ಮಹಾರಾಷ್ಟ್ರದಲ್ಲಿ ‘ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ 2026’ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಪ್ರಾರ್ಥನಾ ಸಭೆಗಳ ಮೇಲಿನ ಸರಣಿ ದಾಳಿಗಳ ಭೀತಿಯಿಂದಾಗಿ, ಮುಂಬೈ ಮತ್ತು ಸುತ್ತಮುತ್ತಲಿನ ಚರ್ಚ್‌ಗಳಲ್ಲಿ ಪ್ರಾರ್ಥನೆಗೆ ಬರುವ ವಿಶ್ವಾಸಿಗಳಿಂದ ‘ಸ್ವಯಂ ಘೋಷಣಾಪತ್ರ’ ಹಾಗೂ ಆಧಾರ್/ಪಾನ್ ಕಾರ್ಡ್‌ಗಳನ್ನು ಪಡೆಯುವ ವಿನೂತನ ಮುನ್ನೆಚ್ಚರಿಕೆ ಪ್ರಕ್ರಿಯೆ ಆರಂಭವಾಗಿದೆ.
ಮುಂಬೈ, ಠಾಣೆ, ವಸಾಯಿ-ವಿರಾರ್, ಮಿರಾ-ಭಾಯಂದರ್ ಹಾಗೂ ಪಾಲ್ಘರ್ ಭಾಗದ ಚರ್ಚ್‌ಗಳಲ್ಲಿ ಭಾನುವಾರದ ಪ್ರಾರ್ಥನೆಗೆ ಆಗಮಿಸುವ ವಿಶ್ವಾಸಿಗಳಿಂದ ಈ ದಾಖಲೆಗಳನ್ನು ಪಡೆಯಲಾಗುತ್ತಿದೆ. “ನಾವು ಯಾವುದೇ ಬೆದರಿಕೆ, ಆಮಿಷ, ಬಲವಂತ ಅಥವಾ ಒತ್ತಡಕ್ಕೆ ಒಳಗಾಗದೆ, ಸ್ವಇಚ್ಛೆಯಿಂದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸುತ್ತಿದ್ದೇವೆ” ಎಂದು ವಿಶ್ವಾಸಿಗಳು ಆಧಾರ್ ಅಥವಾ ಪಾನ್‌ಕಾರ್ಡ್ ವಿವರಗಳೊಂದಿಗೆ ಪ್ರಮಾಣೀಕರಿಸಿ ಸಹಿ ಮಾಡುತ್ತಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ಭಾನುವಾರದ ಪ್ರಾರ್ಥನಾ ಸಭೆಗಳ ಮೇಲೆ ನಡೆದ ದಾಳಿಗಳು ಹಾಗೂ ಆ ಬಳಿಕ ಸಭಾಪಾಲಕರು ಮತ್ತು ವಿಶ್ವಾಸಿಗಳ ಮೇಲೆಯೇ ದಾಖಲಾದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಧರ್ಮಗುರುಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ಏಪ್ರಿಲ್‌ನಿಂದ ಜುಲೈ ನಡುವೆ ನಡೆದ ಸಭಾ ಭಂಗದ ಘಟನೆಗಳಿಗೆ ಸಂಬಂಧಿಸಿದಂತೆ ಒಟ್ಟು 9 ಎಫ್‌ಐಆರ್‌ಗಳು ದಾಖಲಾಗಿದ್ದು, ಅದರಲ್ಲಿ 7 ಪ್ರಕರಣಗಳನ್ನು ಪ್ರಾರ್ಥನಾ ಸಂಘಟಕರ ಮೇಲೆಯೇ ಹಾಕಲಾಗಿದೆ. ಹೀಗಾಗಿ ಕಾನೂನುಬಾಹಿರ ಮತಾಂತರದ ಸುಳ್ಳು ದೂರುಗಳು ಅಥವಾ ಕಿರುಕುಳ ಎದುರಾದಾಗ, ಪೋಲಿಸ್ ಹಾಗೂ ಆಡಳಿತಕ್ಕೆ ಕಾನೂನಾತ್ಮಕ ಸಾಕ್ಷಿಯಾಗಿ ಬಳಸಿಕೊಳ್ಳಲು ಇದನ್ನು ಸುರಕ್ಷಾ ಕವಚವಾಗಿ ಬಳಸಲಾಗುತ್ತಿದೆ.
ಅತ್ಯಾಚಾರ ದೋಷಿ ರಾಮ್ ರಹೀಮ್‌ಗೆ ಮತ್ತೆ 21 ದಿನಗಳ ಪರೋಲ್: 5 ವರ್ಷಗಳಲ್ಲಿ 17ನೇ ಬಾರಿಗೆ ಜೈಲಿನಿಂದ ಬಿಡುಗಡೆ!
ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ
ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು
ಹಿಜಾಬ್ ಇಸ್ಲಾಂನ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ: ಮುಸ್ಲಿಂ ವಿದ್ಯಾರ್ಥಿನಿಯ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್
ಮತಾಂತರ ನಿಷೇಧ ಕಾನೂನಿನ ದುರುಪಯೋಗ ಹಾಗೂ ಬಲಪಂಥೀಯರ ದಾಳಿಯ ಭೀತಿ: ಮುಂಬೈ ಚರ್ಚ್‌ಗಳಲ್ಲಿ ಸ್ವಯಂ ಘೋಷಣೆ ಪತ್ರ, ಆಧಾರ್ ಸಂಗ್ರಹ!
ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ
ನೇಪಾಳ ಭೀಕರ ಪ್ರವಾಹ: 105 ಭಾರತೀಯರು ಸೇರಿ 384 ಪ್ರವಾಸಿಗರು ನಾಪತ್ತೆ, ಬಿಹಾರದಲ್ಲೂ ಹೈಅಲರ್ಟ್
SIR: 1 ಕೋಟಿಗೂ ಹೆಚ್ಚು ಹೆಸರುಗಳ ASDDO ವರ್ಗೀಕರಣ; ಪರಿಶೀಲನೆಗೆ ಹೆಚ್ಚಿನ ಕಾಲಾವಕಾಶ ಮತ್ತು ನಿಗದಿತ ಪ್ರಕ್ರಿಯೆ ಅನುಸರಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಸಿಎಂ ಪತ್ರ
ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತ, 2029ರಲ್ಲಿ ರಾಹುಲ್ ಗಾಂಧಿ ದೇಶದ ಪ್ರಧಾನಿ: ಡಿಕೆಶಿ ಭವಿಷ್ಯ!
ನೂತನ ಕಾಯ್ದೆಯನ್ವಯ ಮತಾಂತರವು ಸ್ವಯಂಪ್ರೇರಿತ ಎಂಬುದನ್ನು ಸಾಬೀತುಪಡಿಸುವ ಹೊಣೆಗಾರಿಕೆ ಆಯೋಜಕರ ಮೇಲೆಯೇ ಇರಲಿದೆ. ಈ ಹಿನ್ನೆಲೆಯಲ್ಲಿ ಸುಳ್ಳು ಆರೋಪಗಳಿಂದ ರಕ್ಷಣೆ ಪಡೆಯಲು ಚರ್ಚ್ ಆಡಳಿತ ಮಂಡಳಿಗಳೇ ಮುನ್ನೆಚ್ಚರಿಕೆಯಾಗಿ ಈ ದಾಖಲೆಗಳನ್ನು ಸಂಗ್ರಹಿಸುತ್ತಿವೆಯೇ ಹೊರತು ಇದು ಸರ್ಕಾರದ ಅಧಿಕೃತ ನಿಯಮವಲ್ಲ ಎಂದು ಮಹಾರಾಷ್ಟ್ರ ಕ್ರಿಶ್ಚಿಯನ್ ಡೆವಲಪ್‌ಮೆಂಟ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ.
ಆದಾಗ್ಯೂ, ದಶಕಗಳಿಂದ ಯಾವುದೇ ಅಡೆತಡೆಯಿಲ್ಲದೆ ಪ್ರಾರ್ಥನೆಗೆ ತೆರಳುತ್ತಿದ್ದ ನಾಗರಿಕರು, ಈಗ ತಮ್ಮ ಆರಾಧನಾ ಸ್ವಾತಂತ್ರ್ಯವನ್ನು ಸಾಬೀತುಪಡಿಸಲು ವೈಯಕ್ತಿಕ ದಾಖಲೆಗಳನ್ನು ಸಲ್ಲಿಸಬೇಕಾದ ವಾತಾವರಣ ನಿರ್ಮಾಣವಾಗಿರುವುದಕ್ಕೆ ಹಕ್ಕುಗಳ ಹೋರಾಟಗಾರರು ಹಾಗೂ ಸ್ಥಳೀಯ ಕ್ರೈಸ್ತರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
