ಅನಿವಾಸಿ ಕನ್ನಡಿಗರ ವಿಶೇಷ

ಕತಾರ್ ರಾಷ್ಟ್ರೀಯ ದಿನ ಆಚರಣೆಯಲ್ಲಿ ಇಂಡಿಯನ್ ಸೋಷಿಯಲ್ ಫೋರಂ ಭಾಗಿ

  

ಡಿಸೆಂಬರ್ 18 ರಂದು ಕತಾರ್ ದೇಶದ ರಾಷ್ಟ್ರೀಯ ದಿನ ಆಚರಿಸಲಾಯಿತು .ರಾಷ್ಟ್ರೀಯ ದಿನ ಆಚರಣೆಯ ಪ್ರಯುಕ್ತ  ವಿವಿಧ ದೇಶಗಳ ಅನಿವಾಸಿ ಸಂಘಟನೆಗಳಿಗಾಗಿ ಕತಾರ್ ಸರಕಾರವು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು .  ದೋಹಾದ ಏಷ್ಯನ್ ಟೌನ್ ನಲ್ಲಿ ಆಯೋಜಿಸಿದ್ದ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಾಗವಹಿದ ಕತಾರ್ ಇಂಡಿಯನ್ ಸೋಷಿಯಲ್ ಫೋರಂ ದ್ವಿತೀಯ ಬಹುಮಾನವನ್ನು ಗೆದ್ದುಕೊಂಡಿದೆ. ಹಳೆಯ ಕತಾರ್, ಪ್ರಸ್ತುತ ಕತಾರ್, ಹಾಗೂ ಭವಿಷ್ಯದ ಕತಾರ್ ಎಂಬ ಮೂರು ವಿಷಯಗಳನ್ನು ವಿವಿಧ ಸ್ತಂಬ್ದ ಚಿತ್ರಗಳು ,ಆಕರ್ಷಕ ಟ್ಯಾಬ್ಳೋಗಳು ಹಾಗೂ ಬಿತ್ತಿ ಚಿತ್ರಗಳ ಮೂಲಕ ಪ್ರದರ್ಶಿಸಿ ಪ್ರೇಕ್ಷಕರ ಹಾಗೂ ತೀರ್ಪುಗಾರರ ಮನ ಗೆಲ್ಲುವಲ್ಲಿ ಕತಾರ್ ಇಂಡಿಯನ್ ಸೋಶಿಯಲ್ ಫೋರಂ ಯಶಸ್ವಿಯಾಯಿತು .

ಅದೇರೀತಿ ದಕ್ಷಿಣ ಭಾರತದ ಸಾಂಪ್ರದಾಯಿಕ ಕಲೆಗಳಾದ ದಫ್ಫ್ ಪ್ರದರ್ಶನ, ಕೋಲಾಟ,ಕಳರಿ,ತಾಲೀಮು ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ  ಆಕರ್ಷಕ ಪ್ರದರ್ಶನ ನೀಡಿದರು .ಹಾಗೂ ಅರೇಬಿಯನ್ನರ ಸಾಂಪ್ರದಾಯಿಕ ಉಡುಗೆಗಳನ್ನು ದರಿಸಿದ ಸೋಷಿಯಲ್ ಫೋರಂ ನ ಸದಸ್ಯರು ಕಾರ್ಯಕ್ರಮವನ್ನು ವರ್ಣರಂಜಿತ ಕಾರ್ಯಕ್ರಮ ವನ್ನಾಗಿ ಮಾಡಿದರು.. ವಿವಿಧ ದೇಶಗಳ ಹಲವಾರು ಸಂಘಟನೆಗಳ ಕಾರ್ಯಕ್ರಮಗಳ ಮದ್ಯೆಯೂ ಇಂಡಿಯನ್ ಸೋಷಿಯಲ್ ಫೋರಂ ಪ್ರಶಸ್ತಿ ಗಳಿಸಿದರ ಬಗ್ಗೆ ಅನಿವಾಸಿ ಬಾರತೀಯರು ಹಾಗೂ ಕತಾರ್ ದೇಶದ ಅದಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ

 ಸೋಷಿಯಲ್ ಫೋರಂ ಕೇಂದ್ರ ಸಮಿತಿ ಅದ್ಯಕ್ಷರಾದ ಸಯೀದ್ ಕೊಮಾಚಿಯವರು ಕತಾರ್ ಅದಿಕಾರಿಗಳಿಂದ ನಗದು ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನು ಸ್ವೀಕರಿಸಿದರು ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಕಾರ್ಯದರ್ಶಿಯವರಾದ ಲತೀಫ್ ಮಡಿಕೇರಿ, ಕರ್ನಾಟಕ ರಾಜ್ಯದ ಅಧ್ಯಕ್ಷರಾದ ನಝೀರ್ ಪಾಷ ತುಮಕೂರು ಹಾಗೂ ಪ್ರದಾನ ಕಾರ್ಯದರ್ಶಿ ಯವರಾದ ಅನ್ವರ್ ಸಾದತ್ ಬಜತ್ತೂರು , ಝಮೀರ್ ಹಳೆಯಂಗಡಿ, ಫಝೀವುದ್ದೀನ್ ತುಮಕೂರು ಹಾಗೂ ಝಕರಿಯ ಪಾಂಡೇಶ್ವರ ಉಪಸ್ಥಿತರಿದ್ದರು

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group