ಮಂಗಳೂರು, : Coastal Friends Mangalore (Regd.) ಸಂಘಟನೆಯ 2026–27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಂಗಳೂರಿನ Bombay Lucky Restaurant Hallನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನಡೆಯಿತು. ನಿರ್ಗಮಿತ ಅಧ್ಯಕ್ಷ ಶರೀಫ್ ಅಬ್ಬಾಸ್ ವಲಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿ ಶೌಕತ್ ಅಲಿ ವಾರ್ಷಿಕ ವರದಿಯನ್ನು ಮಂಡಿಸಿ, ಜಂಟಿ ಕಾರ್ಯದರ್ಶಿ ಜುನೈದ್ ಸಂಸ್ಥೆಯ ಮೆಡಿಕಲ್ ಬೆಡ್ ಸೇವೆಯ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿಯಾಗಿದ್ದ ಇಮ್ತಿಯಾಝ್ ಎಸ್.ಎಂ. ಲೆಕ್ಕಪರಿಶೋಧಿತ ವಾರ್ಷಿಕ ಹಣಕಾಸು ವರದಿಯನ್ನು ಮಂಡಿಸಿದರು. ವರದಿಗಳ ಕುರಿತು ಸದಸ್ಯರು ವಿಸ್ತೃತ ಚರ್ಚೆ ನಡೆಸಿ, ಅವುಗಳನ್ನು ಸರ್ವಾನುಮತದಿಂದ ಅಂಗೀಕರಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ನಿರ್ಗಮಿತ ಅಧ್ಯಕ್ಷ ಶರೀಫ್ ಅಬ್ಬಾಸ್ ವಲಾಲ್, ಕಳೆದ ಸಾಲಿನಲ್ಲಿ ಸಂಘಟನೆ ಕೈಗೊಂಡ ವಿವಿಧ ಸಾಮಾಜಿಕ ಸೇವಾ ಕಾರ್ಯಗಳು ಹಾಗೂ ಸಾಧನೆಗಳನ್ನು ವಿವರಿಸಿದರು. ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವ ಯೋಜನೆಗಳ ಬಗ್ಗೆಯೂ ಅವರು ಮಾಹಿತಿ ನೀಡಿದರು. ಗೌರವಾಧ್ಯಕ್ಷ ಆಸಿಫ್ ಸುರಲ್ಪಾಡಿ ಸಂದರ್ಭೋಚಿತವಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನೂತನ ಪದಾಧಿಕಾರಿಗಳ ಆಯ್ಕೆ
ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ಸಲೀಂ ಅಬ್ಬಾಸ್ ವಲಾಲ್, ಆಸಿಫ್ ಸುರಲ್ಪಾಡಿ ಹಾಗೂ ಮುಸ್ತಫಾ ದಮ್ಮಾಲೆ ಅವರ ಮೇಲ್ವಿಚಾರಣೆಯಲ್ಲಿ ನಡೆಸಲಾಯಿತು.
2026–27ನೇ ಸಾಲಿಗೆ ಶಮೀರ್ ಲಕ್ಕಿಸ್ಟಾರ್ ಅವರನ್ನು ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಇತರ ಪ್ರಮುಖ ಪದಾಧಿಕಾರಿಗಳು ಹೀಗಿದ್ದಾರೆ:
- ಅಧ್ಯಕ್ಷ: ಶಮೀರ್ ಲಕ್ಕಿಸ್ಟಾರ್
- ಉಪಾಧ್ಯಕ್ಷ: ನ್ಯಾಯವಾದಿ ನಝೀರ್ ಬೆದ್ರೋಡಿ
- ಪ್ರಧಾನ ಕಾರ್ಯದರ್ಶಿ: ಇಮ್ತಿಯಾಝ್ ಹಜ್ಜಾಜ್
- ಜಂಟಿ ಕಾರ್ಯದರ್ಶಿ: ಅಫ್ತಾಬ್ ಬಸ್ತಿಕ್ಕರ್
- ಖಜಾಂಚಿ: ಸಾಜಿದ್ ಒಡೆಯಾರ್
ಇದರೊಂದಿಗೆ 11 ಸದಸ್ಯರ ಕಾರ್ಯಕಾರಿ ಸಮಿತಿಯನ್ನೂ ನೂತನ ಸಾಲಿಗೆ ರಚಿಸಲಾಯಿತು.
ವಿವಿಧ ವಿಭಾಗಗಳಿಗೂ ನೂತನ ತಂಡ
ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸುವ ಉದ್ದೇಶದಿಂದ ವಿವಿಧ ವಿಭಾಗಗಳನ್ನೂ ರಚಿಸಲಾಗಿದೆ.
ಮಾಧ್ಯಮ ವಿಭಾಗದ ಸಂಚಾಲಕರಾಗಿ ಶಫೀಕ್ ಅಬ್ಬಾಸ್ ವಳಾಲ್ ನೇಮಕಗೊಂಡಿದ್ದು, ಸಾಬಿತ್ ಕುಂಬ್ರ, ರಿಲ್ವಾನ್ ಹುಸೈನ್ ವಳಾಲ್ ಹಾಗೂ ಆಶಿಕ್ ಕುಕ್ಕಾಜೆ ಸದಸ್ಯರಾಗಿದ್ದಾರೆ.
ಸಾಮಾಜಿಕ ಚಟುವಟಿಕೆ ವಿಭಾಗದ ಸಂಚಾಲಕರಾಗಿ ಶಕೀರ್ ಪೀಸ್ ಆಯ್ಕೆಯಾಗಿದ್ದು, ನ್ಯಾಯವಾದಿ ಝೀಶಾನ್, ಜುನೈದ್ ಬಂಟ್ವಾಳ, ಮುನ್ನಾ ಕಮರಡಿ, ಸೌಕತ್, ಇಮ್ತಿಯಾಝ್ ಎಸ್.ಎಂ. ಹಾಗೂ ಇಬ್ರಾಹಿಂ ದುಬಲ್ ಸದಸ್ಯರಾಗಿದ್ದಾರೆ.
ಕ್ರೀಡಾ ವಿಭಾಗದ ಸಂಚಾಲಕರಾಗಿ ಸಿರಾಜ್ ಯೆರ್ಮಾಳ್ ನೇಮಕಗೊಂಡಿದ್ದು, ರಿಯಾಝ್ ಶೈನ್, ಸಫ್ವಾನ್ ಕರ್ವೇಲ್, ಸರ್ಫುರಾಝ್ ಅಬ್ಬಾಸ್ ವಳಾಲ್, ಸಿಯಾಬ್ ಪಟ್ನಾ ಹಾಗೂ ರಫೀಕ್ ಮಾಸ್ಟರ್ ಉಪ್ಪಿನಂಗಡಿ ಸದಸ್ಯರಾಗಿದ್ದಾರೆ.
ಸ್ಕ್ರೀನಿಂಗ್ ಸಮಿತಿಗೆ ಸಿರಾಜುದ್ದೀನ್ ಪಾರ್ಲಡ್ಕ, ಆಸಿಫ್ ಸುರಲ್ಪಾಡಿ ಹಾಗೂ ಸಲೀಂ ಅಬ್ಬಾಸ್ ವಲಾಲ್ ಅವರನ್ನು ನೇಮಕ ಮಾಡಲಾಗಿದೆ.
ಗೌರವಾಧ್ಯಕ್ಷರಾಗಿ ನವೀದ್ ಮಾಗುಂಡಿ ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಶಬೀರ್ JAK, ನವಾಝ್ ಹಜ್ಜಾಜ್ ಮತ್ತು ಡಾ. ಸಿದ್ದೀಕ್ ಅಡ್ಡೂರು ಅವರನ್ನು ಆಯ್ಕೆ ಮಾಡಲಾಗಿದೆ.

ಸಾಮಾಜಿಕ ಸೇವೆಗೆ ಹೆಚ್ಚಿನ ಒತ್ತು
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಶಮೀರ್ ಲಕ್ಕಿಸ್ಟಾರ್, ತಮ್ಮ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಸಂಘಟನೆಯ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ, Coastal Friends Mangaloreನ ಉದ್ದೇಶ ಮತ್ತು ಸೇವಾ ಪರಂಪರೆಯನ್ನು ಹೆಚ್ಚಿನ ಸಮರ್ಪಣೆಯೊಂದಿಗೆ ಮುಂದುವರಿಸುವುದಾಗಿ ಅವರು ಭರವಸೆ ನೀಡಿದರು.
ಮುನ್ನಾ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಹೊಸ ತಂಡದ ಮೂಲಕ Coastal Friends Mangalore ಮುಂದಿನ ಸಾಲಿನಲ್ಲಿ ಸಾಮಾಜಿಕ ಸೇವೆ, ಸ್ನೇಹಬಾಂಧವ್ಯ, ಕ್ರೀಡೆ ಹಾಗೂ ಸಮುದಾಯಮುಖಿ ಚಟುವಟಿಕೆಗಳಲ್ಲಿ ಮತ್ತಷ್ಟು ಪರಿಣಾಮಕಾರಿ ಹೆಜ್ಜೆಗಳನ್ನು ಇಡುವ ನಿರೀಕ್ಷೆ ವ್ಯಕ್ತವಾಗಿದೆ.

