ರಾಷ್ಟ್ರೀಯ ಸುದ್ದಿ

ರಫೇಲ್​​ ಹಗರಣ: ಸುಪ್ರೀಂ ಕೋರ್ಟ್ ತೀರ್ಪು ಮರು ಪರಿಶೀಲನೆಗೆ ಕಾಂಗ್ರೆಸ್​​ ಆಗ್ರಹ

‘ತಪ್ಪು ಮಾಹಿತಿ ನೀಡಿ ಸುಪ್ರೀಂ ಕೋರ್ಟಿನ ದಾರಿ ತಪ್ಪಿಸಿದ ಕೇಂದ್ರ ಸರ್ಕಾರ’

ವರದಿಗಾರ(ಡಿ.16): ರಫೇಲ್ ಹಗರಣದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್​ ನೀಡಿದ ‘ನಮಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ವರದಿ ಪ್ರಕಾರ ಈ ಒಪ್ಪಂದದಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಇಂತಹ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸುವ ಮಾತೇ ಇಲ್ಲ’ ತೀರ್ಪನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.

ರಫೇಲ್​​ ಒಪ್ಪಂದವನ್ನು ವಿಚಾರಣೆಗೆ ಸುಪ್ರೀಂ ಸರಿಯಾದ ಸ್ಥಳವಲ್ಲ. ಈ ಪ್ರಕರಣ ತನಿಖೆಗೆ ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯೇ ಸೂಕ್ತ. ಪಿಎಸಿ ಸದಸ್ಯರೇ ರಫೇಲ್​​ ಒಪ್ಪಂದದಲ್ಲಿ ನಡೆದ ಅಕ್ರಮ ಬಯಲಿಗೆ ಎಳೆಯುತ್ತಾರೆ. ಕೇಂದ್ರ ಸರ್ಕಾರ ನಿಮಗೆ ಸುಳ್ಳು ವರದಿ ನೀಡಿ ದ್ರೋಹ ಬಗೆದಿದೆ ಎಂದು ಕಾಂಗ್ರೆಸ್ ಹೇಳಿದೆ. ಇದು ಸುಪ್ರೀಂಕೋರ್ಟ್​​ ತೀರ್ಪಿಗೆ ಹಾನಿಕಾರಕ. ಸಿಎಜಿ ವರದಿ ಇಲ್ಲಿಯವರೆಗೂ ಬಹಿರಂಗಗೊಂಡಿಲ್ಲ. ಸಂಸತ್​ನಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿಲ್ಲ. ನೀವು ನೀಡಿದ ತೀರ್ಪು ಆಧರಿಸಿ ಕೇಂದ್ರ ಸರ್ಕಾರ ಪ್ರಕರಣದ ದಿಕ್ಕು ತಪ್ಪಿಸಲು ಮುಂದಾಗಿದೆ ಎಂದು ಕಾಂಗ್ರೆಸ್​​ ನಾಯಕ ಆನಂದ್​ ಶರ್ಮಾ ಆರೋಪಿಸಿದ್ದಾರೆ.

ರಫೇಲ್ ಒಪ್ಪಂದ ಕುರಿತಂತೆ ಮಾತನಾಡಿದ ಕಾಂಗ್ರೆಸ್ ನ ಹಿರಿಯ ಮುಖಂಡ ಕಪಿಲ್ ಸಿಬಾಲ್, ಸರ್ಕಾರ ಸುಪ್ರೀಂಕೋರ್ಟ್​​ಗೆ ಮೋಸ ಮಾಡಿದೆ. ಕೇಂದ್ರ ಸಲ್ಲಿಸಿದ ವರದಿಯಲ್ಲಿ ವಾಸ್ತವಾಂಶಗಳ ಲೋಪ ಇದೆ. ಸರ್ಕಾರ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದೆ. ಈ ಅರ್ಜಿಯ ಮೂಲಕ ಅವರು ಸುಪ್ರೀಂಕೋರ್ಟ್ ಘನತೆ, ಗೌರವವನ್ನು ಕಡೆಗಣಿಸಿದ್ದಾರೆ ಎಂದು ಹೇಳಿದ್ದು,ಈ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಜನರಿಂದ ಸತ್ಯವನ್ನು ಮರೆಮಾಚಲು ಸರ್ಕಾರ ಪ್ರಯತ್ನಿಸುತ್ತಿದೆ. ಅಲ್ಲದೇ ಇದರಲ್ಲಿಯೂ ಮೋದಿ ಸರ್ಕಾರ ಇಂದಿನವರೆಗೂ ಸಫಲವಾಗಿದೆ. ಸುಪ್ರೀಂಕೋರ್ಟ್ ವಿಮಾನದ ದರ ಮತ್ತು ತಾಂತ್ರಿಕ ಅಂಶಗಳನ್ನು ಗಮನಿಸಿಲ್ಲ. ವರದಿ ನೋಡದಯೇ ತೀರ್ಪು ನೀಡಿದೆ. ಯಾವುದೇ ಅಕ್ರಮ ಒಪ್ಪಂದ ಸಂಬಂಧ ಜಂಟಿ ಸದನ ಸಮಿತಿ ಮಾತ್ರ ತನಿಖೆ ನಡೆಸಲು ಸಾಧ್ಯ ಎಂದು ಸಿಬಾಲ್ ಚಾಟಿ ಹೇಳಿದ್ದಾರೆ.

ರಫೇಲ್​​ ಒಪ್ಪಂದ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡುವಂತೆ ಸೂಚಿಸಿ ಅಟಾರ್ನಿ ಜನರಲ್, ಕಂಟ್ರೋಲರ್, ಆಡಿಟರ್ ಜನರಲ್ ಅವರಿಗೆ ಸಾರ್ವಜನಿಕ ಲೆಕ್ಕ ಸಮಿತಿ (ಪಿಎಸಿ) ಸಮನ್ಸ್ ನೀಡುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಹೋರಾಟ ಮುಂದುವರಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದ್ದು, ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಲಿದೆ ಎನ್ನಲಾಗಿದೆ. ಕೇವಲ ಸಂಸದೀಯ ಸಮಿತಿ ಮಾತ್ರ ಪ್ರಧಾನಿ ಭರವಸೆಯ ಬಗೆಗಿನ ಸಾಕ್ಷ್ಯವನ್ನು ಪರಿಶೀಲಿಸಬಹುದಾಗಿದೆ. ಸುಪ್ರೀಂಕೋರ್ಟ್ ರಫೇಲ್ ಒಪ್ಪಂದದ ಬೆಲೆ ನಿಗದಿ ಮತ್ತು ತಾಂತ್ರಿಕ ಆಯಾಮಗಳ ಬಗ್ಗೆ ಪರಿಶೀಲನೆ ನಡೆಸಿಲ್ಲ. ಜಂಟಿ ಸಂಸದೀಯ ಸಮಿತಿ ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿದೆ. ತಪ್ಪು ಮಾಹಿತಿ ನೀಡಿ ಸುಪ್ರೀಂ ಕೋರ್ಟಿನ ದಾರಿ ತಪ್ಪಿಸಿದ ಕೇಂದ್ರ ಸರ್ಕಾರ, ನ್ಯಾಯಾಲಯ ನಿಂದನೆಯಿಂದ ತಪ್ಪಿಸಿಕೊಳ್ಳಲು ರಾಷ್ಟ್ರದ ಕ್ಷಮೆ ಯಾಚಿಸಬೇಕಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಒತ್ತಾಯಿಸಿದ್ಧಾರೆ.

ಎಜಿ ಹಾಗೂ ಸಿಎಜಿಗೆ ಸಮನ್ಸ್ ನೀಡುತ್ತೇವೆ. ಬಳಿಕ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಸಿಎಜಿ ವರದಿಯನ್ನು ಯಾವಾಗ ಸಂಸತ್ತಿನಲ್ಲಿ ಮಂಡಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟನೆ ಕೇಳುತ್ತೇವೆ. “ಕೇಂದ್ರ ಸರ್ಕಾರ ರಾಷ್ಟ್ರಕ್ಕೆ ಮಂಕುಬೂದಿ ಎರಚಿ ಜನರನ್ನು ವಂಚಿಸಿದೆ. ಇದೀಗ ಸುಪ್ರೀಂಕೋರ್ಟ್‌ನ ದಾರಿ ತಪ್ಪಿಸಿದೆ. ಇದು ನ್ಯಾಯಾಲಯ ನಿಂದನೆ, ವಿಶೇಷ ಹಕ್ಕುಗಳ ಉಲ್ಲಂಘನೆಯಾಗುತ್ತದೆ” ಎಂದು ಖರ್ಗೆ ಕಿಡಿಕಾರಿದ್ದಾರೆ.

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group