ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಇಂದು ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗ ಗುರು ಬಾಬಾ ರಾಮ್‌ದೇವ್, ದೇಶದ ಶಿಕ್ಷಣ ವ್ಯವಸ್ಥೆ ಹಾಗೂ ಸರ್ಕಾರಿ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ದೇಶದ ಸರ್ಕಾರಿ ಉದ್ಯೋಗಗಳ ಸಂದರ್ಶನ ಮತ್ತು ನೇಮಕಾತಿಗಳಲ್ಲಿ ಶೇಕಡಾ 90 ರಿಂದ 99 ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ” ಎಂದು ನೇರವಾಗಿ ಆರೋಪಿಸಿರುವ ಅವರು, ವಿದ್ಯಾರ್ಥಿಗಳು ಮತ್ತು ಯುವಜನತೆ ರಸ್ತೆಗಿಳಿದು ಹೋರಾಡುವ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಆಡಳಿತ ವ್ಯವಸ್ಥೆಯ ವೈಫಲ್ಯವೇ ಕಾರಣ ಎಂದು ಕಿಡಿಕಾರಿದ್ದಾರೆ.
ಶಾಲಾ-ಕಾಲೇಜುಗಳ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಮ್‌ದೇವ್, ಇಂದು ದೇಶದ ಅನೇಕ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದ್ದು, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ ಹಾಗೂ ಶಿಕ್ಷಕರ ಅಭಾವದಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ ಎಂದಿದ್ದಾರೆ. ಇದರೊಂದಿಗೆ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳು ನಿರಂತರವಾಗಿ ನಡೆಯುತ್ತಿರುವುದು ಯುವಜನತೆಯ ಭವಿಷ್ಯವನ್ನು ಕತ್ತಲಿಗೆ ತಳ್ಳುತ್ತಿದೆ. ಮೂಲಭೂತ ಅಗತ್ಯಗಳನ್ನು ಪೂರೈಸಲಾಗದ ಮತ್ತು ಪಾರದರ್ಶಕ ಪರೀಕ್ಷೆ ನಡೆಸಲಾಗದ ವ್ಯವಸ್ಥೆಯನ್ನು ತಕ್ಷಣವೇ ಸುಧಾರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿದ ಬಾಬಾ ರಾಮ್‌ದೇವ್, “ವ್ಯವಸ್ಥೆಯಲ್ಲಿ ನಡೆಯುತ್ತಿರುವ ಈ ಅಕ್ರಮ ಮತ್ತು ಭ್ರಷ್ಟಾಚಾರಗಳನ್ನು ಸರ್ಕಾರ ತಕ್ಷಣವೇ ಸರಿಪಡಿಸಬೇಕು. ಒಂದು ವೇಳೆ ಈ ಲೋಪಗಳನ್ನು ತಿದ್ದುಪಡಿ ಮಾಡದಿದ್ದರೆ, ಬಾಬಾ ರಾಮ್‌ದೇವ್ ಮತ್ತೆ ಬೃಹತ್ ಜನಾಂದೋಲನ ಮತ್ತು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ” ಎಂದು ಹೇಳಿದ್ದಾರೆ.
“ಶುದ್ಧ ಪೆಟ್ರೋಲ್ ನಿಮ್ಮ ಅಪ್ಪನ ಮನೆಯಿಂದ ಬರುತ್ತಾ?”: ಇಥನಾಲ್ ನೀತಿ ಸಮರ್ಥಿಸಲು ಹೋಗಿ ವಿವಾದಕ್ಕೀಡಾದ ಬಿಜೆಪಿ ಸಂಸದ
ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು
ಹೊಲದಲ್ಲಿ ಹೂತಿಟ್ಟಿದ್ದ ₹5 ಲಕ್ಷ ನಗದು ಗೆದ್ದಲು ಪಾಲು: ರಾಜಸ್ಥಾನದ ರೈತನಿಗೆ ಆಘಾತ
ಅದಾನಿ ಯೋಜನೆಗಳಿಗಾಗಿ 83,700 ಚದರ ಅಡಿ ಅರಣ್ಯ ಮತ್ತು ಮ್ಯಾಂಗ್ರೋವ್ ಭೂಮಿಯನ್ನು ಬಿಟ್ಟುಕೊಡಲು ಮಹಾರಾಷ್ಟ್ರ ಸರ್ಕಾರದ ಅನುಮೋದನೆ
ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ
ಶಿಕ್ಷಣ ವ್ಯವಸ್ಥೆಯ ಲೋಪ, ಸರ್ಕಾರಿ ಉದ್ಯೋಗ ನೀಡಿಕೆಯಲ್ಲಿ ಭ್ರಷ್ಟಾಚಾರ: ಹೋರಾಟದ ಎಚ್ಚರಿಕೆ ನೀಡಿದ ಬಾಬಾ ರಾಮ್‌ದೇವ್
ವೀಡಿಯೊ ವೀಕ್ಷಿಸಿ:
