ಅನಿವಾಸಿ ಕನ್ನಡಿಗರ ವಿಶೇಷ

ಮಕ್ಕಾ: ಹಜ್ಜಾಜಿಗಳಿಗೆ ಕೆಸಿಎಫ್ ನಿಂದ ಹಜ್ಜ್ ತರಬೇತಿ

ವರದಿಗಾರ-ಸೌದಿ ಅರೇಬಿಯಾ:  ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)  ಹಜ್ಜ್ ಸ್ವಯಂ ಸೇವಕರ ಕೋರ್ ತಂಡ ಹಜ್ಜಾಜಿಗಳಿಗೆ, ಹಜ್ಜ್ ತರಬೇತಿಗಳನ್ನು ಪ್ರತಿ ನಿತ್ಯ ಮಕ್ಕತುಲ್ ಮುಕರ್ರಮದಲ್ಲಿ ನೀಡುತ್ತಿದೆ.
 ಪವಿತ್ರ ಹಜ್ಜ್ ಗೆ ಕ್ಷಣಗಣನೆ ಆರಂಭಗೊಂಡಿದ್ದು,  ಪವಿತ್ರ ಹಜ್ಜ್  ಕಮ೯ ನಿವ೯ಹಿಸಲು ವಿಶ್ವದ ನಾನಾ ಭಾಗಗಳಿಂದ  ವಯಸ್ಕರು, ಮಹಿಳೆಯರು ಪವಿತ್ರ ಮಕ್ಕಾದೆಡೆಗೆ ಆಗಮಿಸುತ್ತಿದ್ದಾರೆ. ಭಾರತದಿಂದಲೂ ಈ ಬಾರಿ ಲಕ್ಷಾಂತರ ಹಾಜಿಗಳು ಆಗಮಿಸಿದ್ದು, ಹೆಚ್.ವಿ.ಸಿ ಕಾರ್ಯಕರ್ತರು ಕನಾ೯ಟಕದ  ಹಜ್ಜಾಜಿಗಳಿರುವ ಕಟ್ಟಡಗಳಿಗೆ ತೆರಳಿ ಹಾಜಿಗಳಿಗೆ ಮನದಟ್ಟಾಗುವ ರೀತಿಯಲ್ಲಿ  ಹಜ್ಜ್  ತರಗತಿ ನೀಡುತ್ತಿದ್ದಾರೆ.  ದಾರುಲ್ ಇರ್ಶಾದ್ ಮಾಣಿ ಇದರ ಆರ್ಗನೈಸರ್ ಉಮ್ಮರ್ ಸಖಾಫಿ ಪರಪ್ಪು ಅವರ ನೇತೃತ್ವದಲ್ಲಿ ಹಜ್ಜ್ ತರಗತಿ ನೀಡಲಾಗುತ್ತಿದ್ದು, ಪ್ರತಿನಿತ್ಯವೂ ಹಾಜಿಗಳು ಹಜ್ಜ್ ಕರ್ಮದ  ಮಾಹಿತಿಗಳನ್ನು ಪಡೆದು,  ಹಜ್ಜ್ ಕರ್ಮ ನಿರ್ವಹಿಸಲು ಸಜ್ಜಾಗಿದ್ದಾರೆ.
ಹಜ್ಜ್ ಸ್ವಯಂ ಸೇವಕರ ಕೋರ್ ನಾಯಕರಾದ ಮೂಸಾ ಹಾಜಿ ಕಿನ್ಯ ಮತ್ತಿತ್ತರ ಹೆಚ್.ವಿ.ಸಿ ಕಾರ್ಯಕರ್ತರು ತರಗತಿಗಳ ಸಂದರ್ಭ ಉಪಸ್ಥಿತರಿದ್ದರು.
'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group