ವಿಶೇಷ ಲೇಖನ

ದ್ವೇಷದ ಚಿತೆಗೆ ಮಾನವೀಯತೆಯ ಅಗ್ನಿಸ್ಪರ್ಶ: ಇರ್ಫಾನಾ ಇಕ್ಬಾಲ್ ಮಾನವೀಯ ಪಾಠ | ಕೇರಳದ ರಿಯಲ್ ಸ್ಟೋರಿ

Reading…
Follow Us

ಸಾರಾಂಶ

ಕೇರಳದಲ್ಲಿ ನಡೆದ ಒಂದು ನೈಜ ಘಟನೆಯ ಮೂಲಕ ಮಾನವೀಯತೆ, ಸಹಬಾಳ್ವೆ ಮತ್ತು ಸಾಮಾಜಿಕ ಸೌಹಾರ್ದತೆಯ ಮಹತ್ವವನ್ನು ಲೇಖಕ ರಿಯಾಝ್ ಹರೇಕಳ ತಮ್ಮ ಲೇಖನದಲ್ಲಿ ಮನಮುಟ್ಟುವ ರೀತಿಯಲ್ಲಿ ವಿವರಿಸಿದ್ದಾರೆ. ದ್ವೇಷ, ವಿಭಜನೆ ಮತ್ತು ಧಾರ್ಮಿಕ ಭಿನ್ನಾಭಿಪ್ರಾಯಗಳ ನಡುವೆಯೂ ಇರ್ಫಾನಾ ಇಕ್ಬಾಲ್ ತೋರಿದ ಮಾನವೀಯ ನಡೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಲೇಖನ ಹೇಳುತ್ತದೆ. ಮನುಷ್ಯತ್ವವು ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯಕ್ಕಿಂತ ದೊಡ್ಡದು ಎಂಬ ಸಂದೇಶವನ್ನು ಈ ಲೇಖನ ಸಾರುತ್ತದೆ. ಇತ್ತೀಚಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳುವ ಈ ಕಥೆ ಓದುಗರಲ್ಲಿ ಚಿಂತನೆ ಮೂಡಿಸುತ್ತದೆ.

ಲೇಖನ: ರಿಯಾಝ್ ಹರೇಕಳ ✍️

ಆರೋಗ್ಯವಾಗಿದ್ದಾಗ ತನ್ನ ಭಾಷಣಗಳಲ್ಲಿ ಮುಸ್ಲಿಂ ವಿರೋಧವನ್ನು ಉಗ್ರವಾಗಿ ಬಿತ್ತುತ್ತಿದ್ದ, ಸಂಘ ಪರಿವಾರದ ಹಿರಿಯ ಸಕ್ರಿಯ ಕಾರ್ಯಕರ್ತ, ಕಮಲ ಪಕ್ಷಕ್ಕಾಗಿ ಬೆವರು ಸುರಿಸಿದ ಮುಖಂಡ – ನಾರಾಯಣ. ಅವರ ಬದುಕಿನ ಕೊನೆಯ ಅಧ್ಯಾಯ ಮಾತ್ರ ಇಡೀ ಸಮಾಜಕ್ಕೆ ಒಂದು ದೊಡ್ಡ ಸಂದೇಶವನ್ನು ಬರೆದಿಟ್ಟಿದೆ.

ಕ್ಯಾನ್ಸರ್ ಮಹಾಮಾರಿ ಬಡಿದಾಗ ನಾರಾಯಣ ಒಂಟಿಯಾದರು. ಹೆಂಡತಿ, ಮಕ್ಕಳು, ಸಹೋದರಿ – ಯಾರೂ ಹತ್ತಿರ ಸುಳಿಯಲಿಲ್ಲ. ಜೀವನ ಪೂರ್ತಿ ಯಾವ ಸಿದ್ಧಾಂತಕ್ಕಾಗಿ ದುಡಿದರೋ, ಯಾವ ಸಂಘಟನೆಗಾಗಿ ಘೋಷಣೆ ಕೂಗಿದರೋ, ಆ ಸಂಘ ಪರಿವಾರದ ಒಬ್ಬನೇ ಒಬ್ಬ ಮುಖಂಡನೂ, ಒಬ್ಬ ಕಾರ್ಯಕರ್ತನೂ ತಿರುಗಿ ನೋಡಲಿಲ್ಲ. ಬೀದಿಯಲ್ಲಿ ಅನಾಥವಾಗಿ ಬಿದ್ದಿದ್ದ ನಾರಾಯಣರ ನೆರವಿಗೆ ಬಂದಿದ್ದು ಮಾತ್ರ “ವಿರೋಧಿ” ಎಂದು ಬಿಂಬಿಸಲ್ಪಟ್ಟ ಸಮುದಾಯದ ಪ್ರತಿನಿಧಿ.

ಕಾಸರಗೋಡು ನಗರಸಭಾ ಸದಸ್ಯೆ, ಮುಸ್ಲಿಂ ಲೀಗಿನ ಇರ್ಫಾನಾ ಇಕ್ಬಾಲ್ ಅವರು ನಾರಾಯಣರನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದರು. ಅವರ ಜಾತಿ ನೋಡಲಿಲ್ಲ, ಅವರ ಹಿಂದಿನ ಭಾಷಣಗಳನ್ನು ಲೆಕ್ಕಿಸಲಿಲ್ಲ. ಕಂಡಿದ್ದು ಒಬ್ಬ ಅಸಹಾಯಕ ಮನುಷ್ಯನನ್ನು ಮಾತ್ರ. ಚಿಕಿತ್ಸೆ ಫಲಿಸದೆ ನಾರಾಯಣ ಇಹಲೋಕ ತ್ಯಜಿಸಿದಾಗ, ಅವರ ಅಂತಿಮ ಸಂಸ್ಕಾರಕ್ಕೆ ಕುಟುಂಬದವರು ಯಾರೂ ಬರಲಿಲ್ಲ. ಆಗಲೂ ಹಿಂದೆ ಸರಿಯದ ಇರ್ಫಾನಾ, ಸಾರ್ವಜನಿಕ ಸ್ಮಶಾನದಲ್ಲಿ ವಿಧಿವಿಧಾನಗಳ ಪ್ರಕಾರ ಎಲ್ಲ ವ್ಯವಸ್ಥೆ ಮಾಡಿದರು. ಕೊನೆಗೆ ತಮ್ಮ ಕೈಯಾರೆ ನಾರಾಯಣನ ಚಿತೆಗೆ ಅಗ್ನಿಸ್ಪರ್ಶ ಮಾಡಿ ಮಾನವೀಯತೆಗೆ ಹೊಸ ಭಾಷ್ಯ ಬರೆದರು.

2021: ನನಗೂ ಇಂಥದ್ದೇ ಅನುಭವ – ಬಜ್ಪೆಯಿಂದ ಒಂದು ನೆನಪು

ಇರ್ಫಾನಾ ಅವರ ಈ ಕಾರ್ಯವನ್ನು ಓದಿದಾಗ ನನ್ನ 2021ರ ಒಂದು ಘಟನೆ ಕಣ್ಣಮುಂದೆ ಬಂತು. ನಾನು ರಿಯಾಝ್ ಹರೇಕಳ, ಆಗ ಬಜ್ಪೆಯಲ್ಲಿ ‘ಹೋಟೆಲ್ ನಿಸರ್ಗ’ ನಡೆಸುತ್ತಿದ್ದೆ. ನಮ್ಮ ಹೋಟೆಲ್ ಮುಂಭಾಗದಲ್ಲಿ ಬೀಡ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಯುಪಿ ಮೂಲದ ‘ಬಿಟ್ಟು ಬಾಯಿ’ ಎಂಬುವವರು ಇದ್ದರು. ಒಂದು ದಿನ ನಮ್ಮ ಹೋಟೆಲ್ ಹಿಂಭಾಗದಲ್ಲಿ ಅವರು ಹಠಾತ್ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಸುದ್ದಿ ತಿಳಿದು ಸ್ಥಳಕ್ಕೆ ಹೋದೆ. ಅವರ ಕುಟುಂಬಸ್ಥರು ಯಾರೂ ಬರಲಿಲ್ಲ. ದೂರದ ಊರು, ಬಡತನ, ಬಹುಶಃ ಸುದ್ದಿಯೇ ತಲುಪಿರಲಿಲ್ಲ. ಹೆಣ ಅನಾಥವಾಗಿ ಬಿದ್ದಿತ್ತು. ಆ ಕ್ಷಣದಲ್ಲಿ ನನಗೆ ಜಾತಿ, ಧರ್ಮ, ಭಾಷೆ ಯಾವುದೂ ಕಾಣಲಿಲ್ಲ. ಕಂಡಿದ್ದು ಒಬ್ಬ ಮನುಷ್ಯ, ನಮ್ಮೂರಿನಲ್ಲಿ ದುಡಿದು ಜೀವ ಕಳೆದುಕೊಂಡ ಜೀವ.

ತಕ್ಷಣ ನಾನು ಮತ್ತು ನನ್ನ ಸ್ನೇಹಿತ ಆಫ್ರಿದ್ ಬಜ್ಪೆ ಮುಂದೆ ನಿಂತು ಹಿಂದೂ ಸಂಪ್ರದಾಯದ ಪ್ರಕಾರ ಅವರ ಅಂತಿಮ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದೆ. ನನ್ನ ಆಧಾರ್ ಕಾರ್ಡ್ ಕೊಟ್ಟು ಮಂಗಳೂರಿನ ಸುಲ್ತಾನ್ ಬತ್ತೇರಿಯ ಸ್ಮಶಾನಕ್ಕೆ ದೇಹವನ್ನು ರವಾನಿಸಿದೆ. ಫೋನ್ ಮೂಲಕ ಅವರ ಮಗನ ಅನುಮತಿ ಪಡೆದು, ನಾನೇ ಚಿತೆಗೆ ಸಾಕ್ಷಿಯಾದೆ. ಅಗ್ನಿಸ್ಪರ್ಶ ಮಾಡುವಾಗ ಕೈ ನಡುಗಲಿಲ್ಲ, ಮನಸ್ಸು ತುಂಬಿ ಬಂತು.

ಇಂದು ಇರ್ಫಾನಾ ಅವರ ಕಥೆ ಕೇಳಿದಾಗ ನನ್ನದೇ ಅನುಭವ ಮತ್ತೆ ಎದ್ದು ನಿಂತಿತು.

ಇದು ನಮಗೆ ಕಲಿಸುವ ಪಾಠ ಏನು?

  1. ಸಿದ್ಧಾಂತಕ್ಕಿಂತ ಮನುಷ್ಯ ದೊಡ್ಡವನು: ನಾವು ಯಾವ ಧ್ವಜ ಹಿಡಿದಿದ್ದೇವೆ ಎನ್ನುವುದಕ್ಕಿಂತ, ನಾವು ಎಷ್ಟು ಮನುಷ್ಯರಾಗಿದ್ದೇವೆ ಎನ್ನುವುದು ಮುಖ್ಯ. ಕೊನೆಯ ಗಳಿಗೆಯಲ್ಲಿ ಜಾತಿ, ಪಕ್ಷ, ಸಿದ್ಧಾಂತ ಯಾವುದೂ ಬರುವುದಿಲ್ಲ. ಬರುವುದು ಕೇವಲ ಮಾನವೀಯತೆ. ಇರ್ಫಾನಾ ನಾರಾಯಣಗೆ ತೋರಿದ್ದು ಅದನ್ನೇ, ನಾನು ಬಿಟ್ಟು ಬಾಯಿಗೆ ಮಾಡಿದ್ದು ಅದನ್ನೇ.
  2. ದ್ವೇಷದ ರಾಜಕಾರಣಕ್ಕೆ ಸೋಲು: ನಾರಾಯಣ ತಮ್ಮ ಆರೋಗ್ಯವಂತ ದಿನಗಳಲ್ಲಿ ಬಿತ್ತಿದ ದ್ವೇಷದ ಬೀಜ, ಅವರಿಗೆ ಕಷ್ಟ ಕಾಲದಲ್ಲಿ ನೆರಳಾಗಲಿಲ್ಲ. ಆದರೆ ಇರ್ಫಾನಾ ತೋರಿದ ಪ್ರೀತಿ, ಕರುಣೆ ಇಡೀ ನಾಡಿಗೆ ಮಾದರಿಯಾಯಿತು. ವಿರೋಧ ಕಟ್ಟಿಕೊಂಡು ಬದುಕುವುದಕ್ಕಿಂತ ಪ್ರೀತಿಯಿಂದ, ಸೌಹಾರ್ದದಿಂದ ಬದುಕುವುದೇ ಲೇಸು.
  3. ಧರ್ಮಗಳ ನಿಜವಾದ ಸಂದೇಶ ಒಂದೇ: ಪವಿತ್ರ ಕುರ್‌ಆನ್ “ನೆರೆಯವರಿಗೆ ಸಹಾಯ ಮಾಡಿ, ಅಸಹಾಯಕರನ್ನು ಉಪಚರಿಸಿ” ಎನ್ನುತ್ತದೆ. ಭಗವದ್ಗೀತೆ “ಪರೋಪಕಾರಾರ್ಥಂ ಇದಂ ಶರೀರಂ” ಎನ್ನುತ್ತದೆ. ಎಲ್ಲ ಧರ್ಮಗಳ ಸಾರ ಮಾನವೀಯತೆಯೇ. ಇರ್ಫಾನಾ ಮತ್ತು ನನ್ನಂತಹ ಸಾಮಾನ್ಯರು ಮಾಡಿದ್ದು ಆ ಧರ್ಮದ ಪಾಲನೆಯನ್ನೇ.
  4. ಕರ್ಮ ಫಲಿಸುತ್ತದೆ: ನಾವು ಮಾಡಿದ ಮಾನವೀಯತೆ, ನಾವು ಮಾಡಿದ ಒಳ್ಳೆತನ ನಮ್ಮನ್ನು ಎಂದಿಗೂ ಕೈಬಿಡುವುದಿಲ್ಲ. ಅಲ್ಲಾಹನು, ದೇವರು, ಪ್ರಕೃತಿ – ಯಾವ ಹೆಸರಿನಿಂದ ಕರೆದರೂ ಆ ಶಕ್ತಿ ಒಳ್ಳೆಯವರ ಜೊತೆಗಿರುತ್ತದೆ. ಆ ದಿನ ಬಿಟ್ಟು ಬಾಯಿಗೆ ಹೆಗಲು ಕೊಟ್ಟಿದ್ದು ಇಂದು ನನಗೆ ಸಮಾಧಾನ ತಂದಿದೆ.

ಕೊನೆಯ ಮಾತು

ದ್ವೇಷ ಬಿತ್ತಿದ ಜಾಗದಲ್ಲಿ ಪ್ರೀತಿಯ ಮಾನವೀಯತೆ ತೋರಿಸುವುದೇ ನಿಜವಾದ ಮನುಷ್ಯತ್ವ. ಇನ್ನೊಬ್ಬರ ಮಾತು ಕೇಳಿ, ವಾಟ್ಸಾಪ್ ಫಾರ್ವರ್ಡ್ ನಂಬಿ ಹಾಳಾಗುವುದಕ್ಕಿಂತ ನಮ್ಮ ವೈಯಕ್ತಿಕ ಬುದ್ಧಿ, ನಮ್ಮ ಅಂತರಾತ್ಮದ ಮಾತು ಕೇಳಿ ಜೀವಿಸಬೇಕು. ಅದೇ ನಿಜವಾದ ಮನುಷ್ಯ.

ಪ್ರೀತಿ ಅಂಚೋಣ, ಮಾನವೀಯತೆ ತೋರಿಸೋಣ. ಆಗ ಮಾತ್ರ ನಾವು ನಿಜವಾದ ಮನುಷ್ಯರಾಗಲು ಸಾಧ್ಯ. ಜಾತಿ, ಧರ್ಮದ ಗೋಡೆಗಳನ್ನು ಮೀರಿ ನಾವೆಲ್ಲರೂ ಮನುಷ್ಯರಾಗಿ ಬದುಕುವ ಪ್ರಯತ್ನ ಮಾಡೋಣ. ಏಕೆಂದರೆ ಕೊನೆಯಲ್ಲಿ ಉಳಿಯುವುದು ನಾವು ಮಾಡಿದ ಒಳ್ಳೆಯ ಕೆಲಸಗಳು ಮಾತ್ರ.

ದ್ವೇಷದ ಚಿತೆಗೆ ಮಾನವೀಯತೆಯ ಅಗ್ನಿಸ್ಪರ್ಶ ಮಾಡಿದ ಇರ್ಫಾನಾ ಇಕ್ಬಾಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇಂತಹ ನೂರಾರು ಇರ್ಫಾನಾಗಳು ನಮ್ಮ ನಡುವೆ ಹುಟ್ಟಲಿ.

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly →
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ವಿಶೇಷ ಲೇಖನ

FIRಗಳೇ ಇಲ್ಲದೇ RSS ಗಲಭೆಯನ್ನು ಹೇಗೆ ರೂಪಿಸುತ್ತೆ ? ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿಕೆಯ ಅಸಲಿಯತ್ತೇನು?

From Across Varadigara

ರಾಜ್ಯ ಸುದ್ದಿ

ರಾಜ್ಯದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಮೊದಲ 2 ಚರಣಕ್ಕೆ ಮಾತ್ರ ಸೀಮಿತ: ರಾಜ್ಯ ಸರ್ಕಾರದ ಮಹತ್ವದ ಆದೇಶ

ರಾಜ್ಯ ಸುದ್ದಿ

‘ನಾವು ಕೇಸು, ಜೈಲುಗಳಿಗೆ ಹೆದರುವವರಲ್ಲ’: ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಡಿ.ಕೆ. ಶಿವಕುಮಾರ್ ಆಕ್ರೋಶ

ರಾಷ್ಟ್ರೀಯ ಸುದ್ದಿ

“ತಲೆ ಒಡೆದೆ, ಆದರೂ ಜೈಲಿಗೆ ಹೋಗಲಿಲ್ಲ”: ಪ್ರಭಾವಿ ನಾಯಕರ ಬೆಂಬಲದ ಬಡಾಯಿ ಕೊಚ್ಚಿಕೊಂಡ ಹಿಂದೂತ್ವ ಇನ್ಫ್ಲುಯೆನ್ಸರ್; ವಿಪಕ್ಷಗಳ ಆಕ್ರೋಶ

ರಾಜ್ಯ ಸುದ್ದಿ

ಕರಾವಳಿಗೆ ಸಂಪುಟದ ಐತಿಹಾಸಿಕ ಕೊಡುಗೆ: ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆ ಮಾನ್ಯತೆ, ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು

ರಾಷ್ಟ್ರೀಯ ಸುದ್ದಿ

ಪಾಕಿಸ್ತಾನದ ಗೂಢಚಾರಿಕೆ ಜಾಲಕ್ಕೆ ಭಾರತೀಯ ಸಿಮ್ ಕಾರ್ಡ್: ರಾಜಸ್ಥಾನದಲ್ಲಿ ಶಂಕಿತ ISI ಏಜೆಂಟ್ ಬಲ್ವಿಂದರ್ ಸಿಂಗ್ ಬಂಧನ

ರಾಷ್ಟ್ರೀಯ ಸುದ್ದಿ

‘ಮುಸ್ಲಿಮರು ಗರ್ಬಾಗೆ ಬರುವುದಿದ್ದರೆ ಸಹೋದರಿಯರನ್ನೂ, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧರಿದ್ದಾರೆ’: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

ರಾಷ್ಟ್ರೀಯ ಸುದ್ದಿ

ತಾಲಿಬಾನ್ ವಿರೋಧಿ ಹೋರಾಟಗಾರ್ತಿ ಮಲಾಲಾ ಆತ್ಮಚರಿತ್ರೆ ಓದುಗರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ

ರಾಷ್ಟ್ರೀಯ ಸುದ್ದಿ

200ಕ್ಕೂ ಹೆಚ್ಚು ಶಂಕಿತರ ಬಂಧನದ ಬೆನ್ನಲ್ಲೇ ‘ಶಹಜಾದ್ ಭಟ್ಟಿ ನೆಟ್‌ವರ್ಕ್’ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಗೃಹ ಸಚಿವಾಲಯ

ಅಂತಾರಾಷ್ಟ್ರೀಯ

ಯೆಮನ್‌ನಲ್ಲಿ ತೀವ್ರಗೊಂಡ ಸಂಘರ್ಷ: 14 ದಿನಗಳಲ್ಲಿ 57,000 ಮಕ್ಕಳು ಬೀದಿಗೆ, ಕನಿಷ್ಠ 9 ಮಕ್ಕಳ ಬಲಿ ಎಂದ ಯೂನಿಸೆಫ್!

ರಾಜ್ಯ ಸುದ್ದಿ

‘ಸಂಘಟನ್ ಸೃಜನ್’ ಹೆಸರಲ್ಲಿ ಎಐಸಿಸಿ ಹೊಸ ತಂತ್ರ: ಕರ್ನಾಟಕದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಹಿಂದಿದೆಯೇ ಪಕ್ಷ ಪುನಶ್ಚೇತನದ ಗಂಭೀರ ಯತ್ನ?

ರಾಷ್ಟ್ರೀಯ ಸುದ್ದಿ

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕರಿಸಿದೆ ಎಂದ ಆಯುಷ್ ಮಲಿಕ್: 31 ವರ್ಷದ ಯುವಕನನ್ನು ತಂದೆಯ ಅಕ್ರಮ ವಶದಿಂದ ಮುಕ್ತಗೊಳಿಸಿದ ಅಲಹಾಬಾದ್ ಹೈಕೋರ್ಟ್

ರಾಷ್ಟ್ರೀಯ ಸುದ್ದಿ

ಧಾರ್ಮಿಕ ಕಾರಣಗಳಿಂದ ‘ವಂದೇ ಮಾತರಂ’ ಹಾಡದಿದ್ದರೆ ದಂಡನಾತ್ಮಕ ಕ್ರಮ ಕೈಗೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್

ರಾಷ್ಟ್ರೀಯ ಸುದ್ದಿ

ಜೈಪುರ ಪಾಲಿಕೆ ಸಮರ: 8 ಮುಸ್ಲಿಮರಿಗೆ ಬಿಜೆಪಿ ಟಿಕೆಟ್; ಪ್ರಮುಖ ಚುನಾವಣೆಗಳಿಂದ ದೂರವಿಟ್ಟಿದ್ದ ಕಮಲ ಪಡೆಗೆ ಈಗ ಅಲ್ಪಸಂಖ್ಯಾತರೇ ಬೇಕಾದರೇ?

ರಾಷ್ಟ್ರೀಯ ಸುದ್ದಿ

SIR ವಿರುದ್ಧ ‘ಠಾಕ್ರೆ ಸಹೋದರರ’ ಹೋರಾಟ: ಅಕ್ಟೋಬರ್ 4ರಂದು ಮುಂಬೈಯಲ್ಲಿ ಜಂಟಿ ಪ್ರತಿಭಟನೆ

ರಾಷ್ಟ್ರೀಯ ಸುದ್ದಿ

‘ಅಸ್ಸಲಾಮು ಅಲೈಕುಮ್’, ‘ಇನ್ಶಾ ಅಲ್ಲಾಹ್’ ಎಂದಿದ್ದಕ್ಕೆ ಕ್ರಮ?: ಹಿಂದೂ ಸಂಘಟನೆಯ ದೂರಿನ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ವರ್ಗಾವಣೆ

ರಾಜ್ಯ ಸುದ್ದಿ

ಕೋಮು ಸೌಹಾರ್ದತೆ ಕೆಡಿಸಲು ಯತ್ನ: ಪುನೀತ್ ಕೆರೆಹಳ್ಳಿ ಸೇರಿ 9 ಮಂದಿ ಬಂಧನ

ರಾಜ್ಯ ಸುದ್ದಿ

ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಸರ್ಕಾರದ ಸಿದ್ಧತೆ: ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ

ಅಂತಾರಾಷ್ಟ್ರೀಯ

ಇಸ್ರೇಲ್ ಪ್ರಧಾನಿ ನೆತನ್ಯಾಹು ಮೇಕಪ್‌ಗೆ ₹4.45 ಕೋಟಿ ವೆಚ್ಚ: ಯುದ್ಧದ ನಡುವೆಯೂ ಮುಂದುವರಿದ ಮೇಕಪ್ – ಸ್ಟೈಲಿಂಗ್ ಬಜೆಟ್

ರಾಷ್ಟ್ರೀಯ ಸುದ್ದಿ

ನ್ಯಾಯಾಲಯದಿಂದ ಶಿಕ್ಷೆಯಾದ ಅತ್ಯಾಚಾರಿಗೆ ಮುಖ ಪುಟದ ಜಾಹೀರಾತು: ತೀವ್ರ ಆಕ್ರೋಶದ ಬಳಿಕ ಬೇಷರತ್ ಕ್ಷಮೆ ಯಾಚಿಸಿದ ‘ದಿ ಹಿಂದೂ’ ಪತ್ರಿಕೆ

ರಾಜ್ಯ ಸುದ್ದಿ

“ಪೊಲೀಸ್ ಠಾಣೆಗೆ ನುಗ್ಗಿದರೆ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳುಹಿಸುತ್ತೇವೆ”: ಮೈಸೂರಿನ “ಪೇಟೆ ರೌಡಿ”ಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ