ರಾಷ್ಟ್ರೀಯ ಸುದ್ದಿ

ಉತ್ತರ ಪ್ರದೇಶ: ಮದ್ರಸಾ ಫ್ಯಾನ್ ಮೇಲೆ ‘Made in Pakistan’ ಲೇಬಲ್; ಭದ್ರತಾ ಆತಂಕಕ್ಕೆ ಕಾರಣವಾದ ವೈರಲ್ ಫೋಟೋ!

Reading…
Follow Us

ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ದುಧಾಹಿ ಬ್ಲಾಕ್‌ನ ವಿಷುಣ್ಪುರಾ ಠಾಣಾ ವ್ಯಾಪ್ತಿಯ ಜಂಗಲ್ ವಿಷುಣ್ಪುರಾ ಗ್ರಾಮದ ಗೋಸಾಯಿ ಪಟ್ಟಿಯಲ್ಲಿ ಇರುವ Madrasa Qadria Haqiqatul Uloom ನಲ್ಲಿ ಅಳವಡಿಸಿದ್ದ ಸೀಲಿಂಗ್ ಫ್ಯಾನ್ ಒಂದರಿಂದ ಭಾನುವಾರ ಅನಿರೀಕ್ಷಿತ ವಿವಾದ ಉಂಟಾಯಿತು. “Made in Pakistan” ಎಂಬ ಗುರುತು ಹೊಂದಿದ್ದ ಈ ಫ್ಯಾನ್‌ನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವಿಚಾರ ದುರಸ್ತಿ ವೇಳೆ ಬೆಳಕಿಗೆ ಬಂದಿದೆ. ಮದರಸಾದಲ್ಲಿ ಬಳಕೆಯಲ್ಲಿದ್ದ ಮೂರು ಫ್ಯಾನ್‌ಗಳು ಕೆಟ್ಟುಹೋದ ಹಿನ್ನೆಲೆಯಲ್ಲಿ ಅವುಗಳನ್ನು ಗ್ರಾಮದ ಎಲೆಕ್ಟ್ರಿಷಿಯನ್ ಅಕ್ಬರ್ ಅವರ ಬಳಿ ಕಳುಹಿಸಲಾಗಿತ್ತು. ಎರಡು ಫ್ಯಾನ್‌ಗಳನ್ನು ಸುಲಭವಾಗಿ ತೆರೆಯಲಾಗಿತ್ತು. ಆದರೆ ಮೂರನೇ ಫ್ಯಾನ್ ತೆರೆಯುವ ವೇಳೆ ಅದರ ಹಿಂಭಾಗದಲ್ಲಿ “Made in Pakistan” ಎಂಬ ಬರಹ ಕಾಣಿಸಿಕೊಂಡಿತು.

ಈ ಸಂದರ್ಭದಲ್ಲೇ ಅಲ್ಲಿಗೆ ಬಂದಿದ್ದ ಒಬ್ಬ ಬಾಲಕ ಫ್ಯಾನ್‌ನ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾನೆ. ಕೆಲವೇ ಸಮಯದಲ್ಲಿ ಆ ಚಿತ್ರ ವೈರಲ್ ಆಗಿದ್ದು, ನಂತರ ಸ್ಥಳೀಯರಿಂದ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ.

ಪೊಲೀಸರ ತಕ್ಷಣದ ಕ್ರಮ
ಮಾಹಿತಿ ಸಿಗುತ್ತಿದ್ದಂತೆ ವಿಷುಣ್ಪುರಾ ಠಾಣಾಧಿಕಾರಿ ವಿನಯ್ ಮಿಶ್ರ ನೇತೃತ್ವದ ತಂಡ ಮದರಸಾಕ್ಕೆ ಭೇಟಿ ನೀಡಿತು. ಫ್ಯಾನ್ ದುರಸ್ತಿಗೆ ಕಳುಹಿಸಲಾಗಿದೆ ಎಂಬ ಮಾಹಿತಿ ಸಿಕ್ಕ ನಂತರ ಅದನ್ನು ವಶಪಡಿಸಿಕೊಂಡರು. ಮದರಸಾ ವ್ಯವಸ್ಥಾಪಕ ಮೊಹಮ್ಮದ್ ಯೂನುಸ್ ಹಾಗೂ ಫ್ಯಾನ್ ದಾನ ಮಾಡಿದ ಶಮ್ಸುದ್ದೀನ್ ಅವರನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗಲಾಯಿತು.

ಫ್ಯಾನ್ ಮೂಲ ಏನು?
ವಿಚಾರಣೆ ವೇಳೆ ಶಮ್ಸುದ್ದೀನ್ ನೀಡಿದ ಮಾಹಿತಿಯ ಪ್ರಕಾರ, ಅವರ ಪುತ್ರ ವಾಜಿದ್ ಅನ್ಸಾರಿ ಕಳೆದ ಹಲವು ವರ್ಷಗಳಿಂದ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. 2020ರಲ್ಲಿ ಸುಮಾರು 80 ರಿಯಾಲ್‌ಗೆ ಫ್ಯಾನ್ ಖರೀದಿಸಿ ಕಾರ್ಗೋ ಮೂಲಕ ಮನೆಗೆ ಕಳುಹಿಸಿದ್ದರು. ನಂತರ 2023ರಲ್ಲಿ ಅದನ್ನು ಮದರಸಾಕ್ಕೆ ದಾನ ಮಾಡಲಾಗಿದೆ. ಈ ಕುರಿತು ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ವಾಜಿದ್ ಅನ್ಸಾರಿಯೊಂದಿಗೆ ವಿಡಿಯೋ ಕಾಲ್ ಮೂಲಕವೂ ಪೊಲೀಸರು ಮಾತನಾಡಿದ್ದಾರೆ.

ಪರಿಶೀಲನೆ ಬಳಿಕ ಸ್ಪಷ್ಟತೆ
ಪೊಲೀಸರು ಮದರಸಾದಲ್ಲಿಯೂ ಪರಿಶೀಲನೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಚಟುವಟಿಕೆ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಹಮ್ಮದ್ ಯೂನುಸ್ ಮತ್ತು ಶಮ್ಸುದ್ದೀನ್ ಅವರನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಯಾವುದೇ FIR ದಾಖಲಾಗಿಲ್ಲ.

ಮದರಸಾ ಪರ ಪ್ರತಿಕ್ರಿಯೆ
ಮದರಸಾ ಶಿಕ್ಷಕ ಮೊಹಮ್ಮದ್ ಮೇರಾಜುದ್ದೀನ್ ಅವರ ಪ್ರಕಾರ, ಈ ಸಂಸ್ಥೆ ಚಂದಾದಾರರಿಂದ ನಡೆಯುತ್ತದೆ. ಬೇಸಿಗೆಯಲ್ಲಿ ಮಕ್ಕಳಿಗೆ ಅನುಕೂಲವಾಗಲೆಂದು ಗ್ರಾಮಸ್ಥರಿಂದ ಸಹಾಯ ಕೇಳಲಾಗಿತ್ತು. ಆಗ ಶಮ್ಸುದ್ದೀನ್ ಈ ಫ್ಯಾನ್ ದಾನ ಮಾಡಿದ್ದರು. ಕಳೆದ ಒಂದೂವರೆ ವರ್ಷದಿಂದ ಅದು ಬಳಕೆಯಲ್ಲಿತ್ತು. ದೋಷ ಕಂಡುಬಂದ ಬಳಿಕ ದುರಸ್ತಿ ವೇಳೆ ಈ ವಿಷಯ ಬಹಿರಂಗವಾಯಿತು.

ಈ ಘಟನೆಯು ಕೆಲವು ಮಹತ್ವದ ಪ್ರಶ್ನೆಗಳನ್ನು ಮುಂದಿಟ್ಟಿದೆ. ಪಾಕಿಸ್ತಾನದಲ್ಲಿ ತಯಾರಾದ ಉತ್ಪನ್ನಗಳನ್ನು ಗಲ್ಫ್ ಮಾರ್ಗವಾಗಿ ಖರೀದಿಸುವುದು ಅಥವಾ ಮನೆಗೆ ತರುವುದು ಕಾನೂನುಬಾಹಿರವಲ್ಲ. ಭಾರತದಲ್ಲಿ ಚೀನಾ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳ ಉತ್ಪನ್ನಗಳು ಸಾಮಾನ್ಯವಾಗಿ ಬಳಕೆಯಲ್ಲಿವೆ.

ಹೀಗಿರುವಾಗ, ಕೇವಲ ಒಂದು ಲೇಬಲ್ ಆಧರಿಸಿ ತಕ್ಷಣದ ಪೊಲೀಸ್ ಕ್ರಮ ಅಗತ್ಯವಿತ್ತೇ ಎಂಬ ಪ್ರಶ್ನೆ ಎದುರಾಗಿದೆ. ಇದೇ ರೀತಿಯ “Made in China” ಅಥವಾ ಇತರ ವಿದೇಶೀ ಉತ್ಪನ್ನಗಳ ವಿಚಾರದಲ್ಲಿ ಇದೇ ಮಟ್ಟದ ಪರಿಶೀಲನೆ ನಡೆಯುತ್ತದೆಯೇ ಎಂಬುದೂ ಸ್ಪಷ್ಟವಾಗಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಕಿಡಿಗೇಡಿಗಳು ಫಾರ್ವರ್ಡ್ ಮಾಡಿದ ವಿಚಾರವನ್ನೇ ಗಂಭೀರವಾಗಿ ಪರಿಗಣಿಸಿ, ವಿಚಾರಣೆ ನಡೆಸುವಷ್ಟರ ಮಟ್ಟಿಗೆ ಪೊಲೀಸರು ಕ್ರಮ ಕೈಗೊಳ್ಳುವುದು ಸಮಂಜಸವೇ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ನಡೆಯುತ್ತಿರುವ ಚರ್ಚೆ

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ರಾಷ್ಟ್ರೀಯ ಸುದ್ದಿ

ಪಾಕಿಸ್ತಾನದ ಗೂಢಚಾರಿಕೆ ಜಾಲಕ್ಕೆ ಭಾರತೀಯ ಸಿಮ್ ಕಾರ್ಡ್: ರಾಜಸ್ಥಾನದಲ್ಲಿ ಶಂಕಿತ ISI ಏಜೆಂಟ್ ಬಲ್ವಿಂದರ್ ಸಿಂಗ್ ಬಂಧನ

ಅಂತಾರಾಷ್ಟ್ರೀಯ

ಸೌದಿ, ಟರ್ಕಿ ಜೊತೆ ರಕ್ಷಣಾ ಒಪ್ಪಂದದ ಬೆನ್ನಲ್ಲೇ ಕುವೈತ್ ಜೊತೆಗೂ ಪಾಕಿಸ್ತಾನ ರಕ್ಷಣಾ ಒಪ್ಪಂದ

ವೀಡಿಯೊ

ಗಂಗಾಜಲ ಹಿಡಿದು ‘ಲಂಚ ಹಂಚಿಕೆ’ ಪ್ರಮಾಣ ವಚನ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿಡಿಯೋ ವೈರಲ್, ತನಿಖೆಗೆ ಆದೇಶ

From Across Varadigara

ರಾಷ್ಟ್ರೀಯ ಸುದ್ದಿ

ಜೈಪುರ ಪಾಲಿಕೆ ಸಮರ: 8 ಮುಸ್ಲಿಮರಿಗೆ ಬಿಜೆಪಿ ಟಿಕೆಟ್; ಪ್ರಮುಖ ಚುನಾವಣೆಗಳಿಂದ ದೂರವಿಟ್ಟಿದ್ದ ಕಮಲ ಪಡೆಗೆ ಈಗ ಅಲ್ಪಸಂಖ್ಯಾತರೇ ಬೇಕಾದರೇ?

ರಾಷ್ಟ್ರೀಯ ಸುದ್ದಿ

ವಿಚಾರಣೆಯೇ ಆರಂಭವಾಗದೆ 6 ವರ್ಷಗಳ ಬಂಧನ, ಸಿಕ್ಕಿದ್ದು 7 ದಿನಗಳ ರಿಲೀಫ್: ಶರ್ಜೀಲ್ ಇಮಾಮ್‌ಗೆ ಮಧ್ಯಂತರ ಜಾಮೀನು 

ರಾಜ್ಯ ಸುದ್ದಿ

‘ನಾವು ಕೇಸು, ಜೈಲುಗಳಿಗೆ ಹೆದರುವವರಲ್ಲ’: ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಡಿ.ಕೆ. ಶಿವಕುಮಾರ್ ಆಕ್ರೋಶ

ರಾಜ್ಯ ಸುದ್ದಿ

ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಸರ್ಕಾರದ ಸಿದ್ಧತೆ: ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ

ರಾಜ್ಯ ಸುದ್ದಿ

ರಾಜ್ಯದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಮೊದಲ 2 ಚರಣಕ್ಕೆ ಮಾತ್ರ ಸೀಮಿತ: ರಾಜ್ಯ ಸರ್ಕಾರದ ಮಹತ್ವದ ಆದೇಶ

ವೀಡಿಯೊ

ಗಂಗಾಜಲ ಹಿಡಿದು ‘ಲಂಚ ಹಂಚಿಕೆ’ ಪ್ರಮಾಣ ವಚನ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿಡಿಯೋ ವೈರಲ್, ತನಿಖೆಗೆ ಆದೇಶ

ರಾಜ್ಯ ಸುದ್ದಿ

“ಕುಮಾರಸ್ವಾಮಿಯವರೇ, ನನ್ನ ಮೈಗೆ ಕೆಸರು ಅಂಟಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ” : ಕೆಪಿಎಸ್‌ಸಿ ಅಕ್ರಮದ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

ರಾಷ್ಟ್ರೀಯ ಸುದ್ದಿ

ನ್ಯಾಯಾಲಯದಿಂದ ಶಿಕ್ಷೆಯಾದ ಅತ್ಯಾಚಾರಿಗೆ ಮುಖ ಪುಟದ ಜಾಹೀರಾತು: ತೀವ್ರ ಆಕ್ರೋಶದ ಬಳಿಕ ಬೇಷರತ್ ಕ್ಷಮೆ ಯಾಚಿಸಿದ ‘ದಿ ಹಿಂದೂ’ ಪತ್ರಿಕೆ

ರಾಷ್ಟ್ರೀಯ ಸುದ್ದಿ

‘ಅಸ್ಸಲಾಮು ಅಲೈಕುಮ್’, ‘ಇನ್ಶಾ ಅಲ್ಲಾಹ್’ ಎಂದಿದ್ದಕ್ಕೆ ಕ್ರಮ?: ಹಿಂದೂ ಸಂಘಟನೆಯ ದೂರಿನ ಬೆನ್ನಲ್ಲೇ ಐಪಿಎಸ್ ಅಧಿಕಾರಿ ಬುಷ್ರಾ ಬಾನೋ ವರ್ಗಾವಣೆ

ರಾಜ್ಯ ಸುದ್ದಿ

‘ಮಸೀದಿ ಎದುರು ಡ್ಯಾನ್ಸ್ ಮಾಡಿದ್ರೆ ಏನಾಗುತ್ತೆ?’: ಇನ್ಸ್‌ಪೆಕ್ಟರ್ ಮುಂಜಾಗ್ರತಾ ಸೂಚನೆಗೆ ಪ್ರತಾಪ್ ಸಿಂಹ ಆಕ್ಷೇಪ, ಠಾಣೆಗೆ ನುಗ್ಗುವ ಎಚ್ಚರಿಕೆ

ಸುದ್ದಿ

NRIಗಳಿಗೆ ಪ್ರತ್ಯೇಕ ಇಲಾಖೆ: ಕರ್ನಾಟಕ ಸಚಿವ ಸಂಪುಟದಿಂದ ಮಹತ್ವದ ಅನುಮೋದನೆ

ರಾಷ್ಟ್ರೀಯ ಸುದ್ದಿ

ಪಾಕಿಸ್ತಾನದ ಗೂಢಚಾರಿಕೆ ಜಾಲಕ್ಕೆ ಭಾರತೀಯ ಸಿಮ್ ಕಾರ್ಡ್: ರಾಜಸ್ಥಾನದಲ್ಲಿ ಶಂಕಿತ ISI ಏಜೆಂಟ್ ಬಲ್ವಿಂದರ್ ಸಿಂಗ್ ಬಂಧನ

ರಾಷ್ಟ್ರೀಯ ಸುದ್ದಿ

CJP ಒಂದೆರಡು ರಾಜ್ಯಗಳಲ್ಲಿ ಅಧಿಕಾರ ಹಿಡಿದರೆ ಅಚ್ಚರಿಯೇನಿಲ್ಲ; ರಾಷ್ಟ್ರೀಯ ಮಟ್ಟದಲ್ಲಿ ‘ತೃತೀಯ ಶಕ್ತಿ’ಯಾಗುವುದು ಅನುಮಾನ: ಪಿ. ಚಿದಂಬರಂ

ಅಂತಾರಾಷ್ಟ್ರೀಯ

ಯೆಮನ್‌ನಲ್ಲಿ ತೀವ್ರಗೊಂಡ ಸಂಘರ್ಷ: 14 ದಿನಗಳಲ್ಲಿ 57,000 ಮಕ್ಕಳು ಬೀದಿಗೆ, ಕನಿಷ್ಠ 9 ಮಕ್ಕಳ ಬಲಿ ಎಂದ ಯೂನಿಸೆಫ್!

ರಾಜ್ಯ ಸುದ್ದಿ

5 ವರ್ಷಗಳಿಂದ ದನದ ಕೊಟ್ಟಿಗೆಯಂತಿರುವ ಶೆಡ್‌ನಲ್ಲೇ 172 ಮಕ್ಕಳ ಶಾಲೆ : ಹಾಸನ ಜಿಲ್ಲೆಯ ಸರ್ಕಾರಿ ವಸತಿ ಶಾಲೆಯಲ್ಲಿ ಮಕ್ಕಳ ದಯನೀಯ ಸ್ಥಿತಿ

ರಾಜ್ಯ ಸುದ್ದಿ

RDPR‌ ಅಕ್ರಮ ಆರೋಪ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಜೆಡಿಎಸ್ ಪಟ್ಟು

ರಾಜ್ಯ ಸುದ್ದಿ

“ಪೊಲೀಸ್ ಠಾಣೆಗೆ ನುಗ್ಗಿದರೆ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳುಹಿಸುತ್ತೇವೆ”: ಮೈಸೂರಿನ “ಪೇಟೆ ರೌಡಿ”ಗೆ ಪ್ರಿಯಾಂಕ್ ಖರ್ಗೆ ಎಚ್ಚರಿಕೆ

ರಾಷ್ಟ್ರೀಯ ಸುದ್ದಿ

ಸ್ವಇಚ್ಛೆಯಿಂದ ಇಸ್ಲಾಂ ಸ್ವೀಕರಿಸಿದೆ ಎಂದ ಆಯುಷ್ ಮಲಿಕ್: 31 ವರ್ಷದ ಯುವಕನನ್ನು ತಂದೆಯ ಅಕ್ರಮ ವಶದಿಂದ ಮುಕ್ತಗೊಳಿಸಿದ ಅಲಹಾಬಾದ್ ಹೈಕೋರ್ಟ್

ರಾಜ್ಯ ಸುದ್ದಿ

ಬ್ಯಾಂಕಿಂಗ್‌ನಲ್ಲಿ ಕನ್ನಡ ಸೇವೆಗೆ ಸಚಿವ ಶಿವರಾಜ್ ತಂಗಡಗಿ ಕರೆ

ವಿಶೇಷ ಲೇಖನ

FIRಗಳೇ ಇಲ್ಲದೇ RSS ಗಲಭೆಯನ್ನು ಹೇಗೆ ರೂಪಿಸುತ್ತೆ ? ಗೃಹ ಸಚಿವ ಪ್ರಿಯಾಂಕ್​ ಖರ್ಗೆ ಹೇಳಿಕೆಯ ಅಸಲಿಯತ್ತೇನು?