ರಾಜ್ಯ ಸುದ್ದಿ
ಸಮಾಜದ ಧ್ವನಿಯಾಗಿದ್ದ ಗೌರಿ ಲಂಕೇಶ್ ಹತ್ಯೆಯ ವಿರುದ್ಧ ಸಮಾಜ ಧ್ವನಿಗೂಡಿಸಬೇಕಿದೆ: ಶಾಫಿ ಸಅದಿ
ವರದಿಗಾರ-ಬೆಂಗಳೂರು: ದೇಶದಲ್ಲಿ ತಾಂಡವಾಡುತ್ತಿರುವ ಸೈದ್ಧಾಂತಿಕ ಅಸಹಿಷ್ಣುತೆಗೆ ರಾಜ್ಯ ಕಂಡ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿದ್ದಾರೆ. ಸೈದ್ಧಾಂತಿಕವಾಗಿ ಎದುರಿಸಲಾಗದೆ ಗುಂಡಿಕ್ಕಿ ಹತ್ಯೆಗೈಯ್ಯುವ ಮೂಲಕ ಅವರ ಶಬ್ದವನ್ನು ಇಲ್ಲವಾಗಿಸಿದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ...