ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯ ಚಾಲೋಡ್ ಮಟ್ಟನ್ನೂರು ರಸ್ತೆಯ ಕೂಡಾಲಿ ಕುಂಬತ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಸರಗೋಡು ಮೂಲದ ಯುವಕ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಬೆಂಗಳೂರುದಿಂದ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ.
ಮೃತರನ್ನು ಕಾಸರಗೋಡು ಜಿಲ್ಲೆಯ ಮಡಿಕೈ ನಿವಾಸಿ ರಿಝ್ವಾನ್, ಕೇರಳದ ಶಾನ್, ಹಾಗೂ ಉತ್ತರ ಪ್ರದೇಶ ಮೂಲದ ಪರ್ವೇಜ್ ಛೇತ್ರಿ ಮತ್ತು ಹರ್ಷ್ ಎಂದು ಗುರುತಿಸಲಾಗಿದೆ.
SIR: 1 ಕೋಟಿಗೂ ಹೆಚ್ಚು ಹೆಸರುಗಳ ASDDO ವರ್ಗೀಕರಣ; ಪರಿಶೀಲನೆಗೆ ಹೆಚ್ಚಿನ ಕಾಲಾವಕಾಶ ಮತ್ತು ನಿಗದಿತ ಪ್ರಕ್ರಿಯೆ ಅನುಸರಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಸಿಎಂ ಪತ್ರ
ಮಂಗಳೂರು ರೈಲ್ವೆ ವ್ಯಾಪ್ತಿ ವರ್ಗಾವಣೆ: ತೀರ್ಮಾನ ತಡೆಹಿಡಿಯಲು ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ಕೇರಳ ಸಿಎಂ ವಿ. ಡಿ. ಸತೀಶನ್
ಹಿಜಾಬ್ ಇಸ್ಲಾಂನ ಕಡ್ಡಾಯ ಧಾರ್ಮಿಕ ಆಚರಣೆಯಲ್ಲ: ಮುಸ್ಲಿಂ ವಿದ್ಯಾರ್ಥಿನಿಯ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್
ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು
ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ
ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು
ಬೀದಿ ನಾಯಿ ಕಾಟ: ನಾಯಿ ವೇಷ ಧರಿಸಿ ಕಲೆಕ್ಟರೇಟ್‌ನಲ್ಲಿ ವಿನೂತನ ಪ್ರತಿಭಟನೆ
“ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನನಗೇ ಈ ಸ್ಥಿತಿಯಾದರೆ ಸಾಮಾನ್ಯರ ಕಥೆಯೇನು?”: ಪಂಜಾಬ್ SIR ಗೊಂದಲ; ಮಾಜಿ ರಾಯಭಾರಿಗೇ ಪೌರತ್ವ ಸಾಬೀತುಪಡಿಸುವ ಸ್ಥಿತಿ
ಭರವಸೆ ಈಡೇರಿಸದ ಕೇಂದ್ರ ಸರ್ಕಾರ: ಸೆಪ್ಟೆಂಬರ್ 5 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ ಘೋಷಿಸಿದ ಸಿಜೆಪಿ
ಕೇಂದ್ರ ಸಚಿವರ ಬಂಗಲೆಗಳ ನಿರ್ವಹಣೆ, ದುರಸ್ತಿಗೆ ಶತಕೋಟಿ ವೆಚ್ಚ; 2025-26ರಲ್ಲಿ ದಾಖಲೆಯ 92.35 ಕೋಟಿ ರೂ. ಖರ್ಚು: RTI ಮೂಲಕ ಮಾಹಿತಿ ಬಹಿರಂಗ
ಅತ್ಯಾಚಾರ ದೋಷಿ ರಾಮ್ ರಹೀಮ್‌ಗೆ ಮತ್ತೆ 21 ದಿನಗಳ ಪರೋಲ್: 5 ವರ್ಷಗಳಲ್ಲಿ 17ನೇ ಬಾರಿಗೆ ಜೈಲಿನಿಂದ ಬಿಡುಗಡೆ!
“ಇಮ್ರಾನ್ ಖಾನ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ”: ಪಾಕ್ ಪ್ರಧಾನಿಗೆ ಭಾರತದ ಗವಾಸ್ಕರ್, ಕಪಿಲ್ ದೇವ್ ಸಹಿತ 21 ಕ್ರಿಕೆಟ್ ದಿಗ್ಗಜರ ಪತ್ರ
ಕಾರಿನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಮಟ್ಟನ್ನೂರು ಪೊಲೀಸರು ಸ್ಥಳಕ್ಕೆ ಧಾವಿಸಿ, ಕಾರಿನಲ್ಲಿ ಸಿಲುಕಿದ್ದವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು.
