ರಾಜ್ಯ ಸುದ್ದಿ

‘ನಾವು ಕೇಸು, ಜೈಲುಗಳಿಗೆ ಹೆದರುವವರಲ್ಲ’: ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಡಿ.ಕೆ. ಶಿವಕುಮಾರ್ ಆಕ್ರೋಶ

Reading…
Follow Us

ಸಾರಾಂಶ

ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ರಾಹುಲ್‌ ಗಾಂಧಿ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರಾಜಕೀಯ ದ್ವೇಷದಿಂದ ಕೂಡಿದ್ದು ಎಂದು ಆರೋಪಿಸಿದರು. ಕಾಂಗ್ರೆಸ್‌ ಪಕ್ಷವು ಕೇಸು, ಜೈಲುಗಳಿಗೆ ಹೆದರುವುದಿಲ್ಲ ಎಂದ ಅವರು, ರಾಹುಲ್‌ ಗಾಂಧಿ ಹುಟ್ಟು ಹೋರಾಟಗಾರರು ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಬಂಧಿಸಿದ ಹಲ್ದ್ವಾನಿ ಘಟನೆ ಮಾನವೀಯತೆಗೆ ಸಂಬಂಧಿಸಿದ ವಿಚಾರವಾಗಿದ್ದು, ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎಂದರು.

ಬೆಂಗಳೂರು: ‘ಕಾಂಗ್ರೆಸ್‌ ಪಕ್ಷದವರು ಕೇಸು, ಜೈಲುಗಳಿಗೆಲ್ಲ ಹೆದರುವವರಲ್ಲ. ರಾಹುಲ್‌ ಗಾಂಧಿಯವರು ಹುಟ್ಟು ಹೋರಾಟಗಾರರು’ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಉತ್ತರಾಖಂಡದ ಹಲ್ದ್ವಾನಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಭೆ ನಡೆಸಿದ್ದ ಮೈದಾನವನ್ನು ಕೆಲವರು ಶುದ್ಧೀಕರಣ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಅವರು ನೀಡಿದ್ದ ಹೇಳಿಕೆಯ ವಿರುದ್ಧ ರಾಜಕೀಯ ದ್ವೇಷದಿಂದ ಸುಳ್ಳು ಹಾಗೂ ದುರುದ್ದೇಶಪೂರಿತ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಿ, ಕೆಪಿಸಿಸಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಈ ದೇಶ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡುವುದು ನಮ್ಮ ಕರ್ತವ್ಯ. ನಾವೆಲ್ಲರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ. ಕಾಂಗ್ರೆಸ್‌ ಶಕ್ತಿಯೇ ಈ ದೇಶದ ಶಕ್ತಿ. ಕಾಂಗ್ರೆಸ್‌ ಇತಿಹಾಸವೇ ಈ ದೇಶದ ಇತಿಹಾಸ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

ಬ್ಯಾಂಕಿಂಗ್‌ನಲ್ಲಿ ಕನ್ನಡ ಸೇವೆಗೆ ಸಚಿವ ಶಿವರಾಜ್ ತಂಗಡಗಿ ಕರೆ
ರಾಜ್ಯ ಸುದ್ದಿ

ಬ್ಯಾಂಕಿಂಗ್‌ನಲ್ಲಿ ಕನ್ನಡ ಸೇವೆಗೆ ಸಚಿವ ಶಿವರಾಜ್ ತಂಗಡಗಿ ಕರೆ

ಜೈಪುರ ಪಾಲಿಕೆ ಸಮರ: 8 ಮುಸ್ಲಿಮರಿಗೆ ಬಿಜೆಪಿ ಟಿಕೆಟ್; ಪ್ರಮುಖ ಚುನಾವಣೆಗಳಿಂದ ದೂರವಿಟ್ಟಿದ್ದ ಕಮಲ ಪಡೆಗೆ ಈಗ ಅಲ್ಪಸಂಖ್ಯಾತರೇ ಬೇಕಾದರೇ?
ರಾಷ್ಟ್ರೀಯ ಸುದ್ದಿ

ಜೈಪುರ ಪಾಲಿಕೆ ಸಮರ: 8 ಮುಸ್ಲಿಮರಿಗೆ ಬಿಜೆಪಿ ಟಿಕೆಟ್; ಪ್ರಮುಖ ಚುನಾವಣೆಗಳಿಂದ ದೂರವಿಟ್ಟಿದ್ದ ಕಮಲ ಪಡೆಗೆ ಈಗ ಅಲ್ಪಸಂಖ್ಯಾತರೇ ಬೇಕಾದರೇ?

ವಿಪಕ್ಷಗಳ ವ್ಯಂಗ್ಯಕ್ಕೆ ಭಕ್ತಿಗೀತೆಯ ಬಳಕೆ: ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ ಬಿಜೆಪಿ
ಸಾಮಾಜಿಕ ತಾಣ

ವಿಪಕ್ಷಗಳ ವ್ಯಂಗ್ಯಕ್ಕೆ ಭಕ್ತಿಗೀತೆಯ ಬಳಕೆ: ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ ಬಿಜೆಪಿ

‘ನಾವು ಕೇಸು, ಜೈಲುಗಳಿಗೆ ಹೆದರುವವರಲ್ಲ’: ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಡಿ.ಕೆ. ಶಿವಕುಮಾರ್ ಆಕ್ರೋಶ
ರಾಜ್ಯ ಸುದ್ದಿ

‘ನಾವು ಕೇಸು, ಜೈಲುಗಳಿಗೆ ಹೆದರುವವರಲ್ಲ’: ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಡಿ.ಕೆ. ಶಿವಕುಮಾರ್ ಆಕ್ರೋಶ

ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೋಮುದ್ವೇಷದ ಫೇಸ್‌ಬುಕ್ ಪೋಸ್ಟ್: ಕೇರಳ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸೇವೆಯಿಂದ ಅಮಾನತು
ಸಾಮಾಜಿಕ ತಾಣ

ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೋಮುದ್ವೇಷದ ಫೇಸ್‌ಬುಕ್ ಪೋಸ್ಟ್: ಕೇರಳ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸೇವೆಯಿಂದ ಅಮಾನತು

ಗಂಗಾಜಲ ಹಿಡಿದು ‘ಲಂಚ ಹಂಚಿಕೆ’ ಪ್ರಮಾಣ ವಚನ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿಡಿಯೋ ವೈರಲ್, ತನಿಖೆಗೆ ಆದೇಶ
ವೀಡಿಯೊ

ಗಂಗಾಜಲ ಹಿಡಿದು ‘ಲಂಚ ಹಂಚಿಕೆ’ ಪ್ರಮಾಣ ವಚನ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿಡಿಯೋ ವೈರಲ್, ತನಿಖೆಗೆ ಆದೇಶ

ಕಾಂಗ್ರೆಸ್‌ ಪಕ್ಷವು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ರಾಷ್ಟ್ರಧ್ವಜ, ಸಂವಿಧಾನ ಹಾಗೂ ಎಲ್ಲ ವರ್ಗದ ಜನರ ಬದುಕಿಗೆ ಭದ್ರಬುನಾದಿ ಒದಗಿಸಿದೆ ಎಂದು ಅವರು ಹೇಳಿದರು. ಗಾಂಧಿ ಕುಟುಂಬವು ದೇಶ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಒಗ್ಗಟ್ಟಾಗಿ ಇಡಲು ಹಲವು ತ್ಯಾಗ-ಬಲಿದಾನಗಳನ್ನು ಮಾಡಿದೆ ಎಂದರು.

ಬೆಳಗಾವಿಯಲ್ಲಿ ನಡೆದ ‘ಜೈ ಬಾಪು – ಜೈ ಭೀಮ್ – ಜೈ ಸಂವಿಧಾನ’ ಕಾರ್ಯಕ್ರಮವನ್ನು ನೆನಪಿಸಿಕೊಂಡ ಅವರು, 1924ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನಕ್ಕೆ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದರು. ಇಂದು ಅದೇ ಅಧ್ಯಕ್ಷ ಸ್ಥಾನವನ್ನು ಮಲ್ಲಿಕಾರ್ಜುನ ಖರ್ಗೆ ಅವರು ಅಲಂಕರಿಸಿದ್ದಾರೆ ಎಂದು ಹೇಳಿದರು.

‘ಇಂದಿನ ಪ್ರತಿಭಟನೆ ಕೇವಲ ರಾಹುಲ್‌ ಗಾಂಧಿಯವರ ಬಗ್ಗೆ ಅಲ್ಲ. ನಾವು ಕಾಂಗ್ರೆಸ್ಸಿಗರು ಕೇಸು, ಜೈಲುಗಳಿಗೆ ಹೆದರುವವರಲ್ಲ. ಬಿಜೆಪಿಯವರು ನೂರು ಕೇಸುಗಳನ್ನು ದಾಖಲಿಸಿದರೂ ರಾಹುಲ್‌ ಗಾಂಧಿಯವರು ಹೆದರುವುದಿಲ್ಲ. ಅವರ ರಕ್ತದಲ್ಲೇ ಹೋರಾಟವಿದೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

‘ನಿಮ್ಮಂತೆ ಹೆದರಿ ಕ್ಷಮಾಪಣಾ ಪತ್ರ ಬರೆಯುವವರಲ್ಲ ನಮ್ಮ ರಾಹುಲ್‌ ಗಾಂಧಿ. ಅವರು ಹುಟ್ಟು ಹೋರಾಟಗಾರರು. He is a born fighter, he is living as a fighter, he will die as a fighter’ ಎಂದು ಅವರು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ನಡೆದ ಘಟನೆ ಕೇವಲ ದೇಶಕ್ಕೆ ಸಂಬಂಧಿಸಿದ ವಿಚಾರವಲ್ಲ, ಇಡೀ ಜಗತ್ತಿನ ಮಾನವೀಯತೆಗೆ ಸಂಬಂಧಿಸಿದ ವಿಚಾರವಾಗಿದೆ ಎಂದು ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.

ರಾಹುಲ್‌ ಗಾಂಧಿ ವಿರುದ್ಧ ರಾಜಕೀಯ ದ್ವೇಷದಿಂದ ಸುಳ್ಳು ಹಾಗೂ ದುರುದ್ದೇಶಪೂರಿತ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಿದ ಅವರು, ಈ ವಿಚಾರದಲ್ಲಿ ನ್ಯಾಯಾಲಯವು ಕಾಂಗ್ರೆಸ್‌ಗೆ ನ್ಯಾಯ ಒದಗಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ತಪ್ಪು ಮಾಡಿದ್ದರೆ ಅದನ್ನು ತಿದ್ದುಕೊಳ್ಳಬೇಕು. ಬಿಜೆಪಿಯವರ ಅಂತ್ಯದ ದಿನಗಳು ಆರಂಭಗೊಂಡಿವೆ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ರಾಷ್ಟ್ರೀಯ ಸುದ್ದಿ

ಜೈಪುರ ಪಾಲಿಕೆ ಸಮರ: 8 ಮುಸ್ಲಿಮರಿಗೆ ಬಿಜೆಪಿ ಟಿಕೆಟ್; ಪ್ರಮುಖ ಚುನಾವಣೆಗಳಿಂದ ದೂರವಿಟ್ಟಿದ್ದ ಕಮಲ ಪಡೆಗೆ ಈಗ ಅಲ್ಪಸಂಖ್ಯಾತರೇ ಬೇಕಾದರೇ?

ಸಾಮಾಜಿಕ ತಾಣ

ವಿಪಕ್ಷಗಳ ವ್ಯಂಗ್ಯಕ್ಕೆ ಭಕ್ತಿಗೀತೆಯ ಬಳಕೆ: ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ ಬಿಜೆಪಿ

ರಾಜ್ಯ ಸುದ್ದಿ

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತ, 2029ರಲ್ಲಿ ರಾಹುಲ್ ಗಾಂಧಿ ದೇಶದ ಪ್ರಧಾನಿ: ಡಿಕೆಶಿ ಭವಿಷ್ಯ!

ರಾಜ್ಯ ಸುದ್ದಿ

SIR: 1 ಕೋಟಿಗೂ ಹೆಚ್ಚು ಹೆಸರುಗಳ ASDDO ವರ್ಗೀಕರಣ; ಪರಿಶೀಲನೆಗೆ ಹೆಚ್ಚಿನ ಕಾಲಾವಕಾಶ ಮತ್ತು ನಿಗದಿತ ಪ್ರಕ್ರಿಯೆ ಅನುಸರಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಸಿಎಂ ಪತ್ರ

ರಾಷ್ಟ್ರೀಯ ಸುದ್ದಿ

ಉತ್ತರಾಖಂಡ್ SIR: ಮುಸ್ಲಿಂ ಮತದಾರರನ್ನೇ ಗುರಿಯಾಗಿಸಿ 6,500 ಆಕ್ಷೇಪಣೆ ಸಲ್ಲಿಸಿದ 5 ಬಿಜೆಪಿ ಕಾರ್ಯಕರ್ತರು

From Across Varadigara

ರಾಷ್ಟ್ರೀಯ ಸುದ್ದಿ

CJP ಒಂದೆರಡು ರಾಜ್ಯಗಳಲ್ಲಿ ಅಧಿಕಾರ ಹಿಡಿದರೆ ಅಚ್ಚರಿಯೇನಿಲ್ಲ; ರಾಷ್ಟ್ರೀಯ ಮಟ್ಟದಲ್ಲಿ ‘ತೃತೀಯ ಶಕ್ತಿ’ಯಾಗುವುದು ಅನುಮಾನ: ಪಿ. ಚಿದಂಬರಂ

ಅಂತಾರಾಷ್ಟ್ರೀಯ

ನೇಪಾಳ ಭೀಕರ ಪ್ರವಾಹ: 105 ಭಾರತೀಯರು ಸೇರಿ 384 ಪ್ರವಾಸಿಗರು ನಾಪತ್ತೆ, ಬಿಹಾರದಲ್ಲೂ ಹೈಅಲರ್ಟ್

ರಾಜ್ಯ ಸುದ್ದಿ

SIR: 1 ಕೋಟಿಗೂ ಹೆಚ್ಚು ಹೆಸರುಗಳ ASDDO ವರ್ಗೀಕರಣ; ಪರಿಶೀಲನೆಗೆ ಹೆಚ್ಚಿನ ಕಾಲಾವಕಾಶ ಮತ್ತು ನಿಗದಿತ ಪ್ರಕ್ರಿಯೆ ಅನುಸರಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಸಿಎಂ ಪತ್ರ

ರಾಷ್ಟ್ರೀಯ ಸುದ್ದಿ

ಮತಾಂತರ ನಿಷೇಧ ಕಾನೂನಿನ ದುರುಪಯೋಗ ಹಾಗೂ ಬಲಪಂಥೀಯರ ದಾಳಿಯ ಭೀತಿ: ಮುಂಬೈ ಚರ್ಚ್‌ಗಳಲ್ಲಿ ಸ್ವಯಂ ಘೋಷಣೆ ಪತ್ರ, ಆಧಾರ್‌ ಸಂಗ್ರಹ!

ವೀಡಿಯೊ

ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು

ಸುತ್ತ - ಮುತ್ತ

Coastal Friends Mangaloreಗೆ ನೂತನ ಸಾರಥ್ಯ: ಅಧ್ಯಕ್ಷರಾಗಿ ಶಮೀರ್ ಲಕ್ಕಿಸ್ಟಾರ್ ಆಯ್ಕೆ

ರಾಜ್ಯ ಸುದ್ದಿ

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಆಡಳಿತ, 2029ರಲ್ಲಿ ರಾಹುಲ್ ಗಾಂಧಿ ದೇಶದ ಪ್ರಧಾನಿ: ಡಿಕೆಶಿ ಭವಿಷ್ಯ!

ವಿಶೇಷ ಲೇಖನ

FIRಗಳೇ ಇಲ್ಲದೇ RSS ಗಲಭೆಯನ್ನು ಹೇಗೆ ರೂಪಿಸುತ್ತೆ ? ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿಕೆಯ ಅಸಲಿಯತ್ತೇನು?

ವೀಡಿಯೊ

ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ

ರಾಷ್ಟ್ರೀಯ ಸುದ್ದಿ

‘ಯುವಜನರ ಧ್ವನಿಗೆ ಬೆದರಿದ ಸರ್ಕಾರ’: ದೆಹಲಿಯಲ್ಲಿ ಸಿಜೆಪಿ ಸಭೆಗೆ ಬಿಜೆಪಿ ತಡೆ – ಅಭಿಜಿತ್ ದೀಪ್ಕೆ ಗಂಭೀರ ಆರೋಪ

ರಾಷ್ಟ್ರೀಯ ಸುದ್ದಿ

ಪ್ರತಿ ಗಂಟೆಗೆ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ 21 ಮಂದಿ! ರೋಗ, ಯುದ್ಧಕ್ಕಿಂತಲೂ ಭೀಕರವಾಯಿತೇ ಭಾರತದ ರಸ್ತೆ ಅಪಘಾತ?

ರಾಜ್ಯ ಸುದ್ದಿ

ಬಾಗಲಕೋಟೆ: ತರಗತಿ ವೇಳೆಯೇ ಶಾಲಾ ಛಾವಣಿ ಕುಸಿತ, ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ವೀಡಿಯೊ

ಗಂಗಾಜಲ ಹಿಡಿದು ‘ಲಂಚ ಹಂಚಿಕೆ’ ಪ್ರಮಾಣ ವಚನ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿಡಿಯೋ ವೈರಲ್, ತನಿಖೆಗೆ ಆದೇಶ

ರಾಜ್ಯ ಸುದ್ದಿ

“ಕುಮಾರಸ್ವಾಮಿಯವರೇ, ನನ್ನ ಮೈಗೆ ಕೆಸರು ಅಂಟಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ” : ಕೆಪಿಎಸ್‌ಸಿ ಅಕ್ರಮದ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

ರಾಷ್ಟ್ರೀಯ ಸುದ್ದಿ

ಅತ್ಯಾಚಾರ ದೋಷಿ ರಾಮ್ ರಹೀಮ್‌ಗೆ ಮತ್ತೆ 21 ದಿನಗಳ ಪರೋಲ್: 5 ವರ್ಷಗಳಲ್ಲಿ 17ನೇ ಬಾರಿಗೆ ಜೈಲಿನಿಂದ ಬಿಡುಗಡೆ!

ರಾಷ್ಟ್ರೀಯ ಸುದ್ದಿ

ಉತ್ತರಾಖಂಡ್ SIR: ಮುಸ್ಲಿಂ ಮತದಾರರನ್ನೇ ಗುರಿಯಾಗಿಸಿ 6,500 ಆಕ್ಷೇಪಣೆ ಸಲ್ಲಿಸಿದ 5 ಬಿಜೆಪಿ ಕಾರ್ಯಕರ್ತರು

ಸಾಮಾಜಿಕ ತಾಣ

ವಿಪಕ್ಷಗಳ ವ್ಯಂಗ್ಯಕ್ಕೆ ಭಕ್ತಿಗೀತೆಯ ಬಳಕೆ: ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ ಬಿಜೆಪಿ

ರಾಷ್ಟ್ರೀಯ ಸುದ್ದಿ

ಪಾಕಿಸ್ತಾನದ ಗೂಢಚಾರಿಕೆ ಜಾಲಕ್ಕೆ ಭಾರತೀಯ ಸಿಮ್ ಕಾರ್ಡ್: ರಾಜಸ್ಥಾನದಲ್ಲಿ ಶಂಕಿತ ISI ಏಜೆಂಟ್ ಬಲ್ವಿಂದರ್ ಸಿಂಗ್ ಬಂಧನ

ರಾಜ್ಯ ಸುದ್ದಿ

ಮಂಗಳೂರು ರೈಲ್ವೆ ವ್ಯಾಪ್ತಿ ವರ್ಗಾವಣೆ: ತೀರ್ಮಾನ ತಡೆಹಿಡಿಯಲು ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ಕೇರಳ ಸಿಎಂ ವಿ. ಡಿ. ಸತೀಶನ್

ರಾಷ್ಟ್ರೀಯ ಸುದ್ದಿ

“ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನನಗೇ ಈ ಸ್ಥಿತಿಯಾದರೆ ಸಾಮಾನ್ಯರ ಕಥೆಯೇನು?”: ಪಂಜಾಬ್‌ SIR ಗೊಂದಲ; ಮಾಜಿ ರಾಯಭಾರಿಗೇ ಪೌರತ್ವ ಸಾಬೀತುಪಡಿಸುವ ಸ್ಥಿತಿ