ಪಂಜಾಬ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ತಮಗೆ ಎದುರಾಗಿರುವ ಆಡಳಿತಾತ್ಮಕ ತೊಡಕುಗಳ ಕುರಿತು ಭಾರತದ ಮಾಜಿ ಹಿರಿಯ ರಾಜತಾಂತ್ರಿಕ ಅಧಿಕಾರಿ ನವದೀಪ್ ಸೂರಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೂರು ದೇಶಗಳಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದರೂ ಸಹ, ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಹೆಚ್ಚುವರಿ ದಾಖಲೆಗಳನ್ನು ಕೇಳಲಾಗುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.
ಮಾಜಿ ರಾಯಭಾರಿ ನವದೀಪ್ ಸೂರಿ ಅವರು ಅಮೃತಸರದಲ್ಲಿ ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣ ‘ಎಕ್ಸ್'(X)ನಲ್ಲಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ತಾವು ಬೂತ್ ಮಟ್ಟದ ಅಧಿಕಾರಿಗೆ (BLO) ಮತದಾರರ ಗುರುತಿನ ಚೀಟಿ (Voter ID) ಮತ್ತು ಆಧಾರ ಕಾರ್ಡ್ ಸಲ್ಲಿಸಿದ್ದಾಗ ಎಲ್ಲವೂ ಸರಿಯಾಗಿದೆ ಎಂದು ಹೇಳಲಾಗಿತ್ತು. ಆದರೆ, ನಂತರ ಬಂದ ಅಧಿಕೃತ ಸಂದೇಶವೊಂದರಲ್ಲಿ ತಮ್ಮ ವಿವರಗಳು 2003ರ ಪರಿಷ್ಕೃತ ಮತದಾರರ ಪಟ್ಟಿಯ ದಾಖಲೆಗಳಿಗೆ ತಾಳೆಯಾಗುತ್ತಿಲ್ಲ ಎಂದು ತಿಳಿಸಲಾಗಿದೆ.
ವಿವರಗಳು ತಾಳೆಯಾಗದ ಕಾರಣ ತಮ್ಮ ಪೌರತ್ವವನ್ನು ಸಾಬೀತುಪಡಿಸುವ ಇತರ ದಾಖಲೆಗಳನ್ನು ಸಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. 2003ರಲ್ಲಿ ತಾವು ಭಾರತದ ರಾಜತಾಂತ್ರಿಕ ಅಧಿಕಾರಿಯಾಗಿ ವಿದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ಕಾರಣ ಭಾರತದಲ್ಲೇ ಇರಲಿಲ್ಲ ಎಂದು ತಿಳಿಸಿದಾಗ, ಕೊನೆಗೆ ಪಾಸ್‌ಪೋರ್ಟ್ ಪ್ರತಿಯನ್ನು ನೀಡುವಂತೆ ಕೇಳಲಾಗಿದೆ ಎಂದು ಸೂರಿ ತಿಳಿಸಿದ್ದಾರೆ.
“ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನನಗೇ ಈ ಸ್ಥಿತಿಯಾದರೆ ಸಾಮಾನ್ಯರ ಕಥೆಯೇನು?”: ಪಂಜಾಬ್ SIR ಗೊಂದಲ; ಮಾಜಿ ರಾಯಭಾರಿಗೇ ಪೌರತ್ವ ಸಾಬೀತುಪಡಿಸುವ ಸ್ಥಿತಿ
ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ
ಹೊಲದಲ್ಲಿ ಹೂತಿಟ್ಟಿದ್ದ ₹5 ಲಕ್ಷ ನಗದು ಗೆದ್ದಲು ಪಾಲು: ರಾಜಸ್ಥಾನದ ರೈತನಿಗೆ ಆಘಾತ
ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು
“ಶುದ್ಧ ಪೆಟ್ರೋಲ್ ನಿಮ್ಮ ಅಪ್ಪನ ಮನೆಯಿಂದ ಬರುತ್ತಾ?”: ಇಥನಾಲ್ ನೀತಿ ಸಮರ್ಥಿಸಲು ಹೋಗಿ ವಿವಾದಕ್ಕೀಡಾದ ಬಿಜೆಪಿ ಸಂಸದ
ಉತ್ತರಾಖಂಡ್ SIR: ಮುಸ್ಲಿಂ ಮತದಾರರನ್ನೇ ಗುರಿಯಾಗಿಸಿ 6,500 ಆಕ್ಷೇಪಣೆ ಸಲ್ಲಿಸಿದ 5 ಬಿಜೆಪಿ ಕಾರ್ಯಕರ್ತರು
ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ
ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು
ಕೇಂದ್ರ ಸಚಿವರ ಬಂಗಲೆಗಳ ನಿರ್ವಹಣೆ, ದುರಸ್ತಿಗೆ ಶತಕೋಟಿ ವೆಚ್ಚ; 2025-26ರಲ್ಲಿ ದಾಖಲೆಯ 92.35 ಕೋಟಿ ರೂ. ಖರ್ಚು: RTI ಮೂಲಕ ಮಾಹಿತಿ ಬಹಿರಂಗ
ಇಸ್ರೇಲ್‌ನ ‘E1’ ವಸಾಹತು ಯೋಜನೆಗೆ ಯುಎಇ, ಸೌದಿ ಅರೇಬಿಯಾ ಸಹಿತ ಎಂಟು ಅರಬ್-ಮುಸ್ಲಿಂ ರಾಷ್ಟ್ರಗಳ ತೀವ್ರ ವಿರೋಧ; ಜಾಗತಿಕ ಶಾಂತಿಗೆ ಧಕ್ಕೆ ಎಂದು ಜಂಟಿ ಎಚ್ಚರಿಕೆ
“ಇಮ್ರಾನ್ ಖಾನ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ”: ಪಾಕ್ ಪ್ರಧಾನಿಗೆ ಭಾರತದ ಗವಾಸ್ಕರ್, ಕಪಿಲ್ ದೇವ್ ಸಹಿತ 21 ಕ್ರಿಕೆಟ್ ದಿಗ್ಗಜರ ಪತ್ರ

ಆಸ್ಟ್ರೇಲಿಯಾ, ಯುಎಇ ಮತ್ತು ಈಜಿಪ್ಟ್ ದೇಶಗಳಲ್ಲಿ ಭಾರತದ ರಾಯಭಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿದ ನವದೀಪ್ ಸೂರಿ, “ನನ್ನಲ್ಲಿ ಇತರ ದಾಖಲೆಗಳಿರುವುದರಿಂದ ತೊಂದರೆಯಿಲ್ಲ. ಆದರೆ ಮೂರು ಪ್ರಮುಖ ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನನಗೇ ಪೌರತ್ವ ಸಾಬೀತುಪಡಿಸಲು ಇಷ್ಟೊಂದು ಕಷ್ಟವಾಗುತ್ತಿದ್ದರೆ, ಇನ್ನು ದೇಶದ ಸಾಮಾನ್ಯ ಪ್ರಜೆಯ ಗತಿಯೇನು?” ಎಂದು ಪ್ರಕ್ರಿಯೆಯ ಕ್ಲಿಷ್ಟತೆಯನ್ನು ಪ್ರಶ್ನಿಸಿದ್ದಾರೆ. ‘ಈಸ್ ಆಫ್ ಲಿವಿಂಗ್’ (ಸುಲಭ ಜೀವನ ವಿಧಾನ) ಎಂಬ ಸರ್ಕಾರದ ಆಶಯವನ್ನು ಪರೋಕ್ಷವಾಗಿ ವ್ಯಂಗ್ಯವಾಡಿದ್ದಾರೆ.
ಪ್ರಸ್ತುತ ಪಂಜಾಬ್‌ನಾದ್ಯಂತ 117 ವಿಧಾನಸಭಾ ಕ್ಷೇತ್ರಗಳಲ್ಲಿ SIR ನಡೆಯುತ್ತಿದ್ದು, ಆಗಸ್ಟ್ 13 ರಿಂದ ಸೆಪ್ಟೆಂಬರ್ 12 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಮತದಾರರಿಗೆ ಅವಕಾಶ ನೀಡಲಾಗಿದೆ. ಸುಮಾರು 20 ಲಕ್ಷಕ್ಕೂ ಹೆಚ್ಚು ಮತದಾರರ ವಿವರಗಳು ಹಳೆಯ ಪಟ್ಟಿಯೊಂದಿಗೆ ತಾಳೆಯಾಗದ ಕಾರಣ ಪರಿಶೀಲನೆಗೆ ಒಳಪಟ್ಟಿವೆ.
