ರಾಷ್ಟ್ರೀಯ ಸುದ್ದಿ

ವಾಣಿಜ್ಯ ಸಿಲಿಂಡರ್ ಬೆಲೆ ಮತ್ತಷ್ಟು ದುಬಾರಿ: ಐದೇ ತಿಂಗಳಲ್ಲಿ ದುಪ್ಪಟ್ಟಾದ ದರ!

Reading…
Follow Us

ಸಾರಾಂಶ

ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಜೂನ್ 1 ರಿಂದ ಜಾರಿಗೆ ಬರುವಂತೆ ಮತ್ತೆ ರೂ. 46 ಏರಿಕೆಯಾಗಿದ್ದು, ಒಟ್ಟು ದರ ರೂ. 3,198 ತಲುಪಿದೆ. ಕಳೆದ ಐದು ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಬರೊಬ್ಬರಿ ಶೇ. 93 ರಷ್ಟು ದುಬಾರಿಯಾದಂತಾಗಿದೆ. ಜಾಗತಿಕ ಪೂರೈಕೆ ವ್ಯತ್ಯಯದ ಹಿನ್ನೆಲೆಯಲ್ಲಿ ಈ ಬೆಲೆ ಏರಿಕೆಯಾಗಿದ್ದು, ಹೋಟೆಲ್ ಹಾಗೂ ಸಣ್ಣ ಉದ್ಯಮಗಳ ಮೇಲೆ ಭಾರೀ ಹೊರೆ ಬಿದ್ದಿದೆ. ಆದರೆ ಮನೆಬಳಕೆ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ದೇಶದಾದ್ಯಂತ ಹೋಟೆಲ್ ಮಾಲೀಕರು, ಬೀದಿಬದಿ ವ್ಯಾಪಾರಿಗಳು ಮತ್ತು ಸಣ್ಣ ಉದ್ದಿಮೆದಾರರಿಗೆ ತೈಲ ಕಂಪನಿಗಳು ಮತ್ತೊಂದು ಬೆಲೆ ಏರಿಕೆಯ ಶಾಕ್ ನೀಡಿವೆ. ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು ಜೂನ್ 1ರಿಂದ ಜಾರಿಗೆ ಬರುವಂತೆ 19 ಕೆಜಿ ತೂಕದ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಮತ್ತೆ 46 ರೂಪಾಯಿ ಹೆಚ್ಚಳ ಮಾಡಿವೆ. ಈ ಹೊಸ ಪರಿಷ್ಕರಣೆಯೊಂದಿಗೆ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ದರ 3,198 ರೂಪಾಯಿಗಳಿಗೆ ತಲುಪಿದೆ. ಆತಂಕಕಾರಿ ಸಂಗತಿಯೆಂದರೆ, ಕಳೆದ ಐದು ತಿಂಗಳುಗಳಲ್ಲೇ ವಾಣಿಜ್ಯ ಸಿಲಿಂಡರ್ ಬೆಲೆ ಶೇಕಡಾ 93 ಕ್ಕಿಂತಲೂ ಹೆಚ್ಚು ದುಬಾರಿಯಾಗಿದ್ದು, ಸಣ್ಣ ಉದ್ಯಮಿಗಳ ಬೆನ್ನುಲುಬು ಮುರಿಯುವಂತೆ ಮಾಡಿದೆ.

ಡಿಸೆಂಬರ್ ತಿಂಗಳಲ್ಲಿ 1654 ರೂಪಾಯಿ ಇದ್ದ ವಾಣಿಜ್ಯ ಸಿಲಿಂಡರ್ ಬೆಲೆ, ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಹಂತಹಂತವಾಗಿ ಏರಿಕೆಯಾಗುತ್ತಾ ಸಾಗಿತ್ತು. ಆದರೆ ಮೇ 1 ರಂದು ಒಂದೇ ಬಾರಿಗೆ ಬರೊಬ್ಬರಿ 993 ರೂಪಾಯಿಗಳ ಭಾರೀ ಜಿಗಿತ ಕಂಡು 3,152 ರೂಪಾಯಿ ತಲುಪಿತ್ತು. ಇಂದು ಜೂನ್ 1 ರಂದು ಮತ್ತೊಮ್ಮೆ 46 ರೂಪಾಯಿ ಏರಿಕೆ ಕಾಣುವ ಮೂಲಕ, ಕೇವಲ ಐದು ತಿಂಗಳ ಅವಧಿಯಲ್ಲಿ ಒಟ್ಟಾರೆ 1,433.50 ರೂಪಾಯಿಗಳಷ್ಟು ದರ ಹೆಚ್ಚಳವಾದಂತಾಗಿದೆ. ಈ ಸರಣಿ ಏರಿಕೆಯು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಆದರೆ, ಸಾರ್ವಜನಿಕರಿಗೆ ಸಮಾಧಾನಕರ ವಿಷಯವೆಂದರೆ ಮನೆಬಳಕೆಯ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಇದು ಹಿಂದಿನಂತೆಯೇ 915.50 ರೂಪಾಯಿಗಳಲ್ಲೇ ಮುಂದುವರಿದಿದೆ.

ನಗರವಾಣಿಜ್ಯ ಸಿಲಿಂಡರ್ ಬೆಲೆ –
31 ಡಿಸೆಂಬರ್ 2025
ವಾಣಿಜ್ಯ ಸಿಲಿಂಡರ್ ಬೆಲೆ –
1 ಜೂನ್ 2026
% ಬೆಲೆ ಏರಿಕೆ
ದೆಹಲಿ1580.503113.50+97%
ಕೋಲ್ಕತ್ತಾ1684.003255.50+93%
ಮುಂಬೈ1531.503067.50+100%
ಚೆನ್ನೈ1739.503283.00+89%
ಬೆಂಗಳೂರು1654.003198.00+93%

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಜಾಗತಿಕ ಪೂರೈಕೆ ವ್ಯತ್ಯಯಗಳು ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ತೈಲ ಕಂಪನಿಗಳ ಮೂಲಗಳು ತಿಳಿಸಿವೆ. ದೇಶೀಯ ಮಾರುಕಟ್ಟೆಯಲ್ಲಿ ಯಾವುದೇ ಕೊರತೆಯಾಗದಂತೆ ಕನಿಷ್ಠ 30 ದಿನಗಳಿಗೆ ಸಾಕಾಗುವಷ್ಟು ದಾಸ್ತಾನು ಕಾಯ್ದುಕೊಳ್ಳುವಂತೆ ಮತ್ತು ಕಾಳಸಂತೆಯನ್ನು ತಡೆಯುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಕಂಪನಿಗಳಿಗೆ ನಿರ್ದೇಶನ ನೀಡಿದೆ.

Join our WhatsApp Channel Get every Varadigara story instantly
How does this story make you feel?
Share:

About Us

ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ. ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'. ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!! ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!! ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.

ನಮ್ಮ ಬಗ್ಗೆ ತಿಳಿಯಿರಿ →
Join our WhatsApp Channel Get every Varadigara story instantly
Follow Us
ಹನಿ ಸುದ್ದಿ ⚡ NEW
News Cards · Swipe to read
See All →

More Stories

ರಾಷ್ಟ್ರೀಯ ಸುದ್ದಿ

ವಿಚಾರಣೆಯೇ ಆರಂಭವಾಗದೆ 6 ವರ್ಷಗಳ ಬಂಧನ, ಸಿಕ್ಕಿದ್ದು 7 ದಿನಗಳ ರಿಲೀಫ್: ಶರ್ಜೀಲ್ ಇಮಾಮ್‌ಗೆ ಮಧ್ಯಂತರ ಜಾಮೀನು 

ರಾಷ್ಟ್ರೀಯ ಸುದ್ದಿ

ಧಾರ್ಮಿಕ ಕಾರಣಗಳಿಂದ ‘ವಂದೇ ಮಾತರಂ’ ಹಾಡದಿದ್ದರೆ ದಂಡನಾತ್ಮಕ ಕ್ರಮ ಕೈಗೊಳ್ಳುವಂತಿಲ್ಲ: ಸುಪ್ರೀಂ ಕೋರ್ಟ್

ರಾಷ್ಟ್ರೀಯ ಸುದ್ದಿ

‘ಮುಸ್ಲಿಮರು ಗರ್ಬಾಗೆ ಬರುವುದಿದ್ದರೆ ಸಹೋದರಿಯರನ್ನೂ, ಹೆಣ್ಣುಮಕ್ಕಳನ್ನೂ ಕರೆತನ್ನಿ; ನಮ್ಮ ಹುಡುಗರೂ ಸಿದ್ಧರಿದ್ದಾರೆ’: ನಾಲಿಗೆ ಹರಿಬಿಟ್ಟ ಬಿಜೆಪಿ ಶಾಸಕ

ರಾಷ್ಟ್ರೀಯ ಸುದ್ದಿ

ಗ್ರಾಹಂ ಸ್ಟೇನ್ಸ್, ಪುಟ್ಟ ಮಕ್ಕಳ ಸಜೀವ ದಹನ ಪ್ರಕರಣ: ಬಜರಂಗದಳದ ದಾರಾ ಸಿಂಗ್ ಬಿಡುಗಡೆ ಅರ್ಜಿ ತಿರಸ್ಕರಿಸಿದ ಒಡಿಶಾ ಸರ್ಕಾರ

ರಾಷ್ಟ್ರೀಯ ಸುದ್ದಿ

200ಕ್ಕೂ ಹೆಚ್ಚು ಶಂಕಿತರ ಬಂಧನದ ಬೆನ್ನಲ್ಲೇ ‘ಶಹಜಾದ್ ಭಟ್ಟಿ ನೆಟ್‌ವರ್ಕ್’ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಗೃಹ ಸಚಿವಾಲಯ

From Across Varadigara

ರಾಷ್ಟ್ರೀಯ ಸುದ್ದಿ

200ಕ್ಕೂ ಹೆಚ್ಚು ಶಂಕಿತರ ಬಂಧನದ ಬೆನ್ನಲ್ಲೇ ‘ಶಹಜಾದ್ ಭಟ್ಟಿ ನೆಟ್‌ವರ್ಕ್’ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ ಗೃಹ ಸಚಿವಾಲಯ

ಕಾಣಿಸದ್ದು - ಕೇಳಿಸದ್ದು

ಅನುದಾನ ತಂದ ಮಾಜಿ ಶಾಸಕನಿಗೇ ಉದ್ಘಾಟನೆಯ ಅವಕಾಶ ನೀಡಿದ ಹಾಲಿ ಶಾಸಕ : ರಾಜಕೀಯದಲ್ಲೊಂದು “ಕೇರಳ ಸ್ಟೋರಿ”!

ರಾಜ್ಯ ಸುದ್ದಿ

ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆ ಸ್ಥಾನಮಾನ ನೀಡಲು ಸರ್ಕಾರದ ಸಿದ್ಧತೆ: ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ

ರಾಷ್ಟ್ರೀಯ ಸುದ್ದಿ

ನನಗೆ ಮೊದಲಿನಂತೆ ಕೆಲಸ ಮಾಡಲು ಸಾಧ್ಯವಿಲ್ಲ; ಹೊಸ ತಲೆಮಾರಿಗೆ ಜವಾಬ್ದಾರಿ ವಹಿಸಬೇಕು: ನಿತಿನ್ ಗಡ್ಕರಿ

ರಾಷ್ಟ್ರೀಯ ಸುದ್ದಿ

ಪಾಕಿಸ್ತಾನದ ಗೂಢಚಾರಿಕೆ ಜಾಲಕ್ಕೆ ಭಾರತೀಯ ಸಿಮ್ ಕಾರ್ಡ್: ರಾಜಸ್ಥಾನದಲ್ಲಿ ಶಂಕಿತ ISI ಏಜೆಂಟ್ ಬಲ್ವಿಂದರ್ ಸಿಂಗ್ ಬಂಧನ

ಕಾಣಿಸದ್ದು - ಕೇಳಿಸದ್ದು

ರಾಜಸ್ಥಾನ ಸ್ಥಳೀಯ ಚುನಾವಣೆ: ಬಿಜೆಪಿ ಅಭ್ಯರ್ಥಿಗೆ ಬಿದ್ದಿದ್ದು ಒಂದೇ ಮತ; ವಾರ್ಡ್‌ನಲ್ಲಿ ಸ್ವಪಕ್ಷದ ಕಾರ್ಯಕರ್ತರೂ ಕೈಬಿಟ್ಟರಾ?

ಸಾಮಾಜಿಕ ತಾಣ

ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೋಮುದ್ವೇಷದ ಫೇಸ್‌ಬುಕ್ ಪೋಸ್ಟ್: ಕೇರಳ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಸೇವೆಯಿಂದ ಅಮಾನತು

ರಾಜ್ಯ ಸುದ್ದಿ

ರಾಜ್ಯದ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಮೊದಲ 2 ಚರಣಕ್ಕೆ ಮಾತ್ರ ಸೀಮಿತ: ರಾಜ್ಯ ಸರ್ಕಾರದ ಮಹತ್ವದ ಆದೇಶ

ರಾಜ್ಯ ಸುದ್ದಿ

“ಕುಮಾರಸ್ವಾಮಿಯವರೇ, ನನ್ನ ಮೈಗೆ ಕೆಸರು ಅಂಟಿಸುವ ನಿಮ್ಮ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ” : ಕೆಪಿಎಸ್‌ಸಿ ಅಕ್ರಮದ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

ರಾಜ್ಯ ಸುದ್ದಿ

‘ಸಂಘಟನ್ ಸೃಜನ್’ ಹೆಸರಲ್ಲಿ ಎಐಸಿಸಿ ಹೊಸ ತಂತ್ರ: ಕರ್ನಾಟಕದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಹಿಂದಿದೆಯೇ ಪಕ್ಷ ಪುನಶ್ಚೇತನದ ಗಂಭೀರ ಯತ್ನ?

ರಾಷ್ಟ್ರೀಯ ಸುದ್ದಿ

ಗ್ರಾಹಂ ಸ್ಟೇನ್ಸ್, ಪುಟ್ಟ ಮಕ್ಕಳ ಸಜೀವ ದಹನ ಪ್ರಕರಣ: ಬಜರಂಗದಳದ ದಾರಾ ಸಿಂಗ್ ಬಿಡುಗಡೆ ಅರ್ಜಿ ತಿರಸ್ಕರಿಸಿದ ಒಡಿಶಾ ಸರ್ಕಾರ

ರಾಜ್ಯ ಸುದ್ದಿ

ಬಾಗಲಕೋಟೆ: ತರಗತಿ ವೇಳೆಯೇ ಶಾಲಾ ಛಾವಣಿ ಕುಸಿತ, ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ರಾಜ್ಯ ಸುದ್ದಿ

‘ನಾವು ಕೇಸು, ಜೈಲುಗಳಿಗೆ ಹೆದರುವವರಲ್ಲ’: ರಾಹುಲ್‌ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಡಿ.ಕೆ. ಶಿವಕುಮಾರ್ ಆಕ್ರೋಶ

ರಾಜ್ಯ ಸುದ್ದಿ

SIR: 1 ಕೋಟಿಗೂ ಹೆಚ್ಚು ಹೆಸರುಗಳ ASDDO ವರ್ಗೀಕರಣ; ಪರಿಶೀಲನೆಗೆ ಹೆಚ್ಚಿನ ಕಾಲಾವಕಾಶ ಮತ್ತು ನಿಗದಿತ ಪ್ರಕ್ರಿಯೆ ಅನುಸರಿಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಸಿಎಂ ಪತ್ರ

ವೀಡಿಯೊ

ಗಂಗಾಜಲ ಹಿಡಿದು ‘ಲಂಚ ಹಂಚಿಕೆ’ ಪ್ರಮಾಣ ವಚನ: ಉತ್ತರ ಪ್ರದೇಶದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ವಿಡಿಯೋ ವೈರಲ್, ತನಿಖೆಗೆ ಆದೇಶ

ರಾಜ್ಯ ಸುದ್ದಿ

‘ಮಸೀದಿ ಎದುರು ಡ್ಯಾನ್ಸ್ ಮಾಡಿದ್ರೆ ಏನಾಗುತ್ತೆ?’: ಇನ್ಸ್‌ಪೆಕ್ಟರ್ ಮುಂಜಾಗ್ರತಾ ಸೂಚನೆಗೆ ಪ್ರತಾಪ್ ಸಿಂಹ ಆಕ್ಷೇಪ, ಠಾಣೆಗೆ ನುಗ್ಗುವ ಎಚ್ಚರಿಕೆ

ಸುದ್ದಿ

NRIಗಳಿಗೆ ಪ್ರತ್ಯೇಕ ಇಲಾಖೆ: ಕರ್ನಾಟಕ ಸಚಿವ ಸಂಪುಟದಿಂದ ಮಹತ್ವದ ಅನುಮೋದನೆ

ರಾಷ್ಟ್ರೀಯ ಸುದ್ದಿ

ಅತ್ಯಾಚಾರ ದೋಷಿ ರಾಮ್ ರಹೀಮ್‌ಗೆ ಮತ್ತೆ 21 ದಿನಗಳ ಪರೋಲ್: 5 ವರ್ಷಗಳಲ್ಲಿ 17ನೇ ಬಾರಿಗೆ ಜೈಲಿನಿಂದ ಬಿಡುಗಡೆ!

ರಾಷ್ಟ್ರೀಯ ಸುದ್ದಿ

ಜೈಪುರ ಪಾಲಿಕೆ ಸಮರ: 8 ಮುಸ್ಲಿಮರಿಗೆ ಬಿಜೆಪಿ ಟಿಕೆಟ್; ಪ್ರಮುಖ ಚುನಾವಣೆಗಳಿಂದ ದೂರವಿಟ್ಟಿದ್ದ ಕಮಲ ಪಡೆಗೆ ಈಗ ಅಲ್ಪಸಂಖ್ಯಾತರೇ ಬೇಕಾದರೇ?

ಅಂತಾರಾಷ್ಟ್ರೀಯ

ನೇಪಾಳ ಭೀಕರ ಪ್ರವಾಹ: 105 ಭಾರತೀಯರು ಸೇರಿ 384 ಪ್ರವಾಸಿಗರು ನಾಪತ್ತೆ, ಬಿಹಾರದಲ್ಲೂ ಹೈಅಲರ್ಟ್