ಅನಿವಾಸಿ ಕನ್ನಡಿಗರ ವಿಶೇಷ

ಇಂಡಿಯನ್ ಸೋಶಿಯಲ್ ಫೋರಂ(ISF) ವತಿಯಿಂದ ‘ಬಾಬರಿ ಮಸ್ಜಿದ್ ‌ಮರಳಿ‌ ಪಡೆಯೋಣ, ಭಾರತವನ್ನು‌ ಮರಳಿ ಗಳಿಸೋಣ’ ಅಭಿಯಾನ

ದಮ್ಮಾಮ್: ಇಂಡಿಯನ್ ಸೋಶಿಯಲ್ ಫೋರಂ (ISF) ಕರ್ನಾಟಕ ಘಟಕದ ವತಿಯಿಂದ ಬಾಬರಿ‌‌ ಮಸ್ಜಿದ್ ‌ಮರಳಿ ಪಡೆಯೋಣ, ಭಾರತವನ್ನು ಮರಳಿ ಗಳಿಸೋಣ ಎಂಬ 15 ದಿನಗಳ ಪ್ರಚಾರ ಅಭಿಯಾನವು ಪೂರ್ವ ಪ್ರಾಂತ್ಯದೆಲ್ಲಡೆ ನಡೆಯಿತು.

ಬಾಬರಿ ಮಸ್ಜಿದ್ ‌ದ್ವಂಸವನ್ನು ಕೋಮುವಾದದ ಭಾಗವಾಗಿ ಚಿತ್ರಿಸಿ ರಾಜಕೀಯದ ಲಾಭ ಪಡೆಯಲು ಯತ್ನಿಸುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಇದು ಸಂವಿಧಾನದ ಧ್ವಂಸ ಮತ್ತು ಪ್ರಜಾಪ್ರಭುತ್ವದ‌ ಕಗ್ಗೊಲೆ ಎಂದು ಜನರಲ್ಲಿ ಪ್ರಜ್ಞಾವಂತಿಕೆ ಮೂಡಿಸುವ ಸಲುವಾಗಿ ಅಭಿಯಾನವನ್ನು ಇಂಡಿಯನ್ ಸೋಶಿಯಲ್ ಫೋರಂ ನ ಕೇಂದ್ರ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಡಿಸೆಂಬರ್ 5 ರಂದು ಖೋಬರ್‌ ನ ಗಲ್ಫ್ ದರ್ಬಾರ್‌ ರೆಸ್ಟೋರೆಂಟ್ ನಲ್ಲಿ ಉದ್ಘಾಟಿಸಿ, ಡಿಸೆಂಬರ್ 22 ರಂದು ಹಲವು ಸಂಘ ಮತ್ತು ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಚರ್ಚಾ ಕೂಟವನ್ನು ನಡೆಸಿ‌‌ ಸಂವಿಧಾನವನ್ನು ಮರಳಿ ಗಳಿಸುವ ವಿಶ್ವಾಸದೊಂದಿಗೆ ಅಭಿಯಾನವನ್ನು ಜುಬೈಲ್ ನ ಕುಕ್ ಝೂನ್ ರೆಸ್ಟೋರೆಂಟ್ ನಲ್ಲಿ ಸಮಾರೋಪಗಳಿಸಲಾಯಿತು.

ಅಭಿಯಾನದ ಭಾಗವಾಗಿ ಹಲವಾರು ಸಂಘ ಸಂಸ್ಥೆಗಳೊಂದಿಗೆ ಚರ್ಚಾ ಕೂಟ ಏರ್ಪಾಡಿಸಿದಲ್ಲದೆ, ರೂಮ್ ಸಂದರ್ಶನಗಳನ್ನು ಮಾಡಿ ಸುಮಾರು 500 ಕ್ಕೂ ಹೆಚ್ಚು ಜನರಿಗೆ ಬಾಬರಿ ಮಸೀದಿಯ ಶಹೀದ್ ಮತ್ತು ಅದರಲ್ಲಿನ ರಾಜಕೀಯದ ಬಗ್ಗೆ ಅರಿವು ಮೂಡಿಸಿದಲ್ಲದೆ, ನ್ಯಾಯ ನಿರಾಕರಣೆಯ 26 ವರ್ಷಗಳನ್ನು ನೆನಪಿಸಲಾಯಿತು.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group