ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ ಭಾಗದ ಬ್ಯಾರಿ ಸಮುದಾಯದ ಯುವಕರ ಸಂಘಟನೆಯಾದ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ವಾರ್ಷಿಕ ಮಹಾಸಭೆ ಹಾಗೂ ಚುನಾವಣಾ ಪ್ರಕ್ರಿಯೆ ಮೆಜೆಸ್ಟಿಕ್‌ನ ಗಾಂಧಿನಗರದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು.
2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯಲ್ಲಿ ಉದ್ಯಮಿ ಗಫೂರ್ ಕೆಂಟ್ ಅವರು ಅಧ್ಯಕ್ಷರಾಗಿ ಹಾಗೂ ಅಡ್ವೊಕೇಟ್ ಕಲಂದರ್ ಕೊಯಿಲ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ರಿಫಾಯಿ ವಸಂತ ನಗರ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದು, ನಾಸಿರ್ ಕೆಂಪಿ, ಇಕ್ಬಾಲ್ ಡಿಫೈನ್, ಸಲೀಂ ಸಿಎಂ, ಝಮೀರ್ ಉಳ್ಳಾಲ ಹಾಗೂ ಶಂಶುದ್ದೀನ್ ಕುಕ್ಕಾಜೆ ಉಪಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಜಂಟಿ ಕಾರ್ಯದರ್ಶಿಗಳಾಗಿ ಹಾರಿಸ್ ಜಿಎಸ್‌ಕೆ, ಶಫೀಕ್ ಮಲ್ಲೇಶ್ವರ, ಶಿಹಾಬ್ ಕಾಟಿಪಳ್ಳ, ಅಯ್ಯೂಬ್ ಕೋರಮಂಗಲ ಹಾಗೂ ಸವಾದ್ ಆರ್.ಟಿ ನಗರ ಆಯ್ಕೆಯಾಗಿದ್ದಾರೆ.
ಸಂಘಟನಾ ಕಾರ್ಯದರ್ಶಿಗಳಾಗಿ ಆಸಿಫ್ ಪಿ.ಕೆ, ರಹೀಮ್ ಚಿಕ್ಕಪೇಟೆ, ಹಾರಿಸ್ ಬೆಳ್ಮಾ, ಶಬೀರ್ ಪರ್ಫ್ಯೂಮ್, ಹಾರಿಸ್ ಬೆಂಗಾರ್, ರಫೀಕ್ ಮಠ, ಸಲೀಂ ಮೂಡಿಗೆರೆ ಹಾಗೂ ಯೂಸುಫ್ ಮಾರ್ಥಲ್ಲಿ ಆಯ್ಕೆಯಾದರು.
ವಿವಿಧ ವಿಭಾಗಗಳ ಜವಾಬ್ದಾರಿಗಳನ್ನೂ ನೂತನ ತಂಡಕ್ಕೆ ಹಂಚಿಕೆ ಮಾಡಲಾಗಿದ್ದು, ಮಾಧ್ಯಮ ಕಾರ್ಯದರ್ಶಿಯಾಗಿ ನವಾಝ್ ಅಹ್ಮದ್, ಸೋಷಿಯಲ್ ಮೀಡಿಯಾ ಕಾರ್ಯದರ್ಶಿಯಾಗಿ ಬಶೀರ್ ಅಡ್ಯನಡ್ಕ, ಶಿಕ್ಷಣ ಕಾರ್ಯದರ್ಶಿಯಾಗಿ ಅಡ್ವೊಕೇಟ್ ರಾಶಿಫ್, ವೈದ್ಯಕೀಯ ವಿಭಾಗದ ಕಾರ್ಯದರ್ಶಿಯಾಗಿ ರಫೀಕ್ ಪಾನೇಲ, ಕ್ರೀಡಾ ವಿಭಾಗದ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಇಂದಬೆಟ್ಟು, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿ ಅನ್ವರ್ ಎಂಪೈರ್, ಉದ್ಯಮ ವಿಭಾಗದ ಕಾರ್ಯದರ್ಶಿಯಾಗಿ ಮಾಝಿನ್ ಕಾವಲಕಟ್ಟೆ, ಕಾನೂನು ಕಾರ್ಯದರ್ಶಿಯಾಗಿ ಅಬ್ಬಾಸ್ ಸಿಪಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉಬೈದ್ ಹಾಗೂ ಕಚೇರಿ ಕಾರ್ಯದರ್ಶಿಯಾಗಿ ಇರ್ಷಾದ್ ವೇಣೂರು ಆಯ್ಕೆಯಾಗಿದ್ದಾರೆ.
ಅದೇ ರೀತಿ ಅಲ್ತಾಫ್ ಕಟ್ಟೆ ಹಾಗೂ ಹುಸೈನ್ ಆತೂರು ಅವರು ಲೆಕ್ಕ ಪರಿಶೋಧಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ನೂತನ ಪದಾಧಿಕಾರಿಗಳ ನೇತೃತ್ವದಲ್ಲಿ ಬೆಂಗಳೂರಿನ ಬ್ಯಾರಿ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಕ್ರೀಡಾ ಹಾಗೂ ಉದ್ಯಮ ಕ್ಷೇತ್ರಗಳಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳು ಮುಂದುವರಿಯಲಿವೆ.


