ರಾಷ್ಟ್ರೀಯ ಸುದ್ದಿ

ಗುಂಪುಹತ್ಯೆ ಪ್ರಕರಣದಲ್ಲಿ 14 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶೆ ತಬಸ್ಸುಮ್ ಖಾನ್ ಗೆ ಜೀವ ಬೆದರಿಕೆ

Reading…
Follow Us

ಸಾರಾಂಶ

2022ರ ಗುಂಪುಹತ್ಯೆ ಪ್ರಕರಣದಲ್ಲಿ 14 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮಧ್ಯಪ್ರದೇಶದ ನ್ಯಾಯಾಧೀಶೆ ತಬಸ್ಸುಮ್ ಖಾನ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಕೊಲೆ ಬೆದರಿಕೆ ಹಾಕಲಾಗಿದೆ. 10 ದಿನಗಳಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡದಿದ್ದರೆ ದೇಶಾದ್ಯಂತ ರಕ್ತಪಾತ ಮಾಡುವುದಾಗಿ ಕಿಡಿಗೇಡಿಗಳು ವಿಡಿಯೋ ಹರಿಬಿಟ್ಟಿದ್ದಾರೆ. ನ್ಯಾಯಾಧೀಶರ ಧಾರ್ಮಿಕ ನಂಬಿಕೆಯನ್ನೇ ಗುರಿಯಾಗಿಸಿ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ನ್ಯಾಯಾಧೀಶರ ಭದ್ರತೆ ಹೆಚ್ಚಿಸಲಾಗಿದೆ.

ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಸಿವೋನಿ ಮಾಲ್ವಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ತಬಸ್ಸುಮ್ ಖಾನ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಲಾಗಿದೆ. 2022ರಲ್ಲಿ ನಡೆದಿದ್ದ ಹೈಪ್ರೊಫೈಲ್ ಗುಂಪುಹತ್ಯೆ (ಮಾಬ್ ಲಂಚಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ 14 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದರು. ಈ ತೀರ್ಪು ಪ್ರಕಟವಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ಹರಿಬಿಡಲಾಗಿದ್ದು, ಶಿಕ್ಷೆಗೆ ಒಳಗಾದವರನ್ನು 10 ದಿನಗಳಲ್ಲಿ ಬಿಡುಗಡೆ ಮಾಡದಿದ್ದರೆ ದೇಶಾದ್ಯಂತ ರಕ್ತಪಾತ ಮಾಡುವುದಾಗಿ ದುಷ್ಕರ್ಮಿಗಳು ಎಚ್ಚರಿಕೆ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, 2022ರ ಆಗಸ್ಟ್ 3ರಂದು ಸಿವೋನಿ ಮಾಲ್ವಾ ತಹಸಿಲ್‌ನ ಬರಖಾಡ್ ಗ್ರಾಮದ ಬಳಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ತಡೆದ ಉದ್ರಿಕ್ತ ಗುಂಪು, ಅಕ್ರಮ ಸಾಗಣೆ ಆರೋಪ ಹೊರಿಸಿ ಲಾರಿಯಲ್ಲಿದ್ದವರ ಮೇಲೆ ಭೀಕರವಾಗಿ ಹಲ್ಲೆ ನಡೆಸಿತ್ತು. ಈ ದಾಳಿಯಲ್ಲಿ ಮಹಾರಾಷ್ಟ್ರದ ಅಮರಾವತಿ ನಿವಾಸಿ, 50 ವರ್ಷದ ನಜೀರ್ ಅಹ್ಮದ್ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಲಾರಿ ಚಾಲಕ ಶೇಖ್ ಲಾಲಾ ಸೇರಿದಂತೆ ಇತರ ಇಬ್ಬರು ದಾಳಿಯಿಂದ ಬದುಕುಳಿದಿದ್ದರು. ಈ ಸೂಕ್ಷ್ಮ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಾಧೀಶೆ ತಬಸ್ಸುಮ್ ಖಾನ್ ಅವರ ನ್ಯಾಯಪೀಠವು, ವೈದ್ಯಕೀಯ, ವಿಧಿವಿಜ್ಞಾನ ಮತ್ತು ಸಾಕ್ಷ್ಯಧಾರಗಳನ್ನು ಆಧರಿಸಿ ಜೂನ್ 12ರಂದು 14 ಮಂದಿ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಈ ನ್ಯಾಯಾಂಗ ತೀರ್ಪನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿರುವ ವಿಡಿಯೋಗಳಲ್ಲಿ ನ್ಯಾಯಾಧೀಶರ ಧಾರ್ಮಿಕ ನಂಬಿಕೆಯನ್ನೇ ಗುರಿಯಾಗಿಸಿಕೊಂಡು ಅತ್ಯಂತ ಆಕ್ಷೇಪಾರ್ಹ ನಿಂದನೆಗಳನ್ನು ಮಾಡಲಾಗಿದೆ. ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಯುವಕನೊಬ್ಬ, ನಮ್ಮ 14 ಮಂದಿ ಸಹೋದರರನ್ನು 10 ದಿನಗಳಲ್ಲಿ ಬಿಡುಗಡೆ ಮಾಡದಿದ್ದರೆ ದೇಶ ಮತ್ತು ರಾಜ್ಯಾದ್ಯಂತ ರರಕ್ತಪಾತ ಮಾಡುವುದಾಗಿ ಎಚ್ಚರಿಸಿದ್ದಾನೆ. ಮುಸ್ಲಿಂ ಸಮುದಾಯದವರು ನ್ಯಾಯಾಧೀಶರಾಗಿರುವುದರಿಂದಲೇ ಇಂತಹ ತೀರ್ಪು ಬಂದಿದೆ ಎಂದು ಆರೋಪಿಸಿರುವ ಆತ, ಜಿಹಾದಿ ಸಿದ್ಧಾಂತದ ವಿರುದ್ಧ ಮಾತನಾಡುತ್ತಾ ಹಿಂದೂಗಳು ದುರ್ಬಲರಲ್ಲ, ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ. ಮತ್ತೊಂದು ವಿಡಿಯೋದಲ್ಲಿ ಮಹಿಳೆಯೊಬ್ಬರು ಇದೇ ರೀತಿಯ ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, ಗೋರಕ್ಷಣೆ ಮಾಡುವುದು ಕೊಲೆಯೇ ಎಂದು ಪ್ರಶ್ನಿಸಿದ್ದಾರೆ. ವಿಡಿಯೋದಲ್ಲಿರುವ ಒಬ್ಬ ವ್ಯಕ್ತಿಯನ್ನು ಗುಜರಾತ್‌ನ ಸೂರತ್ ನಿವಾಸಿ ವಿಶಾಲ್ ಸಿಂಗ್ ಎಂದು ಶಂಕಿಸಲಾಗಿದ್ದರೂ, ಪೊಲೀಸರು ಇನ್ನೂ ಅಧಿಕೃತವಾಗಿ ಇವರ ಗುರುತನ್ನು ಖಚಿತಪಡಿಸಿಲ್ಲ.

ಹೊಲದಲ್ಲಿ ಹೂತಿಟ್ಟಿದ್ದ ₹5 ಲಕ್ಷ ನಗದು ಗೆದ್ದಲು ಪಾಲು: ರಾಜಸ್ಥಾನದ ರೈತನಿಗೆ ಆಘಾತ
ವೀಡಿಯೊ

ಹೊಲದಲ್ಲಿ ಹೂತಿಟ್ಟಿದ್ದ ₹5 ಲಕ್ಷ ನಗದು ಗೆದ್ದಲು ಪಾಲು: ರಾಜಸ್ಥಾನದ ರೈತನಿಗೆ ಆಘಾತ

ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು
ವೀಡಿಯೊ

ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು

ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ
ವೀಡಿಯೊ

ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ

ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ
ವೀಡಿಯೊ

ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ

ಬಿಹಾರ: ಶಾಲಾ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್ ಪುಡಿ ಬಳಕೆ; 34 ವಿದ್ಯಾರ್ಥಿಗಳು ಅಸ್ವಸ್ಥ
ರಾಷ್ಟ್ರೀಯ ಸುದ್ದಿ

ಬಿಹಾರ: ಶಾಲಾ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್ ಪುಡಿ ಬಳಕೆ; 34 ವಿದ್ಯಾರ್ಥಿಗಳು ಅಸ್ವಸ್ಥ

“ಶುದ್ಧ ಪೆಟ್ರೋಲ್ ನಿಮ್ಮ ಅಪ್ಪನ ಮನೆಯಿಂದ ಬರುತ್ತಾ?”: ಇಥನಾಲ್ ನೀತಿ ಸಮರ್ಥಿಸಲು ಹೋಗಿ ವಿವಾದಕ್ಕೀಡಾದ ಬಿಜೆಪಿ ಸಂಸದ
ವೀಡಿಯೊ

“ಶುದ್ಧ ಪೆಟ್ರೋಲ್ ನಿಮ್ಮ ಅಪ್ಪನ ಮನೆಯಿಂದ ಬರುತ್ತಾ?”: ಇಥನಾಲ್ ನೀತಿ ಸಮರ್ಥಿಸಲು ಹೋಗಿ ವಿವಾದಕ್ಕೀಡಾದ ಬಿಜೆಪಿ ಸಂಸದ

ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು
ವೀಡಿಯೊ

ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು

ರಸ್ತೆ ಕಾಮಗಾರಿ ವಿಳಂಬ ಹಾಗೂ ಮದ್ಯಪಾನ ಪ್ರಮಾಣ ಹೆಚ್ಚಳಕ್ಕೆ ಡೊನಾಲ್ಡ್ ಟ್ರಂಪ್ ಕಾರಣ: ಮಹಾರಾಷ್ಟ್ರ ಬಿಜೆಪಿ ನಾಯಕನ ವಿಚಿತ್ರ ವಾದ!
ರಾಷ್ಟ್ರೀಯ ಸುದ್ದಿ

ರಸ್ತೆ ಕಾಮಗಾರಿ ವಿಳಂಬ ಹಾಗೂ ಮದ್ಯಪಾನ ಪ್ರಮಾಣ ಹೆಚ್ಚಳಕ್ಕೆ ಡೊನಾಲ್ಡ್ ಟ್ರಂಪ್ ಕಾರಣ: ಮಹಾರಾಷ್ಟ್ರ ಬಿಜೆಪಿ ನಾಯಕನ ವಿಚಿತ್ರ ವಾದ!

ನ್ಯಾಯಾಂಗ ವ್ಯವಸ್ಥೆಯ ಮೇಲೆಯೇ ನಡೆದಿರುವ ಈ ಗಂಭೀರ ದಾಳಿಯನ್ನು ಸಿವೋನಿ ಮಾಲ್ವಾ ಪೊಲೀಸರು ಸ್ವಯಂಪ್ರೇರಿತರಾಗಿ (ಸುಯೋ ಮೋಟು) ಪರಿಗಣಿಸಿ, ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ನ್ಯಾಯಾಧೀಶರಿಂದ ಯಾವುದೇ ಔಪಚಾರಿಕ ದೂರು ಬರದಿದ್ದರೂ ಪ್ರಕರಣದ ಗಂಭೀರತೆಯನ್ನು ಅರಿತು ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಎಂದು ಠಾಣಾಧಿಕಾರಿ ಸುಧಾಕರ್ ಬಾರಸ್ಕರ್ ತಿಳಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯದ ಸೈಬರ್ ಸೆಲ್ ಕೂಡ ಐಟಿ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿದೆ. ಸದ್ಯ ನ್ಯಾಯಾಧೀಶರ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ. ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ನ್ಯಾಯಾಂಗದ ಅಧಿಕಾರಿಗಳಿಗೆ ತೀರ್ಪುಗಳ ಹಿನ್ನೆಲೆಯಲ್ಲಿ ಇಂತಹ ಬೆದರಿಕೆಗಳು ಬರುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ವೀಡಿಯೊ

ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ

ರಾಷ್ಟ್ರೀಯ ಸುದ್ದಿ

“ವೋಟ್ ಚೋರಿ, ಸರ್ಕಾರ ಚೋರಿ ನಂತರ ಇದೀಗ ಸೀಟ್ ಚೋರಿ; BJP – EC ಜುಗಲ್‌ಬಂದಿ” – ರಾಹುಲ್ ಗಾಂಧಿ

ರಾಷ್ಟ್ರೀಯ ಸುದ್ದಿ

‘ಕಮಾಲ್ ಮೌಲಾ ಮಸೀದಿ – ಭೋಜಶಾಲಾ’ ಇನ್ನು ಸರಸ್ವತಿ ಮಂದಿರ: ಹೈಕೋರ್ಟ್‌ನಿಂದ ನಮಾಜ್ ಸ್ಥಗಿತಕ್ಕೆ ಆದೇಶ, ಪರ್ಯಾಯ ಜಾಗಕ್ಕೆ ಮುಸ್ಲಿಂ ಮಂಡಳಿಗೆ ಅವಕಾಶ!

ರಾಷ್ಟ್ರೀಯ ಸುದ್ದಿ

50 IAS -IPS ಅಧಿಕಾರಿಗಳು ಒಟ್ಟಾಗಿ ಭೂಮಿ ಖರೀದಿ : ಬೈಪಾಸ್ ಯೋಜನೆಗೆ ಗ್ರೀನ್ ಸಿಗ್ನಲ್ ನಂತರ ಮೌಲ್ಯದಲ್ಲಿ 11 ಪಟ್ಟು ಏರಿಕೆ!

ರಾಷ್ಟ್ರೀಯ ಸುದ್ದಿ

ಮಧ್ಯಪ್ರದೇಶ: ವಾಟ್ಸ್ಅಪ್‌ನಲ್ಲಿ ಉರ್ದು ನಜ್ಮ್ ಹಂಚಿದ ಶಿಕ್ಷಕನ ವಿರುದ್ಧದ FIR ರದ್ದು ಮಾಡಿದ ಹೈಕೋರ್ಟ್

From Across Varadigara

ವೀಡಿಯೊ

ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು

ರಾಷ್ಟ್ರೀಯ ಸುದ್ದಿ

ಪ್ರತಿ ಗಂಟೆಗೆ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ 21 ಮಂದಿ! ರೋಗ, ಯುದ್ಧಕ್ಕಿಂತಲೂ ಭೀಕರವಾಯಿತೇ ಭಾರತದ ರಸ್ತೆ ಅಪಘಾತ?

ರಾಷ್ಟ್ರೀಯ ಸುದ್ದಿ

ರಸ್ತೆ ಕಾಮಗಾರಿ ವಿಳಂಬ ಹಾಗೂ ಮದ್ಯಪಾನ ಪ್ರಮಾಣ ಹೆಚ್ಚಳಕ್ಕೆ ಡೊನಾಲ್ಡ್ ಟ್ರಂಪ್ ಕಾರಣ: ಮಹಾರಾಷ್ಟ್ರ ಬಿಜೆಪಿ ನಾಯಕನ ವಿಚಿತ್ರ ವಾದ!

ರಾಷ್ಟ್ರೀಯ ಸುದ್ದಿ

ಯುವಶಕ್ತಿಯ ಒಕ್ಕೂಟ: ಉದ್ಯೋಗ-ಶಿಕ್ಷಣದ ಹಕ್ಕಿಗಾಗಿ ಉತ್ತರ ಪ್ರದೇಶದಲ್ಲಿ ‘ಜಸ್ಟಿಸ್ ಮೋರ್ಚಾ’ ಸ್ಥಾಪನೆ: 50 ದಿನಗಳ ರಾಜ್ಯವ್ಯಾಪಿ ಅಭಿಯಾನ ಘೋಷಣೆ

ವೀಡಿಯೊ

ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ

ವೀಡಿಯೊ

ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ

ರಾಷ್ಟ್ರೀಯ ಸುದ್ದಿ

ಅದಾನಿ ಯೋಜನೆಗಳಿಗಾಗಿ 83,700 ಚದರ ಅಡಿ ಅರಣ್ಯ ಮತ್ತು ಮ್ಯಾಂಗ್ರೋವ್ ಭೂಮಿಯನ್ನು ಬಿಟ್ಟುಕೊಡಲು ಮಹಾರಾಷ್ಟ್ರ ಸರ್ಕಾರದ ಅನುಮೋದನೆ

ರಾಷ್ಟ್ರೀಯ ಸುದ್ದಿ

ಶಿಕ್ಷಣ ವ್ಯವಸ್ಥೆಯ ಲೋಪ, ಸರ್ಕಾರಿ ಉದ್ಯೋಗ ನೀಡಿಕೆಯಲ್ಲಿ ಭ್ರಷ್ಟಾಚಾರ: ಹೋರಾಟದ ಎಚ್ಚರಿಕೆ ನೀಡಿದ ಬಾಬಾ ರಾಮ್‌ದೇವ್‌

ವೀಡಿಯೊ

“ಶುದ್ಧ ಪೆಟ್ರೋಲ್ ನಿಮ್ಮ ಅಪ್ಪನ ಮನೆಯಿಂದ ಬರುತ್ತಾ?”: ಇಥನಾಲ್ ನೀತಿ ಸಮರ್ಥಿಸಲು ಹೋಗಿ ವಿವಾದಕ್ಕೀಡಾದ ಬಿಜೆಪಿ ಸಂಸದ

ರಾಷ್ಟ್ರೀಯ ಸುದ್ದಿ

ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲಿನ ದೆಹಲಿ ಪೊಲೀಸರ ಅತಿಯಾದ ಬಲಪ್ರಯೋಗ: ತನಿಖೆಗೆ ಆಮ್ನೆಸ್ಟಿ ಆಗ್ರಹ

ರಾಷ್ಟ್ರೀಯ ಸುದ್ದಿ

ದೆಹಲಿಯಲ್ಲಿ 90 ಕೋಟಿ ರೂ. ಸೈಕಲ್ ಖರೀದಿ ಹಗರಣ? 4,200 ರೂ. ಸೈಕಲ್‌ಗೆ 6,957 ರೂ. ಪಾವತಿಸಿದ ಸರ್ಕಾರ: ಆಪ್ ಆರೋಪ

ವೀಡಿಯೊ

ಹೊಲದಲ್ಲಿ ಹೂತಿಟ್ಟಿದ್ದ ₹5 ಲಕ್ಷ ನಗದು ಗೆದ್ದಲು ಪಾಲು: ರಾಜಸ್ಥಾನದ ರೈತನಿಗೆ ಆಘಾತ

ರಾಷ್ಟ್ರೀಯ ಸುದ್ದಿ

ಬಿಹಾರ: ಶಾಲಾ ಬಿಸಿಯೂಟದಲ್ಲಿ ಉಪ್ಪಿನ ಬದಲು ಡಿಟರ್ಜೆಂಟ್ ಪುಡಿ ಬಳಕೆ; 34 ವಿದ್ಯಾರ್ಥಿಗಳು ಅಸ್ವಸ್ಥ

ರಾಷ್ಟ್ರೀಯ ಸುದ್ದಿ

‘ಯುವಜನರ ಧ್ವನಿಗೆ ಬೆದರಿದ ಸರ್ಕಾರ’: ದೆಹಲಿಯಲ್ಲಿ ಸಿಜೆಪಿ ಸಭೆಗೆ ಬಿಜೆಪಿ ತಡೆ – ಅಭಿಜಿತ್ ದೀಪ್ಕೆ ಗಂಭೀರ ಆರೋಪ

ವೀಡಿಯೊ

ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು

ರಾಷ್ಟ್ರೀಯ ಸುದ್ದಿ

ಮಹಾರಾಷ್ಟ್ರ : ಮಂಚಗಳಿಲ್ಲ, ವಾರ್ಡನ್ ಇಲ್ಲ! ಆಶ್ರಮ ಶಾಲೆಯಲ್ಲಿ ನೆಲದ ಮೇಲೆ ಮಲಗಿದ್ದ 3 ಬುಡಕಟ್ಟು ಹೆಣ್ಣುಮಕ್ಕಳು ಹಾವು ಕಡಿದು ಸಾವು!