ರಾಮಕುಂಜ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ಗ್ರಾಮದ ಕುದುಲೂರು ನಿವಾಸಿ ಹಾಗೂ ರಿಕ್ಷಾ ಚಾಲಕ ಗುರುಪ್ರಸಾದ್ (35) ಅವರು ಆ.22ರಂದು ಮಧ್ಯಾಹ್ನ ಹೃದಯಾಘಾತದಿಂದ ಅಕಾಲಿಕವಾಗಿ ನಿಧನರಾದರು.
ಗೋಳಿತ್ತಡಿ ಪೇಟೆಯಲ್ಲಿ ರಿಕ್ಷಾ ಓಡಿಸುತ್ತಿದ್ದ ಗುರುಪ್ರಸಾದ್ ಅವರು ಸಬಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಪ್ರತಿದಿನ ರಿಕ್ಷಾದಲ್ಲಿ ಮನೆಗೆ ಕರೆದೊಯ್ಯುತ್ತಿದ್ದರು. ಆ.22ರಂದು ಮಕ್ಕಳನ್ನು ಶಾಲೆಗೆ ಕರೆತರಲು ಮನೆಯಿಂದ ಹೊರಡುವ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಉಪ್ಪಿನಂಗಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
ಕೇಂದ್ರ ಸಚಿವರ ಬಂಗಲೆಗಳ ನಿರ್ವಹಣೆ, ದುರಸ್ತಿಗೆ ಶತಕೋಟಿ ವೆಚ್ಚ; 2025-26ರಲ್ಲಿ ದಾಖಲೆಯ 92.35 ಕೋಟಿ ರೂ. ಖರ್ಚು: RTI ಮೂಲಕ ಮಾಹಿತಿ ಬಹಿರಂಗ
ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು
ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ
ಇಸ್ರೇಲ್‌ನ ‘E1’ ವಸಾಹತು ಯೋಜನೆಗೆ ಯುಎಇ, ಸೌದಿ ಅರೇಬಿಯಾ ಸಹಿತ ಎಂಟು ಅರಬ್-ಮುಸ್ಲಿಂ ರಾಷ್ಟ್ರಗಳ ತೀವ್ರ ವಿರೋಧ; ಜಾಗತಿಕ ಶಾಂತಿಗೆ ಧಕ್ಕೆ ಎಂದು ಜಂಟಿ ಎಚ್ಚರಿಕೆ
ಹೊಲದಲ್ಲಿ ಹೂತಿಟ್ಟಿದ್ದ ₹5 ಲಕ್ಷ ನಗದು ಗೆದ್ದಲು ಪಾಲು: ರಾಜಸ್ಥಾನದ ರೈತನಿಗೆ ಆಘಾತ
ಉತ್ತರಾಖಂಡ್ SIR: ಮುಸ್ಲಿಂ ಮತದಾರರನ್ನೇ ಗುರಿಯಾಗಿಸಿ 6,500 ಆಕ್ಷೇಪಣೆ ಸಲ್ಲಿಸಿದ 5 ಬಿಜೆಪಿ ಕಾರ್ಯಕರ್ತರು
ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು
ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ
“ಶುದ್ಧ ಪೆಟ್ರೋಲ್ ನಿಮ್ಮ ಅಪ್ಪನ ಮನೆಯಿಂದ ಬರುತ್ತಾ?”: ಇಥನಾಲ್ ನೀತಿ ಸಮರ್ಥಿಸಲು ಹೋಗಿ ವಿವಾದಕ್ಕೀಡಾದ ಬಿಜೆಪಿ ಸಂಸದ
“ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನನಗೇ ಈ ಸ್ಥಿತಿಯಾದರೆ ಸಾಮಾನ್ಯರ ಕಥೆಯೇನು?”: ಪಂಜಾಬ್ SIR ಗೊಂದಲ; ಮಾಜಿ ರಾಯಭಾರಿಗೇ ಪೌರತ್ವ ಸಾಬೀತುಪಡಿಸುವ ಸ್ಥಿತಿ
“ಇಮ್ರಾನ್ ಖಾನ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ”: ಪಾಕ್ ಪ್ರಧಾನಿಗೆ ಭಾರತದ ಗವಾಸ್ಕರ್, ಕಪಿಲ್ ದೇವ್ ಸಹಿತ 21 ಕ್ರಿಕೆಟ್ ದಿಗ್ಗಜರ ಪತ್ರ
ಮಿಲಾದ್ ಕಾರ್ಯಕ್ರಮ ಮುಂದೂಡಿಕೆ
ಗುರುಪ್ರಸಾದ್ ಅವರ ಮನೆ ಕುದುಲೂರು ಮುಬಾರಕ್ ಜುಮಾ ಮಸೀದಿ ಸಮೀಪದಲ್ಲಿದ್ದು, ಅವರ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಆ.22ರಂದು ಮಸೀದಿಯಲ್ಲಿ ಮಿಲಾದ್ ನಬಿ ಪ್ರಯುಕ್ತ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ಕಾರ್ಯಕ್ರಮವನ್ನು ಮುಂದೂಡಲಾಯಿತು.
ಮೃತರ ಕುಟುಂಬದ ದುಃಖದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಮುಂದೂಡುವ ಮೂಲಕ ಮುಬಾರಕ್ ಜುಮಾ ಮಸೀದಿ ಆಡಳಿತ ಮಂಡಳಿ ಸೌಹಾರ್ದತೆ ಹಾಗೂ ಮಾನವೀಯತೆಯ ಸಂದೇಶವನ್ನು ಮೆರೆದಿದೆ. ಸದ್ಯ ಮಸೀದಿ ಆಡಳಿತ ಮಂಡಳಿತ ತೀರ್ಮಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಮಾನವೀಯತೆ ರಾಜ್ಯದ ಗಮನವನ್ನು ಸೆಳೆದಿದೆ.
