ನಿಮ್ಮ ಬರಹ

ಬಿಲ್ಲವರೆಂದು ಬಲ್ಲವರಾಗುವುದು?

-ಇಸ್ಮತ್ ಪಜೀರ್

ವರದಿಗಾರ (ಜ.01): ಇದು ಇಂದು ನಿನ್ನೆಯ ಪ್ರಶ್ನೆಯಲ್ಲ…‌ಕಳೆದೊಂದೂವರೆ ದಶಕಗಳಿಂದೀಚೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾವಂತರು,ಜಾತ್ಯಾತೀತರು, ಶೂದ್ರ ಪ್ರಜ್ಞೆಯುಳ್ಳ ಬಿಲ್ಲವರು ಕೇಳಿಕೊಳ್ಳುತ್ತಿರುವ ಪ್ರಶ್ನೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಮೇತರ ಸಮುದಾಯದಲ್ಲಿ ಕೋಮುಗಲಭೆಗಳಲ್ಲಿ‌ ಅತೀ ಹೆಚ್ಚು ಪ್ರಾಣ ಕಳಕೊಂಡವರು,ಜೈಲು‌ ಸೇರಿ ಭವಿಷ್ಯ ಹಾಳು ಮಾಡಿಕೊಂಡವರು, ಪೆಟ್ಟು ತಿಂದವರು, ಅನಾಥರಾದವರು, ವಿಧವೆಯರಾದವರು, ಮಕ್ಕಳನ್ನು ಕಳಕೊಂಡ ನತದೃಷ್ಟ ಹೆತ್ತವರು ಇವೆಲ್ಲಾ ಬಿಲ್ಲವರು. ಅದಾಗ್ಯೂ ಬಿಲ್ಲವ ಸಮುದಾಯವೇಕೆ ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ..?

ಕೋಮುವಾದಕ್ಕಾಗಿ ಇಷ್ಟೆಲ್ಲಾ ತ್ಯಾಗ ಮಾಡಿದಿರಿ…. ಅದಕ್ಕೆ ನೀವು ಪಡೆದ ಪ್ರತಿಫಲವಾದರೂ ಏನು? ಬಿಜೆಪಿ ಆರೆಸ್ಸೆಸ್ ಸಮಾವೇಶದ ಪೋಸ್ಟರ್ ಅಂಟಿಸುವುದು, ಸಮಾವೇಶಗಳಿಗೆ ಜನ ತರುವ ಟಾರ್ಗೆಟ್ ಪಡೆಯುವುದರ ಹೊರತಾಗಿ ಇನ್ನೇನು?

ನಿಮ್ಮನ್ನು ಬಳಸಿದ ಬಿಜೆಪಿ ಸಂಘಪರಿವಾರ ನಿಮಗೆಷ್ಟು ರಾಜಕೀಯ ಪ್ರಾತಿನಿಧ್ಯ ನೀಡಿದೆ? ನೀವು ಬೀದಿಯಲ್ಲಿ ನಿಂತು ಬಡಿದಾಡಿದ್ದರ ಫಲ ತಿನ್ನುವವರ್ಯಾರು? ಮೊನ್ನೆ ಮೊನ್ನೆ ತನಕ ನಿಮ್ಮನ್ನು ನಾನು ಮುಗ್ಧ ಬಲಿಪಶು ಸಮುದಾಯವೆಂದೇ ಹೇಳುತ್ತಿದ್ದೆ. ಒಂದೂವರೆ ದಶಕಗಳಲ್ಲಿ ಇಷ್ಟೆಲ್ಲಾ ನಷ್ಟ ಅನುಭವಿಸಿದರೂ ಪಾಠ ಕಲಿಯದ ಬಿಲ್ಲವ ಯುವ ಸಮೂಹವನ್ನು ಮುಗ್ಧರು ಎಂದು ಹೇಗೆನ್ನಲಿ?

ಅಜಿತ್ ಹನುಮಕ್ಕನವರ್ ಎಂಬ ಕೋಮುಪಿಪಾಸು ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಎಂಪಿ.ಟಿಕೆಟ್ ಪಡೆಯಲು ಪ್ರವಾದಿ ಮುಹಮ್ಮದ್ (ಸ)ರನ್ನು ನಿಂದಿಸಿದ. ಆದರೆ ಅದಕ್ಕೆ ಪ್ರತೀಕಾರವೆಂಬಂತೆ  ಯಾವೊಬ್ಬ ಮುಸ್ಲಿಮನೂ ಯಾವುದೇ ಹಿಂದೂ ಆರಾಧ್ಯರನ್ನು ನಿಂದಿಸಲಿಲ್ಲ. ವಾಸ್ತವದಲ್ಲಿ ಅದು ಭಗವಾನ್ ಮತ್ತು ಹಿಂದೂ ಧರ್ಮೀಯರ ನಡುವಿನ ವೈಚಾರಿಕ ಸಂಘರ್ಷ. ಅದನ್ನು ಅಜಿತ್ ತನ್ನ ಬೇಳೆ ಬೇಯಿಸಿಕೊಳ್ಳಲು ಬಳಸಿ ಸಮಸ್ತ ಮುಸ್ಲಿಂ ಸಮುದಾಯದ ವಿರೋಧಕ್ಕೆ ಗುರಿಯಾದ. ಆತ ಮಾಡಿದ ಕೃತ್ಯವನ್ನು ಖಂಡಿಸಿ ಮುಸ್ಲಿಮರು ಆತನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧ ಸಾರಿದ್ದಾರೆಯೇ ಹೊರತು ಮುಸ್ಲಿಮರು ಕಾಲು ಕೆರೆದು ಜಗಳಕ್ಕೆ ನಿಂತಿಲ್ಲ. ಇಂತಹ ಸಂದರ್ಭದಲ್ಲಿ ಬಿಲ್ಲವರು ಒಂದೋ ಆತನನ್ನು ಖಂಡಿಸಬೇಕಿತ್ತು. ಬಿಡಿ, ನಿಮ್ಮಿಂದ ಅಂತಹ ವಿಶಾಲ ಮನೋಭಾವವನ್ನು ಈ ಕಾಲದಲ್ಲಿ ನಾವು ನಿರೀಕ್ಷಿಸಲಾಗದು. ಆದರೆ ನಿಮಗೆ ಕನಿಷ್ಠ ತಟಸ್ಥವಾಗಿಯಾದರೂ ನಿಲ್ಲಬಹುದಿತ್ತು.‌ಅದು ಬಿಟ್ಟು ಈ ವಿಚಾರದಲ್ಲಿ ಯಾವ ತಪ್ಪೂ ಎಸಗದ ಮುಸ್ಲಿಂ ಸಮುದಾಯವನ್ನು ಹಣಿಯಲು ಸಿಕ್ಕಿದ ಸದವಕಾಶವೆಂದು ಅನಗತ್ಯವಾಗಿ ಮುಸ್ಲಿಮರನ್ನು ಕೆರಳಿಸಿದಿರಿ.

ದೇಯಿ ಬೈದೆತಿಯ ಒಂದು ಪ್ರಕರಣ ಬಿಟ್ಟರೆ ಎಂತಹ ಠಪೋರಿ ಮುಸ್ಲಿಂ ಹುಡುಗರೂ ಬಿಲ್ಲವರಿಗೆ ನೋವುಂಟು ಮಾಡುವಂತಹ ಕೃತ್ಯವೆಸಗಿಲ್ಲ.

ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ ಅರಬ್ ರಾಷ್ಟ್ರಗಳಿಗೆ ದುಡಿಯಲು ಹೋದ ಬಿಲ್ಲವ ಯುವಕರೂ ಮುಸ್ಲಿಮರ ವಿರುದ್ಧ ಪ್ರವಾದಿವರ್ಯರ ವಿರುದ್ಧ ಅರಬ್ ನೆಲದಲ್ಲಿ ಕೂತೇ ಫೇಸ್ ಬುಕ್ ನಲ್ಲಿ ಬರೆಯಲಾರಂಭಿಸಿದಿರಿ.. ಅದರ ವಿರುದ್ಧ ಮುಸ್ಲಿಂ ಸಮುದಾಯ ರೋಷಗೊಂಡಿತು. ಹರೀಶ್ ಪೂಜಾರಿ ಎಂಬ ಬಡ ಹಿಂದೂತ್ವವಾದಿ ಯುವಕ ಜೈಲು ಸೇರಿದ. ನಿಮಗಿದು ಬೇಕಿತ್ತಾ…?

ಮುಸ್ಲಿಮರು ಎಲ್ಲಾದರೂ ಸ್ವಾಮಿ ನಾರಾಯಣ ಗುರುಗಳನ್ನು‌ ನಿಂದಿಸಿದರಾ…? ಕೋಟಿ ಚೆನ್ನಯರನ್ನು ನಿಂದಿಸಿದರಾ? ದೇಯಿ ಬೈದೆದಿಯನ್ನು ಅವಮಾನಿಸಿದ ಯುವಕನ ಬೆನ್ನಿಗೆ ಮುಸ್ಲಿಂ ಸಮುದಾಯದ ಯಾವೊಬ್ಬನೂ‌ ನಿಲ್ಲಲಿಲ್ಲ. ಆತನನ್ನು ಎಲ್ಲರೂ ಖಂಡಿಸಿದರು. ಇಂತಹ ಸಮುದಾಯದ ವಿರುದ್ಧ ವಿನಾಕಾರಣ ಕತ್ತಿ‌ ಮಸೆದರೆ ಅವರಾದರೂ ಬಿಡುತ್ತಾರಾ?

ಸುಮ್ಮನೆ ಸುವರ್ಣ ಡಿಬೇಟ್ ವಿಷಯವನ್ನೇ ಎತ್ತುಕೊಳ್ಳಿ… ಎಷ್ಟು ಜನ ಬ್ರಾಹ್ಮಣರು ಮುಸ್ಲಿಮರು ವಿರುದ್ಧ ಬರೆದಿದ್ದಾರೆ…? ಇಲ್ಲ ಇಲ್ಲ ಎನ್ನುವಷ್ಟು ವಿರಳ. ಸ್ವದೇಶದಲ್ಲಂತೂ ಬಹಳ ನಷ್ಟ ಅನುಭವಿಸಿದಿರಿ…‌ಅರಬಿಕ್ ರಾಷ್ಟ್ರಗಳಿಗೆ ಹೋಗಿ ಅಲ್ಲಿಯೂ ಇಂತಹದ್ದನ್ನೇ ಮಾಡುತ್ತೇವೆಂದು ಏನಾದರೂ ಕಾಂಟ್ರ್ಯಾಕ್ಟ್ ಗೆ ಸಹಿ ಹಾಕಿದ್ದೀರಾ?

ಯಾಕೆ ಬೇಕು ಇದೆಲ್ಲಾ…?

ನೀವು ಯಾವ ಪಾರ್ಟಿಗಾದರೂ ಮತ ಹಾಕಿ, ಅದು ನಿಮ್ಮ ಆಯ್ಕೆ.‌ಅದು ಬಿಟ್ಟು ಇಂತಹ ಧ್ವೇಷ ರಾಜಕೀಯಕ್ಕಿಳಿಯಬೇಡಿ.‌ ಅದರಿಂದ ನೀವು ಕಳಕೊಳ್ಳುವರೇ ಹೊರತು‌ ಪಡಕೊಳ್ಳಲಾರಿ. ಹತ್ತಾರು ಬಿಲ್ಲವರ ಜೊತೆ ವ್ಯಾವಹಾರಿಕ ಗೆಳೆತನವಿಟ್ಟು ಕೊಂಡಿರುವ ನಾನಂತೂ‌ ಬಿಲ್ಲವ ಸಮುದಾಯವನ್ನು ಈಗಲೂ‌ ದೂಷಿಸಲಾರೆ. ಆದರೆ ನನ್ನ ಬಿಲ್ಲವ ಸಹೋದರರಲ್ಲಿ ಒಂದು ಭಿನ್ನಹ… ದಯಮಾಡಿ ನೀವು ಯಾರದೋ ರಾಜಕೀಯ ತೆವಳಿಗಾಗಿ ನಿಮ್ಮ ಭವಿಷ್ಯ ವನ್ನು  ಹಾಳು ಗೆಡವದಿರಿ.

(ಬಿಲ್ಲವ ಸಜ್ಜನರ ಕ್ಷಮೆಯಿರಲಿ)

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group