ನಿಮ್ಮ ಬರಹ

ಮನಮೋಹನ್ ಸಿಂಗ್ ಆಕಸ್ಮಿಕ ಪ್ರಧಾನಿ ಎನ್ನುವವರೇ….

ಲೇಖನ: ಇಸ್ಮತ್ ಪಜೀರ್

ವರದಿಗಾರ (ಜ.15): ಡಾ.ಮನಮೋಹನ್ ಸಿಂಗ್ ರನ್ನು ಈಗ ಗೇಲಿ ಮಾಡುವ, ಅವರನ್ನು ಗೇಲಿ ಮಾಡಿ ಸಿನಿಮಾ ತೆಗೆದುದರ ಹಿಂದಿನ ಉದ್ದೇಶವಾದರೂ‌ ಏನೆಂದು ಯಾವನಾದರೂ ಬಿಜೆಪಿಯವರಲ್ಲಿ ಕೇಳಿದರೆ, ಬೇಡ ಬಿಡಿ ಆ ಸಿನಿಮಾದ ನಿರ್ದೇಶಕನಲ್ಲಿ , ನಿರ್ಮಾಪಕನಲ್ಲಿ ಕೇಳಿದರೆ, ಅದೂ ಬೇಡ ಬಿಡಿ ಮೋದಿಯವರಲ್ಲೇ ಕೇಳಿದರೂ ಸಮರ್ಪಕ ಉತ್ತರವಿಲ್ಲ.

ನಾಳೆ ಯುಪಿಎ ಸರಕಾರ ಬಂದರೂ ಮತ್ತೆ ಮನಮೋಹನ್ ಸಿಂಗ್ ಪ್ರಧಾನಿಯಾಗುವ ಸಾಧ್ಯತೆ ತೀರಾ ಇಲ್ಲವೆನ್ನುವಷ್ಟು ವಿರಳ. ಅದಾಗ್ಯೂ ಅವರನ್ನು ಮತ್ತೆ ಮತ್ತೆ ತಮಾಷೆಯ ವಸ್ತುವೆಂಬಂತೆ ಚಿತ್ರಿಸುವವರ ಉದ್ದೇಶವಾದರೂ ಏನು?

ಬಿಜೆಪಿಗೆ ಹೇಳಿಕೊಳ್ಳುವ ಸಾಧನೆಯಂತೂ ಇಲ್ಲ. ಪ್ರಚ್ಚನ್ನ ಭ್ರಷ್ಟಾಚಾರ ಮತ್ತು ದಿನಬೆಳಗಾದರೆ ಬಾಯಿಬಿಡುವ ಸುಳ್ಳೇ ಬಿಜೆಪಿಯ ಸಾಧನೆ.

ಹೀಗಿರುವಾಗ ವಿರೋಧಿಗಳನ್ನು ಹಂಗಿಸಿ ಗೇಲಿ ಮಾಡಿಯಾದರೂ ಅಧಿಕಾರದ ಮೆಟ್ಟಲೇರಬೇಕೆಂಬ ಅಧಿಕಾರದ ತೀರದ ದಾಹ.

ಈ ದೇಶ ಕಂಡ ಅತ್ಯಂತ ಸಜ್ಜನ ಪ್ರಧಾನಿಗಳಲ್ಲಿ ಮನಮೋಹನ್ ಸಿಂಗ್ ಒಬ್ಬರು.ಅವರ ವಿದ್ಯಾರ್ಹತೆಯ ಮುಂದೆ ಮೋದಿ ಕಾಣದಷ್ಟು ಕುಬ್ಜ. ಆಯಿತಪ್ಪಾ ಅದೂ ಬಿಡಿ, ಹೇಳಿಕೊಳ್ಳುತ್ತಿರುವ ವಿದ್ಯಾರ್ಹತೆಯಾದರೂ ಏನು ಭಾರತದ ಯಾವ ಯುನಿವರ್ಸಿಟಿಯೂ ಈ ವರೆಗೆ ಕೊಡದ ಸ್ನಾತಕೋತ್ತರ ಪದವಿ. ಎಂ.ಎ.ಇನ್ ಎಂಟೈರ್ ಪೊಲಿಟಿಕಲ್ ಸೈನ್ಸ್. ಸುಳ್ಳು ಹೇಳುವಾಗ ಕನಿಷ್ಠ ಸಮರ್ಥಿಸಿಕೊಳ್ಳಲು ಸಾಧ್ಯವಾಗುವಂತದ್ದಾಗಿರಬೇಕು.ಭಾರತದ ಈ ವರೆಗಿನ ಪ್ರಧಾನಿಗಳಲ್ಲೇ ಅತೀ ಹೆಚ್ಚು ವಿದ್ಯಾರ್ಹತೆಯಿದ್ದ ಪ್ರಧಾನಿ ಮನಮೋಹನ್ ಸಿಂಗ್.ಭಾರತವೇಕೆ ಜಗತ್ತಿನಲ್ಲೇ ಅತೀ ಹೆಚ್ಚು ವಿದ್ಯಾರ್ಹತೆ ಹೊಂದಿದ ಪ್ರಧಾನಿಗಳಲ್ಲೊಬ್ಬರು. ಮನಮೋಹನ್ ಸಿಂಗ್ ರನ್ನು ಇವರೆಲ್ಲಾ ಮೌನ ಮೋಹನ್‌ ಸಿಂಗ್ ಎಂದೂ ಗೇಲಿ ಮಾಡಿದರು.ಆದರೆ ಅವರೆಂದೂ ಅದಕ್ಕೆ ಸಭ್ಯತೆಯ ಎಲ್ಲೆ ಮೀರಿದ ಉತ್ತರ ನೀಡಲೂ ಇಲ್ಲ.

ರಿಸರ್ವ್ ಬ್ಯಾಂಕ್ ನ ಗವರ್ನರ್ ಆಗಿದ್ದ ಅವರನ್ನು ಭಾರತದ ಮುಳುಗುತ್ತಿರುವ ಆರ್ಥಿಕತೆಯನ್ನು ಎದ್ದು ನಿಲ್ಲಿಸಲೆಂದೇ ಒತ್ತಾಯಪೂರ್ವಕವಾಗಿ ಕರೆತಂದು ಅರ್ಥ ಸಚಿವರನ್ನಾಗಿ ಮಾಡಿದ್ದು ಇದೇ ಬಿಜೆಪಿಯವರ ಕಾಂಗ್ರೆಸಿನಲ್ಲಿದ್ದ ಡಾರ್ಲಿಂಗ್ ಪಿ.ವಿ.ನರಸಿಂಹರಾವ್.ಆ ಬಳಿಕ ಐದು ವರ್ಷಗಳ ರಾಜ್ಯಸಭೆಯಲ್ಲಿ ಮನಮೋಹನ್ ಸಿಂಗ್ ವಿಪಕ್ಷ ನಾಯಕರಾಗಿದ್ದರು.

ರಿಸರ್ವ್ ಬ್ಯಾಂಕ್ ಗವರ್ನರ್ ಆಗಲು ಬೇಕಾದ ಕನಿಷ್ಠ ಅರ್ಹತೆಯೇನೆಂದು ತಿಳಿಯದವರನ್ನು ಗವರ್ನರ್ ಮಾಡಿದ ಇವರೇನು ರಿಸರ್ವ್ ಬ್ಯಾಂಕೆಂದರೆ ಇತಿಹಾಸ ಸಂಶೋಧನಾ ಸಂಸ್ಥೆ ಎಂದು ತಿಳಿದಿದ್ದಾರಾ?( ಇತಿಹಾಸ ಸಂಶೋಧನಾ ಸಂಸ್ಥೆಗೆ ಮುಖ್ಯಸ್ಥನನ್ನಾಗಿ ಮಾಡಲು ಬೇಕಾದ ಅರ್ಹತೆ ಈಗಿನ ಗವರ್ನರ್ ಗಿಲ್ಲ ಎನ್ನುವುದು ಬೇರೆ ವಿಚಾರ)

ಇದೇ ಬಿಜೆಪಿಯವರು ವಿದೇಶೀ ಮೂಲ ಎಂಬ ಅಸಹ್ಯ ತಕರಾರೆತ್ತಿದಾಗ ಯಾವೊಂದು ಕಪ್ಪು ಚುಕ್ಕೆಯೂ ಇಲ್ಲದ ಸಜ್ಜನ ವ್ಯಕ್ತಿಯನ್ನು,ಸಭ್ಯ ವ್ಯಕ್ತಿಯನ್ನು, ರಾಜಕೀಯದ ರಾಡಿ ಮೆತ್ತಿಸಿಕೊಳ್ಳದ ವ್ಯಕ್ತಿಯನ್ನು, ಅರ್ಥ ಸಚಿವರಾಗಿ ಮಹತ್ವದ ಸಾಧನೆ ಮಾಡಿದ ವ್ತಕ್ತಿಯನ್ನು ಕಾಂಗ್ರೆಸ್ ಆಯ್ಕೆ ಮಾಡಿದ್ದೇ ಅಭಿನಂದನಾರ್ಹ ವಿಚಾರ.

ಹಾಗೆ ನೋಡ ಹೋದರೆ ದೇವೇಗೌಡರೇ ಒಪ್ಪಿಕೊಂಡಂತೆ ಅವರಾದರೆ ಆಕಸ್ಮಿಕ ಪ್ರಧಾನಿ.

ಮೋದಿಯ ಅರ್ಹತೆಯಾದರೂ ಏನು?

ಎರಡೂವರೆ ಸಾವಿರ ಅಮಾಯಕರ ರಕ್ತದ ಕಲೆಯನ್ನು ಅಂಟಿಸಿಕೊಂಡಿದ್ದೇ..?

ಮನಮೋಹನ್ ಸಿಂಗ್ ಯಾರನ್ನೂ ತುಳಿದು ಮೇಲೆ ಬಂದವರಲ್ಲ. ಪ್ರಧಾನಿ ಗಾದಿಗಾಗಿ ಹಾಲಾಹಲವೆಬ್ಬಿಸಿಸಿದವರೂ ಅಲ್ಲ. ಕನಿಷ್ಠ ತನ್ನನ್ನು ಪ್ರಧಾನಿ ಮಾಡಿ ಅಥವಾ ತಾನೂ ಓರ್ವ ಆಕಾಂಕ್ಷಿಯೆಂದವರಲ್ಲ.

ಮೋದಿ ಮಾಡಿದ್ದೇನು? ಬಿಜೆಪಿಗಾಗಿ ತನ್ನ ಇಡೀ ಬದುಕನ್ನೇ ತೇಯ್ದವರನ್ನು ತುಳಿದು ಬಂದು ಗಾದಿಯಲ್ಲಿ ಕೂತದ್ದಲ್ಲವೇ…? ಗುರುವಿಗೇ ತಿರುಮಂತ್ರ ಹೇಳಿದ್ದಲ್ಲವೇ…?

ಎಲ್ಲಾ ಬಿಡಿ ತನ್ನ ರಾಜಕೀಯ ಗುರು ಮಾತ್ರವಲ್ಲ, ಅವರ ಹುದ್ದೆಗೆ ಕಂಟಕವೆದುರಾಗಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಬೇಕೆಂದು ಯೋಚಿಸುತ್ತಿದ್ದಾಗ ಮೋದಿಯ ಬೆನ್ನಿಗೆ ಗಟ್ಟಿಯಾಗಿ ನಿಂತು ರಕ್ಷಿಸಿದ ಆಪದ್ಬಾಂದವನನ್ನೇ ತುಳಿದವರು ಮೋದಿ ಎಂಬುವುದು ಇತಿಹಾಸದ ಪುಟ ಸೇರುವಷ್ಟು ಹಳೇ ವಿಚಾರವಲ್ಲ. ತನ್ನ ಗುರು, ಆಪದ್ಬಾಂದವ ಅಡ್ವಾಣಿಯು ದೈನೇಸಿಯಾಗಿ ಕೈ ಮುಗಿದಾಗ, ಕೈ ಕುಲುಕಲು ಬಂದಾಗ ಅವರತ್ತ ಒಂದು ಕಿರುನೋಟವೂ ಬೀರದ ಮೋದಿ ಎಲ್ಲಿ ಮನಮೋಹನ್ ಸಿಂಗ್ ಎಲ್ಲಿ?

ಮೋದಿ ಪಾರದರ್ಶಕತೆಯ ಹೆಸರಲ್ಲಿ ಹಡೆದಬ್ಬೆಯನ್ನೇ ಜಾಹೀರಾತಿನ ಸಾಧನವಾಗಿ ಮಾಡಿದ್ದರು. ಅದೇ ಮನಮೋಹನ್ ಸಿಂಗ್ ರ ಪುತ್ರಿ ತಂದೆ ಪ್ರಧಾನಿಯಾಗಿದ್ದ ಕಾಲದಲ್ಲೂ ಅಜ್ಞಾತವಾಗುಳಿದಿದ್ದರು. ನಮ್ಮ ಕರ್ನಾಟಕದಲ್ಲೇ ಉದ್ಯೋಗದಲ್ಲಿದ್ದರು.

ಸಾಮಾನ್ಯರಲ್ಲಿ ಸಾಮಾನ್ಯರ ಮಕ್ಕಳಂತೆ ಬದುಕಿದ್ದರು.

ಮೋದಿ ತನ್ನ ಸೂಟ್ ಗೇ ದಿನವೊಂದಕ್ಕೆ ಹತ್ತು ಲಕ್ಷ ಖರ್ಚು ಮಾಡುತ್ತಿದ್ದರೆ ಎರಡು ಅವಧಿಗೆ ಪ್ರಧಾನಿಯಾಗಿದ್ದರೂ ಎಟ್ ದ ಟೈಮ್ ಮೂರಕ್ಕಿಂತ ಹೆಚ್ಚು ಸೂಟನ್ನು ಮನಮೋಹನ್ ಸಿಂಗ್ ಹೊಂದಿರಲಿಲ್ಲ. ಮನಮೋಹನ್ ಸಿಂಗ್ ರಿಗೆ ವಿತ್ತ ಸಚಿವರಾಗುವುದಕ್ಕೆ ಮುಂಚೆ ಬಹುಲಕ್ಷ ವೇತನ ಬರುತ್ತಿತ್ತು. ಮೋದಿಯೇ ಹೇಳುವಂತೆ ಅವರೋರ್ವ ಚಾಯ್ ವಾಲಾ. ಚಾಯ್ ವಾಲಾ ನಲ್ಲಿ ಎಷ್ಟು ಆದಾಯವಿದ್ದಿರಬಹುದು?

ಮುಖ್ಯಮಂತ್ರಿಯಾಗಿದ್ದಾಗ ಗುಜರಾತಿನ ಬೊಕ್ಕಸದಿಂದ  ಕಾರ್ಪೋರೇಟ್ ಕಳ್ಳರಿಗೆ ಅನುಕೂಲ ಮಾಡಿಕೊಟ್ಟ ದುಡ್ಡೇ  ಇರಬೇಕು ತಾನೆ?

ಮನಮೋಹನ್ ಸಿಂಗ್ ರನ್ನು ಇಷ್ಟೆಲ್ಲಾ ಗೇಲಿ ಮಾಡಿದಾಗಲೂ ಅವರು ಚಕಾರವೆತ್ತಲಿಲ್ಲ. ಅದೇ ಮೋದಿಯ ವಿರುದ್ಧ ಬರೆದಿದ್ದಕ್ಕೆ ಅದೆಷ್ಟು ಪತ್ರಕರ್ತರಿಗೆ ಕಿರುಕುಳ ಕೊಟ್ಟಿಲ್ಲ ,ಬಂಧಿಸಿಲ್ಲ…?

ಇದೇ ಒಂದು ವೇಳೆ ಮೋದಿಯ ವಿರುದ್ಧ ಇಂತಹದ್ದೊಂದು ಸಿನಿಮಾ ಮಾಡಿದ್ದಿದ್ದರೆ ನಿರ್ಮಾಪಕ, ನಿರ್ದೇಶಕರೆಲ್ಲಾ ಈಗ ದೇಶದ್ರೋಹದ ಆರೋಪ ಹೊತ್ತು ಜೈಲು ಸೇರುತ್ತಿದ್ದರು.

ಮೋದಿ ಎಂಡ್ ಗ್ಯಾಂಗ್ ಏನೇ ಗೇಲಿ ಮಾಡಿದರೂ ಯಾರು ಉತ್ತಮರು ಎಂದು ತೀರ್ಮಾನಿಸಲಾರಷ್ಟು ದಡ್ಡರಲ್ಲ ಭಾರತೀಯರು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group