ರಾಷ್ಟ್ರೀಯ ಸುದ್ದಿ

ಕೋಮು ಸೌಹಾರ್ದತೆಯ ಬೆಲೆ: ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ‘ಮೊಹಮ್ಮದ್ ದೀಪಕ್’ ಜಿಮ್ ಮುಚ್ಚುವ ಭೀತಿಯಲ್ಲಿ!

Reading…
Follow Us

ಸಾರಾಂಶ

ಕೋಮು ಸೌಹಾರ್ದತೆಗಾಗಿ ಮುಸ್ಲಿಂ ವ್ಯಾಪಾರಿಯನ್ನು ರಕ್ಷಿಸಿ 'ಮೊಹಮ್ಮದ್ ದೀಪಕ್' ಎಂದು ಗುರುತಿಸಿಕೊಂಡಿದ್ದ ಉತ್ತರಾಖಂಡದ ದೀಪಕ್ ಕುಮಾರ್, ಈಗ ವ್ಯವಸ್ಥಿತ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರದಿಂದಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಡಿಗೆ ಕಟ್ಟಲಾಗದೆ ಅವರ ಜಿಮ್ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದ್ದು, ಮಾನವೀಯತೆಯ ಪರ ನಿಲ್ಲುವ ಸಾಮಾನ್ಯ ನಾಗರಿಕರು ಎದುರಿಸುವ ಸವಾಲುಗಳಿಗೆ ಈ ಘಟನೆ ಸಾಕ್ಷಿಯಾಗಿದೆ.

ಕೋಮು ಸೌಹಾರ್ದತೆ ಮೆರೆದು ಮುಸ್ಲಿಂ ವ್ಯಾಪಾರಿಯ ರಕ್ಷಣೆಗೆ ನಿಂತಿದ್ದ ಜಿಮ್ ತರಬೇತುದಾರ ದೀಪಕ್ ಕುಮಾರ್‌ಗೆ ಈಗ ಆರ್ಥಿಕ ಬಹಿಷ್ಕಾರದ ಸಂಕಷ್ಟ; ಬಾಡಿಗೆ ಕಟ್ಟಲಾಗದೆ ಜಿಮ್ ಖಾಲಿ ಮಾಡುವಂತೆ ಮಾಲೀಕನ ನೋಟಿಸ್.

ಕೋತ್ ದ್ವಾರ (ಉತ್ತರಾಖಂಡ): ದೇಶದಾದ್ಯಂತ ತೀವ್ರ ಸದ್ದು ಮಾಡಿದ್ದ ಉತ್ತರಾಖಂಡದ ಕೋತ್ ದ್ವಾರದ ಘಟನೆಯ ನಾಯಕ, “ಮೊಹಮ್ಮದ್ ದೀಪಕ್” ಎಂದೇ ಖ್ಯಾತರಾದ ದೀಪಕ್ ಕುಮಾರ್ ಈಗ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಣರಾಜ್ಯೋತ್ಸವದ ದಿನದಂದು ಮುಸ್ಲಿಂ ವೃದ್ಧ ವ್ಯಾಪಾರಿಯೊಬ್ಬರನ್ನು ಗುಂಪಿನ ಕಿರುಕುಳದಿಂದ ರಕ್ಷಿಸಿದ್ದ ದೀಪಕ್ ಅವರಿಗೆ ಈಗ ತಮ್ಮ ಜಿಮ್ ನಡೆಸುವುದೇ ದುಸ್ತರವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಬಾಡಿಗೆ ಪಾವತಿಸದ ಕಾರಣ ಅವರ ‘ಹಲ್ಕ್ ಜಿಮ್’ ಮಾಲೀಕರು ಜಿಮ್ ಖಾಲಿ ಮಾಡುವಂತೆ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಕೋಮು ಧ್ರುವೀಕರಣದ ವಿರುದ್ಧ ಧ್ವನಿ ಎತ್ತುವ ವ್ಯಕ್ತಿಗಳು ಎದುರಿಸಬೇಕಾಗಿರುವ ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ.

2026ರ ಜನವರಿ 26 ರಂದು ಕೋತ್ ದ್ವಾರದಲ್ಲಿ ಬಜರಂಗದಳದ ಕಾರ್ಯಕರ್ತರೆನ್ನಲಾದ ಗುಂಪೊಂದು 70 ವರ್ಷದ ವಕೀಲ್ ಅಹ್ಮದ್ ಎಂಬ ವ್ಯಾಪಾರಿಯ ಅಂಗಡಿಯ ಹೆಸರು ಮತ್ತು ಅವರ ಗುರುತನ್ನು ಪ್ರಶ್ನಿಸಿ ಕಿರುಕುಳ ನೀಡುತ್ತಿತ್ತು. ಇದನ್ನು ಗಮನಿಸಿದ 38 ವರ್ಷದ ಜಿಮ್ ಮಾಲೀಕ ದೀಪಕ್ ಕುಮಾರ್ ತಕ್ಷಣವೇ ವೃದ್ಧನ ರಕ್ಷಣೆಗೆ ಧಾವಿಸಿದ್ದರು. ಈ ವೇಳೆ ಆಕ್ರೋಶಿತ ಗುಂಪು ದೀಪಕ್ ಅವರ ಹಿನ್ನೆಲೆಯನ್ನು ಪ್ರಶ್ನಿಸಿದಾಗ, ಸೌಹಾರ್ದತೆಯ ಸಂಕೇತವಾಗಿ ಮತ್ತು ವೃದ್ಧನಿಗೆ ಬೆಂಬಲವಾಗಿ “ನನ್ನ ಹೆಸರು ಮೊಹಮ್ಮದ್ ದೀಪಕ್” ಎಂದು ಧೈರ್ಯದಿಂದ ಉತ್ತರಿಸಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ರಾಷ್ಟ್ರಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿತ್ತು.

ಈ ಸಾಹಸಿಕ ನಡೆಯನ್ನು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಪ್ರಮುಖರು ಶ್ಲಾಘಿಸಿದ್ದರು. ರಾಹುಲ್ ಗಾಂಧಿ ಅವರು ಖುದ್ದಾಗಿ ದೀಪಕ್ ಅವರನ್ನು ಭೇಟಿಯಾಗಿ, “ಇದು ಸಂವಿಧಾನವನ್ನು ರಕ್ಷಿಸುವ ಮತ್ತು ಸಹೋದರತ್ವವನ್ನು ಎತ್ತಿಹಿಡಿಯುವ ನೈಜ ದೇಶಭಕ್ತಿ” ಎಂದು ಪ್ರಶಂಸಿಸಿದ್ದರು. ಆದರೆ, ಈ ವ್ಯಾಪಕ ಜನಪ್ರಿಯತೆಯ ಬೆನ್ನಲ್ಲೇ ದೀಪಕ್ ಕುಮಾರ್ ತೀವ್ರ ಆಕ್ರೋಶ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಎದುರಿಸಬೇಕಾಗಿ ಬಂತು. ಅವರ ಜಿಮ್‌ನಲ್ಲಿದ್ದ ಸುಮಾರು 150 ಸದಸ್ಯರ ಸಂಖ್ಯೆ ದಿಢೀರನೆ  ಕಡಿಮೆ ಆಗಿ ಕೇವಲ 15 ಕ್ಕೆ ಕುಸಿಯಿತು. ಸ್ಥಳೀಯವಾಗಿ ನಡೆದ ವ್ಯವಸ್ಥಿತ ಬಹಿಷ್ಕಾರದಿಂದಾಗಿ ಅವರ ಆದಾಯದ ಮೂಲವೇ ಕಡಿತಗೊಂಡಿತು.. ತಮಗೆ ಬಂದ ಅಲ್ಪಸ್ವಲ್ಪ ಆದಾಯದಲ್ಲಿ ಮಕ್ಕಳ ಶಾಲಾ ಶುಲ್ಕ ಪಾವತಿಸಲು ಮೊದಲ ಆದ್ಯತೆ ನೀಡಿದ್ದರಿಂದ ಜಿಮ್ ಬಾಡಿಗೆ ಪಾವತಿಸಲು ಸಾಧ್ಯವಾಗಿಲ್ಲ ಎಂದು ದೀಪಕ್ ಅಳಲು ತೋಡಿಕೊಂಡಿದ್ದಾರೆ.

ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ, ದೀಪಕ್ ಅವರ ಜಿಮ್‌ನ ಬಾಡಿಗೆ ಬಾಕಿ ಸುಮಾರು 1.6 ಲಕ್ಷದಿಂದ 2.2 ಲಕ್ಷ ರೂಪಾಯಿಗಳಷ್ಟಾಗಿದ್ದು, ಮನೆ ಸಾಲದ ಇಎಂಐ (EMI) ಪಾವತಿಸಲೂ ಅವರು ಪರದಾಡುತ್ತಿದ್ದಾರೆ. ದೀಪಕ್ ಅವರ ಸಾರ್ವಜನಿಕ ನಿಲುವಿನ ಕಾರಣಕ್ಕಾಗಿಯೇ ಜಿಮ್ ಮಾಲೀಕರು ಈಗ ಕಠಿಣ ನಿಲುವು ತಳೆದಿದ್ದಾರೆ ಎನ್ನಲಾಗಿದೆ. ಈ ನಡುವೆ, ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಮತ್ತು ಹಿರಿಯ ಪತ್ರಕರ್ತ ಅಜಿತ್ ಅಂಜುಮ್ ಸೇರಿದಂತೆ ಕೆಲವು ಗಣ್ಯರು ಅವರಿಗೆ ಆರ್ಥಿಕ ಸಹಾಯ ಹಸ್ತ ಚಾಚಿದ್ದಾರೆ. ಇದರೊಂದಿಗೆ, ಅಂದಿನ ಘಟನೆಗೆ ಸಂಬಂಧಿಸಿದಂತೆ ದೀಪಕ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ನ್ಯಾಯಾಲಯವು ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗದಂತೆ ನಿರ್ಬಂಧ ವಿಧಿಸಿದೆ.

ಸಮಾಜದಲ್ಲಿ ಹೆಚ್ಚುತ್ತಿರುವ ಕೋಮು ದ್ವೇಷದ ವಿರುದ್ಧ ಧ್ವನಿ ಎತ್ತುವ ಸಾಮಾನ್ಯ ನಾಗರಿಕರು ಎಂತಹ ಭೀಕರ ಆರ್ಥಿಕ ಮತ್ತು ಸಾಮಾಜಿಕ ಬೆಲೆ ತೆರಬೇಕಾಗುತ್ತದೆ ಎಂಬುದಕ್ಕೆ ದೀಪಕ್ ಕುಮಾರ್ ಸದ್ಯದ ಉದಾಹರಣೆಯಾಗಿದ್ದಾರೆ.

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ರಾಷ್ಟ್ರೀಯ ಸುದ್ದಿ

ಗ್ರಾಹಂ ಸ್ಟೇನ್ಸ್, ಪುಟ್ಟ ಮಕ್ಕಳ ಸಜೀವ ದಹನ ಪ್ರಕರಣ: ಬಜರಂಗದಳದ ದಾರಾ ಸಿಂಗ್ ಬಿಡುಗಡೆ ಅರ್ಜಿ ತಿರಸ್ಕರಿಸಿದ ಒಡಿಶಾ ಸರ್ಕಾರ

ರಾಷ್ಟ್ರೀಯ ಸುದ್ದಿ

ವಿಚಾರಣೆಯೇ ಆರಂಭವಾಗದೆ 6 ವರ್ಷಗಳ ಬಂಧನ, ಸಿಕ್ಕಿದ್ದು 7 ದಿನಗಳ ರಿಲೀಫ್: ಶರ್ಜೀಲ್ ಇಮಾಮ್‌ಗೆ ಮಧ್ಯಂತರ ಜಾಮೀನು 

ರಾಷ್ಟ್ರೀಯ ಸುದ್ದಿ

ಧಾರ್ಮಿಕ ಕಾರಣಗಳಿಂದ ‘ವಂದೇ ಮಾತರಂ’ ಹಾಡದಿದ್ದರೆ ದಂಡನಾತ್ಮಕ ಕ್ರಮ ಕೈಗೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್

ರಾಷ್ಟ್ರೀಯ ಸುದ್ದಿ

‘ಮುಸ್ಲಿಮರು ಗರ್ಬಾಗೆ ಬರುವುದಿದ್ದರೆ ಸಹೋದರಿಯರನ್ನೂ, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧರಿದ್ದಾರೆ’: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

ರಾಷ್ಟ್ರೀಯ ಸುದ್ದಿ

200ಕ್ಕೂ ಹೆಚ್ಚು ಶಂಕಿತರ ಬಂಧನದ ಬೆನ್ನಲ್ಲೇ ‘ಶಹಜಾದ್ ಭಟ್ಟಿ ನೆಟ್‌ವರ್ಕ್’ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಗೃಹ ಸಚಿವಾಲಯ

From Across Varadigara

ರಾಜ್ಯ ಸುದ್ದಿ

ಮಂಗಳೂರು ಹಿಂದುತ್ವದ ಭದ್ರ ಕೋಟೆ, ಸರ್ಕಾರ ಮಾಡುತ್ತಿರುವುದು ಕೇವಲ ರಾಜಕೀಯ ಗಿಮಿಕ್ ಎಂದ ಭರತ್ ಶೆಟ್ಟಿ; ಬಿಜೆಪಿ ಕೊಡುಗೆ ಬಗ್ಗೆ ಪ್ರಶ್ನಿಸಿ ಬುದ್ಧಿ ಹೇಳಿದ ನೆಟ್ಟಿಗರು!

ರಾಜ್ಯ ಸುದ್ದಿ

RDPR‌ ಅಕ್ರಮ ಆರೋಪ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಜೆಡಿಎಸ್ ಪಟ್ಟು

ಸಾಮಾಜಿಕ ತಾಣ

ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೋಮುದ್ವೇಷದ ಫೇಸ್‌ಬುಕ್ ಪೋಸ್ಟ್: ಕೇರಳ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸೇವೆಯಿಂದ ಅಮಾನತು

ರಾಜ್ಯ ಸುದ್ದಿ

ರಾಜ್ಯದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಮೊದಲ 2 ಚರಣಕ್ಕೆ ಮಾತ್ರ ಸೀಮಿತ: ರಾಜ್ಯ ಸರ್ಕಾರದ ಮಹತ್ವದ ಆದೇಶ

ರಾಷ್ಟ್ರೀಯ ಸುದ್ದಿ

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕರಿಸಿದೆ ಎಂದ ಆಯುಷ್ ಮಲಿಕ್: 31 ವರ್ಷದ ಯುವಕನನ್ನು ತಂದೆಯ ಅಕ್ರಮ ವಶದಿಂದ ಮುಕ್ತಗೊಳಿಸಿದ ಅಲಹಾಬಾದ್ ಹೈಕೋರ್ಟ್

ಅಂತಾರಾಷ್ಟ್ರೀಯ

ಸೌದಿ, ಟರ್ಕಿ ಜೊತೆ ರಕ್ಷಣಾ ಒಪ್ಪಂದದ ಬೆನ್ನಲ್ಲೇ ಕುವೈತ್ ಜೊತೆಗೂ ಪಾಕಿಸ್ತಾನ ರಕ್ಷಣಾ ಒಪ್ಪಂದ

ರಾಜ್ಯ ಸುದ್ದಿ

ಕರಾವಳಿಗೆ ಸಂಪುಟದ ಐತಿಹಾಸಿಕ ಕೊಡುಗೆ: ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆ ಮಾನ್ಯತೆ, ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು

ರಾಷ್ಟ್ರೀಯ ಸುದ್ದಿ

ವಿಚಾರಣೆಯೇ ಆರಂಭವಾಗದೆ 6 ವರ್ಷಗಳ ಬಂಧನ, ಸಿಕ್ಕಿದ್ದು 7 ದಿನಗಳ ರಿಲೀಫ್: ಶರ್ಜೀಲ್ ಇಮಾಮ್‌ಗೆ ಮಧ್ಯಂತರ ಜಾಮೀನು 

ಅಂತಾರಾಷ್ಟ್ರೀಯ

“ಚುನಾವಣೆಯಲ್ಲಿ ರಿಪಬ್ಲಿಕನ್ನರನ್ನು ಗೆಲ್ಲಿಸಿದರೆ ಅಮೆರಿಕದ ಪ್ರತಿಯೊಬ್ಬ ಪ್ರಜೆಗೂ 4.76 ಲಕ್ಷ ರೂ.”: ಮತದಾರರಿಗೆ ಡೊನಾಲ್ಡ್ ಟ್ರಂಪ್ ಆಮಿಷ

ರಾಜ್ಯ ಸುದ್ದಿ

ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಸರ್ಕಾರದ ಸಿದ್ಧತೆ: ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ

ರಾಷ್ಟ್ರೀಯ ಸುದ್ದಿ

ಗ್ರಾಹಂ ಸ್ಟೇನ್ಸ್, ಪುಟ್ಟ ಮಕ್ಕಳ ಸಜೀವ ದಹನ ಪ್ರಕರಣ: ಬಜರಂಗದಳದ ದಾರಾ ಸಿಂಗ್ ಬಿಡುಗಡೆ ಅರ್ಜಿ ತಿರಸ್ಕರಿಸಿದ ಒಡಿಶಾ ಸರ್ಕಾರ

ರಾಷ್ಟ್ರೀಯ ಸುದ್ದಿ

ಅತ್ಯಾಚಾರ ದೋಷಿ ರಾಮ್ ರಹೀಮ್‌ಗೆ ಮತ್ತೆ 21 ದಿನಗಳ ಪರೋಲ್: 5 ವರ್ಷಗಳಲ್ಲಿ 17ನೇ ಬಾರಿಗೆ ಜೈಲಿನಿಂದ ಬಿಡುಗಡೆ!

ರಾಜ್ಯ ಸುದ್ದಿ

“ಪೊಲೀಸ್ ಠಾಣೆಗೆ ನುಗ್ಗಿದರೆ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳುಹಿಸುತ್ತೇವೆ”: ಮೈಸೂರಿನ “ಪೇಟೆ ರೌಡಿ”ಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ರಾಷ್ಟ್ರೀಯ ಸುದ್ದಿ

‘ದೇಶ ನಿಮಗೇನು ಮಾಡಿದೆ ಎಂದು ಕೇಳುವ ಬದಲು, ದೇಶಕ್ಕೆ ನಿಮ್ಮ ಕೊಡುಗೆ ಏನು ಎಂಬುದರತ್ತ ಗಮನಹರಿಸಿ’ : ಯುವಜನತೆಗೆ ನಿರ್ಮಲಾ ಸೀತಾರಾಮನ್ ಸಲಹೆ

ರಾಷ್ಟ್ರೀಯ ಸುದ್ದಿ

ನನಗೆ ಮೊದಲಿನಂತೆ ಕೆಲಸ ಮಾಡಲು ಸಾಧ್ಯವಿಲ್ಲ; ಹೊಸ ತಲೆಮಾರಿಗೆ ಜವಾಬ್ದಾರಿ ವಹಿಸಬೇಕು: ನಿತಿನ್ ಗಡ್ಕರಿ

ರಾಷ್ಟ್ರೀಯ ಸುದ್ದಿ

ನ್ಯಾಯಾಲಯದಿಂದ ಶಿಕ್ಷೆಯಾದ ಅತ್ಯಾಚಾರಿಗೆ ಮುಖ ಪುಟದ ಜಾಹೀರಾತು: ತೀವ್ರ ಆಕ್ರೋಶದ ಬಳಿಕ ಬೇಷರತ್ ಕ್ಷಮೆ ಯಾಚಿಸಿದ ‘ದಿ ಹಿಂದೂ’ ಪತ್ರಿಕೆ

ರಾಷ್ಟ್ರೀಯ ಸುದ್ದಿ

‘ಮುಸ್ಲಿಮರು ಗರ್ಬಾಗೆ ಬರುವುದಿದ್ದರೆ ಸಹೋದರಿಯರನ್ನೂ, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧರಿದ್ದಾರೆ’: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

ರಾಷ್ಟ್ರೀಯ ಸುದ್ದಿ

ತಾಲಿಬಾನ್ ವಿರೋಧಿ ಹೋರಾಟಗಾರ್ತಿ ಮಲಾಲಾ ಆತ್ಮಚರಿತ್ರೆ ಓದುಗರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ

ರಾಜ್ಯ ಸುದ್ದಿ

ಕೋಮು ಸೌಹಾರ್ದತೆ ಕೆಡಿಸಲು ಯತ್ನ: ಪುನೀತ್ ಕೆರೆಹಳ್ಳಿ ಸೇರಿ 9 ಮಂದಿ ಬಂಧನ

ರಾಷ್ಟ್ರೀಯ ಸುದ್ದಿ

“ತಲೆ ಒಡೆದೆ, ಆದರೂ ಜೈಲಿಗೆ ಹೋಗಲಿಲ್ಲ”: ಪ್ರಭಾವಿ ನಾಯಕರ ಬೆಂಬಲದ ಬಡಾಯಿ ಕೊಚ್ಚಿಕೊಂಡ ಹಿಂದೂತ್ವ ಇನ್ಫ್ಲುಯೆನ್ಸರ್; ವಿಪಕ್ಷಗಳ ಆಕ್ರೋಶ