ಆಕ್ರಮಿತ ಫೆಲೆಸ್ತೀನ್ ಪ್ರದೇಶದಲ್ಲಿ ಇಸ್ರೇಲ್ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ವಿವಾದಾತ್ಮಕ ‘E1’ ವಸಾಹತು ನಿರ್ಮಾಣ ಯೋಜನೆ ಮತ್ತು ವಿಸ್ತರಣಾ ನೀತಿಯನ್ನು ಎಂಟು ಪ್ರಮುಖ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ. ಸೌದಿ ಅರೇಬಿಯಾ, ಸಂಯುಕ್ತ ಅರಬ್ ಎಮಿರೇಟ್ಸ್ (ಯುಎಇ), ಕತಾರ್, ಜೋರ್ಡಾನ್, ಈಜಿಪ್ಟ್, ತುರ್ಕಿ, ಇಂಡೋನೇಷ್ಯಾ ಹಾಗೂ ಪಾಕಿಸ್ತಾನದ ವಿದೇಶಾಂಗ ಸಚಿವರು ಆಗಸ್ಟ್ 21ರಂದು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಇಸ್ರೇಲ್‌ನ ಈ ಕ್ರಮವನ್ನು ಒಕ್ಕೊರಲಿನಿಂದ ತಳ್ಳಿಹಾಕಿದ್ದಾರೆ.
ಪೂರ್ವ ಜರುಸಲೇಮ್‌ನ ಪೂರ್ವ ಭಾಗದಲ್ಲಿ 1,200ಕ್ಕೂ ಹೆಚ್ಚು ಹೊಸ ಮನೆಗಳನ್ನು ನಿರ್ಮಿಸಲು ಇಸ್ರೇಲ್ ಇತ್ತೀಚೆಗೆ ಟೆಂಡರ್ ಆಹ್ವಾನಿಸಿತ್ತು. ಈ ನಿರ್ಮಾಣ ಯೋಜನೆಯು ಪಶ್ಚಿಮ ದಂಡೆ ಮತ್ತು ಪೂರ್ವ ಜರುಸಲೇಮ್ ನಡುವಿನ ಫೆಲೆಸ್ತೀನ್‌ನ ಭೂ ಸಂಪರ್ಕವನ್ನು ಸಂಪೂರ್ಣವಾಗಿ ಕಡಿತಗೊಳಿಸುತ್ತದೆ. 1967ರ ಗಡಿ ರೇಖೆಯ ಆಧಾರದ ಮೇಲೆ ಸ್ವತಂತ್ರ ಹಾಗೂ ಸಾರ್ವಭೌಮ ಫೆಲೆಸ್ತೀನ್ ರಾಷ್ಟ್ರ ರಚನೆಯಾಗುವ ಕನಸಿಗೆ ಈ ಯೋಜನೆ ದೊಡ್ಡ ಕಂಟಕವಾಗಲಿದೆ. ಇಸ್ರೇಲ್‌ನ ಈ ಆಕ್ರಮಣಕಾರಿ ನಡವಳಿಕೆಯು ಮಧ್ಯಪ್ರಾಚ್ಯ ಪ್ರದೇಶದ ಶಾಂತಿ ಮತ್ತು ಭದ್ರತೆಗೆ ತೀವ್ರ ಬೆದರಿಕೆಯನ್ನುಡ್ಡಿದೆ ಎಂದು ಜಂಟಿ ಪ್ರಕಟಣೆಯಲ್ಲಿ ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ, ಇಸ್ರೇಲ್ ಆಡಳಿತದ ಬೆಂಬಲದೊಂದಿಗೆ ಇಸ್ರೇಲಿ ವಸಾಹತುದಾರರು ಫೆಲೆಸ್ತೀನ್ ನಾಗರಿಕರು ಹಾಗೂ ಅವರ ಆಸ್ತಿಪಾಸ್ತಿಗಳ ಮೇಲೆ ನಡೆಸುತ್ತಿರುವ ಹಿಂಸಾಚಾರವನ್ನು ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ. ಇದು ಅಂತರರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ನಿರ್ಣಯಗಳ ನೇರ ಉಲ್ಲಂಘನೆಯಾಗಿದೆ. ಬಲವಂತದ ಸ್ಥಳಾಂತರ ಮತ್ತು ಭೂಮಿ ವಶಪಡಿಸಿಕೊಳ್ಳುವುದನ್ನು ವಿರೋಧಿಸುವ ಅಂತರರಾಷ್ಟ್ರೀಯ ಶಾಂತಿ ಪ್ರಯತ್ನಗಳಿಗೆ ಇಸ್ರೇಲ್‌ನ ಏಕಪಕ್ಷೀಯ ನಿರ್ಧಾರಗಳು ಸವಾಲಾಗಿ ಪರಿಣಮಿಸಿವೆ. ದ್ವಿ-ರಾಷ್ಟ್ರ ಪರಿಹಾರ ಸೂತ್ರವೇ ಈ ಸಂಘರ್ಷಕ್ಕೆ ಏಕೈಕ ಶಾಶ್ವತ ಪರಿಹಾರ ಎಂದು ಪ್ರಕಟಣೆ ಪುನರುಚ್ಚರಿಸಿದೆ.
ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ
ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು
ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ
ಹೊಲದಲ್ಲಿ ಹೂತಿಟ್ಟಿದ್ದ ₹5 ಲಕ್ಷ ನಗದು ಗೆದ್ದಲು ಪಾಲು: ರಾಜಸ್ಥಾನದ ರೈತನಿಗೆ ಆಘಾತ
ಇಸ್ರೇಲ್‌ನ ‘E1’ ವಸಾಹತು ಯೋಜನೆಗೆ ಯುಎಇ, ಸೌದಿ ಅರೇಬಿಯಾ ಸಹಿತ ಎಂಟು ಅರಬ್-ಮುಸ್ಲಿಂ ರಾಷ್ಟ್ರಗಳ ತೀವ್ರ ವಿರೋಧ; ಜಾಗತಿಕ ಶಾಂತಿಗೆ ಧಕ್ಕೆ ಎಂದು ಜಂಟಿ ಎಚ್ಚರಿಕೆ
“ಶುದ್ಧ ಪೆಟ್ರೋಲ್ ನಿಮ್ಮ ಅಪ್ಪನ ಮನೆಯಿಂದ ಬರುತ್ತಾ?”: ಇಥನಾಲ್ ನೀತಿ ಸಮರ್ಥಿಸಲು ಹೋಗಿ ವಿವಾದಕ್ಕೀಡಾದ ಬಿಜೆಪಿ ಸಂಸದ
ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು
ಅಕ್ರಮ ವಸಾಹತು ನಿರ್ಮಾಣ ಚಟುವಟಿಕೆಗಳಿಗೆ ನಿಧಿ ಒದಗಿಸುವುದನ್ನು ತಕ್ಷಣವೇ ತಡೆಹಿಡಿಯಬೇಕು ಮತ್ತು ಅಕ್ರಮ ಯೋಜನೆಯಲ್ಲಿ ಭಾಗಿಯಾದ ಸಂಸ್ಥೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಬಂಧಗಳನ್ನು ಹೇರಬೇಕು ಎಂದು ರಾಷ್ಟ್ರಗಳು ಒತ್ತಾಯಿಸಿವೆ. ‘E1’ ಯೋಜನೆಯನ್ನು ತಕ್ಷಣವೇ ಹಿಂಪಡೆಯುವಂತೆ ಇಸ್ರೇಲ್ ಮೇಲೆ ಒತ್ತಡ ಹೇರಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹಾಗೂ ಜಾಗತಿಕ ಸಮುದಾಯ ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಜಂಟಿ ಪ್ರಕಟಣೆ ಆಗ್ರಹಿಸಿದೆ.
