ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ ‘ವರದಿಗಾರ’.
ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ ‘ವರದಿಗಾರ’ನ ಪ್ರಯತ್ನ .
ಬ್ರೇಕಿಂಗ್ ನ್ಯೂಸಿನ ನಾಗಾಲೋಟದ ಸ್ಪರ್ಧೆಯಲ್ಲಿ ನಾವಿಲ್ಲ!!
ನಾ ಮುಂದು, ನಮ್ಮಲ್ಲೇ ಮೊದಲೆಂಬ ಯೋಚನೆ ಸುಳಿಯಲ್ಲ!!
ಸುದ್ದಿ ಎಷ್ಟು ಕೊಟ್ಟಿದ್ದೇವೆ ಎನ್ನುವುದಕ್ಕಿಂತ ಏನು ಕೊಟ್ಟಿದ್ದೇವೆ ಎಂಬ ಗುಣಮಟ್ಟದ ಸಿದ್ಧಾಂತವನ್ನು ಮೈಗೂಡಿಸಿಕೊಂಡು ತೆವಳುತ್ತಾ ವರದಿಗಾರ ಸಾಗುತ್ತಿದೆ.
ನಾವು ಯಾರೂ ವೃತ್ತಿಪರ ಪತ್ರಕರ್ತರಲ್ಲ… ಕೊಚ್ಚಿಕೊಳ್ಳಲು ಯಾವುದೇ ಮಾಧ್ಯಮ ಅನುಭವವೂ ಇಲ್ಲ.. ನಮ್ಮಲ್ಲಿ ಯಾರೂ ಭಾಷಾ ಪಂಡಿತರಲ್ಲ.. ಜನತೆಗೆ ಸತ್ಯವನ್ನು ತಲುಪಿಸುವ ಏಕ ಉದ್ದೇಶದಿಂದ ಸಮಾನ ಮನಸ್ಕ ಸ್ನೇಹಿತರ ಹೆಜ್ಜೆಯಾಗಿದೆ ‘ವರದಿಗಾರ’ .
ಯಾರಿಗೂ ಪೈಪೋಟಿಯನ್ನು ನೀಡುವ ಉದ್ದೇಶವೂ ನಮಗಿಲ್ಲ.
ಓದುಗರು, ಅಭಿಮಾನಿಗಳು, ಹಿತೈಷಿಗಳೇ ನಮ್ಮ ಆಸ್ತಿ..
‘ವರದಿಗಾರ’ ನಮ್ಮ ಬಿಡುವಿನ ವೇಳೆಯ ಸಮಾಜ ಸೇವೆ!