊಡ್ಡ ದೊಡ್ಡ ಮರದ ದಿಮ್ಮಿಗಳು ಬೆಂಕಿ ಹತ್ತಿಸಿಕೊಂಡು ಅದರ ಕೆನ್ನಾಲಿಗೆ ಆಕಾಶ ಮುಟ್ಟಿತ್ತು. ಇಡೀ ಚಿಕ್ಕಮಗಳೂರು ಭಯಭೀತಗೊಂಡಿತ್ತು.

ಪೊಲೀಸರು ನನ್ನನ್ನೂ ಸೇರಿದಂತೆ ನೂರಾರು ಜನರನ್ನು ಬಂಧಿಸಿದರು. ಆಗ ಬಿಜೆಪಿ ಎಂಬುದು ಇರಲೇ ಇಲ್ವೇನೋ ಎಂಬಂತೆ ಇದ್ದ ಕಾಲವದು. ಪೊಲೀಸರು ನನ್ನನ್ನೂ ಸೇರಿದಂತೆ ಹಲವರಿಗೆ ಚಿತ್ರ ಹಿಂಸೆ ನೀಡಿದರು. ಅಂಗಾತ ಮಲಗಿಸಿ ಹೊಡೆದದ್ದಷ್ಟೋ.. ನಮ್ಮನ್ನೆಲ್ಲಾ ಒಂದೇ ಜೈಲಿಗೆ ಹಾಕಲು ಸಾಧ್ಯವಿರಲಿಲ್ಲ. ನನ್ನನ್ನು ಮತ್ತು ಒಟ್ಟು 20 ಮಂದಿ ತರೀಕೆರೆಯ ಭಜರಂಗದಳದ ಹುಡುಗರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ತಿಂಗಳುಗಟ್ಟಲೆ ಸೆರೆಮನೆ ವಾಸ ಅನುಭವಿಸಿದೆವು. ವಿಪರ್ಯಾಸ ಎಂದರೆ ನಾವು ಹೋರಾಟ ಮಾಡಿದ್ದು ದತ್ತಪೀಠದಲ್ಲಿ ಬ್ರಾಹ್ಮಣ ಅರ್ಚಕರನ್ನು ನೇಮಿಸಬೇಕು ಎಂದು ಆಗ್ರಹಿಸಿ ! ಆದರೆ ನಮ್ಮ ಹೋರಾಟದಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ಭಾಗಿಯಾಗಿರಲಿಲ್ಲ. ಒಬ್ಬನೇ ಒಬ್ಬ ಬ್ರಾಹ್ಮಣ ಜೈಲು ಸೇರಿರಲಿಲ್ಲ. ಒಬ್ಬನೇ ಒಬ್ಬ ಬ್ರಾಹ್ಮಣನ ಮೇಲೆ ಕೇಸ್ ದಾಖಲಾಗಲಿಲ್ಲ !

ಬ್ರಾಹ್ಮಣ ಅರ್ಚಕರನ್ನು ದತ್ತಪೀಠದಲ್ಲಿ ಪೂಜೆಗೆ ನೇಮಿಸಲು ಹೋರಾಟ ಮಾಡಬೇಕು ಎಂದು ಬೈಠಕ್‌ನಲ್ಲಿ ನಿರ್ಣಯ ನಡೆಸಿದ್ದು ಬ್ರಾಹ್ಮಣ ಮುಖಂಡರು. ಅದನ್ನು ಜಾರಿ ಮಾಡಲು ಚಿಕ್ಕಮಗಳೂರಿಗೆ ಬೆಂಕಿ ಇಟ್ಟು ಕೋಮುಗಲಭೆ ಮಾಡಿಸಿದ್ದು ಭಜರಂಗದಳದ ಶೂದ್ರ ಹುಡುಗರು. ಆದರೆ ಕನಿಷ್ಠ ಜೈಲಿನಲ್ಲಿ ತಿಂಗಳುಗಟ್ಟಲೆ ಕೊಳೆಯುತ್ತಿದ್ದ ನಮ್ಮನ್ನು ಬಿಡುಗಡೆ ಮಾಡಿಸಲೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬ್ರಾಹ್ಮಣ ಮುಖಂಡರು ಓಡಾಡಲಿಲ್ಲ. ಕೊನೆಗೆ ಅಂದು ಯಾವುದೋ ಕಾರಣದಿಂದ ಗಲಭೆಯಿಂದ ಹೊರಗಿದ್ದ ಬೋಜರಾಜ್ ತನ್ನ ಕೈಯ್ಯಲ್ಲಿದ್ದ ಉಂಗುರು, ಮನೆಯ ಮಹಿಳೆಯರ ಮೈಮೇಲಿದ್ದ ಆಭರಣವನ್ನು ಅಡವಿಟ್ಟು ವಕೀಲರಿಗೆ ಫೀಸ್ ನೀಡಿ ನಮ್ಮನ್ನು ಜಾಮೀನಿನ ಮೂಲಕ ಹೊರ ತಂದರು.

ಇಷ್ಟಾದರೂ ನಮ್ಮ ಹಿಂದುತ್ವದ ಅಮಲು ಇಳಿದಿರಲಿಲ್ಲ. ಜೈಲಿನಿಂದ ಹೊರ ಬಂದು ಮತ್ತೆ ‘ದತ್ತ ಪೀಠದಲ್ಲಿ ಪೂಜೆಗೆ ಬ್ರಾಹ್ಮಣ ಅರ್ಚಕರನ್ನು ನೇಮಿಸಬೇಕು’ ಎಂದು ಆಗ್ರಹಿಸಿ ಹೋರಾಟಗಳು ಮುಂದುವರೆದವು.

ಈ ಗಲಭೆ, ಬೆಂಕಿ, ಹತ್ತಾರು ಎಫ್​ಐಆರ್​ ಗಳು, ಜೈಲು ಎಲ್ಲವೂ ನಡೆದಿದ್ದು ಆರ್​ಎಸ್​ಎಸ್ ಬೈಠಕ್​, ಆರ್​ಎಸ್​ಎಸ್ ಶಾಖೆಯ ಸಭೆಗಳಿಂದ ! ವಿಪರ್ಯಾಸ ಎಂದರೆ ಪೊಲೀಸರು ಬೆಂಕಿ ಹಂಚಿದವರನ್ನು ಅರೆಸ್ಟ್ ಮಾಡುತ್ತಾರೆ. ಬೆಂಕಿ ಹಚ್ಚಲು ಯೋಜನೆ ರೂಪಿಸಿದ ಆರ್​ಎಸ್​ಎಸ್ ಶಾಖೆಯಲ್ಲಿ ಭಾಗಿಯಾದವರನ್ನು ಎಫ್​ಐಆರ್​ನಲ್ಲಿ ಸೇರಿಸಲ್ಲ. ಆರ್​ಎಸ್​ಎಸ್ ಶಾಖೆ ನಡೆದ ಸ್ಥಳವನ್ನು ಸೀಝ್ ಮಾಡಲ್ಲ. ಕ್ರೈಂ ಇನ್ವೆಸ್ಟಿಗೇಶನ್​​ನ ಪ್ರಾಥಮಿಕ ಅಂಶಗಳನ್ನೂ ಪೂರೈಸದ ಪೊಲೀಸರಿಂದಾಗಿ ಇಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿಗರಿಂದ ಟ್ರೋಲ್​​ಗೆ ಒಳಗಾಗಬೇಕಾಗಿದೆ.

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ರಾಜ್ಯ ಸುದ್ದಿ

“ಕುಮಾರಸ್ವಾಮಿಯವರೇ, ನನ್ನ ಮೈಗೆ ಕೆಸರು ಅಂಟಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ” : ಕೆಪಿಎಸ್‌ಸಿ ಅಕ್ರಮದ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

ರಾಜ್ಯ ಸುದ್ದಿ

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತ, 2029ರಲ್ಲಿ ರಾಹುಲ್ ಗಾಂಧಿ ದೇಶದ ಪ್ರಧಾನಿ: ಡಿಕೆಶಿ ಭವಿಷ್ಯ!

ರಾಜ್ಯ ಸುದ್ದಿ

SIR: 1 ಕೋಟಿಗೂ ಹೆಚ್ಚು ಹೆಸರುಗಳ ASDDO ವರ್ಗೀಕರಣ; ಪರಿಶೀಲನೆಗೆ ಹೆಚ್ಚಿನ ಕಾಲಾವಕಾಶ ಮತ್ತು ನಿಗದಿತ ಪ್ರಕ್ರಿಯೆ ಅನುಸರಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಸಿಎಂ ಪತ್ರ

ರಾಜ್ಯ ಸುದ್ದಿ

ಮಂಗಳೂರು ರೈಲ್ವೆ ವ್ಯಾಪ್ತಿ ವರ್ಗಾವಣೆ: ತೀರ್ಮಾನ ತಡೆಹಿಡಿಯಲು ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ಕೇರಳ ಸಿಎಂ ವಿ. ಡಿ. ಸತೀಶನ್

From Across Varadigara

ಅಂತಾರಾಷ್ಟ್ರೀಯ

ನೇಪಾಳ ಪ್ರವಾಹ: ಸಾವಿನ ಸಂಖ್ಯೆ 626ಕ್ಕೆ ಏರಿಕೆ; 2,478 ಮಂದಿ ನಾಪತ್ತೆ

ರಾಷ್ಟ್ರೀಯ ಸುದ್ದಿ

ಅದಾನಿ ಯೋಜನೆಗಳಿಗಾಗಿ 83,700 ಚದರ ಅಡಿ ಅರಣ್ಯ ಮತ್ತು ಮ್ಯಾಂಗ್ರೋವ್ ಭೂಮಿಯನ್ನು ಬಿಟ್ಟುಕೊಡಲು ಮಹಾರಾಷ್ಟ್ರ ಸರ್ಕಾರದ ಅನುಮೋದನೆ

ವೀಡಿಯೊ

ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ

ವೀಡಿಯೊ

ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು

ರಾಷ್ಟ್ರೀಯ ಸುದ್ದಿ

ಅತ್ಯಾಚಾರ ದೋಷಿ ರಾಮ್ ರಹೀಮ್‌ಗೆ ಮತ್ತೆ 21 ದಿನಗಳ ಪರೋಲ್: 5 ವರ್ಷಗಳಲ್ಲಿ 17ನೇ ಬಾರಿಗೆ ಜೈಲಿನಿಂದ ಬಿಡುಗಡೆ!

ರಾಷ್ಟ್ರೀಯ ಸುದ್ದಿ

ತಾಲಿಬಾನ್ ವಿರೋಧಿ ಹೋರಾಟಗಾರ್ತಿ ಮಲಾಲಾ ಆತ್ಮಚರಿತ್ರೆ ಓದುಗರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ

ಸಾಮಾಜಿಕ ತಾಣ

ವಿಪಕ್ಷಗಳ ವ್ಯಂಗ್ಯಕ್ಕೆ ಭಕ್ತಿಗೀತೆಯ ಬಳಕೆ: ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ ಬಿಜೆಪಿ

ರಾಷ್ಟ್ರೀಯ ಸುದ್ದಿ

ಮತಾಂತರ ನಿಷೇಧ ಕಾನೂನಿನ ದುರುಪಯೋಗ ಹಾಗೂ ಬಲಪಂಥೀಯರ ದಾಳಿಯ ಭೀತಿ: ಮುಂಬೈ ಚರ್ಚ್‌ಗಳಲ್ಲಿ ಸ್ವಯಂ ಘೋಷಣೆ ಪತ್ರ, ಆಧಾರ್‌ ಸಂಗ್ರಹ!

ಸುತ್ತ - ಮುತ್ತ

Coastal Friends Mangaloreಗೆ ನೂತನ ಸಾರಥ್ಯ: ಅಧ್ಯಕ್ಷರಾಗಿ ಶಮೀರ್ ಲಕ್ಕಿಸ್ಟಾರ್ ಆಯ್ಕೆ

ವೀಡಿಯೊ

ಹೊಲದಲ್ಲಿ ಹೂತಿಟ್ಟಿದ್ದ ₹5 ಲಕ್ಷ ನಗದು ಗೆದ್ದಲು ಪಾಲು: ರಾಜಸ್ಥಾನದ ರೈತನಿಗೆ ಆಘಾತ

ವೀಡಿಯೊ

ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು

ರಾಜ್ಯ ಸುದ್ದಿ

ಕೋಮು ಸೌಹಾರ್ದತೆ ಕೆಡಿಸಲು ಯತ್ನ: ಪುನೀತ್ ಕೆರೆಹಳ್ಳಿ ಸೇರಿ 9 ಮಂದಿ ಬಂಧನ

ರಾಷ್ಟ್ರೀಯ ಸುದ್ದಿ

ಹಿಜಾಬ್ ಇಸ್ಲಾಂನ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ: ಮುಸ್ಲಿಂ ವಿದ್ಯಾರ್ಥಿನಿಯ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್

ರಾಷ್ಟ್ರೀಯ ಸುದ್ದಿ

‘ಯುವಜನರ ಧ್ವನಿಗೆ ಬೆದರಿದ ಸರ್ಕಾರ’: ದೆಹಲಿಯಲ್ಲಿ ಸಿಜೆಪಿ ಸಭೆಗೆ ಬಿಜೆಪಿ ತಡೆ – ಅಭಿಜಿತ್ ದೀಪ್ಕೆ ಗಂಭೀರ ಆರೋಪ

ರಾಷ್ಟ್ರೀಯ ಸುದ್ದಿ

ಶಿಕ್ಷಣ ವ್ಯವಸ್ಥೆಯ ಲೋಪ, ಸರ್ಕಾರಿ ಉದ್ಯೋಗ ನೀಡಿಕೆಯಲ್ಲಿ ಭ್ರಷ್ಟಾಚಾರ: ಹೋರಾಟದ ಎಚ್ಚರಿಕೆ ನೀಡಿದ ಬಾಬಾ ರಾಮ್‌ದೇವ್‌

ರಾಷ್ಟ್ರೀಯ ಸುದ್ದಿ

ಯುವಶಕ್ತಿಯ ಒಕ್ಕೂಟ: ಉದ್ಯೋಗ-ಶಿಕ್ಷಣದ ಹಕ್ಕಿಗಾಗಿ ಉತ್ತರ ಪ್ರದೇಶದಲ್ಲಿ ‘ಜಸ್ಟಿಸ್ ಮೋರ್ಚಾ’ ಸ್ಥಾಪನೆ: 50 ದಿನಗಳ ರಾಜ್ಯವ್ಯಾಪಿ ಅಭಿಯಾನ ಘೋಷಣೆ

ರಾಷ್ಟ್ರೀಯ ಸುದ್ದಿ

ಮಹಾರಾಷ್ಟ್ರ : ಮಂಚಗಳಿಲ್ಲ, ವಾರ್ಡನ್ ಇಲ್ಲ! ಆಶ್ರಮ ಶಾಲೆಯಲ್ಲಿ ನೆಲದ ಮೇಲೆ ಮಲಗಿದ್ದ 3 ಬುಡಕಟ್ಟು ಹೆಣ್ಣುಮಕ್ಕಳು ಹಾವು ಕಡಿದು ಸಾವು!

ರಾಷ್ಟ್ರೀಯ ಸುದ್ದಿ

ನನಗೆ ಮೊದಲಿನಂತೆ ಕೆಲಸ ಮಾಡಲು ಸಾಧ್ಯವಿಲ್ಲ; ಹೊಸ ತಲೆಮಾರಿಗೆ ಜವಾಬ್ದಾರಿ ವಹಿಸಬೇಕು: ನಿತಿನ್ ಗಡ್ಕರಿ

ರಾಜ್ಯ ಸುದ್ದಿ

ರಿಕ್ಷಾ ಚಾಲಕ ಗುರುಪ್ರಸಾದ್‌ ಹೃದಯಾಘಾತದಿಂದ ನಿಧನ: ಮೃತರಿಗೆ ಗೌರವಾರ್ಥ ಮಿಲಾದ್ ಕಾರ್ಯಕ್ರಮ ಮುಂದೂಡಿದ ಮಸೀದಿ ಆಡಳಿತ

ರಾಷ್ಟ್ರೀಯ ಸುದ್ದಿ

ದೆಹಲಿಯಲ್ಲಿ 90 ಕೋಟಿ ರೂ. ಸೈಕಲ್ ಖರೀದಿ ಹಗರಣ? 4,200 ರೂ. ಸೈಕಲ್‌ಗೆ 6,957 ರೂ. ಪಾವತಿಸಿದ ಸರ್ಕಾರ: ಆಪ್ ಆರೋಪ