ನಾಗಪುರ: ಕಳೆದ ಮೂರು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ತಾನು ಇನ್ನು ಮುಂದೆ ಮೊದಲಿನಂತೆ ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಹೊಸ ತಲೆಮಾರಿಗೆ ಹೆಚ್ಚಿನ ಜವಾಬ್ದಾರಿ ವಹಿಸುವ ಅವಕಾಶ ನೀಡಬೇಕು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಾಗಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ಸಾರ್ವಜನಿಕ ಜೀವನದಲ್ಲಿ ಹಲವು ಏಳು-ಬೀಳುಗಳನ್ನು ಕಂಡಿದ್ದು, ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ ಎಂದು ಹೇಳಿದರು. ಹಿರಿಯರು ಹೊಸ ತಲೆಮಾರಿಗೆ ಮಾರ್ಗದರ್ಶನ ನೀಡುತ್ತಾ, ಜವಾಬ್ದಾರಿಗಳನ್ನು ಹಂತಹಂತವಾಗಿ ಯುವಕರಿಗೆ ಹಸ್ತಾಂತರಿಸಬೇಕು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.
ಗಡ್ಕರಿ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿತ್ತು. ವಿಶೇಷವಾಗಿ ಕೇಂದ್ರ ಸಚಿವ ಸಂಪುಟ ಪುನಾರಚನೆಯ ಸಾಧ್ಯತೆಗಳ ನಡುವೆ ಅವರ ಹೇಳಿಕೆಯನ್ನು ಕೆಲವರು ರಾಜಕೀಯ ನಿವೃತ್ತಿಯ ಸೂಚನೆಯಾಗಿ ವ್ಯಾಖ್ಯಾನಿಸಿದ್ದರು.
ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ
ವಿಪಕ್ಷಗಳ ವ್ಯಂಗ್ಯಕ್ಕೆ ಭಕ್ತಿಗೀತೆಯ ಬಳಕೆ: ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ ಬಿಜೆಪಿ
ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ
ಮತಾಂತರ ನಿಷೇಧ ಕಾನೂನಿನ ದುರುಪಯೋಗ ಹಾಗೂ ಬಲಪಂಥೀಯರ ದಾಳಿಯ ಭೀತಿ: ಮುಂಬೈ ಚರ್ಚ್‌ಗಳಲ್ಲಿ ಸ್ವಯಂ ಘೋಷಣೆ ಪತ್ರ, ಆಧಾರ್ ಸಂಗ್ರಹ!
CJP ಒಂದೆರಡು ರಾಜ್ಯಗಳಲ್ಲಿ ಅಧಿಕಾರ ಹಿಡಿದರೆ ಅಚ್ಚರಿಯೇನಿಲ್ಲ; ರಾಷ್ಟ್ರೀಯ ಮಟ್ಟದಲ್ಲಿ ‘ತೃತೀಯ ಶಕ್ತಿ’ಯಾಗುವುದು ಅನುಮಾನ: ಪಿ. ಚಿದಂಬರಂ
ನೇಪಾಳ ಭೀಕರ ಪ್ರವಾಹ: 105 ಭಾರತೀಯರು ಸೇರಿ 384 ಪ್ರವಾಸಿಗರು ನಾಪತ್ತೆ, ಬಿಹಾರದಲ್ಲೂ ಹೈಅಲರ್ಟ್
ಸೌದಿ, ಟರ್ಕಿ ಜೊತೆ ರಕ್ಷಣಾ ಒಪ್ಪಂದದ ಬೆನ್ನಲ್ಲೇ ಕುವೈತ್ ಜೊತೆಗೂ ಪಾಕಿಸ್ತಾನ ರಕ್ಷಣಾ ಒಪ್ಪಂದ
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತ, 2029ರಲ್ಲಿ ರಾಹುಲ್ ಗಾಂಧಿ ದೇಶದ ಪ್ರಧಾನಿ: ಡಿಕೆಶಿ ಭವಿಷ್ಯ!
ನನಗೆ ಮೊದಲಿನಂತೆ ಕೆಲಸ ಮಾಡಲು ಸಾಧ್ಯವಿಲ್ಲ; ಹೊಸ ತಲೆಮಾರಿಗೆ ಜವಾಬ್ದಾರಿ ವಹಿಸಬೇಕು: ನಿತಿನ್ ಗಡ್ಕರಿ
ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು
ಆದರೆ, ಗಡ್ಕರಿ ಅವರ ಕಚೇರಿ ಈ ಕುರಿತು ಸ್ಪಷ್ಟನೆ ನೀಡಿದ್ದು, ಅವರ ಹೇಳಿಕೆಯನ್ನು ರಾಜಕೀಯ ಭವಿಷ್ಯಕ್ಕೆ ಸಂಬಂಧಿಸಿ ನೋಡಬಾರದು ಎಂದು ತಿಳಿಸಿದೆ. ಅವರು ತಮ್ಮ ಟ್ರಸ್ಟ್ ನಡೆಸುತ್ತಿರುವ ಸಾಮಾಜಿಕ ಸೇವಾ ಚಟುವಟಿಕೆಗಳ ಕುರಿತು ಮಾತನಾಡುತ್ತಿದ್ದರು. ವಿಶೇಷವಾಗಿ ಲಕ್ಷ್ಮಣರಾವ್ ಮಾಂಕರ್ ಟ್ರಸ್ಟ್‌ನ ಸಾಮಾಜಿಕ ಕಾರ್ಯಗಳಿಗೆ ಹೊಸ ತಲೆಮಾರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅವರು ಈ ಮಾತುಗಳನ್ನು ಹೇಳಿದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.
ಹೀಗಾಗಿ ನಿತಿನ್ ಗಡ್ಕರಿ ಅವರು ರಾಜಕೀಯದಿಂದ ನಿವೃತ್ತಿಯಾಗುವ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ ಎಂಬುದು ಸ್ಪಷ್ಟವಾಗಿದೆ.
