ರಾಷ್ಟ್ರೀಯ ಸುದ್ದಿ

ಮುಂಬೈ: ಬಕ್ರೀದ್ ಆಡುಗಳಿಗೆ ಪ್ರತಿಯಾಗಿ ಹಂದಿ ತಂದ ಹಿಂದುತ್ವ ಸಂಘಟನೆಗಳು; ಸಾಮಾಜಿಕ ಕಾಳಜಿಯ ಹೆಸರಲ್ಲಿ ಕೋಮು ಪ್ರಚೋದನೆ?

Reading…
Follow Us

ಸಾರಾಂಶ

ಮೀರಾ ರೋಡ್ ವಸತಿ ಸಮುಚ್ಚಯದಲ್ಲಿ ಬಕ್ರೀದ್ ಆಡುಗಳ ವಿರುದ್ಧದ ಪ್ರತಿಭಟನೆಗೆ ಹಿಂದೂ ಸಂಘಟನೆಗಳು ಹಂದಿಯನ್ನು ತಂದಿಟ್ಟ ಘಟನೆಯ ಬಳಿಕ ಉಂಟಾಗಿದ್ದ ತೀವ್ರ ಉದ್ವಿಗ್ನತೆ ಸದ್ಯ ಪೊಲೀಸರ ಮಧ್ಯಪ್ರವೇಶದಿಂದ ಹತೋಟಿಗೆ ಬಂದಿದೆ. ನೈರ್ಮಲ್ಯದ ನೆಪದಲ್ಲಿ ಧಾರ್ಮಿಕ ಭಾವನೆ ಕೆರಳಿಸಲು ಯತ್ನಿಸಿದ ಪ್ರತಿಭಟನಾಕಾರರ ದ್ವಂದ್ವ ನಿಲುವಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಮುಂಬೈ ಸಮೀಪದ ಮೀರಾ ರೋಡ್‌ನ ವಸತಿ ಸಮುಚ್ಚಯವೊಂದರಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಆಡುಗಳನ್ನು ತಂದಿಟ್ಟ ವಿಚಾರವಾಗಿ ಆರಂಭವಾದ ವಿವಾದ, ತೀವ್ರ ಕೋಮು ಸಂಘರ್ಷಕ್ಕೆ ತಿರುಗಿ ಈಗ ಪೊಲೀಸರ ಸಕಾಲಿಕ ಹಸ್ತಕ್ಷೇಪದಿಂದ ಹತೋಟಿಗೆ ಬಂದಿದೆ. ಪೂನಂ ಎಸ್ಟೇಟ್ ಕ್ಲಸ್ಟರ್ ಒನ್ ವಸತಿ ಸಮುಚ್ಚಯದಲ್ಲಿ ಮೇ 26, 2026 ರಂದು ನಡೆದ ಜಟಾಪಟಿಯ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಯ ಭಾಗವಾಗಿ ಜೀವಂತ ಹಂದಿಯೊಂದನ್ನು ತಂದಿಟ್ಟಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತ್ತು. ನೈರ್ಮಲ್ಯ ಮತ್ತು ಪ್ರಾಣಿ ಕಲ್ಯಾಣದ ಹೆಸರಿನಲ್ಲಿ ಆರಂಭವಾದ ಪ್ರತಿಭಟನೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಹಂತಕ್ಕೆ ತಲುಪಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವಸತಿ ಸಮುಚ್ಚಯದಲ್ಲಿ ಮುಸ್ಲಿಂ ನಿವಾಸಿಗಳು ಹಬ್ಬದ ಹಿನ್ನೆಲೆಯಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಆಡುಗಳನ್ನು ತಂದಿರಿಸಿದಾಗ ಸ್ಥಳೀಯ ಕೆಲವು ಹಿಂದೂ ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಜನನಿಬಿಡ ಪ್ರದೇಶದಲ್ಲಿ ಪ್ರಾಣಿಗಳನ್ನು ಇಡುವುದರಿಂದ ವಾಸನೆ, ತ್ಯಾಜ್ಯ ಮತ್ತು ಆರೋಗ್ಯದ ಸಮಸ್ಯೆಗಳು ಎದುರಾಗುತ್ತವೆ ಎಂದು ಅವರು ದೂರಿದ್ದರು. ಅಲ್ಲದೆ ವಸತಿ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಇರಿಸುವುದಕ್ಕೆ ಮುಂಬೈ ಹೈಕೋರ್ಟ್ ವಿಧಿಸಿರುವ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿತ್ತು. ಈ ದೂರಿನ ಅನ್ವಯ ನಗರ ಪಾಲಿಕೆ ಅಧಿಕಾರಿಗಳು ಶೆಡ್ ತೆರವುಗೊಳಿಸಿದ್ದರು. ಆದರೆ, ಮತ್ತೆ ಅಲ್ಲಿ ಶೆಡ್ ನಿರ್ಮಿಸಲಾಗಿದೆ ಎಂಬ ವದಂತಿ ಹರಡುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಹನುಮಾನ್ ಚಾಲೀಸಾ ಪಠಣ ಹಾಗೂ ಘೋಷಣೆಗಳನ್ನು ಕೂಗಲಾರಂಭಿಸಿದರು. ಈ ವೇಳೆ ನಡೆದ ಗಲಾಟೆಯಲ್ಲಿ 3 ಜನರು ಗಾಯಗೊಂಡಿದ್ದರು.

ಪ್ರತಿಭಟನೆಯ ತೀವ್ರತೆ ಹೆಚ್ಚಾದಂತೆ, ಕಾರ್ಯಕರ್ತರು ಸೊಸೈಟಿಯ ಗೇಟ್ ಬಳಿ ಹಂದಿಯೊಂದನ್ನು ತಂದು ನಿಲ್ಲಿಸಿದರು. ಇದನ್ನು ‘ವರಾಹ ಪೂಜೆ’ಗೆ ತರಲಾಗಿದೆ ಎಂದು ಸಮರ್ಥಿಸಿಕೊಳ್ಳಲು ಯತ್ನಿಸಲಾಯಿತಾದರೂ, ಇದು ಮುಸ್ಲಿಂ ನಿವಾಸಿಗಳು ಆಡುಗಳನ್ನು ತಂದಿದ್ದಕ್ಕೆ ಪ್ರತಿಯಾಗಿ, ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಹೂಡಿದ ಕುತಂತ್ರ ಎಂಬುದು ನಂತರ ಹಂದಿ ತಂದ ಕಿಡಿಗೇಡಿ India Today ವರದಿಗಾರನೊಂದಿಗೆ ಮಾತನಾಡಿದಾಗ ಸ್ಪಷ್ಟವಾಗಿತ್ತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು, ಸೊಸೈಟಿ ಆವರಣದಲ್ಲಿದ್ದ ಆಡುಗಳನ್ನು ಹಾಗೂ ಪ್ರತಿಭಟನೆಗೆ ಬಳಸಲಾಗಿದ್ದ ಹಂದಿಯನ್ನು ವಶಕ್ಕೆ ಪಡೆದು ಅಲ್ಲಿಂದ ತೆರವುಗೊಳಿಸಿದ್ದಾರೆ. ಸದ್ಯ ಇಡೀ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮೂಲಕ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತರಲಾಗಿದೆ.

ಈ ಇಡೀ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿಭಟನಾಕಾರರ ದ್ವಂದ್ವ ನಿಲುವು ಮತ್ತು ಸೋಗಲಾಡಿತನ ಎದ್ದು ಕಾಣುತ್ತದೆ. ವಸತಿ ಪ್ರದೇಶದಲ್ಲಿ ಆಡುಗಳಿಂದ ನೈರ್ಮಲ್ಯ ಹಾಳಾಗುತ್ತದೆ ಎಂಬುದು ಅವರ ನಿಜವಾದ ಕಾಳಜಿಯಾಗಿದ್ದರೆ, ಅದೇ ಜಾಗಕ್ಕೆ ಮತ್ತೊಂದು ಪ್ರಾಣಿಯನ್ನು ತಂದು ಗದ್ದಲ ಎಬ್ಬಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಮೂಡುತ್ತದೆ. ಜನನಿಬಿಡ ವಸತಿ ಪ್ರದೇಶಕ್ಕೆ ಹಂದಿಯನ್ನು ತರುವುದರಿಂದ ಉಂಟಾಗುವ ಗಲೀಜು ಮತ್ತು ಸಾಂಕ್ರಾಮಿಕ ರೋಗಗಳ ಭೀತಿ, ಇವರದ್ದೇ ಆದ ನೈರ್ಮಲ್ಯದ ವಾದಕ್ಕೆ ತದ್ವಿರುದ್ಧವಾಗಿದೆ. ಮತ್ತೊಂದೆಡೆ, ಭಯದಿಂದ ಕಿರುಚಾಡುತ್ತಿದ್ದ ಆ ಹಂದಿಯ ಸ್ಥಿತಿ, ಇವರ ‘ಪ್ರಾಣಿ ಪ್ರೇಮ’ ಹಾಗೂ ಪ್ರಾಣಿ ರಕ್ಷಣೆಯ ವಾದ ಕೇವಲ ಸೋಗಲಾಡಿತನ ಎಂಬುದನ್ನು ಸಾಬೀತುಪಡಿಸಿದೆ.. ಇದು ಸಾಮಾಜಿಕ ಕಾಳಜಿಯ ಹೋರಾಟವಾಗಿರದೆ, ಕೇವಲ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಸಂಘರ್ಷ ಸೃಷ್ಟಿಸುವ ರಾಜಕೀಯ ತಂತ್ರವಾಗಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿವೆ. 

ಸಾರ್ವಜನಿಕ ಸುರಕ್ಷತೆ ಮತ್ತು ನೈರ್ಮಲ್ಯದ ದೃಷ್ಟಿಯಿಂದ ಧಾರ್ಮಿಕ ಆಚರಣೆಗಳ ಪ್ರಾಣಿ ಬಲಿಯನ್ನು ವಸತಿ ಪ್ರದೇಶಗಳ ಬದಲು ನಿಯೋಜಿತ ಕೇಂದ್ರಗಳಲ್ಲೇ ನಡೆಸಬೇಕು ಎಂದು ಮುಂಬೈ ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಈ ನಿಯಮ ಎಲ್ಲ ಸಮುದಾಯಗಳಿಗೂ ಸಮಾನವಾಗಿ ಅನ್ವಯಿಸುತ್ತದೆ. ಮುಸ್ಲಿಂ ಮುಖಂಡರು ಬೇರೆ ಹಬ್ಬಗಳ ಆಚರಣೆಯ ಸಂದರ್ಭದಲ್ಲಿ ಆಗುವ ಸಾರ್ವಜನಿಕ ಅಡಚಣೆಗಳನ್ನು ಯಾರೂ ಪ್ರಶ್ನಿಸುವುದಿಲ್ಲ, ನಮ್ಮ ಹಬ್ಬಕ್ಕೆ ಮಾತ್ರ ಆಕ್ಷೇಪ ಏಕೆ ಎಂದು ಪ್ರಶ್ನಿಸುತ್ತಿದ್ದರೆ, ನ್ಯಾಯಾಲಯದ ಆದೇಶಗಳನ್ನು ಪದೇ ಪದೇ ಉಲ್ಲಂಘಿಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹಿಂದೂ ಸಂಘಟನೆಗಳು ವಾದಿಸುತ್ತಿವೆ. ಸದ್ಯಕ್ಕೆ ಪರಿಸ್ಥಿತಿ ತಣ್ಣಗಾಗಿದ್ದರೂ, ಇಂತಹ ಪ್ರಚೋದನಾತ್ಮಕ ಯತ್ನಗಳು ಮುಂದಿನ ದಿನಗಳಲ್ಲಿ ನಗರದ ನೆಮ್ಮದಿಗೆ ಕೊಳ್ಳಿ ಇಡುವುದರಲ್ಲಿ ಸಂಶಯವಿಲ್ಲ.

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ರಾಷ್ಟ್ರೀಯ ಸುದ್ದಿ

ಗ್ರಾಹಂ ಸ್ಟೇನ್ಸ್, ಪುಟ್ಟ ಮಕ್ಕಳ ಸಜೀವ ದಹನ ಪ್ರಕರಣ: ಬಜರಂಗದಳದ ದಾರಾ ಸಿಂಗ್ ಬಿಡುಗಡೆ ಅರ್ಜಿ ತಿರಸ್ಕರಿಸಿದ ಒಡಿಶಾ ಸರ್ಕಾರ

ರಾಷ್ಟ್ರೀಯ ಸುದ್ದಿ

ತಾಲಿಬಾನ್ ವಿರೋಧಿ ಹೋರಾಟಗಾರ್ತಿ ಮಲಾಲಾ ಆತ್ಮಚರಿತ್ರೆ ಓದುಗರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ

ರಾಷ್ಟ್ರೀಯ ಸುದ್ದಿ

ಮತಾಂತರ ನಿಷೇಧ ಕಾನೂನಿನ ದುರುಪಯೋಗ ಹಾಗೂ ಬಲಪಂಥೀಯರ ದಾಳಿಯ ಭೀತಿ: ಮುಂಬೈ ಚರ್ಚ್‌ಗಳಲ್ಲಿ ಸ್ವಯಂ ಘೋಷಣೆ ಪತ್ರ, ಆಧಾರ್‌ ಸಂಗ್ರಹ!

From Across Varadigara

ರಾಜ್ಯ ಸುದ್ದಿ

ಕರಾವಳಿಗೆ ಸಂಪುಟದ ಐತಿಹಾಸಿಕ ಕೊಡುಗೆ: ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆ ಮಾನ್ಯತೆ, ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು

ರಾಜ್ಯ ಸುದ್ದಿ

“ಪೊಲೀಸ್ ಠಾಣೆಗೆ ನುಗ್ಗಿದರೆ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳುಹಿಸುತ್ತೇವೆ”: ಮೈಸೂರಿನ “ಪೇಟೆ ರೌಡಿ”ಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ರಾಷ್ಟ್ರೀಯ ಸುದ್ದಿ

ವಿಚಾರಣೆಯೇ ಆರಂಭವಾಗದೆ 6 ವರ್ಷಗಳ ಬಂಧನ, ಸಿಕ್ಕಿದ್ದು 7 ದಿನಗಳ ರಿಲೀಫ್: ಶರ್ಜೀಲ್ ಇಮಾಮ್‌ಗೆ ಮಧ್ಯಂತರ ಜಾಮೀನು 

ರಾಷ್ಟ್ರೀಯ ಸುದ್ದಿ

‘ಮುಸ್ಲಿಮರು ಗರ್ಬಾಗೆ ಬರುವುದಿದ್ದರೆ ಸಹೋದರಿಯರನ್ನೂ, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧರಿದ್ದಾರೆ’: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

ಅಂತಾರಾಷ್ಟ್ರೀಯ

ಯೆಮನ್‌ನಲ್ಲಿ ತೀವ್ರಗೊಂಡ ಸಂಘರ್ಷ: 14 ದಿನಗಳಲ್ಲಿ 57,000 ಮಕ್ಕಳು ಬೀದಿಗೆ, ಕನಿಷ್ಠ 9 ಮಕ್ಕಳ ಬಲಿ ಎಂದ ಯೂನಿಸೆಫ್!

ಅಂತಾರಾಷ್ಟ್ರೀಯ

ನೇಪಾಳ ಪ್ರವಾಹ: ಸಾವಿನ ಸಂಖ್ಯೆ 626ಕ್ಕೆ ಏರಿಕೆ; 2,478 ಮಂದಿ ನಾಪತ್ತೆ

ರಾಷ್ಟ್ರೀಯ ಸುದ್ದಿ

CJP ಒಂದೆರಡು ರಾಜ್ಯಗಳಲ್ಲಿ ಅಧಿಕಾರ ಹಿಡಿದರೆ ಅಚ್ಚರಿಯೇನಿಲ್ಲ; ರಾಷ್ಟ್ರೀಯ ಮಟ್ಟದಲ್ಲಿ ‘ತೃತೀಯ ಶಕ್ತಿ’ಯಾಗುವುದು ಅನುಮಾನ: ಪಿ. ಚಿದಂಬರಂ

ರಾಷ್ಟ್ರೀಯ ಸುದ್ದಿ

‘ದೇಶ ನಿಮಗೇನು ಮಾಡಿದೆ ಎಂದು ಕೇಳುವ ಬದಲು, ದೇಶಕ್ಕೆ ನಿಮ್ಮ ಕೊಡುಗೆ ಏನು ಎಂಬುದರತ್ತ ಗಮನಹರಿಸಿ’ : ಯುವಜನತೆಗೆ ನಿರ್ಮಲಾ ಸೀತಾರಾಮನ್ ಸಲಹೆ

ರಾಷ್ಟ್ರೀಯ ಸುದ್ದಿ

ತಾಲಿಬಾನ್ ವಿರೋಧಿ ಹೋರಾಟಗಾರ್ತಿ ಮಲಾಲಾ ಆತ್ಮಚರಿತ್ರೆ ಓದುಗರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ

ರಾಷ್ಟ್ರೀಯ ಸುದ್ದಿ

ಜೈಪುರ ಪಾಲಿಕೆ ಸಮರ: 8 ಮುಸ್ಲಿಮರಿಗೆ ಬಿಜೆಪಿ ಟಿಕೆಟ್; ಪ್ರಮುಖ ಚುನಾವಣೆಗಳಿಂದ ದೂರವಿಟ್ಟಿದ್ದ ಕಮಲ ಪಡೆಗೆ ಈಗ ಅಲ್ಪಸಂಖ್ಯಾತರೇ ಬೇಕಾದರೇ?

ಕಾಣಿಸದ್ದು - ಕೇಳಿಸದ್ದು

ರಾಜಸ್ಥಾನ ಸ್ಥಳೀಯ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಒಂದೇ ಮತ; ವಾರ್ಡ್‌ನಲ್ಲಿ ಸ್ವಪಕ್ಷದ ಕಾರ್ಯಕರ್ತರೂ ಕೈಬಿಟ್ಟರಾ?

ಅಂತಾರಾಷ್ಟ್ರೀಯ

“ಚುನಾವಣೆಯಲ್ಲಿ ರಿಪಬ್ಲಿಕನ್ನರನ್ನು ಗೆಲ್ಲಿಸಿದರೆ ಅಮೆರಿಕದ ಪ್ರತಿಯೊಬ್ಬ ಪ್ರಜೆಗೂ 4.76 ಲಕ್ಷ ರೂ.”: ಮತದಾರರಿಗೆ ಡೊನಾಲ್ಡ್ ಟ್ರಂಪ್ ಆಮಿಷ

ರಾಜ್ಯ ಸುದ್ದಿ

ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಸರ್ಕಾರದ ಸಿದ್ಧತೆ: ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ

ರಾಷ್ಟ್ರೀಯ ಸುದ್ದಿ

ಪಾಕಿಸ್ತಾನದ ಗೂಢಚಾರಿಕೆ ಜಾಲಕ್ಕೆ ಭಾರತೀಯ ಸಿಮ್ ಕಾರ್ಡ್: ರಾಜಸ್ಥಾನದಲ್ಲಿ ಶಂಕಿತ ISI ಏಜೆಂಟ್ ಬಲ್ವಿಂದರ್ ಸಿಂಗ್ ಬಂಧನ

ರಾಷ್ಟ್ರೀಯ ಸುದ್ದಿ

“ತಲೆ ಒಡೆದೆ, ಆದರೂ ಜೈಲಿಗೆ ಹೋಗಲಿಲ್ಲ”: ಪ್ರಭಾವಿ ನಾಯಕರ ಬೆಂಬಲದ ಬಡಾಯಿ ಕೊಚ್ಚಿಕೊಂಡ ಹಿಂದೂತ್ವ ಇನ್ಫ್ಲುಯೆನ್ಸರ್; ವಿಪಕ್ಷಗಳ ಆಕ್ರೋಶ

ರಾಜ್ಯ ಸುದ್ದಿ

‘ಸಂಘಟನ್ ಸೃಜನ್’ ಹೆಸರಲ್ಲಿ ಎಐಸಿಸಿ ಹೊಸ ತಂತ್ರ: ಕರ್ನಾಟಕದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಹಿಂದಿದೆಯೇ ಪಕ್ಷ ಪುನಶ್ಚೇತನದ ಗಂಭೀರ ಯತ್ನ?

ಸಾಮಾಜಿಕ ತಾಣ

ವಿಪಕ್ಷಗಳ ವ್ಯಂಗ್ಯಕ್ಕೆ ಭಕ್ತಿಗೀತೆಯ ಬಳಕೆ: ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ ಬಿಜೆಪಿ

ವಿಶೇಷ ಲೇಖನ

FIRಗಳೇ ಇಲ್ಲದೇ RSS ಗಲಭೆಯನ್ನು ಹೇಗೆ ರೂಪಿಸುತ್ತೆ ? ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿಕೆಯ ಅಸಲಿಯತ್ತೇನು?

ರಾಜ್ಯ ಸುದ್ದಿ

ತುಳು ನುಡಿಗೆ ಹೆಚ್ಚುವರಿ ಅಧಿಕೃತ ಸ್ಥಾನಮಾನ ಸ್ವಾಗತಾರ್ಹ; 8ನೇ ಪರಿಚ್ಛೇದ ಸೇರ್ಪಡೆ ತನಕ ನಮ್ಮ ಹಕ್ಕೊತ್ತಾಯ ಮುಂದುವರಿಕೆ: ಕರ್ನಾಟಕ ರಕ್ಷಣಾ ವೇದಿಕೆ

ಕಾಣಿಸದ್ದು - ಕೇಳಿಸದ್ದು

ಅನುದಾನ ತಂದ ಮಾಜಿ ಶಾಸಕನಿಗೇ ಉದ್ಘಾಟನೆಯ ಅವಕಾಶ ನೀಡಿದ ಹಾಲಿ ಶಾಸಕ : ರಾಜಕೀಯದಲ್ಲೊಂದು “ಕೇರಳ ಸ್ಟೋರಿ”!