ರಾಷ್ಟ್ರೀಯ ಸುದ್ದಿ

‘ಯುವಜನರ ಧ್ವನಿಗೆ ಬೆದರಿದ ಸರ್ಕಾರ’: ದೆಹಲಿಯಲ್ಲಿ ಸಿಜೆಪಿ ಸಭೆಗೆ ಬಿಜೆಪಿ ತಡೆ – ಅಭಿಜಿತ್ ದೀಪ್ಕೆ ಗಂಭೀರ ಆರೋಪ

Reading…
Follow Us

ಸಾರಾಂಶ

ದೆಹಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯನ್ನು ರದ್ದುಗೊಳಿಸಲು ಆಡಳಿತಾರೂಢ ಬಿಜೆಪಿ ತಂದ ರಾಜಕೀಯ ಒತ್ತಡವೇ ಕಾರಣ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಆರೋಪಿಸಿದ್ದಾರೆ. ಹತ್ತಕ್ಕೂ ಹೆಚ್ಚು ಸಭಾಂಗಣಗಳು ಜಾಗ ನೀಡಲು ನಿರಾಕರಿಸಿದ್ದು, ಅಂತಿಮವಾಗಿ ಬುಕ್ ಮಾಡಿದ್ದ ಸ್ಥಳದ ಮಾಲೀಕರಿಗೂ ಬೆದರಿಕೆ ಹಾಕಲಾಗಿತ್ತು ಎಂದು ಅವರು ದೂರಿದ್ದಾರೆ. ಸರ್ಕಾರದ ಇಂತಹ ದಮನಕಾರಿ ತಂತ್ರಗಳಿಗೆ ಹೆದರದೆ ಯುವಜನರ ಹಕ್ಕುಗಳಿಗಾಗಿ ಹೋರಾಟ ಮುಂದುವರಿಸುವುದಾಗಿ ಸಂಘಟನೆ ಸ್ಪಷ್ಟಪಡಿಸಿದೆ

ದೆಹಲಿಯಲ್ಲಿ ಆಯೋಜಿಸಲಾಗಿದ್ದ ತಮ್ಮ ಸಂಘಟನೆಯ ಕಾರ್ಯಕರ್ತರ ಸಭೆಗೆ ಸ್ಥಳಾವಕಾಶ ನೀಡದಂತೆ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಬೆದರಿಕೆ ಹಾಗೂ ಒತ್ತಡ ತಂದಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಗಂಭೀರ ಆರೋಪ ಮಾಡಿದ್ದಾರೆ.

ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮಾಧ್ಯಮಗಳೊಂದಿಗೆ ಮಾತನಾಡಿ, ದೆಹಲಿಯಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಲು ಸುಮಾರು ಹತ್ತು ಬೇರೆ ಬೇರೆ ಸ್ಥಳಗಳನ್ನು ಸಂಪರ್ಕಿಸಲಾಗಿತ್ತು. ಆದರೆ ಮೇಲಧಿಕಾರಿಗಳ ಮತ್ತು ರಾಜಕೀಯ ಒತ್ತಡದ ನೆಪ ಹೇಳಿ ಎಲ್ಲಾ ಸಭಾಂಗಣದ ಮಾಲೀಕರು ಜಾಗ ನೀಡಲು ನಿರಾಕರಿಸಿದರು. ಕೊನೆಗೆ ನರೈನಾ ಪ್ರದೇಶದಲ್ಲಿ ಸಭಾಂಗಣವೊಂದನ್ನು ಕಾಯ್ದಿರಿಸಿ, ಮುಂಗಡ ಹಣ ಪಾವತಿಸಿ ರಶೀದಿ ಪಡೆಯಲಾಗಿತ್ತು. ಆದರೆ ಸಭೆ ನಡೆಯಬೇಕಿದ್ದ ದಿನದಂದು ಬೆದರಿಕೆ ಕರೆಗಳು ಬಂದ ಹಿನ್ನೆಲೆಯಲ್ಲಿ ಸಭಾಂಗಣದ ಮಾಲೀಕರು ಬುಕಿಂಗ್ ರದ್ದುಗೊಳಿಸಿದ್ದಾರೆ.

ಆಡಳಿತಾರೂಢ ಪಕ್ಷವು ದೇಶದ ಯುವಜನರ ಧ್ವನಿಗೆ ಹೆದರುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇಂತಹ ಬೆದರಿಕೆ ತಂತ್ರಗಳಿಂದ ನಮ್ಮ ಹೋರಾಟವನ್ನು ಹತೋಟಿಗೆ ತರಲು ಸಾಧ್ಯವಿಲ್ಲ ಎಂದು ದೀಪ್ಕೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸಿಜೆಪಿ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ದೆಹಲಿ ಪೊಲೀಸರ ನಡೆ ಹಾಗೂ ದೆಹಲಿಯ ಕಾನೂನು ಸುವ್ಯವಸ್ಥೆಯ ಕುರಿತು ಪ್ರಶ್ನೆ ಎತ್ತಿದ್ದು, ಪೊಲೀಸ್ ಇಲಾಖೆಯು ಆಡಳಿತ ಪಕ್ಷದ ಹಿತಾಸಕ್ತಿಗೆ ತಕ್ಕಂತೆ ಕೆಲಸ ಮಾಡುತ್ತಿದೆಯೇ ಎಂದು ಕಿಡಿಕಾರಿದ್ದಾರೆ.

ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು
ವೀಡಿಯೊ

ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು

“ಶುದ್ಧ ಪೆಟ್ರೋಲ್ ನಿಮ್ಮ ಅಪ್ಪನ ಮನೆಯಿಂದ ಬರುತ್ತಾ?”: ಇಥನಾಲ್ ನೀತಿ ಸಮರ್ಥಿಸಲು ಹೋಗಿ ವಿವಾದಕ್ಕೀಡಾದ ಬಿಜೆಪಿ ಸಂಸದ
ವೀಡಿಯೊ

“ಶುದ್ಧ ಪೆಟ್ರೋಲ್ ನಿಮ್ಮ ಅಪ್ಪನ ಮನೆಯಿಂದ ಬರುತ್ತಾ?”: ಇಥನಾಲ್ ನೀತಿ ಸಮರ್ಥಿಸಲು ಹೋಗಿ ವಿವಾದಕ್ಕೀಡಾದ ಬಿಜೆಪಿ ಸಂಸದ

ಪ್ರತಿ ಗಂಟೆಗೆ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ 21 ಮಂದಿ! ರೋಗ, ಯುದ್ಧಕ್ಕಿಂತಲೂ ಭೀಕರವಾಯಿತೇ ಭಾರತದ ರಸ್ತೆ ಅಪಘಾತ?
ರಾಷ್ಟ್ರೀಯ ಸುದ್ದಿ

ಪ್ರತಿ ಗಂಟೆಗೆ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ 21 ಮಂದಿ! ರೋಗ, ಯುದ್ಧಕ್ಕಿಂತಲೂ ಭೀಕರವಾಯಿತೇ ಭಾರತದ ರಸ್ತೆ ಅಪಘಾತ?

ದೆಹಲಿಯಲ್ಲಿ 90 ಕೋಟಿ ರೂ. ಸೈಕಲ್ ಖರೀದಿ ಹಗರಣ? 4,200 ರೂ. ಸೈಕಲ್‌ಗೆ 6,957 ರೂ. ಪಾವತಿಸಿದ ಸರ್ಕಾರ: ಆಪ್ ಆರೋಪ
ರಾಷ್ಟ್ರೀಯ ಸುದ್ದಿ

ದೆಹಲಿಯಲ್ಲಿ 90 ಕೋಟಿ ರೂ. ಸೈಕಲ್ ಖರೀದಿ ಹಗರಣ? 4,200 ರೂ. ಸೈಕಲ್‌ಗೆ 6,957 ರೂ. ಪಾವತಿಸಿದ ಸರ್ಕಾರ: ಆಪ್ ಆರೋಪ

ಹೊಲದಲ್ಲಿ ಹೂತಿಟ್ಟಿದ್ದ ₹5 ಲಕ್ಷ ನಗದು ಗೆದ್ದಲು ಪಾಲು: ರಾಜಸ್ಥಾನದ ರೈತನಿಗೆ ಆಘಾತ
ವೀಡಿಯೊ

ಹೊಲದಲ್ಲಿ ಹೂತಿಟ್ಟಿದ್ದ ₹5 ಲಕ್ಷ ನಗದು ಗೆದ್ದಲು ಪಾಲು: ರಾಜಸ್ಥಾನದ ರೈತನಿಗೆ ಆಘಾತ

ಮಹಾರಾಷ್ಟ್ರ : ಮಂಚಗಳಿಲ್ಲ, ವಾರ್ಡನ್ ಇಲ್ಲ! ಆಶ್ರಮ ಶಾಲೆಯಲ್ಲಿ ನೆಲದ ಮೇಲೆ ಮಲಗಿದ್ದ 3 ಬುಡಕಟ್ಟು ಹೆಣ್ಣುಮಕ್ಕಳು ಹಾವು ಕಡಿದು ಸಾವು!
ರಾಷ್ಟ್ರೀಯ ಸುದ್ದಿ

ಮಹಾರಾಷ್ಟ್ರ : ಮಂಚಗಳಿಲ್ಲ, ವಾರ್ಡನ್ ಇಲ್ಲ! ಆಶ್ರಮ ಶಾಲೆಯಲ್ಲಿ ನೆಲದ ಮೇಲೆ ಮಲಗಿದ್ದ 3 ಬುಡಕಟ್ಟು ಹೆಣ್ಣುಮಕ್ಕಳು ಹಾವು ಕಡಿದು ಸಾವು!

‘ಯುವಜನರ ಧ್ವನಿಗೆ ಬೆದರಿದ ಸರ್ಕಾರ’: ದೆಹಲಿಯಲ್ಲಿ ಸಿಜೆಪಿ ಸಭೆಗೆ ಬಿಜೆಪಿ ತಡೆ – ಅಭಿಜಿತ್ ದೀಪ್ಕೆ ಗಂಭೀರ ಆರೋಪ
ರಾಷ್ಟ್ರೀಯ ಸುದ್ದಿ

‘ಯುವಜನರ ಧ್ವನಿಗೆ ಬೆದರಿದ ಸರ್ಕಾರ’: ದೆಹಲಿಯಲ್ಲಿ ಸಿಜೆಪಿ ಸಭೆಗೆ ಬಿಜೆಪಿ ತಡೆ – ಅಭಿಜಿತ್ ದೀಪ್ಕೆ ಗಂಭೀರ ಆರೋಪ

ಕಾಕ್ರೋಚ್ ಜನತಾ ಪಾರ್ಟಿಯು ಮೇ 2026ರಲ್ಲಿ ಯುವಜನರ ಪರ ಧ್ವನಿಯಾಗಿ ಹುಟ್ಟಿಕೊಂಡ ಸಂಘಟನೆಯಾಗಿದೆ. ನಿರುದ್ಯೋಗ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ಜಂತರ್ ಮಂತರ್‌ನಲ್ಲಿ ಸಿಜೆಪಿ ನಡೆಸಿದ ಬೃಹತ್ ಪ್ರತಿಭಟನೆಯು ಜುಲೈ ತಿಂಗಳಲ್ಲಿ ಶಿಕ್ಷಣ ಸಚವರ ರಾಜೀನಾಮೆಗೆ ಕಾರಣವಾಗಿತ್ತು.

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ರಾಷ್ಟ್ರೀಯ ಸುದ್ದಿ

ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ದೆಹಲಿ ಪೊಲೀಸರ ಅತಿಯಾದ ಬಲಪ್ರಯೋಗ: ತನಿಖೆಗೆ ಆಮ್ನೆಸ್ಟಿ ಆಗ್ರಹ

ಕಾಣಿಸದ್ದು - ಕೇಳಿಸದ್ದು

₹50 ಕೋಟಿ ಮೌಲ್ಯದ ಭೂ ವಂಚನೆ ಆರೋಪ: ವಾರಣಾಸಿ ಬಿಜೆಪಿ ನಾಯಕ ಸೇರಿ 10 ಜನರ ವಿರುದ್ಧ ಎಫ್‌ಐಆರ್ ದಾಖಲು

ರಾಷ್ಟ್ರೀಯ ಸುದ್ದಿ

ನಮ್ಮ ಸರ್ಕಾರ ಉರುಳಿಸಲು ಬಿಜೆಪಿಯಿಂದ ₹30 ಕೋಟಿ ಆಫರ್; ಒಮರ್ ಅಬ್ದುಲ್ಲಾ ಗಂಭೀರ ಆರೋಪ

ರಾಷ್ಟ್ರೀಯ ಸುದ್ದಿ

“ವೋಟ್ ಚೋರಿ, ಸರ್ಕಾರ ಚೋರಿ ನಂತರ ಇದೀಗ ಸೀಟ್ ಚೋರಿ; BJP – EC ಜುಗಲ್‌ಬಂದಿ” – ರಾಹುಲ್ ಗಾಂಧಿ

ಸಾಮಾಜಿಕ ತಾಣ

AI ಎಡಿಟ್ ಮಾಡಿ ಬಿಹಾರದಲ್ಲಿ ಅಭಿವೃದ್ಧಿ ತೋರಿಸಲು ಪ್ರಯತ್ನಿಸಿದ ಬಿಜೆಪಿ; ಅಸಲಿಯತ್ತನ್ನು ಬಯಲಿಗೆಳೆದ ನೆಟ್ಟಿಗರು!

From Across Varadigara

ವೀಡಿಯೊ

“ಶುದ್ಧ ಪೆಟ್ರೋಲ್ ನಿಮ್ಮ ಅಪ್ಪನ ಮನೆಯಿಂದ ಬರುತ್ತಾ?”: ಇಥನಾಲ್ ನೀತಿ ಸಮರ್ಥಿಸಲು ಹೋಗಿ ವಿವಾದಕ್ಕೀಡಾದ ಬಿಜೆಪಿ ಸಂಸದ

ವೀಡಿಯೊ

ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು

ರಾಷ್ಟ್ರೀಯ ಸುದ್ದಿ

ED ದಾಳಿ ನಡೆದ ಕೇವಲ ಒಂದೇ ತಿಂಗಳಲ್ಲಿ ಎನ್‌ಡಿಎ ಬೆಂಬಲಿತ ಬಣ ಸೇರಿದ ತೃಣಮೂಲ ಕಾಂಗ್ರೆಸ್ (TMC) ಶಾಸಕ ಮದನ್ ಮಿತ್ರಾ!

ರಾಷ್ಟ್ರೀಯ ಸುದ್ದಿ

ಮಹಾರಾಷ್ಟ್ರ : ಮಂಚಗಳಿಲ್ಲ, ವಾರ್ಡನ್ ಇಲ್ಲ! ಆಶ್ರಮ ಶಾಲೆಯಲ್ಲಿ ನೆಲದ ಮೇಲೆ ಮಲಗಿದ್ದ 3 ಬುಡಕಟ್ಟು ಹೆಣ್ಣುಮಕ್ಕಳು ಹಾವು ಕಡಿದು ಸಾವು!

ರಾಷ್ಟ್ರೀಯ ಸುದ್ದಿ

ಆಕಾಶದಲ್ಲಿ ಹಾರುವ ಬಸ್ ತರಲಿದ್ದೇವೆ: ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸ ಘೋಷಣೆ; ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ