ಅನಿವಾಸಿ ಕನ್ನಡಿಗರ ವಿಶೇಷ

ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನ- ಇಂಡಿಯನ್ ಸೋಶಿಯಲ್ ಫೋರಂ ಪೂರ್ವ ಪ್ರಾಂತ್ಯ ದಮ್ಮಾಮ್ ಸೌದಿ ಅರೇಬಿಯಾ ಸಂತಾಪ

ಇತ್ತೀಚೆಗೆ ಅಕಾಲಿಕವಾಗಿ ನಮ್ಮನ್ನು ಅಗಲಿದ ಪ್ರಖ್ಯಾತ ಹಿರಿಯ ನಿಷ್ಠಾವಂತ ಐಪಿಎಸ್ ಅಧಿಕಾರಿಯಾದ ಮಧುಕರ್ ಶೆಟ್ಟಿಯವರು ತನ್ನ ಸಾರ್ವಜನಿಕ ಸೇವೆಯುದ್ಧಕ್ಕೂ ಪ್ರಾಮಾಣಿಕವಾಗಿ ಸೇವೆಗೈದ ಓರ್ವ ನಿಷ್ಕಳಂಕ ಮತ್ತು ಪ್ರಶ್ನಾತೀತ ಅಧಿಕಾರಿಯಾಗಿದ್ದರು. ಇವರು ಭ್ರಷ್ಟಚಾರಿಗಳನ್ನು ದಿಟ್ಟವಾಗಿ ಮಟ್ಟ ಹಾಕುತ್ತಾ ತನ್ನ ಬಳಿ ನ್ಯಾಯಕ್ಕಾಗಿ ಬರುವವರನ್ನು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ ನ್ಯಾಯ ದೊರಕಿಸಿ ಕೊಡುತ್ತಿದ್ದರು.

ಪ್ರಖ್ಯಾತ ಪತ್ರಕರ್ತ ದಿವಂಗತ ರಘುರಾಮ್ ಶೆಟ್ಟಿಯವರ ಮಗನಾದ ಇವರು ತಂದೆಗೆ ತಕ್ಕ ಮಗನಂತೆ ಸಾರ್ವಜನಿಕರಲ್ಲಿ ಬಹಳ ವಿನಮ್ರತೆಯಿಂದ ವರ್ತಿಸುತ್ತಾ ಪ್ರಶಂಸೆಗೆ ಪಾತ್ರರಾಗಿದ್ದರು. ಇವರ ಅಕಾಲಿಕ ಮರಣವು ಸಮಾಜಕ್ಕೆ ತುಂಬಲಾರದ ನಷ್ಟ ತಂದಿದೆ.

ಇವರ ಮರಣದ ದುಃಖವನ್ನು ಸಹಿಸುವ ಶಕ್ತಿ ಪರಮಾತ್ಮನು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತಾ ಇಂಡಿಯನ್ ಸೋಶಿಯಲ್ ಫೋರಂ ಪೂರ್ವ ಪ್ರಾಂತ್ಯ ದಮಾಮ್ ಕರ್ನಾಟಕ ಸಮೀತಿಯು ಸಂತಾಪ ಸೂಚಿಸುತ್ತಿದೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group