ರಾಜ್ಯ ಸುದ್ದಿ

ಗುಂಪು ಹಿಂಸಾ ಹತ್ಯೆ ವಿರುದ್ಧ ‘ಮನೆಯಿಂದ ಹೊರ ಬಂದ’ ಜನತೆ: ದೇಶಾದ್ಯಂತ ಸಂಚಲನ ಸೃಷ್ಟಿಸಿದ ಮಾನವ ಸರಪಳಿ

ವರದಿಗಾರ-ಬೆಂಗಳೂರು: ದೇಶಾದ್ಯಂತ ಮುಸ್ಲಿಮರು, ದಲಿತರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಗುಂಪು ಹಿಂಸಾ ಹತ್ಯೆಯನ್ನು ವಿರೋಧಿಸಿ ಆಗಸ್ಟ್ 1 ರಿಂದ 25 ರ ವರೆಗೆ ನಡೆದ “ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ” ಅಭಿಯಾನದ ಸಮಾರೋಪದ ಅಂಗವಾಗಿ ನಡೆದ “ಮನೆಯಿಂದ ಹೊರಗೆ ಬನ್ನಿ” ಎಂಬ ಕರೆಯೊಂದಿಗೆ ದೇಶದಾದ್ಯಂತ ಏಕ ಕಾಲದಲ್ಲಿ ಹಮ್ಮಿಕೊಂಡ ಮಾನವ ಸರಪಳಿ ಎಲ್ಲೆಡೆಗಳಲ್ಲಿ ಸಂಚಲನ ಸೃಷ್ಟಿಸಿದೆ.

ದೇಶದಾದ್ಯಂತ ಪ್ರಮುಖ ಮಸೀದಿಗಳ ಮುಂಭಾಗದಲ್ಲಿ, ಪ್ರಮುಖ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ, ಪಟ್ಟಣ,ನಗರ ಪ್ರದೇಶಗಳಲ್ಲಿ ಸಾರ್ವಜನಿಕರು ಒಟ್ಟಾಗಿ ಮಾನವ ಸರಪಳಿ ರಚಿಸುವ ಮೂಲಕ ಗುಂಪು ಹಿಂಸೆಯ ವಿರುದ್ಧ ಎಚ್ಚರಿಕೆಯ ಐಕ್ಯತೆಯನ್ನು ಪ್ರದರ್ಶಿಸಿದರು.

ರಾಜ್ಯದ ವಿವಿಧ ಕಡೆಗಳಲ್ಲಿ 20 ನಿಮಿಷಗಳ ಕಾಲ ನಡೆದ ಮಾನವ ಸರಪಳಿಯ ಮೂಲಕ ಮಾನವೀಯತೆಗಾಗಿ ಒಂದಾಗೋಣ, ಭಾರತ ಲಿಂಚಿಸ್ತಾನ ಆಗುವುದನ್ನು ತಡೆಯೋಣ, ಗುಂಪು ಹತ್ಯೆಯನ್ನು ಕೊನೆಗೊಳಿಸೋಣ, ಅಮಾಯಕರ ಜೀವವನ್ನು ರಕ್ಷಿಸೋಣ, ನ್ಯಾಯಾಲಯಗಳ ಕಣ್ಣು ತೆರೆಸೋಣ, ಗೋ ರಾಜಕೀಯವನ್ನು ತಡೆಯೋಣ ಮತ್ತು ಕಾನೂನು ಪಾಲಕರ ಕರ್ತವ್ಯವನ್ನು ನೆನಪಿಸೋಣ ಎಂಬಿತ್ಯಾದಿ ಭಿತ್ತಿಪತ್ರಗಳನ್ನು ಹಿಡಿದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಮಾನವ ಸರಪಳಿಯಲ್ಲಿ ಭಾಗವಹಿಸಿದ ಜನರು, ಗುಂಪು ಹಿಂಸೆಯಿಂದ
ಹತ್ಯೆಯಾದ ಅಮಾಯಕರ ಚಿತ್ರಗಳ ಮುಖವಾಡವನ್ನು ಧರಿಸಿ ಅವರ ಹತ್ಯೆಯನ್ನು ಮರೆಯುವುದಿಲ್ಲ ಎಂಬ ವಿಚಾರವನ್ನು ಪ್ರದರ್ಶಿಸುವುದರ ಮೂಲಕ ಹಿಂಸಾ ಕೃತ್ಯಕ್ಕೆ ಬಲಿಯಾದವರಿಗೆ ನ್ಯಾಯ ಸಿಗಲು ಜಾಗೃತಿಯನ್ನು ಮೂಡಿಸಿದರು.

ದೇಶದಲ್ಲಿ ಈ ಮಾನವ ಸರಪಳಿ ಮೂಲಕ ಪ್ರತಿರೋಧದ ಎಚ್ಚರಿಕೆಯೊಂದಿಗೆ ನ್ಯಾಯಕ್ಕಾಗಿ ಧ್ವನಿ ಮೊಳಗಿದ್ದು ಮೊದಲನೇ ಬಾರಿ ಎಂದು ಹೇಳಲಾಗುತ್ತಿದೆ.

ಕರ್ನಾಟಕದ 188 ಕಡೆಗಳಲ್ಲಿ ಲಕ್ಷಾಂತರ ಜನ ಸೇರಿದ ಮಾನವ ಸರಪಳಿ ಕಾರ್ಯಕ್ರಮ ನಡೆದಿದ್ದು, ಸಂಘಟನಾತೀತವಾಗಿ, ಪಕ್ಷಾತೀತವಾಗಿ ನಡೆದ ಈ ವಿಭಿನ್ನ ಕಾರ್ಯಕ್ರಮಕ್ಕೆ ಎಲ್ಲಾ ಕಡೆಗಳಲ್ಲಿ ವ್ಯಾಪಕ ಜನ ಬೆಂಬಲ ಸಿಕ್ಕಿರುವುದರಿಂದ ಜನರಲ್ಲಿ ಸಂವಿಧಾನ ಬದ್ಧವಾದ ಪ್ರತಿರೋಧ ಶಕ್ತಿ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಯಿತು. ಗುಂಪು ಹಿಂಸೆಯ ಮೂಲಕ ಭಾರತೀಯರನ್ನು ಹತೈಗೈಯುವ ಗೋ ರಕ್ಷಕರಿಗೆ ಎಚ್ಚರಿಕೆಯ ಪ್ರತಿರೋಧದ ಶಕ್ತಿಯನ್ನು ತೋರಿಸುವುದರಲ್ಲಿ ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಯಾಗಿದೆ.

ರಾಜ್ಯದ ವಿವಿಧ ಕಡೆಗಳಲ್ಲಿ ನಡೆದ “ಮನೆಯಿಂದ ಹೊರಗೆ ಬನ್ನಿ” ಕಾರ್ಯಕ್ರಮದ ಒಂದು ನೋಟ

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group