ಸಾಧ್ವಿಗಳ ಮೇಲಿನ ಅತ್ಯಾಚಾರ ಹಾಗೂ ಪತ್ರಕರ್ತನ ಕೊಲೆ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಹರ್ಯಾಣ ಸರ್ಕಾರವು ಮತ್ತೆ 21 ದಿನಗಳ ತಾತ್ಕಾಲಿಕ ಬಿಡುಗಡೆ (ಫರ್ಲೋ) ಮಂಜೂರು ಮಾಡಿದೆ. ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿದ್ದ ಈತ ಮಂಗಳವಾರ ಬೆಳಿಗ್ಗೆ ಜೈಲಿನಿಂದ ಹೊರಬಂದಿದ್ದಾನೆ.
5 ವರ್ಷಗಳಲ್ಲಿ 17ನೇ ಬಾರಿಗೆ ಬಿಡುಗಡೆ:
2017ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾದ ನಂತರ, ರಾಮ್ ರಹೀಮ್‌ಗೆ ಪರೋಲ್ ಅಥವಾ ಫರ್ಲೋ ಸಿಗುತ್ತಿರುವುದು ಇದು 17ನೇ ಬಾರಿಯಾಗಿದೆ. 2020ರಿಂದೀಚೆಗೆ ಈತನಿಗೆ ಸತತವಾಗಿ ತಾತ್ಕಾಲಿಕ ಬಿಡುಗಡೆ ನೀಡಲಾಗುತ್ತಿದ್ದು, ಇತ್ತೀಚೆಗಷ್ಟೇ ಮೇ ತಿಂಗಳಿನಲ್ಲಿ ನೀಡಲಾಗಿದ್ದ 30 ದಿನಗಳ ಪರೋಲ್ ಮುಗಿಸಿ ಜೂನ್ 26ರಂದು ಜೈಲಿಗೆ ಮರಳಿದ್ದ. ಅದಾಗಿ ಕೇವಲ ಎರಡು ತಿಂಗಳ ಅವಧಿಯೊಳಗೆ ಮತ್ತೆ 21 ದಿನಗಳ ರಜೆ ಮಂಜೂರು ಮಾಡಲಾಗಿದೆ.
ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು
ಮಂಗಳೂರು ರೈಲ್ವೆ ವ್ಯಾಪ್ತಿ ವರ್ಗಾವಣೆ: ತೀರ್ಮಾನ ತಡೆಹಿಡಿಯಲು ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ಕೇರಳ ಸಿಎಂ ವಿ. ಡಿ. ಸತೀಶನ್
SIR: 1 ಕೋಟಿಗೂ ಹೆಚ್ಚು ಹೆಸರುಗಳ ASDDO ವರ್ಗೀಕರಣ; ಪರಿಶೀಲನೆಗೆ ಹೆಚ್ಚಿನ ಕಾಲಾವಕಾಶ ಮತ್ತು ನಿಗದಿತ ಪ್ರಕ್ರಿಯೆ ಅನುಸರಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಸಿಎಂ ಪತ್ರ
ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ
“ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನನಗೇ ಈ ಸ್ಥಿತಿಯಾದರೆ ಸಾಮಾನ್ಯರ ಕಥೆಯೇನು?”: ಪಂಜಾಬ್ SIR ಗೊಂದಲ; ಮಾಜಿ ರಾಯಭಾರಿಗೇ ಪೌರತ್ವ ಸಾಬೀತುಪಡಿಸುವ ಸ್ಥಿತಿ
“ಇಮ್ರಾನ್ ಖಾನ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ”: ಪಾಕ್ ಪ್ರಧಾನಿಗೆ ಭಾರತದ ಗವಾಸ್ಕರ್, ಕಪಿಲ್ ದೇವ್ ಸಹಿತ 21 ಕ್ರಿಕೆಟ್ ದಿಗ್ಗಜರ ಪತ್ರ
ಅತ್ಯಾಚಾರ ದೋಷಿ ರಾಮ್ ರಹೀಮ್‌ಗೆ ಮತ್ತೆ 21 ದಿನಗಳ ಪರೋಲ್: 5 ವರ್ಷಗಳಲ್ಲಿ 17ನೇ ಬಾರಿಗೆ ಜೈಲಿನಿಂದ ಬಿಡುಗಡೆ!
ಕೇಂದ್ರ ಸಚಿವರ ಬಂಗಲೆಗಳ ನಿರ್ವಹಣೆ, ದುರಸ್ತಿಗೆ ಶತಕೋಟಿ ವೆಚ್ಚ; 2025-26ರಲ್ಲಿ ದಾಖಲೆಯ 92.35 ಕೋಟಿ ರೂ. ಖರ್ಚು: RTI ಮೂಲಕ ಮಾಹಿತಿ ಬಹಿರಂಗ
ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ
ಭರವಸೆ ಈಡೇರಿಸದ ಕೇಂದ್ರ ಸರ್ಕಾರ: ಸೆಪ್ಟೆಂಬರ್ 5 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಘೋಷಿಸಿದ ಸಿಜೆಪಿ
ಹಿಜಾಬ್ ಇಸ್ಲಾಂನ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ: ಮುಸ್ಲಿಂ ವಿದ್ಯಾರ್ಥಿನಿಯ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್
ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು
ಬಿಜೆಪಿ ವಿರುದ್ಧ ಪವನ್ ಖೇರಾ ತೀವ್ರ ವಾಗ್ದಾಳಿ:
ರಾಮ್ ರಹೀಮ್‌ಗೆ ಪದೇಪದೇ ಪರೋಲ್ ನೀಡುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ನಾಯಕ ಪವನ್ ಖೇರಾ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ “ಮಹಿಳಾ ಸಬಲೀಕರಣದ ವಿಷಯದಲ್ಲಿ ಬಿಜೆಪಿ ಮೊಸಳೆ ಕಣ್ಣೀರು ಸುರಿಸುತ್ತಿದೆ. ಅತ್ಯಾಚಾರ ದೋಷಿಗೆ ಇದು 17ನೇ ಪರೋಲ್ ಆಗಿದ್ದು, ಆತ ಜೈಲಿನ ಹೊರಗೆ ಈಗಾಗಲೇ 450ಕ್ಕೂ ಹೆಚ್ಚು ದಿನಗಳನ್ನು ಕಳೆದಿದ್ದಾನೆ. ಹೆಣ್ಣುಮಕ್ಕಳು ಸುರಕ್ಷಿತವಾಗಿರಬೇಕಾದರೆ ದೇಶವನ್ನು ಬಿಜೆಪಿಯಿಂದ ಮುಕ್ತಗೊಳಿಸಿ,” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
