ರಾಷ್ಟ್ರೀಯ ಸುದ್ದಿ

ಹಿಜಾಬ್ ಇಸ್ಲಾಂನ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ: ಮುಸ್ಲಿಂ ವಿದ್ಯಾರ್ಥಿನಿಯ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್

Reading…
Follow Us

ಸಾರಾಂಶ

ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾಗಿದ್ದ ಮುಸ್ಲಿಂ ಬಾಲಕಿಯ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಹಿಜಾಬ್ ಇಸ್ಲಾಂ ಧರ್ಮದ ಕಡ್ಡಾಯ ಧಾರ್ಮಿಕ ಆಚರಣೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿಲ್ಲ ಎಂದಿರುವ ಕೋರ್ಟ್, ಶಾಲಾ ಸಮವಸ್ತ್ರ ನಿಯಮವು ಶಿಸ್ತು ಮತ್ತು ಸಮಾನತೆ ಕಾಯ್ದುಕೊಳ್ಳಲು ಅಗತ್ಯ ಎಂದು ತೀರ್ಪು ನೀಡಿದೆ.

ಶಾಲಾ ಸಮವಸ್ತ್ರದ ಜೊತೆಗೆ ಹಿಜಾಬ್ (ತಲೆವಸ್ತ್ರ) ಧರಿಸಲು ಅನುಮತಿ ನೀಡಬೇಕೆಂದು ಕೋರಿ ಮುಸ್ಲಿಂ ಬಾಲಕಿಯೊಬ್ಬಳು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವುದು ಕಡ್ಡಾಯ ಧಾರ್ಮಿಕ ಆಚರಣೆ ಎಂಬುದನ್ನು ಸಾಬೀತುಪಡಿಸಲು ಅರ್ಜಿದಾರರು ಸೂಕ್ತವಾದ ಧಾರ್ಮಿಕ ಆಧಾರ ಅಥವಾ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಒದಗಿಸಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಜೆ.ಜೆ. ಮುನಿರ್ ಹಾಗೂ ನ್ಯಾಯಮೂರ್ತಿ ಇಂದ್ರಜೀತ್ ಶುಕ್ಲಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ತೀರ್ಪು ನೀಡಿದೆ. ಶಾಲಾ ಆಡಳಿತ ಮಂಡಳಿಯು ವಿಧಿಸಿರುವ ಸಮವಸ್ತ್ರ ನಿಯಮವು ಪಕ್ಷಪಾತವಿಲ್ಲದ, ಶಿಸ್ತು ಮತ್ತು ಸಂಸ್ಥೆಯ ಗುರುತನ್ನು ಕಾಯ್ದುಕೊಳ್ಳುವ ಉದ್ದೇಶ ಹೊಂದಿದ್ದಾಗ, ವಿದ್ಯಾರ್ಥಿಗಳು ಅದರಲ್ಲಿ ಬದಲಾವಣೆ ಕೋರಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಖಾಸಗಿ ಅನುದಾನರಹಿತ ಶಾಲೆ ಠಾಗೋರ್ ಪಬ್ಲಿಕ್ ಸ್ಕೂಲ್‌ನಲ್ಲಿ 10ನೇ ತರಗತಿ ಪೂರ್ಣಗೊಳಿಸಿ 11ನೇ ತರಗತಿಗೆ ಪ್ರವೇಶ ಬಯಸಿದ್ದ ಸುಕೈನಾ ರಿಜ್ವಿ ಎಂಬ ಅಪ್ರಾಪ್ತ ಬಾಲಕಿ ತನ್ನ ತಾಯಿಯ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ತಾವು 6ನೇ ತರಗತಿಯಿಂದ 10ನೇ ತರಗತಿಯವರೆಗೆ ಸಮವಸ್ತ್ರದ ಜೊತೆಗೆ ಸ್ಕಾರ್ಫ್ ಧರಿಸಿಕೊಂಡೇ ಓದಿದ್ದು, ಆಗ ಶಾಲಾ ಆಡಳಿತ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ ಈಗ 11ನೇ ತರಗತಿ ಪ್ರವೇಶಕ್ಕೆ ಹಿಜಾಬ್ ಧರಿಸಬಾರದು ಎಂದು ಆಡಳಿತ ಮಂಡಳಿ ಷರತ್ತು ವಿಧಿಸುತ್ತಿದೆ. ಇದು ಸಂವಿಧಾನದ ವಿಧಿ 14 ಮತ್ತು 19(1)(ಎ) ಅಡಿಯಲ್ಲಿ ಲಭ್ಯವಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ರಿಕ್ಷಾ ಚಾಲಕ ಗುರುಪ್ರಸಾದ್‌ ಹೃದಯಾಘಾತದಿಂದ ನಿಧನ: ಮೃತರಿಗೆ ಗೌರವಾರ್ಥ ಮಿಲಾದ್ ಕಾರ್ಯಕ್ರಮ ಮುಂದೂಡಿದ ಮಸೀದಿ ಆಡಳಿತ
ರಾಜ್ಯ ಸುದ್ದಿ

“ಶುದ್ಧ ಪೆಟ್ರೋಲ್ ನಿಮ್ಮ ಅಪ್ಪನ ಮನೆಯಿಂದ ಬರುತ್ತಾ?”: ಇಥನಾಲ್ ನೀತಿ ಸಮರ್ಥಿಸಲು ಹೋಗಿ ವಿವಾದಕ್ಕೀಡಾದ ಬಿಜೆಪಿ ಸಂಸದ
ವೀಡಿಯೊ

“ಇಮ್ರಾನ್ ಖಾನ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ”: ಪಾಕ್ ಪ್ರಧಾನಿಗೆ ಭಾರತದ ಗವಾಸ್ಕರ್, ಕಪಿಲ್ ದೇವ್ ಸಹಿತ 21 ಕ್ರಿಕೆಟ್ ದಿಗ್ಗಜರ ಪತ್ರ
ಅಂತಾರಾಷ್ಟ್ರೀಯ

ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ

ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು
ವೀಡಿಯೊ

ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು

ಹಿಜಾಬ್ ಇಸ್ಲಾಂನ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ: ಮುಸ್ಲಿಂ ವಿದ್ಯಾರ್ಥಿನಿಯ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್
ರಾಷ್ಟ್ರೀಯ ಸುದ್ದಿ

ಹಿಜಾಬ್ ಇಸ್ಲಾಂನ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ: ಮುಸ್ಲಿಂ ವಿದ್ಯಾರ್ಥಿನಿಯ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್

ಹೊಲದಲ್ಲಿ ಹೂತಿಟ್ಟಿದ್ದ ₹5 ಲಕ್ಷ ನಗದು ಗೆದ್ದಲು ಪಾಲು: ರಾಜಸ್ಥಾನದ ರೈತನಿಗೆ ಆಘಾತ

ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು

“ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನನಗೇ ಈ ಸ್ಥಿತಿಯಾದರೆ ಸಾಮಾನ್ಯರ ಕಥೆಯೇನು?”: ಪಂಜಾಬ್‌ SIR ಗೊಂದಲ; ಮಾಜಿ ರಾಯಭಾರಿಗೇ ಪೌರತ್ವ ಸಾಬೀತುಪಡಿಸುವ ಸ್ಥಿತಿ
ರಾಷ್ಟ್ರೀಯ ಸುದ್ದಿ

“ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನನಗೇ ಈ ಸ್ಥಿತಿಯಾದರೆ ಸಾಮಾನ್ಯರ ಕಥೆಯೇನು?”: ಪಂಜಾಬ್‌ SIR ಗೊಂದಲ; ಮಾಜಿ ರಾಯಭಾರಿಗೇ ಪೌರತ್ವ ಸಾಬೀತುಪಡಿಸುವ ಸ್ಥಿತಿ

ಕೇಂದ್ರ ಸಚಿವರ ಬಂಗಲೆಗಳ ನಿರ್ವಹಣೆ, ದುರಸ್ತಿಗೆ ಶತಕೋಟಿ ವೆಚ್ಚ; 2025-26ರಲ್ಲಿ ದಾಖಲೆಯ 92.35 ಕೋಟಿ ರೂ. ಖರ್ಚು: RTI ಮೂಲಕ ಮಾಹಿತಿ ಬಹಿರಂಗ

ಮಂಗಳೂರು ರೈಲ್ವೆ ವ್ಯಾಪ್ತಿ ವರ್ಗಾವಣೆ: ತೀರ್ಮಾನ ತಡೆಹಿಡಿಯಲು ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ಕೇರಳ ಸಿಎಂ ವಿ. ಡಿ. ಸತೀಶನ್
ರಾಜ್ಯ ಸುದ್ದಿ

ಮಂಗಳೂರು ರೈಲ್ವೆ ವ್ಯಾಪ್ತಿ ವರ್ಗಾವಣೆ: ತೀರ್ಮಾನ ತಡೆಹಿಡಿಯಲು ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ಕೇರಳ ಸಿಎಂ ವಿ. ಡಿ. ಸತೀಶನ್

ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ

ಭರವಸೆ ಈಡೇರಿಸದ ಕೇಂದ್ರ ಸರ್ಕಾರ: ಸೆಪ್ಟೆಂಬರ್ 5 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಘೋಷಿಸಿದ ಸಿಜೆಪಿ

ಇಸ್ರೇಲ್‌ನ ‘E1’ ವಸಾಹತು ಯೋಜನೆಗೆ ಯುಎಇ, ಸೌದಿ ಅರೇಬಿಯಾ ಸಹಿತ ಎಂಟು ಅರಬ್-ಮುಸ್ಲಿಂ ರಾಷ್ಟ್ರಗಳ ತೀವ್ರ ವಿರೋಧ; ಜಾಗತಿಕ ಶಾಂತಿಗೆ ಧಕ್ಕೆ ಎಂದು ಜಂಟಿ ಎಚ್ಚರಿಕೆ

ಉತ್ತರಾಖಂಡ್ SIR: ಮುಸ್ಲಿಂ ಮತದಾರರನ್ನೇ ಗುರಿಯಾಗಿಸಿ 6,500 ಆಕ್ಷೇಪಣೆ ಸಲ್ಲಿಸಿದ 5 ಬಿಜೆಪಿ ಕಾರ್ಯಕರ್ತರು

ಈ ವಾದವನ್ನು ತಳ್ಳಿಹಾಕಿದ ಹೈಕೋರ್ಟ್, ಹಿಂದೆ ಶಾಲಾ ಆಡಳಿತ ಮಂಡಳಿಯು ಆಕ್ಷೇಪಿಸದಿರುವುದು ಅಜಾಗರೂಕತೆ ಅಥವಾ ನಿಷ್ಕ್ರಿಯತೆಯಿಂದ ಆಗಿರಬಹುದು, ಆದರೆ ಅದನ್ನೇ ಹಕ್ಕು ಎಂದು ಪ್ರತಿಪಾದಿಸಲು ಬರುವುದಿಲ್ಲ ಎಂದು ಹೇಳಿದೆ. ಶಾಲಾ ಛಾಯಾಚಿತ್ರಗಳನ್ನು ಪರಿಶೀಲಿಸಿದ ಪೀಠ, ಅರ್ಜಿದಾರ ಬಾಲಕಿಯನ್ನು ಹೊರತುಪಡಿಸಿ ಅದೇ ಸಮುದಾಯಕ್ಕೆ ಸೇರಿದ ಇತರ ಯಾವ ವಿದ್ಯಾರ್ಥಿನಿಯೂ ಸ್ಕಾರ್ಫ್ ಧರಿಸಿಲ್ಲ ಎಂಬುದನ್ನು ಗಮನಿಸಿತು. ಸಮವಸ್ತ್ರದ ಮೂಲ ಉದ್ದೇಶವೇ ತರಗತಿಯಲ್ಲಿ ಧರ್ಮ-ನಿರಪೇಕ್ಷ ವಾತಾವರಣ ಮತ್ತು ಸಮಾನತೆಯನ್ನು ಕಾಯ್ದುಕೊಳ್ಳುವುದು. ವ್ಯಕ್ತಿಗತ ಕಾರಣಗಳಿಗಾಗಿ ಸಮವಸ್ತ್ರದ ನಿಯಮವನ್ನು ಸಡಿಲಗೊಳಿಸುತ್ತ ಹೋದರೆ ಶಾಲೆಯ ಶಿಸ್ತು ಮತ್ತು ಸಮವಸ್ತ್ರದ ಕಲ್ಪನೆಯೇ ಇಲ್ಲವಾಗುತ್ತದೆ ಎಂದು ಕೋರ್ಟ್ ಹೇಳಿದೆ.

2022ರಲ್ಲಿ ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠವು ನೀಡಿದ್ದ ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂಬ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ಉಲ್ಲೇಖಿಸಿದೆ. ಈ ತೀರ್ಪಿನಿಂದ ಭಿನ್ನವಾದ ನಿಲುವು ತಳೆಯಲು ಯಾವುದೇ ಸೂಕ್ತ ಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟಿರುವ ಪೀಠ, ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಈ ವಿಷಯವಾಗಿ ಭಿನ್ನ ತೀರ್ಪು ಬಂದಿದ್ದು ಅಂತಿಮ ಸ್ಪಷ್ಟತೆ ದೊರೆತಿಲ್ಲವಾದರೂ, ಹೈಕೋರ್ಟ್‌ಗಳು ಈ ವಿಚಾರದಲ್ಲಿ ಒಂದೇ ರೀತಿಯ ತೀರ್ಮಾನಕ್ಕೆ ಬಂದಿವೆ ಎಂದು ತಿಳಿಸಿದೆ.

ಸಂವಿಧಾನದ 25ನೇ ವಿಧಿಯಡಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಪ್ರತಿಪಾದಿಸಲು ಬಲವಾದ ಕಾನೂನಾತ್ಮಕ ಮತ್ತು ಸತ್ಯಾಧಾರಿತ ಬುನಾದಿ ಅಗತ್ಯ. ಬರಿ ಹೇಳಿಕೆಗಳ ಆಧಾರದ ಮೇಲೆ ಅದನ್ನು ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಹೈಕೋರ್ಟ್, ಬಾಲಕಿಯ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದೆ.

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ರಾಷ್ಟ್ರೀಯ ಸುದ್ದಿ

ಭರವಸೆ ಈಡೇರಿಸದ ಕೇಂದ್ರ ಸರ್ಕಾರ: ಸೆಪ್ಟೆಂಬರ್ 5 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಘೋಷಿಸಿದ ಸಿಜೆಪಿ

ರಾಷ್ಟ್ರೀಯ ಸುದ್ದಿ

ಕೇಂದ್ರ ಸಚಿವರ ಬಂಗಲೆಗಳ ನಿರ್ವಹಣೆ, ದುರಸ್ತಿಗೆ ಶತಕೋಟಿ ವೆಚ್ಚ; 2025-26ರಲ್ಲಿ ದಾಖಲೆಯ 92.35 ಕೋಟಿ ರೂ. ಖರ್ಚು: RTI ಮೂಲಕ ಮಾಹಿತಿ ಬಹಿರಂಗ

ರಾಷ್ಟ್ರೀಯ ಸುದ್ದಿ

“ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನನಗೇ ಈ ಸ್ಥಿತಿಯಾದರೆ ಸಾಮಾನ್ಯರ ಕಥೆಯೇನು?”: ಪಂಜಾಬ್‌ SIR ಗೊಂದಲ; ಮಾಜಿ ರಾಯಭಾರಿಗೇ ಪೌರತ್ವ ಸಾಬೀತುಪಡಿಸುವ ಸ್ಥಿತಿ

ರಾಷ್ಟ್ರೀಯ ಸುದ್ದಿ

ಉತ್ತರಾಖಂಡ್ SIR: ಮುಸ್ಲಿಂ ಮತದಾರರನ್ನೇ ಗುರಿಯಾಗಿಸಿ 6,500 ಆಕ್ಷೇಪಣೆ ಸಲ್ಲಿಸಿದ 5 ಬಿಜೆಪಿ ಕಾರ್ಯಕರ್ತರು

ರಾಷ್ಟ್ರೀಯ ಸುದ್ದಿ

ಜಾಗತಿಕ ಹೂಡಿಕೆದಾರರಿಗೆ ಏಷ್ಯಾದಲ್ಲೇ ಅತ್ಯಂತ ಕನಿಷ್ಠ ಆದ್ಯತೆಯಾಗಿ ಭಾರತೀಯ ಷೇರು ಮಾರುಕಟ್ಟೆ: ಬ್ಯಾಂಕ್ ಆಫ್ ಅಮೆರಿಕ ಸಮೀಕ್ಷೆಯಲ್ಲಿ ಕಳವಳಕಾರಿ ಮಾಹಿತಿ ಬಹಿರಂಗ

From Across Varadigara

ರಾಷ್ಟ್ರೀಯ ಸುದ್ದಿ

ಪ್ರತಿ ಗಂಟೆಗೆ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ 21 ಮಂದಿ! ರೋಗ, ಯುದ್ಧಕ್ಕಿಂತಲೂ ಭೀಕರವಾಯಿತೇ ಭಾರತದ ರಸ್ತೆ ಅಪಘಾತ?

ರಾಷ್ಟ್ರೀಯ ಸುದ್ದಿ

ಉತ್ತರಾಖಂಡ್ SIR: ಮುಸ್ಲಿಂ ಮತದಾರರನ್ನೇ ಗುರಿಯಾಗಿಸಿ 6,500 ಆಕ್ಷೇಪಣೆ ಸಲ್ಲಿಸಿದ 5 ಬಿಜೆಪಿ ಕಾರ್ಯಕರ್ತರು

ವೀಡಿಯೊ

ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ

ಸುತ್ತ - ಮುತ್ತ

Coastal Friends Mangaloreಗೆ ನೂತನ ಸಾರಥ್ಯ: ಅಧ್ಯಕ್ಷರಾಗಿ ಶಮೀರ್ ಲಕ್ಕಿಸ್ಟಾರ್ ಆಯ್ಕೆ

ಅಂತಾರಾಷ್ಟ್ರೀಯ

“ಇಮ್ರಾನ್ ಖಾನ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ”: ಪಾಕ್ ಪ್ರಧಾನಿಗೆ ಭಾರತದ ಗವಾಸ್ಕರ್, ಕಪಿಲ್ ದೇವ್ ಸಹಿತ 21 ಕ್ರಿಕೆಟ್ ದಿಗ್ಗಜರ ಪತ್ರ

ರಾಷ್ಟ್ರೀಯ ಸುದ್ದಿ

ಕೇಂದ್ರ ಸಚಿವರ ಬಂಗಲೆಗಳ ನಿರ್ವಹಣೆ, ದುರಸ್ತಿಗೆ ಶತಕೋಟಿ ವೆಚ್ಚ; 2025-26ರಲ್ಲಿ ದಾಖಲೆಯ 92.35 ಕೋಟಿ ರೂ. ಖರ್ಚು: RTI ಮೂಲಕ ಮಾಹಿತಿ ಬಹಿರಂಗ

ರಾಷ್ಟ್ರೀಯ ಸುದ್ದಿ

ಜಾಗತಿಕ ಹೂಡಿಕೆದಾರರಿಗೆ ಏಷ್ಯಾದಲ್ಲೇ ಅತ್ಯಂತ ಕನಿಷ್ಠ ಆದ್ಯತೆಯಾಗಿ ಭಾರತೀಯ ಷೇರು ಮಾರುಕಟ್ಟೆ: ಬ್ಯಾಂಕ್ ಆಫ್ ಅಮೆರಿಕ ಸಮೀಕ್ಷೆಯಲ್ಲಿ ಕಳವಳಕಾರಿ ಮಾಹಿತಿ ಬಹಿರಂಗ

ಅಂತಾರಾಷ್ಟ್ರೀಯ

ಇಸ್ರೇಲ್‌ನ ‘E1’ ವಸಾಹತು ಯೋಜನೆಗೆ ಯುಎಇ, ಸೌದಿ ಅರೇಬಿಯಾ ಸಹಿತ ಎಂಟು ಅರಬ್-ಮುಸ್ಲಿಂ ರಾಷ್ಟ್ರಗಳ ತೀವ್ರ ವಿರೋಧ; ಜಾಗತಿಕ ಶಾಂತಿಗೆ ಧಕ್ಕೆ ಎಂದು ಜಂಟಿ ಎಚ್ಚರಿಕೆ

ವೀಡಿಯೊ

ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು

ರಾಷ್ಟ್ರೀಯ ಸುದ್ದಿ

ಅದಾನಿ ಯೋಜನೆಗಳಿಗಾಗಿ 83,700 ಚದರ ಅಡಿ ಅರಣ್ಯ ಮತ್ತು ಮ್ಯಾಂಗ್ರೋವ್ ಭೂಮಿಯನ್ನು ಬಿಟ್ಟುಕೊಡಲು ಮಹಾರಾಷ್ಟ್ರ ಸರ್ಕಾರದ ಅನುಮೋದನೆ

ರಾಜ್ಯ ಸುದ್ದಿ

ಮಂಗಳೂರು ರೈಲ್ವೆ ವ್ಯಾಪ್ತಿ ವರ್ಗಾವಣೆ: ತೀರ್ಮಾನ ತಡೆಹಿಡಿಯಲು ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ಕೇರಳ ಸಿಎಂ ವಿ. ಡಿ. ಸತೀಶನ್

ರಾಷ್ಟ್ರೀಯ ಸುದ್ದಿ

“ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನನಗೇ ಈ ಸ್ಥಿತಿಯಾದರೆ ಸಾಮಾನ್ಯರ ಕಥೆಯೇನು?”: ಪಂಜಾಬ್‌ SIR ಗೊಂದಲ; ಮಾಜಿ ರಾಯಭಾರಿಗೇ ಪೌರತ್ವ ಸಾಬೀತುಪಡಿಸುವ ಸ್ಥಿತಿ

ರಾಷ್ಟ್ರೀಯ ಸುದ್ದಿ

ಭರವಸೆ ಈಡೇರಿಸದ ಕೇಂದ್ರ ಸರ್ಕಾರ: ಸೆಪ್ಟೆಂಬರ್ 5 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಘೋಷಿಸಿದ ಸಿಜೆಪಿ

ವೀಡಿಯೊ

ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು

ರಾಜ್ಯ ಸುದ್ದಿ

ರಿಕ್ಷಾ ಚಾಲಕ ಗುರುಪ್ರಸಾದ್‌ ಹೃದಯಾಘಾತದಿಂದ ನಿಧನ: ಮೃತರಿಗೆ ಗೌರವಾರ್ಥ ಮಿಲಾದ್ ಕಾರ್ಯಕ್ರಮ ಮುಂದೂಡಿದ ಮಸೀದಿ ಆಡಳಿತ

ರಾಷ್ಟ್ರೀಯ ಸುದ್ದಿ

ಬಿಹಾರ: ಶಾಲಾ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್ ಪುಡಿ ಬಳಕೆ; 34 ವಿದ್ಯಾರ್ಥಿಗಳು ಅಸ್ವಸ್ಥ

ಸುತ್ತ - ಮುತ್ತ

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು: 2026-27ರ ಸಾಲಿಗೆ ನೂತನ ನಾಯಕರ ಆಯ್ಕೆ

ರಾಷ್ಟ್ರೀಯ ಸುದ್ದಿ

ಶಿಕ್ಷಣ ವ್ಯವಸ್ಥೆಯ ಲೋಪ, ಸರ್ಕಾರಿ ಉದ್ಯೋಗ ನೀಡಿಕೆಯಲ್ಲಿ ಭ್ರಷ್ಟಾಚಾರ: ಹೋರಾಟದ ಎಚ್ಚರಿಕೆ ನೀಡಿದ ಬಾಬಾ ರಾಮ್‌ದೇವ್‌

ರಾಷ್ಟ್ರೀಯ ಸುದ್ದಿ

ರಸ್ತೆ ಕಾಮಗಾರಿ ವಿಳಂಬ ಹಾಗೂ ಮದ್ಯಪಾನ ಪ್ರಮಾಣ ಹೆಚ್ಚಳಕ್ಕೆ ಡೊನಾಲ್ಡ್ ಟ್ರಂಪ್ ಕಾರಣ: ಮಹಾರಾಷ್ಟ್ರ ಬಿಜೆಪಿ ನಾಯಕನ ವಿಚಿತ್ರ ವಾದ!

ರಾಷ್ಟ್ರೀಯ ಸುದ್ದಿ

ಯುವಶಕ್ತಿಯ ಒಕ್ಕೂಟ: ಉದ್ಯೋಗ-ಶಿಕ್ಷಣದ ಹಕ್ಕಿಗಾಗಿ ಉತ್ತರ ಪ್ರದೇಶದಲ್ಲಿ ‘ಜಸ್ಟಿಸ್ ಮೋರ್ಚಾ’ ಸ್ಥಾಪನೆ: 50 ದಿನಗಳ ರಾಜ್ಯವ್ಯಾಪಿ ಅಭಿಯಾನ ಘೋಷಣೆ