ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ತಮಗೆ ಶಾಸನಬದ್ಧ ಹೊಣೆಗಾರಿಕೆ ಇದೆ ಎಂದು ಆರೋಪಿಸಿ ರಾಜೀನಾಮೆಗೆ ಆಗ್ರಹಿಸಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರ ಅವಧಿಯಲ್ಲೇ ನಡೆದಿದೆ ಎನ್ನಲಾದ ಅಕ್ರಮಗಳ ಪಟ್ಟಿಯನ್ನು ಮುನ್ನೆಲೆಗೆ ತಂದು ಖರ್ಗೆ ಪ್ರತಿದಾಳಿ ನಡೆಸಿದ್ದಾರೆ.
ಕೆಪಿಎಸ್‌ಸಿ ನೇಮಕಾತಿ ವಿಚಾರವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಎಇಇ ನೇಮಕಾತಿ ಸೇರಿದಂತೆ ಹಲವು ಪ್ರಕರಣಗಳಲ್ಲಿ ಪ್ರಿಯಾಂಕ್ ಖರ್ಗೆ ಅಕ್ರಮ ಎಸಗಿದವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಸುದೀರ್ಘ ಪೋಸ್ಟ್ ಮೂಲಕ ತಿರುಗೇಟು ನೀಡಿರುವ ಖರ್ಗೆ, ಅಮಿತ್ ಶಾ ಅವರ ಸೂಚನೆ ಮೇರೆಗೆ ಅಥವಾ ಕೆಪಿಎಸ್‌ಸಿ ವಿಚಾರದಲ್ಲಿ ಬಿಜೆಪಿಗರು ಮೌನ ವಹಿಸಿರುವ ಕಾರಣಕ್ಕೆ ಕುಮಾರಸ್ವಾಮಿ ಮುಂಚೂಣಿಗೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿರುವ ಸಚಿವರು, ಕುಮಾರಸ್ವಾಮಿ ಅವರ ಹಿಂದಿನ ಆಡಳಿತ ವೈಖರಿಯನ್ನು ಪ್ರಶ್ನಿಸಿದ್ದಾರೆ. ಹಿಂದೆ ತಮ್ಮ ಪಕ್ಷ ತೊರೆದ ನಾಯಕರೊಬ್ಬರ ವಿರುದ್ಧ ಮಾತನಾಡುವಾಗ, “ಅವರ ಸಂಬಂಧಿಕರಿಗೆ ಕ್ಲಾಸ್-1 ಹುದ್ದೆಗಳನ್ನು ಕೊಡಿಸಿದ್ದೆ” ಎಂದು ಕುಮಾರಸ್ವಾಮಿ ಅವರೇ ಬಹಿರಂಗವಾಗಿ ಹೇಳಿಕೆ ನೀಡಿದ್ದರು ಎಂಬುದನ್ನು ನೆನಪಿಸಿರುವ ಖರ್ಗೆ, ಕೆಪಿಎಸ್‌ಸಿ ಮೇಲಿನ ರಾಜಕೀಯ ಪ್ರಭಾವದ ಇತಿಹಾಸ ಕುಮಾರಸ್ವಾಮಿಯವರಿಂದಲೇ ಆರಂಭವಾಗಿತ್ತು ಎಂದು ತಿರುಗೇಟು ನೀಡಿದ್ದಾರೆ. ಜೊತೆಗೆ 1998ರ ಕೆಎಎಸ್ ಅಧಿಕಾರಿಗಳ ನೇಮಕಾತಿ ಹಗರಣ ಹಾಗೂ ಮೈತ್ರಿ ಸರ್ಕಾರದ ಅವಧಿಯ ಕೆಪಿಎಸ್‌ಸಿ ಆಡಳಿತದ ಲೋಪಗಳನ್ನು ಜನ ಮರೆತಿಲ್ಲ ಎಂದು ಹೇಳಿದ್ದಾರೆ.
ತಾಲಿಬಾನ್ ವಿರೋಧಿ ಹೋರಾಟಗಾರ್ತಿ ಮಲಾಲಾ ಆತ್ಮಚರಿತ್ರೆ ಓದುಗರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ
“ಕುಮಾರಸ್ವಾಮಿಯವರೇ, ನನ್ನ ಮೈಗೆ ಕೆಸರು ಅಂಟಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ” : ಕೆಪಿಎಸ್‌ಸಿ ಅಕ್ರಮದ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು
ಗಂಗಾಜಲ ಹಿಡಿದು ‘ಲಂಚ ಹಂಚಿಕೆ’ ಪ್ರಮಾಣ ವಚನ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿಡಿಯೋ ವೈರಲ್, ತನಿಖೆಗೆ ಆದೇಶ
ಸೌದಿ, ಟರ್ಕಿ ಜೊತೆ ರಕ್ಷಣಾ ಒಪ್ಪಂದದ ಬೆನ್ನಲ್ಲೇ ಕುವೈತ್ ಜೊತೆಗೂ ಪಾಕಿಸ್ತಾನ ರಕ್ಷಣಾ ಒಪ್ಪಂದ
CJP ಒಂದೆರಡು ರಾಜ್ಯಗಳಲ್ಲಿ ಅಧಿಕಾರ ಹಿಡಿದರೆ ಅಚ್ಚರಿಯೇನಿಲ್ಲ; ರಾಷ್ಟ್ರೀಯ ಮಟ್ಟದಲ್ಲಿ ‘ತೃತೀಯ ಶಕ್ತಿ’ಯಾಗುವುದು ಅನುಮಾನ: ಪಿ. ಚಿದಂಬರಂ
ಕೋಮು ಸೌಹಾರ್ದತೆ ಕೆಡಿಸಲು ಯತ್ನ: ಪುನೀತ್ ಕೆರೆಹಳ್ಳಿ ಸೇರಿ 9 ಮಂದಿ ಬಂಧನ
ನೇಪಾಳ ಪ್ರವಾಹ: ಸಾವಿನ ಸಂಖ್ಯೆ 626ಕ್ಕೆ ಏರಿಕೆ; 2,478 ಮಂದಿ ನಾಪತ್ತೆ
ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ
ವಿಪಕ್ಷಗಳ ವ್ಯಂಗ್ಯಕ್ಕೆ ಭಕ್ತಿಗೀತೆಯ ಬಳಕೆ: ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ ಬಿಜೆಪಿ
ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು
ಪ್ರಸ್ತುತ ಕೆಪಿಎಸ್‌ಸಿ ಅಧ್ಯಕ್ಷರ ಅಕ್ರಮಗಳ ಕುರಿತು ಜೆಡಿಎಸ್ ನಾಯಕರು ಬಿಜೆಪಿ ನಾಯಕರನ್ನು ಅಥವಾ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನೇ ಕೇಳಲಿ ಎಂದು ಪ್ರಿಯಾಂಕ್ ಸವಾಲು ಎಸೆದಿದ್ದಾರೆ. ಪ್ರಸಕ್ತ ಸರ್ಕಾರದಲ್ಲಿ ತನಿಖೆಗಳು ನಡೆಯುತ್ತಿದ್ದು, ಯಾವುದೇ ಆರೋಪಕ್ಕೂ ತಾವು ಹೆದರುವುದಿಲ್ಲ ಮತ್ತು ವಾಸ್ತವಾಂಶಗಳನ್ನು ಸಾರ್ವಜನಿಕರ ಮುಂದಿಡಲು ಸಿದ್ಧವೆಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ.
