ಜಿಲ್ಲಾ ಸುದ್ದಿ

ದಲಿತ ಕಾಲೋನಿಗೆ ಮಂಜೂರಾದ ಕೊಳವೆ ಬಾವಿಗೆ ರಾಜಕೀಯ ಪ್ರೇರಿತ ತಡೆ : ಎಸ್.ಡಿ.ಪಿ.ಐ ಆರ್ಯಾಪು ವಲಯ ದಿಢೀರ್ ಪ್ರತಿಭಟನೆ

➤ ಹೋರಾಟಕ್ಕೆ ಮಣಿದು ಗುರುತಿನ ಸ್ಥಳದಲ್ಲೇ ತೋಡಿದ ಕೊಳವೆ ಬಾವಿ

ಪುತ್ತೂರು : ಪುತ್ತೂರು ತಾಲೂಕಿನ ಕುರಿಯ ಗ್ರಾಮಕ್ಕೊಳಪಟ್ಟ ಓಟೆತ್ತಿಮಾರ್ ನಿವಾಸಿಗಳಿಗಳು ಹಲವಾರು ವರ್ಷಗಳಿಂದ ನೀರಿನ ಸಮಸ್ಯೆಗಳನ್ನು ಎದುರಿಸುತ್ತ ಬರುತ್ತಿದ್ದು ಇದರ ಬಗ್ಗೆ ಪಂಚಾಯತ್ ಗೆ ಹಲವು ಬಾರಿ ಮನವಿಯನ್ನು ಮಾಡಿದ್ದಾರೆ. ಇದಾದ ಬಳಿಕ ಜಿಲ್ಲಾ ಪಂಚಾಯತ್ ಮನವಿಗೆ ಸ್ಪಂದಿಸಿ ದಲಿತ ಕಾಲೋನಿಯಲ್ಲಿ ಕೊಳವೆ ಬಾವಿ ತೋಡಲು ಬೋರ್ ವೆಲ್ ದಿನಾಂಕ 13/01/2019 ರಂದು ಸ್ಥಳಕ್ಕೆ ಬಂದಿದ್ದು ಆದರೆ ದಲಿತರಿಗೆ ಸಿಗಬೇಕಾದ ಸವಲತ್ತನ್ನು ತಡೆಯಲು ಕೆಲವು ರಾಜಕೀಯ ಪ್ರೇರಿತರು ಬೋರ್ವೆಲ್ ತೋಡಲು ತಡೆಯೊಡ್ಡಿದ್ದು , ತಕ್ಷಣ ಸ್ಥಳಕ್ಕಾಗಮಿಸಿದ ಎಸ್.ಡಿ.ಪಿ.ಐ ಆರ್ಯಾಪು ವಲಯ ನಾಯಕರು ಹಾಗೂ ಕಾರ್ಯಕರ್ತರು ಊರ ನಾಗರಿಕರನ್ನು ಸೇರಿಸಿ ಹಿಂದಿರುಗಲು ತಯಾರಾಗಿರುವ ಬೋರ್ವೆಲ್ ನ್ನು ತಡೆದು ರಸ್ತೆಯಲ್ಲಿ ಪ್ರತಿಭಟನೆ ನಿರತರಾದರು.


ಗುರುತು ಮಾಡಿದ ಸ್ಥಳದಲ್ಲೇ ಕೊಳವೆ ಬಾವಿ ತೆರೆಯಬೇಕೆಂದು ನಾಗರಿಕರು ಒತ್ತಾಯಿಸಿದರು. ಎಸ್.ಡಿ.ಪಿ.ಐ ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷರಾದ ರಿಯಾಝ್ ಬಳಕ್ಕ ಮಾತನಾಡಿ ಇದು ರಾಜಕೀಯ ಪ್ರೇರಿತರಿಂದ ದಲಿತರಿಗೆ ಮಂಜೂರಾದ ಕೊಳವೆ ಬಾವಿಯನ್ನು ತಡೆಯಲು ನೋಡುತ್ತಿದ್ದಾರೆ , ಎಸ್.ಡಿ.ಪಿ.ಐ ಪಕ್ಷ ಸದಾ ಅನ್ಯಾಯವನ್ನು ಎದುರಿಸುತ್ತಾ ಬಂದಿದೆ ನಾವು ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು. ಅಧಿಕಾರಿಗಳು ಮತ್ತು ಪೋಲಿಸರೊಂದಿಗೆ ಮಾತಿನ ಚಕಮಕಿ ಕೂಡ ನಡೆಯಿತು. ನಂತರ ಎಸ್.ಡಿ.ಪಿ.ಐ ಹೋರಾಟಕ್ಕೆ ಮಣಿದು ಗುರುತು ಮಾಡಿದ ದಲಿತರ ಕಾಲೋನಿಯಲ್ಲೇ ಕೊಳವೆ ಬಾವಿ ತೋಡಲಾಯಿತು. ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಆರ್ಯಾಪು ವಲಯ ಕಾರ್ಯದರ್ಶಿ ಬಶೀರ್ ವಾಗ್ಲೆ , ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ನಾಗೇಶ್ ಕುರಿಯ , ಕುರಿಯ ಬ್ರಾಂಚ್ ಅಧ್ಯಕ್ಷ ಆಸಿಫ್ , ಉಪಾಧ್ಯಕ್ಷ ಅಶ್ರಫ್ ,ಹರ್ಷಿತ್ ಕುರಿಯ , ಅಶ್ರಫ್ ಸಂಟ್ಯಾರ್ ಹಾಗೂ ಊರ ನಾಗರಿಕರಾದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪುರುಷೋತ್ತಮ ರೈ , ಖಲಂದರ್ ಜಿಂದಾರ್, ಅಬ್ದುಲ್ ಕುಂಞಿ, ಸುಂದರ ,ರವಿ, ಉದಯ ,ಸಲೀಂ, ಸುಂದರ ಮೂಲ್ಯ, ಶೀನಪ್ಪ , ಕೃಷ್ಣಪ್ಪ ಮೂಲ್ಯ,ಬಶೀರ್ ,ನೌಶಾದ್ , ಸಾಧಿಕ್ ಕುರಿಯ ,ನಾಸಿರ್ ಪಂಜಲ ,ಪವಾಝ್ ,ಫಯಾಝ್ ,ಸುಮಾ , ಬಶೀರ್ ಕರಜ್ಜ ಹಾಗೂ ಹಲವಾರು ನಾಗರಿಕರು ಪ್ರತಿಭಟನೆ ನಿರತಾಗಿದ್ದರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group