ರಾಷ್ಟ್ರೀಯ ಸುದ್ದಿ

‘ನಾನು ಮಾಧ್ಯಮಗಳಿಗೆ ಹೆದರುತ್ತಿದ್ದ ಪ್ರಧಾನ ಮಂತ್ರಿಯಾಗಿರಲಿಲ್ಲ’ : ಮೋದಿಗೆ ಟಾಂಗ್ ನೀಡಿದ ಮನಮೋಹನ್ ಸಿಂಗ್

ಮನಮೋಹನ್ ರನ್ನು ‘ಮೌನ ಮೋಹನ’ ಎಂದು ಟೀಕಿಸಿದ್ದ ಮೋದಿ!

ವರದಿಗಾರ (ಡಿ. 19): ‘ನನ್ನನ್ನು ಮೌನ ಪ್ರಧಾನಿ ಎಂದು ಪತ್ರಿಕೆಗಳು ಬಣ್ಣಿಸಿದ್ದವು. ಆದರೆ ನನಗೆ ಪತ್ರಿಕೆಗಳ ಜತೆ ಮಾತನಾಡಲು ಯಾವ ಭಯವೂ ಇರಲಿಲ್ಲ’. ಪ್ರಸಕ್ತ ಇರುವ ಪರಿಸ್ಥಿತಿಯಂತೆ ನಾನು ಮಾಧ್ಯಮಗಳಿಗೆ ಹೆದರುತ್ತಿರಲಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್  ಹೇಳಿದ್ದು ಪ್ರಧಾನಿ ನರೇಂದ್ರ ಮೋದಿಯನ್ನು ಪರೋಕ್ಷವಾಗಿ ಕುಟುಕಿದ್ದಾರೆ.

ತಮ್ಮ ಐದು ಸಂಪುಟಗಳ “ಚೇಂಜಿಂಗ್ಇಂಡಿಯಾ” ಕೃತಿ ಬಿಡುಗಡೆ ಸಮಾರಂಭದಲ್ಲಿಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿ ಮಾಧ್ಯಮವನ್ನುಮಣಿಸಲು ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಮೋದಿ ವಿರೋಧ ಪಕ್ಷದಲ್ಲಿದ್ದಾಗಅಂದಿನ ಪ್ರಧಾನಿ ಮನಮೋಹನ್ ಸಿಂಗ್  ರನ್ನು ‘ಮೌನಮೋಹನ’ ಎಂದು ಟೀಕಿಸಿದ್ದರು.ಆದರೆ ಈಗ ಮಾಧ್ಯಮಗಳಿಗೆ ಪ್ರಶ್ನೆಗಳನ್ನುಕೇಳಲು ಅವಕಾಶ ನೀಡದಿರುವ ಬಗ್ಗೆವೀಕ್ಷಕರು ಮೋದಿಯನ್ನು ಲೇವಡಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಮನಮೋಹನ್ ಸಿಂಗ್  ಈ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

“ನಾನು ಪತ್ರಿಕೆಗಳಿಗೆ ಹೆದರುವ ಪ್ರಧಾನಿ ಆಗಿರಲಿಲ್ಲ. ನಾನು ಮಾಧ್ಯಮಗಳನ್ನು ನಿಯತವಾಗಿ ಭೇಟಿಯಾಗುತ್ತಿದ್ದೆ. ಪ್ರತಿ ವಿದೇಶ ಪ್ರವಾಸಕೈಗೊಂಡಾಗಲೂ ವಾಪಸ್ಸಾದ ಬಳಿಕ ಪತ್ರಿಕಾಗೋಷ್ಠಿ ನಡೆಸುತ್ತಿದ್ದೆ.ಇಂಥ ಗೋಷ್ಠಿಗಳ ವಿವರಗಳೂ ಈ ಪುಸ್ತಕದಲ್ಲಿವೆ.ನಾನು ಮೌನ ಪ್ರಧಾನಿಯಾಗಿದ್ದೆ ಎಂದು ಜನ ಹೇಳುತ್ತಾರೆ. ಆದರೆ ಈ ಐದುಸಂಪುಟಗಳೇ ಮಾತನಾಡುತ್ತವೆ. ಪ್ರಧಾನಿಯಾಗಿ ನನ್ನ ಸಾಧನೆಗಳನ್ನು ಹೇಳಿಕೊಂಡಿಲ್ಲ.ಈ ಸಂಪುಟಗಳಲ್ಲಿ ಎಲ್ಲ ಘಟನಾವಳಿಗಳಲ್ಲಿ ವಿವರಿಸಿದ್ದೇನೆ” ಎಂದು ಹೇಳಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group