ವೀಡಿಯೊ

ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ

Reading…
Follow Us

ಸಾರಾಂಶ

ಉತ್ತರ ಪ್ರದೇಶದ ಲಕ್ನೋದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಜಯಪ್ರಕಾಶ್ ನಾರಾಯಣ್ ಸರ್ವೋದಯ ವಿದ್ಯಾಲಯದ ವಿದ್ಯಾರ್ಥಿಗಳು ಶಿಕ್ಷಕರ ತೀವ್ರ ಕೊರತೆಯನ್ನು ಖಂಡಿಸಿ ಆಗಸ್ಟ್ 14ರಂದು ಬುದ್ಧೇಶ್ವರ ಕ್ರಾಸಿಂಗ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ನೂರಾರು ವಿದ್ಯಾರ್ಥಿಗಳು ರಸ್ತೆಯಲ್ಲೇ ಕುಳಿತು ಸಂಚಾರಕ್ಕೆ ಅಡ್ಡಿಪಡಿಸಿದ ಕಾರಣ, ಬೋಧನೆ ಮತ್ತು ಪರೀಕ್ಷಾ ಸಿದ್ಧತೆಗೆ ತೊಂದರೆಯಾಗುತ್ತಿರುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಆ ಮಾರ್ಗವಾಗಿ ತೆರಳುತ್ತಿದ್ದ ಸಮಾಜ ಕಲ್ಯಾಣ ಸಚಿವ ಅಸೀಮ್ ಅರುಣ್ ಸ್ಥಳದಲ್ಲೇ ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ಉತ್ತರ ಪ್ರದೇಶದ ಲಕ್ನೋದಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಜಯಪ್ರಕಾಶ್ ನಾರಾಯಣ್ ಸರ್ವೋದಯ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಶಿಕ್ಷಕರ ತೀವ್ರ ಕೊರತೆಯನ್ನು ಖಂಡಿಸಿ ಆಗಸ್ಟ್ 14ರಂದು ಬುದ್ಧೇಶ್ವರ ಕ್ರಾಸಿಂಗ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಶಾಲೆಯಲ್ಲಿ ಸುಮಾರು 450 ವಿದ್ಯಾರ್ಥಿಗಳಿದ್ದರೂ ಕೇವಲ 7 ಜನ ಶಿಕ್ಷಕರಿದ್ದಾರೆ ಎಂದು ಆರೋಪಿಸಿದ ವಿದ್ಯಾರ್ಥಿಗಳು, ರಸ್ತೆಯಲ್ಲೇ ಕುಳಿತು ಸಂಚಾರಕ್ಕೆ ಅಡ್ಡಿಪಡಿಸಿದರು. ಸಕಾಲದಲ್ಲಿ ತರಗತಿಗಳು ನಡೆಯದೆ ಮುಂಬರುವ ಪರೀಕ್ಷಾ ಸಿದ್ಧತೆಗೆ ತೀವ್ರ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಮಾರ್ಗವಾಗಿ ಕನ್ನೌಜ್‌ಗೆ ತೆರಳುತ್ತಿದ್ದ ಉತ್ತರ ಪ್ರದೇಶದ ಸಮಾಜ ಕಲ್ಯಾಣ ಸಚಿವ ಅಸೀಮ್ ಅರುಣ್ ಅವರು ತಮ್ಮ ವಾಹನವನ್ನು ತಡೆದು, ಸ್ಥಳದಲ್ಲೇ ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವುದಾಗಿ ಸಚಿವರು ನೀಡಿ ಭರವಸೆಯ ನಂತರ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಹಿಂಪಡೆದು ಶಾಲೆಗೆ ಮರಳಿದರು. ತದನಂತರ ಲಕ್ನೋ ಪೊಲೀಸರು ಬುದ್ಧೇಶ್ವರ ರಸ್ತೆಯಲ್ಲಿ ವಾಹನ ಸಂಚಾರವನ್ನು ಯಥಾಸ್ಥಿತಿಗೆ ತಂದರು.

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly →
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ರಾಷ್ಟ್ರೀಯ ಸುದ್ದಿ

“ತಲೆ ಒಡೆದೆ, ಆದರೂ ಜೈಲಿಗೆ ಹೋಗಲಿಲ್ಲ”: ಪ್ರಭಾವಿ ನಾಯಕರ ಬೆಂಬಲದ ಬಡಾಯಿ ಕೊಚ್ಚಿಕೊಂಡ ಹಿಂದೂತ್ವ ಇನ್ಫ್ಲುಯೆನ್ಸರ್; ವಿಪಕ್ಷಗಳ ಆಕ್ರೋಶ

From Across Varadigara

ರಾಜ್ಯ ಸುದ್ದಿ

ತುಳು ನುಡಿಗೆ ಹೆಚ್ಚುವರಿ ಅಧಿಕೃತ ಸ್ಥಾನಮಾನ ಸ್ವಾಗತಾರ್ಹ; 8ನೇ ಪರಿಚ್ಛೇದ ಸೇರ್ಪಡೆ ತನಕ ನಮ್ಮ ಹಕ್ಕೊತ್ತಾಯ ಮುಂದುವರಿಕೆ: ಕರ್ನಾಟಕ ರಕ್ಷಣಾ ವೇದಿಕೆ

ರಾಜ್ಯ ಸುದ್ದಿ

ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಸರ್ಕಾರದ ಸಿದ್ಧತೆ: ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ

ಅಂತಾರಾಷ್ಟ್ರೀಯ

ಯೆಮನ್‌ನಲ್ಲಿ ತೀವ್ರಗೊಂಡ ಸಂಘರ್ಷ: 14 ದಿನಗಳಲ್ಲಿ 57,000 ಮಕ್ಕಳು ಬೀದಿಗೆ, ಕನಿಷ್ಠ 9 ಮಕ್ಕಳ ಬಲಿ ಎಂದ ಯೂನಿಸೆಫ್!

ರಾಷ್ಟ್ರೀಯ ಸುದ್ದಿ

‘ಮುಸ್ಲಿಮರು ಗರ್ಬಾಗೆ ಬರುವುದಿದ್ದರೆ ಸಹೋದರಿಯರನ್ನೂ, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧರಿದ್ದಾರೆ’: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

ಅಂತಾರಾಷ್ಟ್ರೀಯ

ಇಸ್ರೇಲ್ ಪ್ರಧಾನಿ ನೆತನ್ಯಾಹು ಮೇಕಪ್‌ಗೆ ₹4.45 ಕೋಟಿ ವೆಚ್ಚ: ಯುದ್ಧದ ನಡುವೆಯೂ ಮುಂದುವರಿದ ಮೇಕಪ್ – ಸ್ಟೈಲಿಂಗ್ ಬಜೆಟ್

ಕಾಣಿಸದ್ದು - ಕೇಳಿಸದ್ದು

ಅನುದಾನ ತಂದ ಮಾಜಿ ಶಾಸಕನಿಗೇ ಉದ್ಘಾಟನೆಯ ಅವಕಾಶ ನೀಡಿದ ಹಾಲಿ ಶಾಸಕ : ರಾಜಕೀಯದಲ್ಲೊಂದು “ಕೇರಳ ಸ್ಟೋರಿ”!

ರಾಜ್ಯ ಸುದ್ದಿ

ಮಂಗಳೂರು ಹಿಂದುತ್ವದ ಭದ್ರ ಕೋಟೆ, ಸರ್ಕಾರ ಮಾಡುತ್ತಿರುವುದು ಕೇವಲ ರಾಜಕೀಯ ಗಿಮಿಕ್ ಎಂದ ಭರತ್ ಶೆಟ್ಟಿ; ಬಿಜೆಪಿ ಕೊಡುಗೆ ಬಗ್ಗೆ ಪ್ರಶ್ನಿಸಿ ಬುದ್ಧಿ ಹೇಳಿದ ನೆಟ್ಟಿಗರು!

ರಾಜ್ಯ ಸುದ್ದಿ

ಬಾಗಲಕೋಟೆ: ತರಗತಿ ವೇಳೆಯೇ ಶಾಲಾ ಛಾವಣಿ ಕುಸಿತ, ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ಅಂತಾರಾಷ್ಟ್ರೀಯ

“ಚುನಾವಣೆಯಲ್ಲಿ ರಿಪಬ್ಲಿಕನ್ನರನ್ನು ಗೆಲ್ಲಿಸಿದರೆ ಅಮೆರಿಕದ ಪ್ರತಿಯೊಬ್ಬ ಪ್ರಜೆಗೂ 4.76 ಲಕ್ಷ ರೂ.”: ಮತದಾರರಿಗೆ ಡೊನಾಲ್ಡ್ ಟ್ರಂಪ್ ಆಮಿಷ

ರಾಷ್ಟ್ರೀಯ ಸುದ್ದಿ

SIR ವಿರುದ್ಧ ‘ಠಾಕ್ರೆ ಸಹೋದರರ’ ಹೋರಾಟ: ಅಕ್ಟೋಬರ್ 4ರಂದು ಮುಂಬೈಯಲ್ಲಿ ಜಂಟಿ ಪ್ರತಿಭಟನೆ

ರಾಷ್ಟ್ರೀಯ ಸುದ್ದಿ

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕರಿಸಿದೆ ಎಂದ ಆಯುಷ್ ಮಲಿಕ್: 31 ವರ್ಷದ ಯುವಕನನ್ನು ತಂದೆಯ ಅಕ್ರಮ ವಶದಿಂದ ಮುಕ್ತಗೊಳಿಸಿದ ಅಲಹಾಬಾದ್ ಹೈಕೋರ್ಟ್

ರಾಷ್ಟ್ರೀಯ ಸುದ್ದಿ

ಜೈಪುರ ಪಾಲಿಕೆ ಸಮರ: 8 ಮುಸ್ಲಿಮರಿಗೆ ಬಿಜೆಪಿ ಟಿಕೆಟ್; ಪ್ರಮುಖ ಚುನಾವಣೆಗಳಿಂದ ದೂರವಿಟ್ಟಿದ್ದ ಕಮಲ ಪಡೆಗೆ ಈಗ ಅಲ್ಪಸಂಖ್ಯಾತರೇ ಬೇಕಾದರೇ?

ರಾಜ್ಯ ಸುದ್ದಿ

RDPR‌ ಅಕ್ರಮ ಆರೋಪ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಜೆಡಿಎಸ್ ಪಟ್ಟು

ರಾಜ್ಯ ಸುದ್ದಿ

5 ವರ್ಷಗಳಿಂದ ದನದ ಕೊಟ್ಟಿಗೆಯಂತಿರುವ ಶೆಡ್‌ನಲ್ಲೇ 172 ಮಕ್ಕಳ ಶಾಲೆ : ಹಾಸನ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯಲ್ಲಿ ಮಕ್ಕಳ ದಯನೀಯ ಸ್ಥಿತಿ

ರಾಷ್ಟ್ರೀಯ ಸುದ್ದಿ

ವಿಚಾರಣೆಯೇ ಆರಂಭವಾಗದೆ 6 ವರ್ಷಗಳ ಬಂಧನ, ಸಿಕ್ಕಿದ್ದು 7 ದಿನಗಳ ರಿಲೀಫ್: ಶರ್ಜೀಲ್ ಇಮಾಮ್‌ಗೆ ಮಧ್ಯಂತರ ಜಾಮೀನು 

ರಾಜ್ಯ ಸುದ್ದಿ

“ಪೊಲೀಸ್ ಠಾಣೆಗೆ ನುಗ್ಗಿದರೆ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳುಹಿಸುತ್ತೇವೆ”: ಮೈಸೂರಿನ “ಪೇಟೆ ರೌಡಿ”ಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ಕಾಣಿಸದ್ದು - ಕೇಳಿಸದ್ದು

ರಾಜಸ್ಥಾನ ಸ್ಥಳೀಯ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಒಂದೇ ಮತ; ವಾರ್ಡ್‌ನಲ್ಲಿ ಸ್ವಪಕ್ಷದ ಕಾರ್ಯಕರ್ತರೂ ಕೈಬಿಟ್ಟರಾ?

ರಾಷ್ಟ್ರೀಯ ಸುದ್ದಿ

200ಕ್ಕೂ ಹೆಚ್ಚು ಶಂಕಿತರ ಬಂಧನದ ಬೆನ್ನಲ್ಲೇ ‘ಶಹಜಾದ್ ಭಟ್ಟಿ ನೆಟ್‌ವರ್ಕ್’ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಗೃಹ ಸಚಿವಾಲಯ

ರಾಷ್ಟ್ರೀಯ ಸುದ್ದಿ

ನ್ಯಾಯಾಲಯದಿಂದ ಶಿಕ್ಷೆಯಾದ ಅತ್ಯಾಚಾರಿಗೆ ಮುಖ ಪುಟದ ಜಾಹೀರಾತು: ತೀವ್ರ ಆಕ್ರೋಶದ ಬಳಿಕ ಬೇಷರತ್ ಕ್ಷಮೆ ಯಾಚಿಸಿದ ‘ದಿ ಹಿಂದೂ’ ಪತ್ರಿಕೆ

ರಾಜ್ಯ ಸುದ್ದಿ

‘ಮಸೀದಿ ಎದುರು ಡ್ಯಾನ್ಸ್ ಮಾಡಿದ್ರೆ ಏನಾಗುತ್ತೆ?’: ಇನ್ಸ್‌ಪೆಕ್ಟರ್ ಮುಂಜಾಗ್ರತಾ ಸೂಚನೆಗೆ ಪ್ರತಾಪ್ ಸಿಂಹ ಆಕ್ಷೇಪ, ಠಾಣೆಗೆ ನುಗ್ಗುವ ಎಚ್ಚರಿಕೆ