ರಾಷ್ಟ್ರೀಯ ಸುದ್ದಿ

ಅಂತಾರಾಷ್ಟ್ರೀಯ ಗೀತೋತ್ಸವದ ಸ್ಥಳದಲ್ಲಿ  ‘ಪಾಕಿಸ್ತಾನ್ ಝಿಂದಾಬಾದ್’  ಘೋಷಣೆಯ ಬಲೂನುಗಳು !!

ವರದಿಗಾರ (ಡಿ 17) :  ಹರ್ಯಾಣದ ಕುರುಕ್ಷೇತ್ರದಲ್ಲಿ ನಡೆಯುತ್ತಿರುವ ‘ಅಂತಾರಾಷ್ಟ್ರೀಯ ಗೀತೋತ್ಸವ 2018’ ನಡೆಯುತ್ತಿರುವ ಸ್ಥಳದಲ್ಲಿ ‘ಪಾಕಿಸ್ತಾನ್ ಝಿಂದಾಬಾದ್’ ಘೋಷಣೆಯುಳ್ಳ ಬಲೂನುಗಳು ಪತ್ತೆಯಾಗಿವೆ.  ಅಲ್ಲಿನ ಕೆಲ ಮಕ್ಕಳು ಇಂತಹಾ ಬಲೂನುಗಳೊಂದಿಗೆ ಆಟವಾಡುತ್ತಿರುವುದು ಕಂಡುಬಂದಿತ್ತು  ಎಂದು ಪೊಲೀಸ್ ಮೂಲಗಳು ಹೇಳಿವೆ.

 

ಗೀತೋತ್ಸವ ನಡೆಯುತ್ತಿದ್ದ ಸ್ಥಳದಲ್ಲಿದ್ದ ಕೆಲ ಮಕ್ಕಳ ಕೈಯ್ಯಲ್ಲಿ ಇಂತಹಾ ಬಲೂನುಗಳನ್ನು ಕಂಡ  ಮಲ್ಖಾನ್ ಎನ್ನುವ ಭದ್ರತಾ ಸಿಬ್ಬಂದಿಯ ದೂರಿನ ಆಧಾರದ ಮೇಲೆ ಆದರ್ಶ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಚೌತೋ ರಾಮ್ ಎನ್ನುವ ಅಲ್ಲಿನ ಪೊಲೀಸ್ ಸಿಬ್ಬಂದಿ ಹೇಳಿದ್ದಾರೆ.

ಈ ಬಲೂನುಗಳು ಎಲ್ಲಿಂದ ಬಂದವು ಮತ್ತು ಹೇಗೆ ಮಕ್ಕಳ ಕೈಗೆ ಸಿಕ್ಕವು ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ಕೆಲವು ಯುವಕರು ಈ ಬಲೂನುಗಳನ್ನು ಹಿಡಿದುಕೊಂಡಿದ್ದರು. ಆದರೆ ಅವರನ್ನು ಹುಡುಕಲಾಗುತ್ತಿದ್ದು, ಈ ಕುರಿತು ತನಿಖೆ ನಡೆಸಿ ಘಟನೆಯ ಪೂರ್ವಾಪರಗಳನ್ನು ಅನ್ವೇಷಿಸಲಾಗುತ್ತದೆ ಎಂದಿದ್ದಾರೆ.

ಕುರುಕ್ಷೇತ್ರದ ಪೊಲೀಸ್ ಅಧೀಕ್ಷಕ ಸುರಿಂದರ್ ಪಾಲ್ ಅವರು ಹೇಳುವಂತೆ, ‘ಇಂತಹದ್ದೇ ಬಲೂನುಗಳು ಪೊಲೀಸ್ ಚೆಕ್ ಪೋಸ್ಟ್ ಒಂದರ ಬಳಿಯೂ ದೊರೆತಿದ್ದು, ಸ್ಥಳದ ಸಿಸಿಟಿವಿ ದೃಶ್ಯಗಳ ಸುಳಿವನ್ನು ಆಧರಿಸಿ ತನಿಖೆ ನಡೆಸಲಾಗುವುದು’ ಎಂದಿದ್ದಾರೆ.

ಅಂತಾರಾಷ್ಟ್ರೀಯ ಗೀತೋತ್ಸವ 2018′ ಹರ್ಯಾಣದ ಕುರುಕ್ಷೇತ್ರದಲ್ಲಿ ಡಿಸಂಬರ್ 7 ರಿಂದ 23 ರವರೆಗೆ ಆಯೋಜಿಸಲಾಗಿದ್ದು, ಮೋರಿಷಸ್ ಇದರ ಪಾಲುದಾರ ಆಯೋಜಕ ರಾಷ್ಟ್ರವಾಗಿದ್ದು, ಗುಜರಾತ್ ಇದರ ಪಾಲುದಾರ ಆಯೋಜಕ ರಾಜ್ಯವಾಗಿದೆ

ಒಟ್ಟಿನಲ್ಲಿ ಇದು ಪಾಕಿಸ್ತಾನದ ಹೆಸರಿನಲ್ಲಿ ತಮ್ಮ ರಾಜಕೀಯದ ನೆಲೆ ಗಟ್ಟಿಗೊಳಿಸಿರುವ ಕೆಲ ಸ್ಥಾಪಿತ ಹಿತಾಸಕ್ತಿಗಳ ಸಂಚಿನ ಭಾಗವಾಗಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈ ಹಿಂದೆಯೂ ಕರ್ನಾಟಕದ ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಾಡಿಸಿದ್ದು, ನಂತರ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರನ್ನು ಬಂಧಿಸಿದ್ದು ಇಲ್ಲಿ ಸ್ಮರಣೀಯ

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group