ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ನುಡಿಯನ್ನು ರಾಜ್ಯದ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯನ್ನಾಗಿ ಘೋಷಿಸುವ ಸಚಿವ ಸಂಪುಟದ ನಿರ್ಧಾರವನ್ನು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ನಾರಾಯಣ ಗೌಡ ಸ್ವಾಗತಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೈಗೊಳ್ಳಲಾದ ಈ ತೀರ್ಮಾನವು ಕರಾವಳಿ ಭಾಗದ ದೀರ್ಘಕಾಲದ ಬೇಡಿಕೆಗೆ ಸಿಕ್ಕ ಪ್ರಮುಖ ಮಾನ್ಯತೆಯಾಗಿದ್ದು, ಐದು ಪ್ರಮುಖ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿನ ಉಳಿವು, ಬೆಳವಣಿಗೆ ಹಾಗೂ ಆಡಳಿತಾತ್ಮಕ ಬಳಕೆಗೆ ಈ ನಿರ್ಧಾರ ಸಹಕಾರಿಯಾಗಲಿದೆ ಎಂದು ಕರವೇ ಅಭಿಪ್ರಾಯಪಟ್ಟಿದೆ.
ಕರಾವಳಿ ಜಿಲ್ಲೆಗಳ ಆಡಳಿತ ನಿರ್ವಹಣೆಯಲ್ಲಿ ತುಳು ಭಾಷೆಯ ಬಳಕೆಗೆ ವಾರ್ಷಿಕ ₹82 ಲಕ್ಷ ಅನುದಾನ ಹಾಗೂ ಭಾಷಾಂತರ, ತರಬೇತಿ ಚಟುವಟಿಕೆಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ನಿರ್ಧಾರವು ಸ್ವಾಗತಾರ್ಹವಾದರೂ, ತುಳು ಭಾಷೆಗೆ ಕೇವಲ ರಾಜ್ಯ ಮಟ್ಟದ ಹೆಚ್ಚುವರಿ ಮಾನ್ಯತೆ ಸಿಕ್ಕರೆ ಸಾಲದು ಎಂದು ಕರವೇ ಪ್ರತಿಪಾದಿಸಿದೆ. ಭಾರತದ ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಭಾಷೆಯನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ತಕ್ಷಣವೇ ಕೇಂದ್ರ ಸರ್ಕಾರಕ್ಕೆ ಮರು ಪ್ರಸ್ತಾಪವನ್ನು ಸಲ್ಲಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ತುಳು ಭಾಷೆಗೆ ಸಂವಿಧಾನಾತ್ಮಕ ಮಾನ್ಯತೆ ದೊರಕಿಸಿಕೊಡಲು ಈ ಹಿಂದೆ ಕರವೇ ವತಿಯಿಂದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಅಂದಿನ ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದಲ್ಲೂ ಈ ಕುರಿತು ಪ್ರಮುಖ ನಿರ್ಣಯ ಅಂಗೀಕರಿಸಲಾಗಿತ್ತು. ಪ್ರಸ್ತುತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಪ್ರಕ್ರಿಯೆಯನ್ನು ಮುಂದುವರಿಸಿ, ತುಳು ನುಡಿಗೆ 8ನೇ ಪರಿಚ್ಛೇದದಡಿ ಸೂಕ್ತ ಮಾನ್ಯತೆ ನೀಡಿ ಗೌರವಿಸಬೇಕೆಂದು ನಾರಾಯಣ ಗೌಡ ಮನವಿ ಮಾಡಿದ್ದಾರೆ.
ಯೆಮನ್‌ನಲ್ಲಿ ತೀವ್ರಗೊಂಡ ಸಂಘರ್ಷ: 14 ದಿನಗಳಲ್ಲಿ 57,000 ಮಕ್ಕಳು ಬೀದಿಗೆ, ಕನಿಷ್ಠ 9 ಮಕ್ಕಳ ಬಲಿ ಎಂದ ಯೂನಿಸೆಫ್!
ತುಳು ನುಡಿಗೆ ಹೆಚ್ಚುವರಿ ಅಧಿಕೃತ ಸ್ಥಾನಮಾನ ಸ್ವಾಗತಾರ್ಹ; 8ನೇ ಪರಿಚ್ಛೇದ ಸೇರ್ಪಡೆ ತನಕ ನಮ್ಮ ಹಕ್ಕೊತ್ತಾಯ ಮುಂದುವರಿಕೆ: ಕರ್ನಾಟಕ ರಕ್ಷಣಾ ವೇದಿಕೆ
ರಾಜಸ್ಥಾನ ಸ್ಥಳೀಯ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಒಂದೇ ಮತ; ವಾರ್ಡ್‌ನಲ್ಲಿ ಸ್ವಪಕ್ಷದ ಕಾರ್ಯಕರ್ತರೂ ಕೈಬಿಟ್ಟರಾ?
ಕರಾವಳಿಗೆ ಸಂಪುಟದ ಐತಿಹಾಸಿಕ ಕೊಡುಗೆ: ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆ ಮಾನ್ಯತೆ, ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು
ಗ್ರಾಹಂ ಸ್ಟೇನ್ಸ್, ಪುಟ್ಟ ಮಕ್ಕಳ ಸಜೀವ ದಹನ ಪ್ರಕರಣ: ಬಜರಂಗದಳದ ದಾರಾ ಸಿಂಗ್ ಬಿಡುಗಡೆ ಅರ್ಜಿ ತಿರಸ್ಕರಿಸಿದ ಒಡಿಶಾ ಸರ್ಕಾರ
ಪ್ರತಿಯೊಂದು ಭಾಷೆಗೂ ತನ್ನದೇ ಆದ ಇತಿಹಾಸ ಹಾಗೂ ಸಾಂಸ್ಕೃತಿಕ ಪರಂಪರೆ ಇದ್ದು, ಪ್ರಾದೇಶಿಕ ಭಾಷೆಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ವಿಶೇಷವಾಗಿ ದ್ರಾವಿಡ ಭಾಷಿಕರು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಒಂದಾಗಬೇಕು ಎಂದಿರುವ ಕರವೇ, ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆಯಾಗುವವರೆಗೆ ಹೋರಾಟ ಮತ್ತು ಹಕ್ಕೊತ್ತಾಯ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ.

