ಆತ್ಮೀಯ ಗುರುವರ್ಯರೂ ನೂರಾರು ಯುವ ವಿದ್ವಾಂಸರಿಗೆ ಹನೀಫಿ ಬಿರುದು ನೀಡಿ ದಅವಾ ಕ್ಷೇತ್ರಕ್ಕೆ ಸಮರ್ಪಿಸಿದ ,ಹಲವೆಡೆ ಮುದರ್ರಿಸ್ ಆಗಿ, ನೆಲ್ಲಿಕ್ಕುನ್ನು ಅರಬಿಕ್ ಕಾಲೇಜ್ ಪ್ರಾಂಶುಪಾಲರಾಗಿ, ಸುರಿಬೈಲ್ ದಾರುಲ್ ಅಶ್ ಅರಿಯ್ಯ ಅರಬಿಕ್ ಕಾಲೇಜ್ ಪ್ರಾಂಶುಪಾಲರಾಗಿ ಹನೀಫಿ ಬಿರುದು ತನ್ನ ಶಿಷ್ಯಂದಿರಿಗೆ ನೀಡಿ ದೀನೀ ಸೇವೆ ಸಲ್ಲಿಸಿ ನಮ್ಮನ್ನಗಲಿದ ಹಿರಿಯ ವಿದ್ವಾಂಸ ಪಿ.ಎ.ಅಬ್ದುರ್ರಹ್ಮಾನ್ ಅಲ್ ಜುನೈದಿ ಅವರ ವಿಯೋಗ ಸಮುದಾಯಕ್ಕೆ ತುಂಬಲಾರದ ನಷ್ಟ ವಾಗಿದೆ. ಅರಿವಿನ ಸಾಗರವಾಗಿದ್ದ ಉಸ್ತಾದ್ ರವರ ಜೀವನ ಅತ್ಯಂತ ಸರಳತೆಯಿಂದ ಕೂಡಿತ್ತು. ತನ್ನ ಶೀಷ್ಯರನ್ನು ಅತಿಯಾಗಿ ಪ್ರೀತಿಸಿ, ಬೇಕಾದ ಆದೇಶ, ನಿರ್ದೇಶ ನೀಡಿ ಅವರನ್ನು ಪ್ರಬೋಧನಾ ರಂಗಕ್ಕೆ ಸಜ್ಜುಗೊಳಿಸುವ ಉಸ್ತಾದ್ ರ ಶ್ರಮ ನಿಜಕ್ಕೂ ಸರ್ವರಿಗೂ ಮಾದರಿ. ಉಸ್ತಾದ್ ರ ಪರಲೋಕ ಜೀವನ ಅಲ್ಲಾಹು ಸ್ವರ್ಗ ಅನುಭೂತಿಯ ತಾಣವನ್ನಾಗಿ ಅಲ್ಲಾಹು ಮಾರ್ಪಡಿಸಲಿ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದಕ್ಷಿಣ ಕನ್ನಡ ಜಿಲ್ಲೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ
