ಜಿಲ್ಲಾ ಸುದ್ದಿ

ಅನ್ಯಾಯದ ವಿರುದ್ಧ ಪ್ರತಿಭಟಿಸಲು ಶುಲ್ಕ ಪಾವತಿ ಕಡ್ಡಾಯ ನಿಯಮವು ಅಸಂವಿಧಾನಿಕ : ಕ್ಯಾಂಪಸ್ ಫ್ರಂಟ್

‘ಹೋರಾಟದ ಶಕ್ತಿಯನ್ನು ದಮನಿಸಲು ಮಾಡಿರುವ ಷಡ್ಯಂತ್ರ’

ವರದಿಗಾರ (ಜ.19): ನ್ಯಾಯಕ್ಕಾಗಿ, ಅನ್ಯಾಯ, ಅಕ್ರಮ ಮತ್ತು ದೌರ್ಜನ್ಯದ ವಿರುದ್ಧ ಪ್ರತಿಭಟಿಸಲು ಶುಲ್ಕ ಪಾವತಿಸಬೇಕೆಂಬ ರಾಜ್ಯ ಪೊಲೀಸ್ ಇಲಾಖೆಯ ನೂತನ ಆದೇಶವು ಪ್ರಜಾಪ್ರಭುತ್ವ ವಿರೋಧಿ ನಿಯಮವಾಗಿದೆ ಮತ್ತು ಹೋರಾಟದ ಶಕ್ತಿಯನ್ನು ದಮನಿಸಲು ಇದೊಂದು ನೂತನ ಷಡ್ಯಂತ್ರವಾಗಿದೆ ಎಂದು ವಿದ್ಯಾರ್ಥಿ ಸಂಘಟನೆಯಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ  ದ.ಕ ಜಿಲ್ಲಾ ಸಮಿತಿ ಹೇಳಿದೆ.

ಸಂವಿಧಾನ ವ್ಯವಸ್ಥೆಯಡಿ ಸಮಾಜದಲ್ಲಿ ನಡೆಯುವ ಅನ್ಯಾಯ, ಅಕ್ರಮ ಅನೀತಿಯ ವಿರುದ್ಧ ಪ್ರತಿಭಟಿಸಿ ವ್ಯವಸ್ಥೆಯನ್ನು ಎಚ್ಚರಿಸುವುದು ಪ್ರಜಾಪ್ರಭುತ್ವದ ಜೀವಳಾವಾಗಿದೆ. ಆದರೆ ಇಂದು ರಾಜ್ಯ ಸರ್ಕಾರವೇ ಇಂತಹ ಒಂದು ನಿಯಮವನ್ನು ಸದ್ದಿಲ್ಲದೆ ಜಾರಿಗೆ ತರಲು ಪ್ರಯತ್ನಿಸುತ್ತಿರುವುದು ಜನರ ಹೋರಾಟ ಮನೋಭಾವವನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು ಹಾಗೂ ಸರ್ವಾಧಿಕಾರಿ ಧೋರಣೆಯಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಪ್ರತಿಕ್ರಿಯಿಸಿದೆ.

ವಿದ್ಯಾರ್ಥಿಗಳ ವಿರುದ್ಧ ನಡೆಯುವ ಅನ್ಯಾಯ ಹಾಗು ಅವರ ಹಕ್ಕುಗಳಿಗಾಗಿ ನಾವು ನಿರಂತರ ಹೋರಾಟ ನಡೆಸುತ್ತಿದ್ದು,  ಅದರೆ ಇದೀಗ ಪ್ರತಿಭಟನೆ ಕೈಗೊಳ್ಳಬೇಕಾದರೆ ಇಲಾಖೆಗಳಲ್ಲಿ ರೂ. 500 ಕಟ್ಟಬೇಕಾಗುತ್ತದೆ. ಇದು ಹೋರಾಟದ ಶಕ್ತಿಯನ್ನು ದಮನಿಸಲು ಮಾಡಿರುವ ಷಡ್ಯಂತ್ರವೆಂದು ಕ್ಯಾಂಪಸ್ ಫ್ರಂಟ್ ಆರೋಪಿಸಿದೆ. ಈ ನೂತನ ಆದೇಶದ ವಿರುದ್ಧ ಎಲ್ಲಾ ಮಾನವಪ್ರೇಮಿ ಸಂಘಟನೆಗಳು ಬೀದಿಗಿಳಿದು ಹೋರಾಡುವ ಅವಶ್ಯಕತೆ ಇದೆ ಎಂದು ಹೇಳಿದೆ.

ಕೂಡಲೇ ಈ ನಿಯಮವನ್ನು ರಾಜ್ಯ ಸರಕಾರ ಕೈ ಬಿಡಬೇಕು ಎಂದು ಕ್ಯಾಂಪಸ್ ಫ್ರಂಟ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಮಹಮ್ಮದ್ ಸಾದಿಕ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group