ವರದಿಗಾರ – ಮದೀನಾ: (ಜ.7): ಇಂಡಿಯನ್ ಸೋಷಿಯಲ್ ಫೋರಂನ ಕರ್ನಾಟಕ ಚಾಪ್ಟರ್ ಮದೀನಾ ಮುನವ್ವರ ಘಟಕಕ್ಕೆ ಮದೀನಾದಲ್ಲಿ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಂಗಳೂರು ಬಿಬಿಎಂಪಿ ಕಾರ್ಪೊರೇಟರ್ ಮುಜಾಹೀದ್ ಪಾಶಾರವರು ಮಾತನಾಡುತ್ತಾ ಭಾರತದ ರಾಜಕೀಯ ಅಧಿಕಾರವು ಭ್ರಷ್ಟಾಚಾರ ಮಾಡುವ ಉದ್ದಿಮೆಯಾಗಿ ಪರಿವರ್ತನೆಗೊಂಡಿದೆ. ಇಂತಹ ಸಂಧರ್ಭದಲ್ಲಿ ಎಸ್.ಡಿ.ಪಿ.ಐಯು ಜನಪರ ಸೇವೆಯ ಉದ್ದೇಶದಿಂದ ದೇಶದ ಕಟ್ಟಕಡೆಯ ಪ್ರಜೆಗೂ ಅಧಿಕಾರ, ಮೂಲಭೂತ ಹಕ್ಕುಗಳನ್ನು ನೀಡಲು ಕಾರ್ಯನಿರ್ವಹಿಸುತ್ತಿದೆ ಎಂದರು.ಸಭಾಧ್ಯಕ್ಷತೆಯನ್ನು ಇಂಡಿಯನ್ ಸೋಷಿಯಲ್ ಫೋರಂ ಮದೀನಾ ಕೇರಳ ಸಮಿತಿಯ ಮುಹಮ್ಮದ್ ಸಾಹೇಬ್ ವಹಿಸಿದ್ದರು. ಶೇಕ್ ಸಿರಾಜ್ ದೇಶದ ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಎಸ್.ಡಿ.ಪಿ.ಐಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಐ.ಎಸ್.ಎಫ್ ನೂತನವಾಗಿ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಬಿಬಿಎಂಪಿ ಕಾರ್ಪೊರೇಟರ್ ಮುಜಾಹಿದ್ ಪಾಶಾ ಇವರು ಶಾಲು ಹೊದಿಸಿ ಬರಮಾಡಿಕೊಂಡರು. ಚುನಾವಣಾ ಅಧಿಕಾರಿಯಾಗಿ ಭಾಗವಹಿಸಿದ್ದ ಐ.ಎಸ್.ಎಫ್ ಮದೀನಾ ಕೇರಳ ಸಮಿತಿ ಅಧ್ಯಕ್ಷ ಮೂಸಾರವರು ನೂತನ ಐ.ಎಸ್.ಎಫ್. ಮದೀನಾ ಕರ್ನಾಟಕ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆಮಾಡಿದರು.
ಅಧ್ಯಕ್ಷರಾಗಿ ಇಲ್ಯಾಸ್ ಗುರುಪುರ, ಉಪಾಧ್ಯಕ್ಷರಾಗಿ ಶಂಸುದ್ದೀನ್ ಉಜಿರೆ, ಪ್ರಧಾನ ಕಾರ್ಯದರ್ಶಿಯಾಗಿ ಹಬೀಬ್ ಅಳಕೆ, ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಅಳಕೆಮಜಲು, ಕೋಶಾಧಿಕಾರಿಯಾಗಿ ಮುಬೀನ್ ಮುಲ್ಕಿ ಆಯ್ಕೆಗೊಂಡರು. ಅಬ್ದುಲ್ ಅಝೀಝ್ ಸುರಿಬೈಲ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಪ್ರ.ಕಾರ್ಯದರ್ಶಿ ಹಬೀಬ್ ಅಳಕೆ ವಂದಿಸಿದರು.
ವರದಿ: ಅಬ್ದುಲ್ ಅಝೀಝ್ ಸುರಿಬೈಲ್
