ಕಾಣಿಸದ್ದು - ಕೇಳಿಸದ್ದು

‘ಐಐಟಿ ಬಾಬಾ’ ಬಂಧನ: ಆಧ್ಯಾತ್ಮಿಕತೆಯ ಹೆಸರಲ್ಲಿ ಯುವತಿಯರ ಲೈಂಗಿಕ ಕಿರುಕುಳ, ಬ್ಲಾಕ್‌ಮೇಲ್ ಆರೋಪ!

Reading…
Follow Us

ಸಾರಾಂಶ

ಯೂಟ್ಯೂಬ್ ಪ್ರವಚನಗಳ ಮೂಲಕ ಐಟಿ ವೃತ್ತಿಪರರು ಹಾಗೂ ಸುಶಿಕ್ಷಿತ ಯುವತಿಯರನ್ನು ಸೆಳೆದು, ಸಾಂಪ್ರದಾಯಿಕ ವಿಧಿವಿಧಾನಗಳಿಲ್ಲದ 'ಗಂಧರ್ವ ವಿವಾಹ'ದ ನೆಪದಲ್ಲಿ ಲೈಂಗಿಕ ಶೋಷಣೆ ಮತ್ತು ಬ್ಲಾಕ್‌ಮೇಲ್ ಮಾಡುತ್ತಿದ್ದ ‘ಐಐಟಿ ಬಾಬಾ’ ಖ್ಯಾತಿಯ ಅಭಿಷೇಕ್ ಮಿಶ್ರಾನನ್ನು ಮಥುರಾ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್‌ಗಢದ ನರ್ಸಿಂಗ್ ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಈ ಜಾಲ ಬಯಲಾಗಿದೆ. ಪ್ರಸಾದ ಎಂದು ನಂಬಿಸಿ ಹಾಲಿನಲ್ಲಿ ಮಾದಕ ದ್ರವ್ಯ ಬೆರೆಸಿ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯ ಮೊಬೈಲ್‌ನಲ್ಲಿ ಆಕ್ಷೇಪಾರ್ಹ ವಿಡಿಯೋಗಳು ಪತ್ತೆಯಾಗಿದ್ದು, ತನಿಖೆ ಪ್ರಗತಿಯಲ್ಲಿದೆ. 

ಆಧ್ಯಾತ್ಮಿಕತೆಯ ಹೆಸರಿನಲ್ಲಿ ಸುಶಿಕ್ಷಿತ ಯುವತಿಯರನ್ನು ಸೆಳೆದು ಲೈಂಗಿಕ ಶೋಷಣೆ ಹಾಗೂ ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಐಐಟಿ ರೂರ್ಕಿ ಸಂಸ್ಥೆಯ ಪದವೀಧರನೊಬ್ಬನನ್ನು ಉತ್ತರ ಪ್ರದೇಶದ ಮಥುರಾ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಸ್ಥಳೀಯವಾಗಿ ‘ಐಐಟಿ ಬಾಬಾ’ ಎಂದೇ ಚರ್ಚೆಗೆ ಒಳಗಾಗಿರುವ, ಒಡಿಶಾದ ಭುವನೇಶ್ವರ ಮೂಲದ 29 ವರ್ಷದ ಅಭಿಷೇಕ್ ಮಿಶ್ರಾ ಬಂಧಿತ ಆರೋಪಿಯಾಗಿದ್ದಾನೆ. ಈತ ಮಥುರಾದ ಗೋವರ್ಧನ ವ್ಯಾಪ್ತಿಯ ರಾಧಾ ಕುಂಡ್ ಪ್ರದೇಶದಲ್ಲಿ ಆಶ್ರಮದಂತಹ ವಸತಿ ನಿರ್ಮಿಸಿಕೊಂಡು, ತನ್ನನ್ನು ತಾನು ಆಧ್ಯಾತ್ಮಿಕ ಗುರು ಎಂದು ಬಿಂಬಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಛತ್ತೀಸ್‌ಗಢ ಮೂಲದ 22 ವರ್ಷದ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿನಿ ನೀಡಿದ ದೂರಿನ ಆಧಾರದ ಮೇಲೆ ಜೂನ್ 1, 2026 ರಂದು ಈ ಬಂಧನ ನಡೆದಿದೆ. ಆರೋಪಿ ಅಭಿಷೇಕ್ ಮಿಶ್ರಾ ಸಾಮಾಜಿಕ ಜಾಲತಾಣಗಳಲ್ಲಿ ‘ಆದಿಕರ್ತ ನಾರಾಯಣ ದಾಸ್’ ಎಂಬ ಹೆಸರಿನಲ್ಲಿ ಸಕ್ರಿಯನಾಗಿದ್ದ. ಭಗವದ್ಗೀತೆಯ ಕುರಿತು ಆನ್‌ಲೈನ್ ಮೂಲಕ ಪ್ರವಚನಗಳನ್ನು ನೀಡುತ್ತಾ ಐಟಿ ಉದ್ಯೋಗಿಗಳು, ಎಂಜಿನಿಯರ್‌ಗಳು ಹಾಗೂ ಸುಶಿಕ್ಷಿತ ಯುವತಿಯರನ್ನು ತನ್ನತ್ತ ಆಕರ್ಷಿಸುತ್ತಿದ್ದ ಎನ್ನಲಾಗಿದೆ. ದೂರು ನೀಡಿರುವ ಯುವತಿಯನ್ನು ತನ್ನ ನಿವಾಸಕ್ಕೆ ಕರೆಸಿಕೊಂಡಿದ್ದ ಆರೋಪಿ, ಪ್ರಸಾದ ಎಂದು ನಂಬಿಸಿ ಹಾಲಿನಲ್ಲಿ ಮಾದಕ ದ್ರವ್ಯ ಬೆರೆಸಿ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಈ ಕೃತ್ಯವನ್ನು ವಿಡಿಯೋ ಚಿತ್ರೀಕರಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಮಥುರಾ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಚಂದ್ರ ರಾವತ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿ ಅಭಿಷೇಕ್ ಮಿಶ್ರಾ ಐಐಟಿ ರೂರ್ಕಿಯಲ್ಲಿ 2017-2021 ರ ಅವಧಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದ. ವಾರ್ಷಿಕ 20 ಲಕ್ಷ ರೂಪಾಯಿ ಪ್ಯಾಕೇಜ್‌ನ ಕಾರ್ಪೊರೇಟ್ ಕೆಲಸದಲ್ಲಿದ್ದ ಈತ, ಮೂರು ವರ್ಷಗಳ ಹಿಂದೆ ಅದನ್ನು ತೊರೆದು ಮಥುರಾಕ್ಕೆ ಬಂದಿದ್ದ. ಮೊದಲು ಬಾಡಿಗೆ ಮನೆಯಲ್ಲಿದ್ದ ಈತ, ನಂತರ ಸ್ವಂತ ಮನೆ ಖರೀದಿಸಿ ಅದನ್ನು ಆಶ್ರಮದ ಮಾದರಿಯಲ್ಲಿ ಬದಲಾಯಿಸಿಕೊಂಡು ಭಕ್ತರಿಗೆ ಆಶ್ರಯ ನೀಡಲು ಆರಂಭಿಸಿದ್ದ.  

ತನಿಖೆಯ ವೇಳೆ ಅತ್ಯಂತ ಆಘಾತಕಾರಿ ಅಂಶವೊಂದು ಹೊರಬಿದ್ದಿದ್ದು, ಆರೋಪಿಯು ತನ್ನ ಆಶ್ರಮಕ್ಕೆ ಬರುವ ಸುಶಿಕ್ಷಿತ ಯುವತಿಯರನ್ನು ವ್ಯವಸ್ಥಿತವಾಗಿ ಬ್ರೈನ್‌ವಾಶ್ ಮಾಡುತ್ತಿದ್ದ. ಗುಂಪಿನಲ್ಲಿದ್ದ ಯುವತಿಯರನ್ನು ಪುಸಲಾಯಿಸಲು ಮತ್ತು ತನ್ನ ಕೃತ್ಯಗಳಿಗೆ ಧಾರ್ಮಿಕ ಮುಖವಾಡ ತೊಡಿಸಲು ಈತ ‘ಗಂಧರ್ವ ವಿವಾಹ’ದ ತಂತ್ರವನ್ನು ಬಳಸುತ್ತಿದ್ದ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಪುರಾತನ ಸಂಪ್ರದಾಯದ ಪ್ರಕಾರ ಯಾವುದೇ ಅಗ್ನಿ ಸಾಕ್ಷಿ, ಮಂತ್ರ-ಮಾಂಗಲ್ಯ, ಹಿರಿಯರ ಒಪ್ಪಿಗೆ ಅಥವಾ ಸಾಮಾಜಿಕ ಆಚರಣೆಗಳಿಲ್ಲದೆ ಕೇವಲ ಇಬ್ಬರ ಪರಸ್ಪರ ಒಪ್ಪಿಗೆಯಿಂದ ಆಗುವ ವಿವಾಹ ಪದ್ಧತಿಯನ್ನು ಈತ ತನ್ನ ಶೋಷಣೆಗೆ ದಾಳವಾಗಿಸಿಕೊಂಡಿದ್ದ. ಇಂತಹ ಮುಖವಾಡದ ಅಡಿಯಲ್ಲಿ ಈತ ಯುವತಿಯರೊಂದಿಗೆ ದೈಹಿಕ ಸಂಪರ್ಕ ಬೆಳೆಸುತ್ತಿದ್ದ ಹಾಗೂ ತನ್ನ ಅನುಯಾಯಿಗಳ ನಡುವೆಯೂ ಇಂತಹ ಅನಧಿಕೃತ ಸಂಬಂಧಗಳನ್ನು ಪ್ರೋತ್ಸಾಹಿಸುತ್ತಿದ್ದ ಎಂದು ಗೋವರ್ಧನ ವೃತ್ತದ ಡಿಎಸ್‌ಪಿ ಅನಿಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.  

ಬಂಧನದ ವೇಳೆ ಪೊಲೀಸರು ಆರೋಪಿಯ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ಅದರಲ್ಲಿ 12 ಕ್ಕೂ ಹೆಚ್ಚು ಆಕ್ಷೇಪಾರ್ಹ ಚಿತ್ರಗಳು ಮತ್ತು ವಿಡಿಯೋಗಳು ಪತ್ತೆಯಾಗಿವೆ. ಇದೇ ವೇಳೆ ಆಶ್ರಮದ ಆವರಣದಲ್ಲಿದ್ದ ಬಿಲಾಸಪುರದ ಯುವತಿ, ಮಧ್ಯಪ್ರದೇಶದ ಛತ್ತರಪುರದ  ಯುವತಿ ಹಾಗೂ ಒಬ್ಬ ಯುವಕನನ್ನು ಪೊಲೀಸರು ರಕ್ಷಿಸಿ ಅವರ ಪೋಷಕರಿಗೆ ಒಪ್ಪಿಸಿದ್ದಾರೆ. ಮೇ 25 ರಂದೇ ಗೋವರ್ಧನ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ ಅತ್ಯಾಚಾರ, ಸುಲಿಗೆ, ಕ್ರಿಮಿನಲ್ ಬೆದರಿಕೆ ಹಾಗೂ ಲೈಂಗಿಕ ಕಿರುಕುಳ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಸದ್ಯ ಆರೋಪಿಯನ್ನು ಜೈಲಿಗಟ್ಟಲಾಗಿದ್ದು, ಈತನ ಜಾಲಕ್ಕೆ ಬಿದ್ದಿರುವ ಇತರ ಸಂತ್ರಸ್ತರ ಬಗ್ಗೆ ತನಿಖೆ ಮುಂದುವರಿದಿದೆ.  

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ವೀಡಿಯೊ

ಗಂಗಾಜಲ ಹಿಡಿದು ‘ಲಂಚ ಹಂಚಿಕೆ’ ಪ್ರಮಾಣ ವಚನ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿಡಿಯೋ ವೈರಲ್, ತನಿಖೆಗೆ ಆದೇಶ

ವೀಡಿಯೊ

ಉತ್ತರ ಪ್ರದೇಶ: ವಕ್ಫ್ ಮಂಡಳಿ ನೋಂದಾಯಿತ ಎನ್ನಲಾದ 58 ವರ್ಷ ಹಳೆಯ ಮದರಸಾ ಬುಲ್ಡೋಜರ್ ಮೂಲಕ ತೆರವು

ವೀಡಿಯೊ

ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ

ರಾಷ್ಟ್ರೀಯ ಸುದ್ದಿ

ಯುವಶಕ್ತಿಯ ಒಕ್ಕೂಟ: ಉದ್ಯೋಗ-ಶಿಕ್ಷಣದ ಹಕ್ಕಿಗಾಗಿ ಉತ್ತರ ಪ್ರದೇಶದಲ್ಲಿ ‘ಜಸ್ಟಿಸ್ ಮೋರ್ಚಾ’ ಸ್ಥಾಪನೆ: 50 ದಿನಗಳ ರಾಜ್ಯವ್ಯಾಪಿ ಅಭಿಯಾನ ಘೋಷಣೆ

From Across Varadigara

ರಾಷ್ಟ್ರೀಯ ಸುದ್ದಿ

ಪಾಕಿಸ್ತಾನದ ಗೂಢಚಾರಿಕೆ ಜಾಲಕ್ಕೆ ಭಾರತೀಯ ಸಿಮ್ ಕಾರ್ಡ್: ರಾಜಸ್ಥಾನದಲ್ಲಿ ಶಂಕಿತ ISI ಏಜೆಂಟ್ ಬಲ್ವಿಂದರ್ ಸಿಂಗ್ ಬಂಧನ

ರಾಷ್ಟ್ರೀಯ ಸುದ್ದಿ

ತಾಲಿಬಾನ್ ವಿರೋಧಿ ಹೋರಾಟಗಾರ್ತಿ ಮಲಾಲಾ ಆತ್ಮಚರಿತ್ರೆ ಓದುಗರ ಮೇಲೆ ಬಜರಂಗದಳ ಕಾರ್ಯಕರ್ತರಿಂದ ಹಲ್ಲೆ

ಅಂತಾರಾಷ್ಟ್ರೀಯ

ನೇಪಾಳ ಭೀಕರ ಪ್ರವಾಹ: 105 ಭಾರತೀಯರು ಸೇರಿ 384 ಪ್ರವಾಸಿಗರು ನಾಪತ್ತೆ, ಬಿಹಾರದಲ್ಲೂ ಹೈಅಲರ್ಟ್

ಸುತ್ತ - ಮುತ್ತ

Coastal Friends Mangaloreಗೆ ನೂತನ ಸಾರಥ್ಯ: ಅಧ್ಯಕ್ಷರಾಗಿ ಶಮೀರ್ ಲಕ್ಕಿಸ್ಟಾರ್ ಆಯ್ಕೆ

ಸಾಮಾಜಿಕ ತಾಣ

ವಿಪಕ್ಷಗಳ ವ್ಯಂಗ್ಯಕ್ಕೆ ಭಕ್ತಿಗೀತೆಯ ಬಳಕೆ: ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ವಿಡಿಯೋ ಡಿಲೀಟ್ ಮಾಡಿದ ಬಿಜೆಪಿ

ಸಾಮಾಜಿಕ ತಾಣ

ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೋಮುದ್ವೇಷದ ಫೇಸ್‌ಬುಕ್ ಪೋಸ್ಟ್: ಕೇರಳ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸೇವೆಯಿಂದ ಅಮಾನತು

ವೀಡಿಯೊ

ಶಿಕ್ಷಕರ ಕೊರತೆ ಖಂಡಿಸಿ ರಸ್ತೆಗಿಳಿದ ಲಕ್ನೋ ವಿದ್ಯಾರ್ಥಿಗಳು: ಸಚಿವ ಅಸೀಮ್ ಅರುಣ್ ಭರವಸೆ ನಂತರ ಪ್ರತಿಭಟನೆ ಹಿಂಪಡೆತ

ರಾಜ್ಯ ಸುದ್ದಿ

‘ನಾವು ಕೇಸು, ಜೈಲುಗಳಿಗೆ ಹೆದರುವವರಲ್ಲ’: ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಡಿ.ಕೆ. ಶಿವಕುಮಾರ್ ಆಕ್ರೋಶ

ರಾಷ್ಟ್ರೀಯ ಸುದ್ದಿ

ಜಾಗತಿಕ ಹೂಡಿಕೆದಾರರಿಗೆ ಏಷ್ಯಾದಲ್ಲೇ ಅತ್ಯಂತ ಕನಿಷ್ಠ ಆದ್ಯತೆಯಾಗಿ ಭಾರತೀಯ ಷೇರು ಮಾರುಕಟ್ಟೆ: ಬ್ಯಾಂಕ್ ಆಫ್ ಅಮೆರಿಕ ಸಮೀಕ್ಷೆಯಲ್ಲಿ ಕಳವಳಕಾರಿ ಮಾಹಿತಿ ಬಹಿರಂಗ

ರಾಜ್ಯ ಸುದ್ದಿ

ಬಾಗಲಕೋಟೆ: ತರಗತಿ ವೇಳೆಯೇ ಶಾಲಾ ಛಾವಣಿ ಕುಸಿತ, ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ಸುದ್ದಿ

NRIಗಳಿಗೆ ಪ್ರತ್ಯೇಕ ಇಲಾಖೆ: ಕರ್ನಾಟಕ ಸಚಿವ ಸಂಪುಟದಿಂದ ಮಹತ್ವದ ಅನುಮೋದನೆ

ರಾಷ್ಟ್ರೀಯ ಸುದ್ದಿ

CJP ಒಂದೆರಡು ರಾಜ್ಯಗಳಲ್ಲಿ ಅಧಿಕಾರ ಹಿಡಿದರೆ ಅಚ್ಚರಿಯೇನಿಲ್ಲ; ರಾಷ್ಟ್ರೀಯ ಮಟ್ಟದಲ್ಲಿ ‘ತೃತೀಯ ಶಕ್ತಿ’ಯಾಗುವುದು ಅನುಮಾನ: ಪಿ. ಚಿದಂಬರಂ

ವಿಶೇಷ ಲೇಖನ

FIRಗಳೇ ಇಲ್ಲದೇ RSS ಗಲಭೆಯನ್ನು ಹೇಗೆ ರೂಪಿಸುತ್ತೆ ? ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿಕೆಯ ಅಸಲಿಯತ್ತೇನು?

ರಾಷ್ಟ್ರೀಯ ಸುದ್ದಿ

ಪ್ರತಿ ಗಂಟೆಗೆ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ 21 ಮಂದಿ! ರೋಗ, ಯುದ್ಧಕ್ಕಿಂತಲೂ ಭೀಕರವಾಯಿತೇ ಭಾರತದ ರಸ್ತೆ ಅಪಘಾತ?

ರಾಷ್ಟ್ರೀಯ ಸುದ್ದಿ

ದೆಹಲಿಯಲ್ಲಿ 90 ಕೋಟಿ ರೂ. ಸೈಕಲ್ ಖರೀದಿ ಹಗರಣ? 4,200 ರೂ. ಸೈಕಲ್‌ಗೆ 6,957 ರೂ. ಪಾವತಿಸಿದ ಸರ್ಕಾರ: ಆಪ್ ಆರೋಪ

ರಾಜ್ಯ ಸುದ್ದಿ

“ಕುಮಾರಸ್ವಾಮಿಯವರೇ, ನನ್ನ ಮೈಗೆ ಕೆಸರು ಅಂಟಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ” : ಕೆಪಿಎಸ್‌ಸಿ ಅಕ್ರಮದ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

ವೀಡಿಯೊ

ಉತ್ತರ ಪ್ರದೇಶ: ಶಾಲೆಗೆ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ರಾಷ್ಟ್ರಧ್ವಜ ಹಿಡಿದು ಡಿಎಂ ಕಚೇರಿಗೆ ಮುತ್ತಿಗೆ ಹಾಕಿದ ಶಾಲಾ ಮಕ್ಕಳು

ರಾಷ್ಟ್ರೀಯ ಸುದ್ದಿ

“ಮೂರು ದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನನಗೇ ಈ ಸ್ಥಿತಿಯಾದರೆ ಸಾಮಾನ್ಯರ ಕಥೆಯೇನು?”: ಪಂಜಾಬ್‌ SIR ಗೊಂದಲ; ಮಾಜಿ ರಾಯಭಾರಿಗೇ ಪೌರತ್ವ ಸಾಬೀತುಪಡಿಸುವ ಸ್ಥಿತಿ

ರಾಷ್ಟ್ರೀಯ ಸುದ್ದಿ

“ತಲೆ ಒಡೆದೆ, ಆದರೂ ಜೈಲಿಗೆ ಹೋಗಲಿಲ್ಲ”: ಪ್ರಭಾವಿ ನಾಯಕರ ಬೆಂಬಲದ ಬಡಾಯಿ ಕೊಚ್ಚಿಕೊಂಡ ಹಿಂದೂತ್ವ ಇನ್ಫ್ಲುಯೆನ್ಸರ್; ವಿಪಕ್ಷಗಳ ಆಕ್ರೋಶ

ರಾಜ್ಯ ಸುದ್ದಿ

ಮಂಗಳೂರು ರೈಲ್ವೆ ವ್ಯಾಪ್ತಿ ವರ್ಗಾವಣೆ: ತೀರ್ಮಾನ ತಡೆಹಿಡಿಯಲು ಆಗ್ರಹಿಸಿ ಪ್ರಧಾನಿಗೆ ಪತ್ರ ಬರೆದ ಕೇರಳ ಸಿಎಂ ವಿ. ಡಿ. ಸತೀಶನ್