ಸುತ್ತ-ಮುತ್ತ

ಆರ್ಥಿಕ ಮೀಸಲಾತಿಯು ಪ್ರಾತಿನಿಧಿಕ ಪ್ರಜಾಪ್ರಭುತ್ವದ ಕಲ್ಪನೆಗೆ ಮಾರಕ: ಪಾಪ್ಯುಲರ್ ಫ್ರಂಟ್

ವರದಿಗಾರ ಜ 9 :  ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ನೀಡಲು ಮುಂದಾಗಿರುವ ಕೇಂದ್ರ ಸರಕಾರದ ಕ್ರಮವು ಪ್ರಾತಿನಿಧಿಕ ಪ್ರಜಾಪ್ರಭುತ್ವದ ಕಲ್ಪನೆಯನ್ನು ಛಿದ್ರಗೊಳಿಸುತ್ತದೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆಸುವ ಪ್ರಯತ್ನಗಳಿಗೆ ಹಾನಿಕಾರಕವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಚೆಯರ್ ಮ್ಯಾನ್ ಇ. ಅಬೂಬಕ್ಕರ್ ಪತ್ರಿಕಾ ಪ್ರಕಟಣೆಯ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಸಂವಿಧಾನದ 15 ಮತ್ತು 16ನೆ ಪರಿಚ್ಛೇದವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮಾತ್ರ ಮೀಸಲಾತಿಯನ್ನು ನಿಗದಿಗೊಳಿಸಿರುವುದಾಗಿ ಸ್ಪಷ್ಟವಾಗಿ ಸೂಚಿಸಿದೆ. ಕೇಂದ್ರ ಸರಕಾರವು ಆರ್ಥಿಕ ಮೀಸಲಾತಿಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವ ವೇಳೆ ನೀಡುತ್ತಿರುವ ಸಮಜಾಯಿಷಿಗಳು ಸಂವಿಧಾನದ ಮೀಸಲಾತಿಯ ಮೂಲ ಆಶಯಕ್ಕೆ ವಿರುದ್ಧವಾದದ್ದು. ಸಾರ್ವಜನಿಕ ಸೇವೆಗಳಲ್ಲಿ ಮಿಸಲಾತಿ ಕೋಟಾ ಇರುವುದು ಕೇವಲ ಬಡತನ ನಿರ್ಮೂಲನೆಯ ಕಾರ್ಯಕ್ರಮವಲ್ಲ. ಸಾವಿರಾರು ವರ್ಷಗಳಿಂದ ಜಾತಿ ಅಥವಾ ಸಮುದಾಯದ ಆಧಾರದಲ್ಲಿ ದುರ್ಬಲ ವರ್ಗಗಳ ಮೇಲೆ ಅಧಿಕಾರಿಶಾಹಿಗಳಿಂದ ವ್ಯವಸ್ಥಿತವಾಗಿ ನಡೆಯುತ್ತಿರುವ ಶೋಷಣೆಯನ್ನು ಕೊನೆಗೊಳಿಸಲು ಮತ್ತು ಸಮಾಜದಲ್ಲಿ ತೀರಾ ಹಿಂದುಳಿದಿರುವ ಅಂತಹ ವರ್ಗಕ್ಕೆ ಸರಕಾರಿ ಸೇವೆಯಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವುದಕ್ಕಾಗಿ ಸಂವಿಧಾನವು ಮೀಸಲಾತಿಯನ್ನು ಪ್ರತಿಪಾದಿಸಿದೆ. ಜಾತಿ ಮತ್ತು ಸಮುದಾಯಗಳ ಪರಿಸ್ಥಿತಿಯ ಹೊರತಾಗಿ ವೈಯಕ್ತಿಕ ಆರ್ಥಿಕ ಪರಿಸ್ಥಿತಿಯು ಯಾವತ್ತೂ ಸ್ಥಿರವಲ್ಲ ಹಾಗು ಅದರಲ್ಲಿ ಏರಿಳಿತವಾಗುತ್ತಿರುತ್ತದೆ. ಆದ್ದರಿಂದ ಆರ್ಥಿಕ ಮಾನದಂಡದಲ್ಲಿ ಮೀಸಲಾತಿ ಕಲ್ಪಿಸುವುದು ಅಪ್ರಸ್ತುತ. ಮಾತ್ರವಲ್ಲ, ನಮ್ಮ ದೇಶದಲ್ಲಿ ಬಡತನ ಎಂಬುದು ವ್ಯಾಪಕವಾಗಿ ಜಾತಿ ಆಧಾರದಲ್ಲೇ ವಿಂಗಡನೆಯಾಗಿದೆ. ಪ್ರಸಕ್ತ ಕ್ರಮವು ಆರ್ಥಿಕ ಮೀಸಲಾತಿ ಕುರಿತಾದ 1992ರ ಇಂದ್ರ ಸಾವ್ನಿ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಮ್ ಕೋರ್ಟು ನೀಡಿದ್ದ ತೀರ್ಪಿಗೂ ವಿರುದ್ಧವಾಗಿದೆ. ಇನ್ನೊಂದೆಡೆ, ಜಾತಿ ಮತ್ತು ಸಮುದಾಯವೆನ್ನದೆ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಎಲ್ಲ ಜನರ ಬಡತನವನ್ನು ನಿವಾರಿಸುವುದು ಸರಕಾರದ ಜವಾಬ್ಧಾರಿಯೂ ಆಗಿದೆ. ಪ್ರಸಕ್ತ ಇರುವ ಸಮುದಾಯಗಳ ಮೀಸಲಾತಿ ಕೋಟಾ ವ್ಯವಸ್ಥೆಯನ್ನು ಹತ್ತಿಕ್ಕದೆಯೇ ಬಡತನ ನಿವಾರಣೆಯ ಗುರಿಯನ್ನು ಸಾಧಿಸಬೇಕು.

ಕಳೆದ ಐದು ವರ್ಷಗಳ ಆಡಳಿತಾವಧಿಯನ್ನು ವ್ಯರ್ಥಗೊಳಿಸಿ ಇದೀಗ ಕೊನೆಕ್ಷಣದಲ್ಲಿ ಮತದಾರರನ್ನು ಮನವೊಲಿಸಲು ದಾರಿಕಾಣದಿದ್ದಾಗ ಬಿಜೆಪಿ ಸರಕಾರವು ಮೀಸಲಾತಿ ವಿರೋಧಿ ಪಡೆಗಳನ್ನು ಮತ್ತು ಮೇಲ್ವರ್ಗದವರನ್ನು ಸಂತುಷ್ಟಗೊಳಿಸುವುದಕ್ಕಾಗಿ ಆರ್ಥಿಕ ಮೀಸಲಾತಿಯ ಕ್ರಮಕ್ಕೆ ಮುಂದಾಗಿದೆ. ಮೇಲ್ಜಾತಿ ವರ್ಗದಿಂದ ನಿಯಂತ್ರಿಸಲ್ಪಡುತ್ತಿರುವ ಕಾಂಗ್ರೆಸ್ ಹಾಗೂ ಸಿಪಿಐಎಂ ಪಕ್ಷಗಳ ಸಹಕಾರ ಪಡೆದುಕೊಂಡೇ ಬಿಜೆಪಿ ನಡೆಸುವ ಈ ಪಿತೂರಿಯ ವಿರುದ್ಧ ಎಲ್ಲ ದಮನಿತ ವರ್ಗಗಳು ಒಂದಾಗಿ ಆರ್ಥಿಕ ಮೀಸಲಾತಿಯ ಕ್ರಮವನ್ನು ವಿರೋಧಿಸಬೇಕು ಎಂದು ಇ. ಅಬೂಬಕ್ಕರ್ ಕರೆ ನೀಡಿದ್ದಾರೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ವಿಭಾಗದ ನಿರ್ದೇಶಕರಾಗಿರುವ ಡಾ. ಮುಹಮ್ಮದ್ ಶಮೂನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group