ವೀಡಿಯೊ

ಗಂಗಾಜಲ ಹಿಡಿದು ‘ಲಂಚ ಹಂಚಿಕೆ’ ಪ್ರಮಾಣ ವಚನ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿಡಿಯೋ ವೈರಲ್, ತನಿಖೆಗೆ ಆದೇಶ

Reading…
ಹನಿ ಸುದ್ದಿ ⚡ NEW
Quick reads · Scroll through cards
Open feed →
ಧ್ರುವ್ ರಾಠಿ ಬಿಡುಗಡೆ: ಜಂತರ್ ಮಂತರ್ ಕಡೆ ಹೋದರೆ ಮತ್ತೆ ಕ್ರಮದ ಎಚ್ಚರಿಕೆ ನೀಡಿದ ಪೊಲೀಸರು
ಪ್ರತಿಭಟನೆಗೂ ಮುನ್ನ ಧ್ರುವ್ ರಾಠಿ ಪೊಲೀಸ್ ವಶಕ್ಕೆ: ದೆಹಲಿ ಗಡಿಗಳಲ್ಲಿ ಬಿಗಿ ಭದ್ರತೆ
SIR ವಿರುದ್ಧ ‘ಠಾಕ್ರೆ ಸಹೋದರರ’ ಹೋರಾಟ: ಅಕ್ಟೋಬರ್ 4ರಂದು ಮುಂಬೈಯಲ್ಲಿ ಜಂಟಿ ಪ್ರತಿಭಟನೆ
ವಿಚಾರಣೆಯೇ ಆರಂಭವಾಗದೆ 6 ವರ್ಷಗಳ ಬಂಧನ, ಸಿಕ್ಕಿದ್ದು 7 ದಿನಗಳ ರಿಲೀಫ್: ಶರ್ಜೀಲ್ ಇಮಾಮ್‌ಗೆ ಮಧ್ಯಂತರ ಜಾಮೀನು 
ಧಾರ್ಮಿಕ ಕಾರಣಗಳಿಂದ ‘ವಂದೇ ಮಾತರಂ’ ಹಾಡದಿದ್ದರೆ ದಂಡನಾತ್ಮಕ ಕ್ರಮ ಕೈಗೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್
‘ಮುಸ್ಲಿಮರು ಗರ್ಬಾಗೆ ಬರುವುದಿದ್ದರೆ ಸಹೋದರಿಯರನ್ನೂ, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧರಿದ್ದಾರೆ’: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ
ಅನುದಾನ ತಂದ ಮಾಜಿ ಶಾಸಕನಿಗೇ ಉದ್ಘಾಟನೆಯ ಅವಕಾಶ ನೀಡಿದ ಹಾಲಿ ಶಾಸಕ : ರಾಜಕೀಯದಲ್ಲೊಂದು “ಕೇರಳ ಸ್ಟೋರಿ”!
ತುಳು ನುಡಿಗೆ ಹೆಚ್ಚುವರಿ ಅಧಿಕೃತ ಸ್ಥಾನಮಾನ ಸ್ವಾಗತಾರ್ಹ; 8ನೇ ಪರಿಚ್ಛೇದ ಸೇರ್ಪಡೆ ತನಕ ನಮ್ಮ ಹಕ್ಕೊತ್ತಾಯ ಮುಂದುವರಿಕೆ: ಕರ್ನಾಟಕ ರಕ್ಷಣಾ ವೇದಿಕೆ
ಕರಾವಳಿಗೆ ಸಂಪುಟದ ಐತಿಹಾಸಿಕ ಕೊಡುಗೆ: ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆ ಮಾನ್ಯತೆ, ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು
ಮಂಗಳೂರು ಹಿಂದುತ್ವದ ಭದ್ರ ಕೋಟೆ, ಸರ್ಕಾರ ಮಾಡುತ್ತಿರುವುದು ಕೇವಲ ರಾಜಕೀಯ ಗಿಮಿಕ್ ಎಂದ ಭರತ್ ಶೆಟ್ಟಿ; ಬಿಜೆಪಿ ಕೊಡುಗೆ ಬಗ್ಗೆ ಪ್ರಶ್ನಿಸಿ ಬುದ್ಧಿ ಹೇಳಿದ ನೆಟ್ಟಿಗರು!

ಸಾರಾಂಶ

ಉತ್ತರ ಪ್ರದೇಶದ ಶಹಜಹಾನ್‌ಪುರ ಮಹಾನಗರ ಪಾಲಿಕೆಯಲ್ಲಿ ಎಲ್ಲರೂ ಕೈಯಲ್ಲಿ ಗಂಗಾಜಲ ಹಿಡಿದು "ಲಂಚದ ಹಣವನ್ನು 60 ಕಾರ್ಪೊರೇಟರ್‌ಗಳು ಸಮಾನವಾಗಿ ಹಂಚಿಕೊಳ್ಳಬೇಕು" ಎಂದು ಪ್ರಮಾಣ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ವಿಡಿಯೋದ ಸತ್ಯಾಸತ್ಯತೆ ಹಾಗೂ ಜನಪ್ರತಿನಿಧಿಗಳ ಭಾಗಿಯಾಗುವಿಕೆ ಬಗ್ಗೆ ಸಮಗ್ರ ತನಿಖೆಗೆ ಪಾಲಿಕೆ ಆಯುಕ್ತರು ಆದೇಶಿಸಿದ್ದಾರೆ.

ಉತ್ತರ ಪ್ರದೇಶದ ಶಹಜಹಾನ್‌ಪುರ ಮಹಾನಗರ ಪಾಲಿಕೆಯ ಸದಸ್ಯರು ಭ್ರಷ್ಟಾಚಾರದ ವಿಚಾರದಲ್ಲಿ ವಿಚಿತ್ರ ಪ್ರಮಾಣ ವಚನ ಸ್ವೀಕರಿಸಿದ್ದಾರೆನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಕೈಗಳಲ್ಲಿ ಪವಿತ್ರ ಗಂಗಾಜಲವನ್ನು ಹಿಡಿದುಕೊಂಡು, “ಪಾಲಿಕೆಯಿಂದ ಬರುವ ಲಂಚದ ಹಣವನ್ನು 60 ಮಂದಿ ಕಾರ್ಪೊರೇಟರ್‌ಗಳು ಸಮಾನವಾಗಿ ಹಂಚಿಕೊಳ್ಳಬೇಕು” ಎಂದು ಪ್ರಮಾಣ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.


ವೈರಲ್ ಆಗಿರುವ ವಿಡಿಯೋದಲ್ಲಿ ಗುಂಪಿನಲ್ಲಿದ್ದ ಪ್ರತಿಯೊಬ್ಬರೂ ತಮ್ಮ ಅಂಗೈಯಲ್ಲಿ ಗಂಗಾಜಲವನ್ನು ಹಿಡಿದುಕೊಂಡು ಶಪಥ ಮಾಡುವುದನ್ನು ಕಾಣಬಹುದು. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಲಂಚದ ಆದಾಯವನ್ನು ಪ್ರತಿಯೊಬ್ಬ ಕಾರ್ಪೊರೇಟರ್‌ಗೆ ಪ್ರಾಮಾಣಿಕವಾಗಿ ಹಾಗೂ ಸಮಾನವಾಗಿ ಹಂಚಿಕೆ ಮಾಡಬೇಕು ಮತ್ತು ಈ ವಿಚಾರದಲ್ಲಿ ಯಾರಾದರೂ ಸಂಕಷ್ಟಕ್ಕೆ ಸಿಲುಕಿದರೆ ಇಡೀ ಗುಂಪು ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಅಲ್ಲಿದ್ದವರು ಶಪಥ ಮಾಡುತ್ತಿರುವುದು ವಿಡಿಯೋದಲ್ಲಿದೆ. ಅಷ್ಟೇ ಅಲ್ಲದೆ, ಈ ಒಪ್ಪಂದವನ್ನು ಮುರಿದು ವಂಚಿಸುವವರನ್ನು ‘ದ್ರೋಹಿ’ ಎಂದು ಕರೆಯುವ ಮಾತುಗಳೂ ವಿಡಿಯೋದಲ್ಲಿ ದಾಖಲಾಗಿವೆ.


ಸಾಮಾಜಿಕ ಜಾಲತಾಣಗಳಲ್ಲಿ ಈ ದೃಶ್ಯಾವಳಿಗಳು ಹರಿದಾಡುತ್ತಿದ್ದಂತೆ, ಪಾಲಿಕೆಯ ಕಾರ್ಪೊರೇಟರ್‌ಗಳ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿವೆ. ಕೆಲವು ಬಳಕೆದಾರರು ಕೆಲ ನಿರ್ದಿಷ್ಟ ಜನಪ್ರತಿನಿಧಿಗಳ ಆಸ್ತಿ ಗಳಿಕೆಯ ಬಗ್ಗೆಯೂ ಪ್ರಶ್ನೆ ಎತ್ತಿದ್ದು, ಮೂರು ವರ್ಷಗಳ ಹಿಂದೆ ಕೇವಲ ಒಂದು ಮನೆ ಹೊಂದಿದ್ದ ಜನಪ್ರತಿನಿಧಿಯೊಬ್ಬರು ಈಗ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹಾಗೂ ಐಷಾರಾಮಿ ವಾಹನಗಳನ್ನು ಹೇಗೆ ಸಂಪಾದಿಸಿದರು ಎಂದು ಸಾರ್ವಜನಿಕವಾಗಿ ಪ್ರಶ್ನಿಸುತ್ತಿದ್ದಾರೆ.


ಈ ವಿಡಿಯೋ ಸೃಷ್ಟಿಸಿರುವ ವಿವಾದದ ಬೆನ್ನಲ್ಲೇ ಆಡಳಿತ ಯಂತ್ರ ಎಚ್ಚೆತ್ತುಕೊಂಡಿದೆ. ಘಟನೆ ಕುರಿತು ಪ್ರತಿಕ್ರಿಯಿಸಿರುವ ಶಹಜಹಾನ್‌ಪುರ ಮಹಾನಗರ ಪಾಲಿಕೆ ಆಯುಕ್ತೆ ಸೌಮ್ಯಾ ಗುರುರಾಣಿ, ಈ ವಿಡಿಯೋ 2025ರ ನವೆಂಬರ್ ಅವಧಿಯದ್ದು ಎನ್ನಲಾಗಿದ್ದು, ಆ ಸಮಯದಲ್ಲಿ ಬೇರೊಬ್ಬರು ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಘಟನೆ ಹಳೆಯದಾಗಿದ್ದರೂ, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಸಮಗ್ರ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವಿಡಿಯೋದ ಸತ್ಯಾಸತ್ಯತೆ ಮತ್ತು ಅದರಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಗುರುತನ್ನು ಪಾಲಿಕೆ ಆಡಳಿತ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ತನಿಖಾ ವರದಿ ಬಂದ ನಂತರವಷ್ಟೇ ವಿಡಿಯೋದಲ್ಲಿರುವವರು ನಿಜಕ್ಕೂ ಪಾಲಿಕೆಯ ಕಾರ್ಪೊರೇಟರ್‌ಗಳೇ ಅಥವಾ ಬೇರೆಯವರೇ ಎಂಬುದು ಹಾಗೂ ಅವರ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಕುರಿತು ನಿರ್ಧಾರವಾಗಲಿದೆ.

Share:
How does this story make you feel?
Join our WhatsApp Channel Get every Varadigara story instantly →

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Follow Us
ಹನಿ ಸುದ್ದಿ ⚡ NEW
News Cards · Swipe to read
See All →

From Across Varadigara

ಕಾಣಿಸದ್ದು - ಕೇಳಿಸದ್ದು

ಅನುದಾನ ತಂದ ಮಾಜಿ ಶಾಸಕನಿಗೇ ಉದ್ಘಾಟನೆಯ ಅವಕಾಶ ನೀಡಿದ ಹಾಲಿ ಶಾಸಕ : ರಾಜಕೀಯದಲ್ಲೊಂದು “ಕೇರಳ ಸ್ಟೋರಿ”!

ರಾಷ್ಟ್ರೀಯ ಸುದ್ದಿ

ಗ್ರಾಹಂ ಸ್ಟೇನ್ಸ್, ಪುಟ್ಟ ಮಕ್ಕಳ ಸಜೀವ ದಹನ ಪ್ರಕರಣ: ಬಜರಂಗದಳದ ದಾರಾ ಸಿಂಗ್ ಬಿಡುಗಡೆ ಅರ್ಜಿ ತಿರಸ್ಕರಿಸಿದ ಒಡಿಶಾ ಸರ್ಕಾರ

ರಾಜ್ಯ ಸುದ್ದಿ

ಕರಾವಳಿಗೆ ಸಂಪುಟದ ಐತಿಹಾಸಿಕ ಕೊಡುಗೆ: ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆ ಮಾನ್ಯತೆ, ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು

ರಾಷ್ಟ್ರೀಯ ಸುದ್ದಿ

‘ಮುಸ್ಲಿಮರು ಗರ್ಬಾಗೆ ಬರುವುದಿದ್ದರೆ ಸಹೋದರಿಯರನ್ನೂ, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧರಿದ್ದಾರೆ’: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

ರಾಷ್ಟ್ರೀಯ ಸುದ್ದಿ

ಧ್ರುವ್ ರಾಠಿ ಬಿಡುಗಡೆ: ಜಂತರ್ ಮಂತರ್ ಕಡೆ ಹೋದರೆ ಮತ್ತೆ ಕ್ರಮದ ಎಚ್ಚರಿಕೆ ನೀಡಿದ ಪೊಲೀಸರು

ಸುತ್ತ - ಮುತ್ತ

ಜುಬೈಲ್‌ನ ಅತಿದೊಡ್ಡ ಕ್ರಿಕೆಟ್ ಕಾರ್ನಿವಲ್‌ಗೆ ಕ್ಷಣಗಣನೆ; SVC Cricket Carnival 2026 ಭರದ ಸಿದ್ಧತೆ

ರಾಜ್ಯ ಸುದ್ದಿ

‘ಮಸೀದಿ ಎದುರು ಡ್ಯಾನ್ಸ್ ಮಾಡಿದ್ರೆ ಏನಾಗುತ್ತೆ?’: ಇನ್ಸ್‌ಪೆಕ್ಟರ್ ಮುಂಜಾಗ್ರತಾ ಸೂಚನೆಗೆ ಪ್ರತಾಪ್ ಸಿಂಹ ಆಕ್ಷೇಪ, ಠಾಣೆಗೆ ನುಗ್ಗುವ ಎಚ್ಚರಿಕೆ

ರಾಷ್ಟ್ರೀಯ ಸುದ್ದಿ

‘ದೇಶ ನಿಮಗೇನು ಮಾಡಿದೆ ಎಂದು ಕೇಳುವ ಬದಲು, ದೇಶಕ್ಕೆ ನಿಮ್ಮ ಕೊಡುಗೆ ಏನು ಎಂಬುದರತ್ತ ಗಮನಹರಿಸಿ’ : ಯುವಜನತೆಗೆ ನಿರ್ಮಲಾ ಸೀತಾರಾಮನ್ ಸಲಹೆ

ಕಾಣಿಸದ್ದು - ಕೇಳಿಸದ್ದು

ರಾಜಸ್ಥಾನ ಸ್ಥಳೀಯ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಒಂದೇ ಮತ; ವಾರ್ಡ್‌ನಲ್ಲಿ ಸ್ವಪಕ್ಷದ ಕಾರ್ಯಕರ್ತರೂ ಕೈಬಿಟ್ಟರಾ?

ರಾಷ್ಟ್ರೀಯ ಸುದ್ದಿ

ವಿಚಾರಣೆಯೇ ಆರಂಭವಾಗದೆ 6 ವರ್ಷಗಳ ಬಂಧನ, ಸಿಕ್ಕಿದ್ದು 7 ದಿನಗಳ ರಿಲೀಫ್: ಶರ್ಜೀಲ್ ಇಮಾಮ್‌ಗೆ ಮಧ್ಯಂತರ ಜಾಮೀನು 

ರಾಷ್ಟ್ರೀಯ ಸುದ್ದಿ

ಧಾರ್ಮಿಕ ಕಾರಣಗಳಿಂದ ‘ವಂದೇ ಮಾತರಂ’ ಹಾಡದಿದ್ದರೆ ದಂಡನಾತ್ಮಕ ಕ್ರಮ ಕೈಗೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್

ರಾಜ್ಯ ಸುದ್ದಿ

ಮಂಗಳೂರು ಹಿಂದುತ್ವದ ಭದ್ರ ಕೋಟೆ, ಸರ್ಕಾರ ಮಾಡುತ್ತಿರುವುದು ಕೇವಲ ರಾಜಕೀಯ ಗಿಮಿಕ್ ಎಂದ ಭರತ್ ಶೆಟ್ಟಿ; ಬಿಜೆಪಿ ಕೊಡುಗೆ ಬಗ್ಗೆ ಪ್ರಶ್ನಿಸಿ ಬುದ್ಧಿ ಹೇಳಿದ ನೆಟ್ಟಿಗರು!

ರಾಷ್ಟ್ರೀಯ ಸುದ್ದಿ

‘ಅಸ್ಸಲಾಮು ಅಲೈಕುಮ್’, ‘ಇನ್ಶಾ ಅಲ್ಲಾಹ್’ ಎಂದಿದ್ದಕ್ಕೆ ಕ್ರಮ?: ಹಿಂದೂ ಸಂಘಟನೆಯ ದೂರಿನ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ವರ್ಗಾವಣೆ

ರಾಷ್ಟ್ರೀಯ ಸುದ್ದಿ

ಪ್ರತಿಭಟನೆಗೂ ಮುನ್ನ ಧ್ರುವ್ ರಾಠಿ ಪೊಲೀಸ್ ವಶಕ್ಕೆ: ದೆಹಲಿ ಗಡಿಗಳಲ್ಲಿ ಬಿಗಿ ಭದ್ರತೆ

ರಾಜ್ಯ ಸುದ್ದಿ

ತುಳು ನುಡಿಗೆ ಹೆಚ್ಚುವರಿ ಅಧಿಕೃತ ಸ್ಥಾನಮಾನ ಸ್ವಾಗತಾರ್ಹ; 8ನೇ ಪರಿಚ್ಛೇದ ಸೇರ್ಪಡೆ ತನಕ ನಮ್ಮ ಹಕ್ಕೊತ್ತಾಯ ಮುಂದುವರಿಕೆ: ಕರ್ನಾಟಕ ರಕ್ಷಣಾ ವೇದಿಕೆ

ರಾಷ್ಟ್ರೀಯ ಸುದ್ದಿ

ನ್ಯಾಯಾಲಯದಿಂದ ಶಿಕ್ಷೆಯಾದ ಅತ್ಯಾಚಾರಿಗೆ ಮುಖ ಪುಟದ ಜಾಹೀರಾತು: ತೀವ್ರ ಆಕ್ರೋಶದ ಬಳಿಕ ಬೇಷರತ್ ಕ್ಷಮೆ ಯಾಚಿಸಿದ ‘ದಿ ಹಿಂದೂ’ ಪತ್ರಿಕೆ

ರಾಜ್ಯ ಸುದ್ದಿ

ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಸರ್ಕಾರದ ಸಿದ್ಧತೆ: ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ

ರಾಷ್ಟ್ರೀಯ ಸುದ್ದಿ

200ಕ್ಕೂ ಹೆಚ್ಚು ಶಂಕಿತರ ಬಂಧನದ ಬೆನ್ನಲ್ಲೇ ‘ಶಹಜಾದ್ ಭಟ್ಟಿ ನೆಟ್‌ವರ್ಕ್’ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಗೃಹ ಸಚಿವಾಲಯ

ರಾಜ್ಯ ಸುದ್ದಿ

“ಪೊಲೀಸ್ ಠಾಣೆಗೆ ನುಗ್ಗಿದರೆ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳುಹಿಸುತ್ತೇವೆ”: ಮೈಸೂರಿನ “ಪೇಟೆ ರೌಡಿ”ಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ಅಂತಾರಾಷ್ಟ್ರೀಯ

ಯೆಮನ್‌ನಲ್ಲಿ ತೀವ್ರಗೊಂಡ ಸಂಘರ್ಷ: 14 ದಿನಗಳಲ್ಲಿ 57,000 ಮಕ್ಕಳು ಬೀದಿಗೆ, ಕನಿಷ್ಠ 9 ಮಕ್ಕಳ ಬಲಿ ಎಂದ ಯೂನಿಸೆಫ್!