ನಿಮ್ಮ ಬರಹ

ನಿಂದಿಸುವುದಕ್ಕೆ ಜ್ಞಾನದ ಅಗತ್ಯವಿಲ್ಲ, ಆದರೆ ವಿಶ್ಲೇಷಿಸುವುದಕ್ಕೆ ಅದರ ಅಗತ್ಯವಿದೆ

ಎ ಕೆ ಕುಕ್ಕಿಲ

ಪ್ರವಾದಿ ಮುಹಮ್ಮದರ ಬಗ್ಗೆ ಅಜಿತ್ ಬಳಸಿರುವ ಭಾಷೆ, ವಿಶ್ಲೇಷಿಸಿದ ರೀತಿ ಮತ್ತು ಉಗ್ರ ಪ್ರತಾಪಿ ರೂಪಗಳೆಲ್ಲ ಅವರೇನು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಪ್ರವಾದಿ ಮುಹಮ್ಮದರನ್ನು ಅವರು ಓದಿಕೊಂಡಿಲ್ಲ. ಅಲ್ಲಿ -ಇಲ್ಲಿ ಕೇಳಿದ್ದು ಮತ್ತು ಕಡ ಪಡಕೊಂಡ ವಿವರಗಳನ್ನು ಬಿಟ್ಟರೆ ಉಳಿದಂತೆ ಅವರಲ್ಲಿ ಬೇರೆ ಏನೂ ಇಲ್ಲ. ಒಂದುವೇಳೆ, ಇದಕ್ಕಿಂತ ಹೆಚ್ಚಿನದು ಅವರಲ್ಲಿ ಇರುತ್ತಿದ್ದರೆ ಏಳನೇ ಶತಮಾನದ ವೈವಾಹಿಕ ಪರಿಕಲ್ಪನೆಯನ್ನು ಈ 21ನೇ ಶತಮಾನದಲ್ಲಿ ನಿಂತು ವಿಶ್ಲೇಷಿಸುವಾಗ ತುಸುವಾದರೂ ವಿವೇಚನೆಯಿಂದ ಮಾತಾಡುತ್ತಿದ್ದರು. 21ನೇ ಶತಮಾನಕ್ಕೂ ಮತ್ತು 7ನೇ ಶತಮಾನಕ್ಕೂ ನಡುವೆ ವರ್ಷಗಳ ಅಂತರವಷ್ಟೇ ಇರುವುದಲ್ಲ, ರಾಜಕೀಯ , ಸಾಮಾಜಿಕ, ಆರ್ಥಿಕ, ಕೌಟುಂಬಿಕ ಹೀಗೆ ಪ್ರತಿಯೊಂದರ ನಡುವೆಯೂ ಅಂತರವಿದೆ. ಆಯಾ ಕಾಲದ ಸಂದರ್ಭ, ಸನ್ನಿವೇಶ ಮತ್ತು ಸಾಂಪ್ರದಾಯಿಕ ರೀತಿ ನೀತಿಗಳಿಗೆ ಹೊಂದಿಕೊಂಡು ಅವುಗಳನ್ನು ನಮ್ಮೊಳಗೆ ಇಳಿಸಿಕೊಳ್ಳಬೇಕೇ ಹೊರತು ಅಪಹಾಸ್ಯ ಮಾಡುವುದಲ್ಲ. ವಿಮಾನದಲ್ಲಿ ಪ್ರಯಾಣಿಸುವ ಈ 21ನೇ ಶತಮಾನದ ವ್ಯಕ್ತಿಯು ಒಂಟೆಯಲ್ಲಿ ಪ್ರಯಾಣಿಸುತ್ತಿದ್ದ 7ನೇ ಶತಮಾನದ ವ್ಯಕ್ತಿಯನ್ನು ಗ್ರಹಿಸಿಕೊಂಡು ಅಪಹಾಸ್ಯ ಮಾಡಿದರೆ ಹೇಗಿದ್ದೀತು? 7ನೇ ಶತಮಾನದವರು ಪರಮ ದಡ್ಡರು ಎಂದು ಈತ ಷರಾ ಬರೆದರೆ ಅದು ಏನೆಂದು ಗುರುತಿಸಿಕೊಂಡೀತು?ಅಂಬೇಡ್ಕರ್ ಅವರು ಅವರ ತಂದೆಯ 14 ಮಕ್ಕಳಲ್ಲಿ ಒಬ್ಬರು ಎಂಬುದನ್ನು ಈ 21ನೇ ಶತಮಾನದ ಅಣು ಕುಟುಂಬದ  ಕಾಲದಲ್ಲಿ ನಿಂತುಕೊಂಡು ನಕ್ಕರೆ ಹೇಗಿರುತ್ತೆ ?

ಅಜಿತ್ ಹೇಳಿದಂತೆ ಪ್ರವಾದಿ ಮುಹಮ್ಮದ್ ಶಿಶುಕಾಮಿಯಾಗಿರುತ್ತಿದ್ದರೆ ಅದನ್ನು ಮೊಟ್ಟ ಮೊದಲು ಹೇಳಬೇಕಿದ್ದವರು ಅವರ ಕಾಲದ ಪರಮ ವಿರೋಧಿಗಳಾದ ಅಬೂಜಹಲ್, ಅಬೂಲಹಬ್, ಅಬೂ ಸುಫಿಯಾನ್, ಉತ್ಬಾ ಮುಂತಾದವರು. ಆದರೆ ಪ್ರವಾದಿ ಮುಹಮ್ಮದ್ ಮತ್ತು ಆಯಿಶಾರ ವಿವಾಹವನ್ನು ಇವರು ಬಿಡಿ, ಮಕ್ಕಾ ಮತ್ತು ಮದೀನದಲ್ಲಿರುವ ಯಾರೂ ಆಕ್ಷೇಪಿಸಿರುವುದಕ್ಕೆ ಇತಿಹಾಸದಲ್ಲಿ ಒಂದು ಗೆರೆಯ ಉಲ್ಲೇಖವೂ ಇಲ್ಲ. ಅಂದಹಾಗೆ, ಮೋಹನ್ ಚಂದ್ ಕರಮಚಂದ್ ಗಾಂಧಿ ಎಂಬ ಮಹಾತ್ಮಾ ಗಾಂಧಿಯನ್ನು ವರಿಸುವಾಗ ಕಸ್ತೂರ್ಬಾಗೆ ಬರೇ 12 ವರ್ಷ ವಯಸ್ಸಾಗಿತ್ತು. ವಿವೇಕಾನಂದರ ಗುರುಗಳಾದ ಪರಮಹಂಸರು ತಮ್ಮ 25ನೇ ವಯಸ್ಸಿನಲ್ಲಿ 5ರ ಹರೆಯದ ಶಾರದಾ ದೇವಿಯನ್ನು ವರಿಸಿರುವುದಾಗಿ ಉಲ್ಲೇಖ ಇದೆ. ಇವರಿಬ್ಬರೂ 7ನೇ ಶತಮಾನದವರಲ್ಲ. ನಮ್ಮ ನಡುವಿನಿಂದ ನಿನ್ನೆ ಮೊನ್ನೆಯಂತೆ ಎದ್ದು ಹೋದವರು. ಅಜಿತ್ ಇವರನ್ನೂ ಶಿಶುಕಾಮಿ ಅನ್ನುವರೋ ಗೊತ್ತಿಲ್ಲ. ಒಂದುವೇಳೆ ಅಂದರೆ, ಇದೇ ಭಾಷೆಯಲ್ಲಿ ಮತ್ತು ಇಷ್ಟೇ ಪ್ರಾಮಾಣಿಕವಾಗಿ ಅದನ್ನೂ ಖಂಡಿಸುತ್ತೇನೆ.

ನಿಮ್ಮೊಂದಿಗೆ ಒಂದಕ್ಕಿಂತ ಹೆಚ್ಚು ಡಿಬೇಟ್ ಗಳಲ್ಲಿ ನಾನು ಭಾಗವಹಿಸಿದ್ದೇನೆ ಅಜಿತ್. ಫ್ರೆಂಡ್ ಶಿಪ್ಪೂ ಇದೆ. ಆದರೆ ಪ್ರವಾದಿ ಮುಹಮ್ಮದರ ಬಗ್ಗೆ ನೀವು ಬಳಸಿದ ಭಾಷೆ, ವಿಶ್ಲೇಷಿಸಿದ ರೀತಿ ಮತ್ತು ನಿಮ್ಮ ಬಾಡಿ ಲಾಂಗ್ವೇಜ್ ಅನ್ನು ಈ ಕಾರಣಕ್ಕಾಗಿ ನಾನು ಸಹಿಸಿಕೊಳ್ಳಲಾರೆ. ಗೆಳೆತನ ದೌರ್ಬಲ್ಯ ಅಲ್ಲ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group