ಆಸ್ಟ್ರೇಲಿಯಾದ ಕ್ರಿಶ್ಚಿಯನ್ ಮಿಷನರಿ ಗ್ರಾಹಂ ಸ್ಟೇನ್ಸ್ ಹಾಗೂ ಅವರ ಇಬ್ಬರು ಅಪ್ರಾಪ್ತ ಮಕ್ಕಳನ್ನು ಜೀವಂತವಾಗಿ ಸುಟ್ಟು ಕೊಂದ ಪ್ರಕರಣದ ಮುಖ್ಯ ಅಪರಾಧಿ, ಬಜರಂಗದಳದ ಕಾರ್ಯಕರ್ತ ರವೀಂದ್ರ ಕುಮಾರ್ ಪಾಲ್ ಅಲಿಯಾಸ್ ದಾರಾ ಸಿಂಗ್‌ಗೆ ಅವಧಿಗೂ ಮುನ್ನ ಜೈಲು ಮುಕ್ತಿ ನೀಡುವ ಪ್ರಸ್ತಾಪವನ್ನು ಒಡಿಶಾ ಸರ್ಕಾರ ತಿರಸ್ಕರಿಸಿದೆ. ಸುಮಾರು 26 ವರ್ಷಗಳಿಗಿಂತಲೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿರುವ 67 ವರ್ಷದ ದಾರಾ ಸಿಂಗ್ ಸಲ್ಲಿಸಿದ್ದ ಅವಧಿಪೂರ್ವ ಬಿಡುಗಡೆ ಅರ್ಜಿಯನ್ನು ಒಡಿಶಾದ ರಾಜ್ಯ ಶಿಕ್ಷೆ ಪರಾಮರ್ಶೆ ಮಂಡಳಿ (SSRB) ನಿರಾಕರಿಸಿದ್ದು, ಆತನನ್ನು ಬಿಡುಗಡೆ ಮಾಡಿದರೆ ಸಾಮಾಜಿಕ ಶಾಂತಿ ಕದಡುವ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆಯಾಗುವ ಆತಂಕವಿದೆ ಎಂದು ಸ್ಪಷ್ಟಪಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 17ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಿಗದಿಯಾಗಿದ್ದು, ಅದಕ್ಕೂ ಮುನ್ನವೇ ರಾಜ್ಯ ಸರ್ಕಾರ ತನ್ನ ಈ ನಿರ್ಧಾರವನ್ನು ಪ್ರಕಟಿಸಿದೆ.
1999ರ ಜನವರಿ 22ರಂದು ಕೆಂದುಜಹಾರ್ (ಕಿಯೋಂಜಹಾರ್) ಜಿಲ್ಲೆಯ ಮನೋಹರಪುರದಲ್ಲಿ ವಾಹನದೊಳಗೆ ಮಲಗಿದ್ದ ಗ್ರಾಹಂ ಸ್ಟೇನ್ಸ್ (58), ಅವರ ಮಕ್ಕಳಾದ ಫಿಲಿಪ್ (10) ಹಾಗೂ ತಿಮೋತಿ (6) ಅವರನ್ನು ದಾರಾ ಸಿಂಗ್ ನೇತೃತ್ವದ ಗುಂಪು ಸಜೀವ ದಹನ ಮಾಡಿತ್ತು. ಈ ಘಟನೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಸಿಬಿಐ ವಿಶೇಷ ನ್ಯಾಯಾಲಯ 2003ರಲ್ಲಿ ದಾರಾ ಸಿಂಗ್‌ಗೆ ಮರಣದಂಡನೆ ವಿಧಿಸಿತ್ತಾದರೂ, 2005ರಲ್ಲಿ ಒಡಿಶಾ ಹೈಕೋರ್ಟ್ ಅದನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿತ್ತು, ಬಳಿಕ ಸುಪ್ರೀಂ ಕೋರ್ಟ್ ಕೂಡ ಇದನ್ನು ಎತ್ತಿಹಿಡಿದಿತ್ತು. ಇದೇ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮತ್ತೊಬ್ಬ ಅಪರಾಧಿ ಮಹೇಂದ್ರ ಹೇಂಬ್ರಮ್‌ನನ್ನು ಉತ್ತಮ ನಡತೆಯ ಆಧಾರದ ಮೇಲೆ 2025ರ ಏಪ್ರಿಲ್‌ನಲ್ಲೇ ಒಡಿಶಾ ಸರ್ಕಾರ ಬಿಡುಗಡೆ ಮಾಡಿತ್ತು. ಅಲ್ಲದೆ, 2026ರ ಫೆಬ್ರವರಿಯಲ್ಲಿ ದಾರಾ ಸಿಂಗ್‌ನ ತವರೂರಾದ ಉತ್ತರ ಪ್ರದೇಶದ ಔರೈಯಾ ಜಿಲ್ಲಾಡಳಿತವೂ ಆತನ ಬಿಡುಗಡೆಗೆ ಸಮ್ಮತಿ ಸೂಚಿಸಿತ್ತು.
ಆದಾಗ್ಯೂ, ದಾರಾ ಸಿಂಗ್ ಬಿಡುಗಡೆ ವಿಷಯದಲ್ಲಿ ಒಡಿಶಾ ಸರ್ಕಾರ ತಕ್ಷಣದ ತೀರ್ಮಾನ ಕೈಗೊಂಡಿರಲಿಲ್ಲ. ಆತ 2024ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ತನ್ನ ಬಿಡುಗಡೆಗೆ ನಿರ್ದೇಶನ ಕೋರಿದ್ದರೂ, ರಾಜ್ಯ ಶಿಕ್ಷೆ ಪರಾಮರ್ಶೆ ಮಂಡಳಿಯು ಅರ್ಜಿ ನಿರ್ಧಾರವನ್ನು ಮುಂದೂಡುತ್ತಲೇ ಬಂದಿತ್ತು. ಕೊನೆಗೆ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್, “ಅರ್ಜಿಯನ್ನು ಹೀಗೆಯೇ ನನೆಗುದಿಗೊಳಿಸಲು ಸಾಧ್ಯವಿಲ್ಲ, ಸರ್ಕಾರ ತಕ್ಷಣವೇ ನಿರ್ಧಾರ ಕೈಗೊಳ್ಳಬೇಕು” ಎಂದು ಖಡಕ್ ಎಚ್ಚರಿಕೆ ನೀಡಿತ್ತು. ಈ ನಡುವೆ, ಆಗಸ್ಟ್ 15ರಂದು ಕೆಂದುಜಹಾರ್ ಜೈಲಿನ ಮುಂದೆ ‘ದಾರಾ ಸೇನಾ’ ಸಂಘಟನೆಯ 200ಕ್ಕೂ ಹೆಚ್ಚು ಬೆಂಬಲಿತರು ಜಮಾಯಿಸಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದರೆಂದು ಜಿಲ್ಲಾಡಳಿತ ವರದಿ ನೀಡಿತ್ತು. ಈ ವರದಿ ಹಾಗೂ ದಾರಾ ಸಿಂಗ್ ಪಾದ್ರಿ ಅರುಳ್ ದಾಸ್ ಮತ್ತು ಉಡುಪು ವ್ಯಾಪಾರಿ ಎಸ್ ಕೆ ರೆಹಮಾನ್ (SK Rahman) ಕೊಲೆ ಪ್ರಕರಣಗಳಲ್ಲೂ ಜೀವಾವಧಿ ಶಿಕ್ಷೆಗೊಳಗಾಗಿರುವುದನ್ನು ಪರಿಗಣಿಸಿದ ಮಂಡಳಿಯು, ಈತನ ಬಿಡುಗಡೆ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಬಹುದು ಎಂದು ತೀರ್ಮಾನಿಸಿದೆ.
200ಕ್ಕೂ ಹೆಚ್ಚು ಶಂಕಿತರ ಬಂಧನದ ಬೆನ್ನಲ್ಲೇ ‘ಶಹಜಾದ್ ಭಟ್ಟಿ ನೆಟ್‌ವರ್ಕ್’ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಗೃಹ ಸಚಿವಾಲಯ
ಯೆಮನ್‌ನಲ್ಲಿ ತೀವ್ರಗೊಂಡ ಸಂಘರ್ಷ: 14 ದಿನಗಳಲ್ಲಿ 57,000 ಮಕ್ಕಳು ಬೀದಿಗೆ, ಕನಿಷ್ಠ 9 ಮಕ್ಕಳ ಬಲಿ ಎಂದ ಯೂನಿಸೆಫ್!
ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಸರ್ಕಾರದ ಸಿದ್ಧತೆ: ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ
‘ಅಸ್ಸಲಾಮು ಅಲೈಕುಮ್’, ‘ಇನ್ಶಾ ಅಲ್ಲಾಹ್’ ಎಂದಿದ್ದಕ್ಕೆ ಕ್ರಮ?: ಹಿಂದೂ ಸಂಘಟನೆಯ ದೂರಿನ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ವರ್ಗಾವಣೆ
‘ದೇಶ ನಿಮಗೇನು ಮಾಡಿದೆ ಎಂದು ಕೇಳುವ ಬದಲು, ದೇಶಕ್ಕೆ ನಿಮ್ಮ ಕೊಡುಗೆ ಏನು ಎಂಬುದರತ್ತ ಗಮನಹರಿಸಿ’ : ಯುವಜನತೆಗೆ ನಿರ್ಮಲಾ ಸೀತಾರಾಮನ್ ಸಲಹೆ
ರಾಜಸ್ಥಾನ ಸ್ಥಳೀಯ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಒಂದೇ ಮತ; ವಾರ್ಡ್‌ನಲ್ಲಿ ಸ್ವಪಕ್ಷದ ಕಾರ್ಯಕರ್ತರೂ ಕೈಬಿಟ್ಟರಾ?
ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕರಿಸಿದೆ ಎಂದ ಆಯುಷ್ ಮಲಿಕ್: 31 ವರ್ಷದ ಯುವಕನನ್ನು ತಂದೆಯ ಅಕ್ರಮ ವಶದಿಂದ ಮುಕ್ತಗೊಳಿಸಿದ ಅಲಹಾಬಾದ್ ಹೈಕೋರ್ಟ್
ಈ ಹಿಂದೆ 2016, 2019, 2020, 2022 ಮತ್ತು 2023ರಲ್ಲೂ ಮಂಡಳಿಯು ದಾರಾ ಸಿಂಗ್ ಅರ್ಜಿಯನ್ನು ತಿರಸ್ಕರಿಸಿತ್ತು. ಆತನ ಜೈಲು ನಡತೆ ಸಾಮಾನ್ಯವಾಗಿ ಚೆನ್ನಾಗಿದೆ ಎಂದು ನಮೂದಿಸಲಾಗಿದ್ದರೂ, ಆತನ ವಿರುದ್ಧದ ಅಪರಾಧಗಳ ಗಂಭೀರತೆ ಮತ್ತು ಸಮಾಜದ ಮೇಲಾಗುವ ಧ್ರುವೀಕರಣದ ಪರಿಣಾಮಗಳನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ. ಸುಪ್ರೀಂ ಕೋರ್ಟ್‌ನ ಮುಂಬರುವ ವಿಚಾರಣೆ ವೇಳೆ ಒಡಿಶಾ ಸರ್ಕಾರವು ತನ್ನ ಈ ನಿರ್ಧಾರದ ಅಧಿಕೃತ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಲಿದೆ.
