ವರದಿಗಾರ-ಮೇ.05: ವಿಭಿನ್ನ ರುಚಿಗಳನ್ನು ಒಂದೇ ಮಳಿಗೆಯಡಿಯಲ್ಲಿ ನೀಡುವ ಉದ್ದೇಶದಿಂದ Anfal Restauant ತನ್ನ ಸೇವೆಯನ್ನು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ NH 75, ಸೂರಿಕುಮೇರ್ ಮಾಣಿಯಲ್ಲಿ ಮೇ 3 ರಂದು ನಡೆದ ಅದ್ಧೂರಿ ಉದ್ಘಾಟನಾ ಸಮಾರಂಭದ ಮೂಲಕ ಆರಂಭಿಸಿದೆ.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಫರೀದ್ ಉದ್ಘಾಟನೆ ನೆರವೇರಿಸಿ, ಗುಣಮಟ್ಟದ ಆಹಾರ ನೀಡುವುದು ಸಂಸ್ಥೆಯ ಧ್ಯೇಯವಾಗಿರುವುದರಿಂದ ಇದು ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ. ರಾಷ್ಟೀಯ ಹೆದ್ದಾರಿಯಲ್ಲಿ ಅಗತ್ಯವಾಗಿ ಬೇಕಾಗಿದ್ದ ವವಸ್ಥಿತ ರೆಸ್ಟೋರೆಂಟ್ ಇದಾಗಿದ್ದು ಅದನ್ನು ಅನ್ಫಾಲ್ ರೆಸ್ಟೋರೆಂಟ್ ಇಂದು ಪೂರೈಸಿದೆ. ಸಂಸ್ಥೆಗೆ ಎಲ್ಲಾ ರೀತಿಯ ಶುಭವನ್ನು ಕೋರುತ್ತೇನೆ ಎಂದು ಯುಟಿ ಖಾದರ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಅವರು, ಖ್ಯಾತ ಸಾಹಿತಿ ಯೋಗೇಶ್ ಮಾಸ್ಟರ್ ರವರು ಬರೆದ “ನನ್ನ ಪ್ರೀತಿಯ ಪ್ರವಾದಿ” ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಅನುದಾನ ತಂದ ಮಾಜಿ ಶಾಸಕನಿಗೇ ಉದ್ಘಾಟನೆಯ ಅವಕಾಶ ನೀಡಿದ ಹಾಲಿ ಶಾಸಕ : ರಾಜಕೀಯದಲ್ಲೊಂದು “ಕೇರಳ ಸ್ಟೋರಿ”!
‘ಮುಸ್ಲಿಮರು ಗರ್ಬಾಗೆ ಬರುವುದಿದ್ದರೆ ಸಹೋದರಿಯರನ್ನೂ, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧರಿದ್ದಾರೆ’: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ
ವಿಚಾರಣೆಯೇ ಆರಂಭವಾಗದೆ 6 ವರ್ಷಗಳ ಬಂಧನ, ಸಿಕ್ಕಿದ್ದು 7 ದಿನಗಳ ರಿಲೀಫ್: ಶರ್ಜೀಲ್ ಇಮಾಮ್‌ಗೆ ಮಧ್ಯಂತರ ಜಾಮೀನು
ಧಾರ್ಮಿಕ ಕಾರಣಗಳಿಂದ ‘ವಂದೇ ಮಾತರಂ’ ಹಾಡದಿದ್ದರೆ ದಂಡನಾತ್ಮಕ ಕ್ರಮ ಕೈಗೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್

ಮೂವರು ಸ್ಥಳೀಯ ಸಾಧಕರನ್ನು ಗುರುತಿಸಿ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಿದರು.
ಸಮಾರಂಭದಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಗ್ಯಾರಂಟಿ ನ್ಯೂಸ್ ಚಾನೆಲ್ ಇದರ ಎಡಿಟರ್ ಇನ್ ಚೀಫ್ ರಾಧಾ ಹಿರೇಗೌಡರ್, ಸುದ್ದಿ ನಿರೂಪಕಿ ಪೂಜಾ ಹಿರೇಗೌಡರ್, ಪತ್ರಕರ್ತ ರಾ ಚಿಂತನ್,ಎಸ್‌ಡಿಪಿಐ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಂಕಜಾಲ್, ರಿಯಾಝ್ ಫರಂಗಿಪೇಟೆ, ಮಾಜಿ ಮೇಯರ್ ಅಶ್ರಫ್, ನಮ್ಮ ಧ್ವನಿಯ ಎಂ ಮಹೇಶ್, ಎಂ ಎಸ್ ಮುಹಮ್ಮದ್ ಸೇರಿದಂತೆ ಹಲವು ರಾಜಕೀಯ, ಸಾಮಾಜಿಕ ನಾಯಕರು ಉಪಸ್ಥಿತರಿದ್ದರು.
ಕುಟುಂಬದೊಂದಿಗೆ, ಸ್ನೇಹಿತರೊಂದಿಗೆ ರುಚಿಕರವಾದ ಸಮಯ ಕಳೆಯಲು ಇದು ಸೂಕ್ತವಾದ ಸ್ಥಳವಾಗಿರಲಿದೆ. ಇಲ್ಲಿ ಇಂಡಿಯನ್, ಚೈನೀಸ್ ಹಾಗೂ ಅರೇಬಿಯನ್ ಖಾದ್ಯಗಳು ವಿಶೇಷವಾಗಿ ಲಭ್ಯವಿದ್ದು, ಪ್ರತಿಯೊಬ್ಬರ ರುಚಿಗೆ ತಕ್ಕಂತೆ ವೈವಿಧ್ಯಮಯ ಮೆನು ಸಿದ್ಧಪಡಿಸಲಾಗಿದೆ. ಸ್ವಚ್ಛತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದ್ದು, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ದೃಢ ಸಂಕಲ್ಪದೊಂದಿಗೆ ಈ ರೆಸ್ಟೋರೆಂಟ್ ಶುಭಾರಂಭಗೊಂಡಿದೆ ಎಂದು ಸಂಸ್ಥೆಯು ತಿಳಿಸಿದೆ.

ಅದೇ ರೀತಿ, ಗ್ರಾಹಕರ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಎಸಿ ಫ್ಯಾಮಿಲಿ ರೂಂ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಪಾರ್ಟಿ ಹಾಲ್, ಮಜ್ಲಿಸ್ ವ್ಯವಸ್ಥೆ, ಪ್ರಾರ್ಥನಾ ಕೊಠಡಿ ಹಾಗೂ ಶೌಚಾಲಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಕುಟುಂಬ ಸಮಾರಂಭಗಳು, ಸ್ನೇಹಿತರ ಕೂಟಗಳು ಮತ್ತು ವಿಶೇಷ ಸಂದರ್ಭಗಳಿಗೆ ಇದು ಅತ್ಯುತ್ತಮ ಸ್ಥಳವಾಗಲಿದೆ.
ಆಹಾರದ ರುಚಿಯೊಂದಿಗೆ ಮನಸ್ಸಿಗೆ ಹತ್ತಿರವಾಗುವ ಆತಿಥ್ಯವನ್ನು ಅನುಭವಿಸಲು ಅನ್ಫಾಲ್ ರೆಸ್ಟೋರೆಂಟ್ ನಿಮ್ಮನ್ನು ಹೃತ್ಪೂರ್ವಕವಾಗಿ ಆಹ್ವಾನಿಸುತ್ತದೆ ಎಂದು ತಿಳಿಸಿದೆ.

