ವರದಿಗಾರ (ಡಿ.18): ದಲಿತ ನಾಯಕರು, ದಲಿತ-ದಮನಿತ ಪರ ಹೋರಾಟಗಾರರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ಸದಸ್ಯರಾಗಿರುವ ಆನಂದ ಮಿತ್ತಬೈಲ್ ರವರಿಗೆ ಸಂಘಪರಿವಾರದ ಮೂರು ಮಂದಿ ಗೂಂಡಾಗಳು ಕಾರಿನಲ್ಲಿ ಬಂದು ಕೊಲೆ ಬೆದರಿಕೆಯನ್ನು ಹಾಕಿರುವ ಘಟನೆ ನಡೆದಿದ್ದು, ಘಟನೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ದ.ಕ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಸಂಘಪರಿವಾರ ನಡೆಸುತ್ತಿರುವ ಕುಕೃತ್ಯದ ವಿರುದ್ಧ ಧ್ವನಿಮೊಳಗಿಸಿ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವ ಕಾರಣಕ್ಕಾಗಿಯೇ ಈ ರೀತಿಯಾಗಿ ಬೆದರಿಸುವ ಕೃತ್ಯಕ್ಕೆ ಇಳಿದಿರುವುದು ಇದೇನು ಮೊದಲೇನಲ್ಲ ವೈಚಾರಿಕತೆಯ ಮೂಲಕ ಎದುರಿಸಲು ಸಾಧ್ಯವಾಗದೆ ಇದ್ದಾಗ ಈ ರೀತಿಯ ಬೆದರಿಕೆಯ ಮೂಲಕ ಸತ್ಯದ ದನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಸ್.ಡಿ.ಪಿ.ಐ ಆರೋಪಿಸಿದೆ.
ಇಂತಹ ಬೆದರಿಕೆಗೆ ಹೆದರಿಕೊಂಡು ಹೋರಾಟದಿಂದ ಹಿಂಜರಿಯುವ ವ್ಯಕ್ತಿತ್ವ ಎಸ್ ಡಿಪಿಐ ಪಕ್ಷದಲಿಲ್ಲ ಎಂಬುದನ್ನು ಸಂಘಪರಿವಾರ ಅರ್ಥ ಮಾಡಿಕೊಳ್ಳಬೇಕು, ದಲಿತ ಮುಖಂಡನ ಮೇಲೆ ಬೆದರಿಕೆ ಒಡ್ಡಿದ ಸಂಘಪರಿವಾರದ ಗೂಂಡಗಳನ್ನು ಪೊಲೀಸ್ ಇಲಾಖೆ ಕೂಡಲೆ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದು, ಇಲ್ಲದಿದ್ದಲ್ಲಿ ಜಿಲ್ಲಾದ್ಯಂತ ಹೋರಾಟ ನಡೆಸಲಾಗುವುದೆಂದು ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.
