ವರದಿಗಾರ – ಮೇ.14: ಕೇರಳದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಚರ್ಚೆಗೆ ಕೊನೆಗೂ ತೆರೆ ಬಿದ್ದಂತೆ ಕಾಣುತ್ತಿದೆ. ಅದು ವಿ.ಡಿ. ಸತೀಶನ್ ಅವರನ್ನು ಮುಂದಿನ ಕೇರಳ ಮುಖ್ಯಮಂತ್ರಿಯಾಗಿ ನೇಮಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ.
ಸತೀಶನ್ ರನ್ನು ಮುಖ್ಯಮಂತ್ರಿಯಾಗಿ ಘೋಷಿಸುವ ಮುನ್ನ ಹಲವು ಹೈಡ್ರಾಮಕ್ಮೆ ಕೇರಳ ರಾಜಕೀಯ ಸಾಕ್ಷಿಯಾಗಿದೆ. ಆರೋಪ-ಪ್ರತ್ಯಾರೋಪ.. ಜನಬೆಂಬಲದ ಸಭೆ ಹೀಗೆ ಹಲವು ಪ್ರಯತ್ನಗಳು ನಡೆದಿತ್ತು. ಕೊನೆಗೂ ಚುನಾವಣಾ ಫಲಿತಾಂಶದ ಹತ್ತು ದಿನದ ಬಳಿಕ ಈ ನಿರ್ಧಾರ ಪ್ರಕಟವಾಗಿದೆ.
ಅನುದಾನ ತಂದ ಮಾಜಿ ಶಾಸಕನಿಗೇ ಉದ್ಘಾಟನೆಯ ಅವಕಾಶ ನೀಡಿದ ಹಾಲಿ ಶಾಸಕ : ರಾಜಕೀಯದಲ್ಲೊಂದು “ಕೇರಳ ಸ್ಟೋರಿ”!
ಧಾರ್ಮಿಕ ಕಾರಣಗಳಿಂದ ‘ವಂದೇ ಮಾತರಂ’ ಹಾಡದಿದ್ದರೆ ದಂಡನಾತ್ಮಕ ಕ್ರಮ ಕೈಗೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್
‘ಮುಸ್ಲಿಮರು ಗರ್ಬಾಗೆ ಬರುವುದಿದ್ದರೆ ಸಹೋದರಿಯರನ್ನೂ, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧರಿದ್ದಾರೆ’: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ
ವಿಚಾರಣೆಯೇ ಆರಂಭವಾಗದೆ 6 ವರ್ಷಗಳ ಬಂಧನ, ಸಿಕ್ಕಿದ್ದು 7 ದಿನಗಳ ರಿಲೀಫ್: ಶರ್ಜೀಲ್ ಇಮಾಮ್‌ಗೆ ಮಧ್ಯಂತರ ಜಾಮೀನು
ತಿರುವನಂತಪುರಂನಲ್ಲಿ ಮಧ್ಯಾಹ್ನ 1 ಗಂಟೆಗೆ ಸಿ.ಎಲ್.ಪಿ. (ಕಾಂಗ್ರೆಸ್ ಲೆಜಿಸ್ಲೇಟಿವ್ ಪಾರ್ಟಿ) ಸಭೆ ನಡೆಯುವುದಾಗಿತ್ತು. ಆದರೆ ದೆಹಲಿಯಲ್ಲಿ ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ಮುಖ್ಯ ನಾಯಕರೊಂದಿಗೆ ಕೊನೆಯ ಕ್ಷಣದ ಮಾತುಕತೆಗಳು ನಡೆದು ಸಭೆಯು ವಿಳಂಬಗೊಂಡಿತು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರು ಕೆಸಿ ವೇಣುಗೋಪಾಲ್ ರವರ ಮನವೊಲಿಸುವಲ್ಲಿ ಸಫಲರಾಗಿದ್ದಾರೆ ಎಂಬುವುದಾಗಿ ತಿಳಿದು ಬಂದಿದೆ.
ಸತೀಶನ್ ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ( ಹಿಂದಿನ ವಿರೋಧ ಪಕ್ಷದ ನಾಯಕ ಮತ್ತು ಗೃಹ ಸಚಿವ) ಇವರು ಮೂವರ ನಡುವೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸ್ಪರ್ಧೆ ಏರ್ಪಟ್ಡಿತ್ತು. ಕೊನೆಗೆ ಕಾಂಗ್ರೆಸ್ ಹೈಕಮಾಂಡ್ ಸತೀಶನ್ ರವರನ್ನು ಷೋಷಿಸಿದೆ. ಈ ಮೂಲಕ ಕೇರಳದ ವಿವಿದೆಡೆ ಸಂಭ್ರಮಾಚರಣೆ ನಡೆಯುತ್ತಿದೆ.
ಸತೀಶನ್ ಅವರಿಗೆ ಕಾಂಗ್ರೆಸ್ ಮಿತ್ರಪಕ್ಷಗಳು, ವಿಶೇಷವಾಗಿ 22 ಶಾಸಕರನ್ನು ಹೊಂದಿರುವ ಮುಸ್ಲಿಂ ಲೀಗ್ ಬೆಂಬಲವಿದೆ. ಇದಲ್ಲದೆ ಪಕ್ಷದ ಬಹುತೇಕ ಕಾರ್ಯಕರ್ತರು ಮತ್ತು ಸದಸ್ಯರು ವಿರೋಧ ಪಕ್ಷದ ನಾಯಕರಾಗಿ ಪರಿಣಾಮಕಾರಿ ನಾಯಕತ್ವ ನೋಡೊದ ಸತೀಶನ್ ಮತ್ತು ಕಳೆದ 5 ವರ್ಷಗಳಲ್ಲಿ ಕೇರಳದಾದ್ಯಂತ ನಡೆಸಿದ ರಾಜಕೀಯ ಸಮ್ಮೋಹನವೇ ಯುಡಿಎಫ್‌ನ ಭಾರೀ ಗೆಲುವಿಗೆ ಕಾರಣವೆಂದು ಹೇಳಲಾಗುತ್ತಿದೆ.

