ರಾಜ್ಯ ಸುದ್ದಿ

“TVK – Try Vijay As King”; ನಟ ವಿಜಯ್‌ ಅದ್ವಿತೀಯ ಗೆಲುವಿಗೆ ಶಿವರಾಜ್‌ ಕುಮಾರ್‌ ಅಭಿನಂದನೆ

Reading…
Follow Us

ವರಿಗಾರ-ಮೇ.05: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ಅದ್ವಿತೀಯ ಗೆಲುವು ಸಾಧಿಸಿರುವ ಬೆನ್ನಲ್ಲೇ, ಕನ್ನಡದ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ವಿಜಯ್ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಶುಭ ಹಾರೈಸಿರುವ ಶಿವಣ್ಣ, ಈ ಹಿಂದೆ ತಾವು ನೀಡಿದ್ದ  “TVK – Try Vijay As King” ಹೇಳಿಕೆಯನ್ನು ಮತ್ತೆ ನೆನಪಿಸಿಕೊಂಡಿದ್ದಾರೆ.

ಸತತ ರಾಜಕೀಯ ವಾಗ್ದಾಳಿಗಳ ನಡುವೆಯೂ ವಿಜಯ್ ತೋರಿದ ಸಂಯಮವನ್ನು ಶಿವಣ್ಣ ಕೊಂಡಾಡಿದ್ದಾರೆ. “ನಟ ವಿಜಯ್ ಅವರೇ, ಇದು ನೀವು ಪಡೆಯಲೇಬೇಕಾದ ಅತ್ಯಂತ ಅರ್ಹವಾದ ಗೆಲುವು. ನಿಮ್ಮ ಮೇಲೆ ತೀವ್ರವಾದ ವಾಗ್ದಾಳಿಗಳು ನಡೆದಾಗ ಮೌನವಾಗಿದ್ದು, ನಿಮ್ಮ ಕೆಲಸದ ಮೂಲಕವೇ ಉತ್ತರ ನೀಡುವುದು ನಿಜವಾದ ಮತ್ತು ಅತಿ ದೊಡ್ಡ ವಿಜಯ” ಎಂದು ಶಿವರಾಜ್‌ಕುಮಾರ್ ಹೇಳಿದ್ದಾರೆ.

ಈ ಹಿಂದೆ ಪತ್ರಿಕಾಗೋಷ್ಠಿಯೊಂದರಲ್ಲಿ ವಿಜಯ್ ಅವರ ಪಕ್ಷದ ಹೆಸರಿನ ಬಗ್ಗೆ ಶಿವಣ್ಣ ನೀಡಿದ್ದ ವ್ಯಾಖ್ಯಾನ ಈಗ ನಿಜವಾಗಿದೆ. ಈ ಕುರಿತು ಬರೆದುಕೊಂಡಿರುವ ಅವರು, “ಹಿಂದೊಮ್ಮೆ ಪತ್ರಿಕಾಗೋಷ್ಠಿಯಲ್ಲಿ ನಾನು ತಮಾಷೆಯಾಗಿ ‘TVK ಅಂದರೆ – Try Vijay As King’ (ವಿಜಯ್ ಅವರನ್ನು ರಾಜನನ್ನಾಗಿ ನೋಡಿ) ಎಂದು ಹೇಳಿದ್ದೆ. ಇಂದು ನೀವು ಒಬ್ಬ ರಾಜನಂತೆ ಎತ್ತರವಾಗಿ ನಿಂತಿದ್ದೀರಿ” ಎಂದು ವಿಜಯ್ ಅವರ ರಾಜಕೀಯ ಕ್ರಾಂತಿಯನ್ನು ಶಿವಣ್ಣ ಕೊಂಡಾಡಿದ್ದಾರೆ.

“ತಮಿಳುನಾಡಿನ ಜನತೆಗೆ ನೀವು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುವಂತಾಗಲಿ ಮತ್ತು ರಾಜ್ಯದಲ್ಲಿ ಸದಾ ಪ್ರಗತಿ ಇರಲಿ” ಎಂದು ಹಾರೈಸಿದ್ದಾರೆ. ಶಿವರಾಜ್‌ಕುಮಾರ್ ಮತ್ತು ವಿಜಯ್ ನಡುವೆ ಮೊದಲಿನಿಂದಲೂ ಉತ್ತಮ ಸ್ನೇಹ ಸಂಬಂಧವಿದ್ದು, ಶಿವಣ್ಣ ಅವರು ವಿಜಯ್ ನಟನೆಯ ‘ಲಿಯೋ’ ಚಿತ್ರದ ಯಶಸ್ಸಿಗೂ ಶುಭ ಹಾರೈಸಿದ್ದರು. ಇದೀಗ ವಿಜಯ್ ಅವರು ರಾಜಕೀಯದಲ್ಲಿ ‘ಕಿಂಗ್’ ಆಗಿ ಹೊರಹೊಮ್ಮಿರುವುದಕ್ಕೆ ಇಡೀ ಸ್ಯಾಂಡಲ್‌ವುಡ್ ಪರವಾಗಿ ಹ್ಯಾಟ್ರಿಕ್ ಹೀರೋ ಸಂಭ್ರಮ ವ್ಯಕ್ತಪಡಿಸಿದ್ದಾರೆ.

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ರಾಜ್ಯ ಸುದ್ದಿ

ತುಳು ನುಡಿಗೆ ಹೆಚ್ಚುವರಿ ಅಧಿಕೃತ ಸ್ಥಾನಮಾನ ಸ್ವಾಗತಾರ್ಹ; 8ನೇ ಪರಿಚ್ಛೇದ ಸೇರ್ಪಡೆ ತನಕ ನಮ್ಮ ಹಕ್ಕೊತ್ತಾಯ ಮುಂದುವರಿಕೆ: ಕರ್ನಾಟಕ ರಕ್ಷಣಾ ವೇದಿಕೆ

ರಾಜ್ಯ ಸುದ್ದಿ

ಕರಾವಳಿಗೆ ಸಂಪುಟದ ಐತಿಹಾಸಿಕ ಕೊಡುಗೆ: ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆ ಮಾನ್ಯತೆ, ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು

ರಾಜ್ಯ ಸುದ್ದಿ

ಮಂಗಳೂರು ಹಿಂದುತ್ವದ ಭದ್ರ ಕೋಟೆ, ಸರ್ಕಾರ ಮಾಡುತ್ತಿರುವುದು ಕೇವಲ ರಾಜಕೀಯ ಗಿಮಿಕ್ ಎಂದ ಭರತ್ ಶೆಟ್ಟಿ; ಬಿಜೆಪಿ ಕೊಡುಗೆ ಬಗ್ಗೆ ಪ್ರಶ್ನಿಸಿ ಬುದ್ಧಿ ಹೇಳಿದ ನೆಟ್ಟಿಗರು!

ರಾಜ್ಯ ಸುದ್ದಿ

ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಸರ್ಕಾರದ ಸಿದ್ಧತೆ: ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ

ರಾಜ್ಯ ಸುದ್ದಿ

“ಪೊಲೀಸ್ ಠಾಣೆಗೆ ನುಗ್ಗಿದರೆ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳುಹಿಸುತ್ತೇವೆ”: ಮೈಸೂರಿನ “ಪೇಟೆ ರೌಡಿ”ಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

From Across Varadigara

ಸಾಮಾಜಿಕ ತಾಣ

ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೋಮುದ್ವೇಷದ ಫೇಸ್‌ಬುಕ್ ಪೋಸ್ಟ್: ಕೇರಳ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸೇವೆಯಿಂದ ಅಮಾನತು

ರಾಜ್ಯ ಸುದ್ದಿ

ಮಂಗಳೂರು ಹಿಂದುತ್ವದ ಭದ್ರ ಕೋಟೆ, ಸರ್ಕಾರ ಮಾಡುತ್ತಿರುವುದು ಕೇವಲ ರಾಜಕೀಯ ಗಿಮಿಕ್ ಎಂದ ಭರತ್ ಶೆಟ್ಟಿ; ಬಿಜೆಪಿ ಕೊಡುಗೆ ಬಗ್ಗೆ ಪ್ರಶ್ನಿಸಿ ಬುದ್ಧಿ ಹೇಳಿದ ನೆಟ್ಟಿಗರು!

ಅಂತಾರಾಷ್ಟ್ರೀಯ

ಇಸ್ರೇಲ್ ಪ್ರಧಾನಿ ನೆತನ್ಯಾಹು ಮೇಕಪ್‌ಗೆ ₹4.45 ಕೋಟಿ ವೆಚ್ಚ: ಯುದ್ಧದ ನಡುವೆಯೂ ಮುಂದುವರಿದ ಮೇಕಪ್ – ಸ್ಟೈಲಿಂಗ್ ಬಜೆಟ್

ರಾಜ್ಯ ಸುದ್ದಿ

ತುಳು ನುಡಿಗೆ ಹೆಚ್ಚುವರಿ ಅಧಿಕೃತ ಸ್ಥಾನಮಾನ ಸ್ವಾಗತಾರ್ಹ; 8ನೇ ಪರಿಚ್ಛೇದ ಸೇರ್ಪಡೆ ತನಕ ನಮ್ಮ ಹಕ್ಕೊತ್ತಾಯ ಮುಂದುವರಿಕೆ: ಕರ್ನಾಟಕ ರಕ್ಷಣಾ ವೇದಿಕೆ

ರಾಷ್ಟ್ರೀಯ ಸುದ್ದಿ

‘ಅಸ್ಸಲಾಮು ಅಲೈಕುಮ್’, ‘ಇನ್ಶಾ ಅಲ್ಲಾಹ್’ ಎಂದಿದ್ದಕ್ಕೆ ಕ್ರಮ?: ಹಿಂದೂ ಸಂಘಟನೆಯ ದೂರಿನ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ವರ್ಗಾವಣೆ

ರಾಜ್ಯ ಸುದ್ದಿ

‘ಸಂಘಟನ್ ಸೃಜನ್’ ಹೆಸರಲ್ಲಿ ಎಐಸಿಸಿ ಹೊಸ ತಂತ್ರ: ಕರ್ನಾಟಕದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಹಿಂದಿದೆಯೇ ಪಕ್ಷ ಪುನಶ್ಚೇತನದ ಗಂಭೀರ ಯತ್ನ?

ರಾಜ್ಯ ಸುದ್ದಿ

“ಕುಮಾರಸ್ವಾಮಿಯವರೇ, ನನ್ನ ಮೈಗೆ ಕೆಸರು ಅಂಟಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ” : ಕೆಪಿಎಸ್‌ಸಿ ಅಕ್ರಮದ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

ರಾಷ್ಟ್ರೀಯ ಸುದ್ದಿ

ಪಾಕಿಸ್ತಾನದ ಗೂಢಚಾರಿಕೆ ಜಾಲಕ್ಕೆ ಭಾರತೀಯ ಸಿಮ್ ಕಾರ್ಡ್: ರಾಜಸ್ಥಾನದಲ್ಲಿ ಶಂಕಿತ ISI ಏಜೆಂಟ್ ಬಲ್ವಿಂದರ್ ಸಿಂಗ್ ಬಂಧನ

ರಾಜ್ಯ ಸುದ್ದಿ

ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಸರ್ಕಾರದ ಸಿದ್ಧತೆ: ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ

ಅಂತಾರಾಷ್ಟ್ರೀಯ

“ಚುನಾವಣೆಯಲ್ಲಿ ರಿಪಬ್ಲಿಕನ್ನರನ್ನು ಗೆಲ್ಲಿಸಿದರೆ ಅಮೆರಿಕದ ಪ್ರತಿಯೊಬ್ಬ ಪ್ರಜೆಗೂ 4.76 ಲಕ್ಷ ರೂ.”: ಮತದಾರರಿಗೆ ಡೊನಾಲ್ಡ್ ಟ್ರಂಪ್ ಆಮಿಷ

ರಾಜ್ಯ ಸುದ್ದಿ

ಕರಾವಳಿಗೆ ಸಂಪುಟದ ಐತಿಹಾಸಿಕ ಕೊಡುಗೆ: ತುಳು ಭಾಷೆಗೆ ಎರಡನೇ ಅಧಿಕೃತ ಭಾಷೆ ಮಾನ್ಯತೆ, ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು

ರಾಷ್ಟ್ರೀಯ ಸುದ್ದಿ

200ಕ್ಕೂ ಹೆಚ್ಚು ಶಂಕಿತರ ಬಂಧನದ ಬೆನ್ನಲ್ಲೇ ‘ಶಹಜಾದ್ ಭಟ್ಟಿ ನೆಟ್‌ವರ್ಕ್’ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಗೃಹ ಸಚಿವಾಲಯ

ಕಾಣಿಸದ್ದು - ಕೇಳಿಸದ್ದು

ರಾಜಸ್ಥಾನ ಸ್ಥಳೀಯ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಒಂದೇ ಮತ; ವಾರ್ಡ್‌ನಲ್ಲಿ ಸ್ವಪಕ್ಷದ ಕಾರ್ಯಕರ್ತರೂ ಕೈಬಿಟ್ಟರಾ?

ರಾಜ್ಯ ಸುದ್ದಿ

ಬಾಗಲಕೋಟೆ: ತರಗತಿ ವೇಳೆಯೇ ಶಾಲಾ ಛಾವಣಿ ಕುಸಿತ, ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ಅಂತಾರಾಷ್ಟ್ರೀಯ

ಸೌದಿ, ಟರ್ಕಿ ಜೊತೆ ರಕ್ಷಣಾ ಒಪ್ಪಂದದ ಬೆನ್ನಲ್ಲೇ ಕುವೈತ್ ಜೊತೆಗೂ ಪಾಕಿಸ್ತಾನ ರಕ್ಷಣಾ ಒಪ್ಪಂದ

ವೀಡಿಯೊ

ಗಂಗಾಜಲ ಹಿಡಿದು ‘ಲಂಚ ಹಂಚಿಕೆ’ ಪ್ರಮಾಣ ವಚನ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿಡಿಯೋ ವೈರಲ್, ತನಿಖೆಗೆ ಆದೇಶ

ಅಂತಾರಾಷ್ಟ್ರೀಯ

ನೇಪಾಳ ಪ್ರವಾಹ: ಸಾವಿನ ಸಂಖ್ಯೆ 626ಕ್ಕೆ ಏರಿಕೆ; 2,478 ಮಂದಿ ನಾಪತ್ತೆ

ರಾಷ್ಟ್ರೀಯ ಸುದ್ದಿ

‘ಮುಸ್ಲಿಮರು ಗರ್ಬಾಗೆ ಬರುವುದಿದ್ದರೆ ಸಹೋದರಿಯರನ್ನೂ, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧರಿದ್ದಾರೆ’: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

ಸುದ್ದಿ

NRIಗಳಿಗೆ ಪ್ರತ್ಯೇಕ ಇಲಾಖೆ: ಕರ್ನಾಟಕ ಸಚಿವ ಸಂಪುಟದಿಂದ ಮಹತ್ವದ ಅನುಮೋದನೆ

ರಾಜ್ಯ ಸುದ್ದಿ

5 ವರ್ಷಗಳಿಂದ ದನದ ಕೊಟ್ಟಿಗೆಯಂತಿರುವ ಶೆಡ್‌ನಲ್ಲೇ 172 ಮಕ್ಕಳ ಶಾಲೆ : ಹಾಸನ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯಲ್ಲಿ ಮಕ್ಕಳ ದಯನೀಯ ಸ್ಥಿತಿ