ಅನಿವಾಸಿ ಕನ್ನಡಿಗರ ವಿಶೇಷ

ಕುವೈಟ್ ನಲ್ಲಿ ಐಎಸ್ಎಫ್ ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ: ಪ್ರಯೋಜನ ಪಡೆದ ನೂರಾರು ಅನಿವಾಸಿ ಭಾರತೀಯರು

ವರದಿಗಾರ-ಕುವೈಟ್: ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ ವತಿಯಿಂದ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವು ಶುಕ್ರವಾರ ಇಲ್ಲಿನ ಫರ್ವಾನಿಯಾ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ಸಭಾಂಗಣದಲ್ಲಿ  ನಡೆಯಿತು.

ಅನಿವಾಸಿ ಭಾರತೀಯರಲ್ಲಿ ವಿಶೇಷತಃ ಅಸಂಘಟಿತ, ದುರ್ಬಲ, ಕಾರ್ಮಿಕ ವರ್ಗಗಳ ಮಧ್ಯೆ ಆರೋಗ್ಯದ ಕುರಿತಾದ ಜಾಗೃತಿ ಮೂಡಿಸಲು ಹಾಗೂ ಭಾರತೀಯ ಮೂಲದ ತಜ್ಞ ವೈದ್ಯರಿಂದ ಸೂಕ್ತ ಸಲಹೆ ನೀಡುವ ಗುರಿಯಾದರಿಸಿ ಹಮ್ಮಿಕೊಂಡಿದ್ದ ಈ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ನೂರಾರು ಸಂಖ್ಯೆಯ ಅನಿವಾಸಿಗಳು ಪಡೆದುಕೊಂಡರು.ಅತ್ಯಾಧುನಿಕ ವೈದ್ಯಕೀಯ ಸೌಲಭ್ಯ ಹಾಗೂ ನುರಿತ ವೈದ್ಯರುಗಳನ್ನೊಳಗೊಂಡ, ಮಧ್ಯಪ್ರಾಚ್ಯದ ಖಾಸಗಿ ವಲಯದ ಪ್ರಮುಖ ಆರೋಗ್ಯ ಕೇಂದ್ರಗಳಲ್ಲೊಂದಾದ ಬದ್ರ್ ಅಲ್ ಸಮಾ ಸಹಭಾಗಿತ್ವದಲ್ಲಿ ನಡೆದ ಶಿಬಿರದ ಪ್ರಯೋಜನ ಪಡೆಯುವುದಕ್ಕಾಗಿ ಬೆಳಗ್ಗಿನಿಂದಲೇ ಅನಿವಾಸಿ ಭಾರತೀಯರು ಸರತಿ ಸಾಲಿನಲ್ಲಿ ನಿಂತಿದ್ದು ಕಂಡು ಬಂತು.

ಮಧುಮೇಹ, ರಕ್ತದ ಒತ್ತಡ, ಕೊಲೆಸ್ಟ್ರಾಲ್, ಎಸ್ ಜಿ ಪಿ ಟಿ  (ಲಿವರ್ ಸ್ಕ್ರೀನಿಂಗ್), ಕ್ರಿಯೇಟಿನೈನ್ (ಮೂತ್ರಪಿಂಡಗಳ ಪರೀಕ್ಷೆ) ಮುಂತಾದ ಪರೀಕ್ಷೆಗಳು ಶಿಬಿರಾರ್ಥಿಗಳಿಗೆ ಉಚಿತವಾಗಿ ಲಭ್ಯವಿದ್ದವು. ಅಲ್ಲದೆ ಜನರಲ್ ಮೆಡಿಸಿನ್, ಮಕ್ಕಳ ವಿಭಾಗ, ಸ್ತ್ರೀ ರೋಗ ವಿಭಾಗ, ದಂತ ಚಿಕಿತ್ಸಾ ವಿಭಾಗ, ಜನರಲ್ ಸರ್ಜರಿ ಒಳಗೊಂಡಂತೆ ವಿವಿಧ ಕ್ಷೇತ್ರಗಳ ತಜ್ಞ ವೈದ್ಯರಿಂದ ಸಂದರ್ಶನ ಪಡೆದು ಅನಿವಾಸಿಗಳು ಉತ್ತಮ ಆರೋಗ್ಯಕ್ಕೆ ಸಂಬಂದಪಟ್ಟ ಸೂಕ್ತ ಸಲಹೆಗಳನ್ನು ಪಡೆದು ಕೊಂಡರು. 

ಬೆಳಿಗ್ಗೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ನಾಯಕರಾದ ಹಸನ್ ಯೂಸುಫ್,  ಆರೋಗ್ಯ ತಪಾಸನ ಶಿಬಿರವನ್ನು ಉದ್ಘಾಟಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ವ್ಯವಸ್ಥಾಪಕರಾದ ಅಬ್ದುಲ್ ರಜಾಕ್’ರವರು ಆರೋಗ್ಯದ ಪ್ರಾಮುಖ್ಯತೆಯ ಕುರಿತು ವಿವರಿಸುತ್ತಾ ಅನಿವಾಸಿಗಳು ಕೆಲಸದ ಒತ್ತಡದಿಂದಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವುದಲ್ಲದೆ, ಹೃದಯ ಸಂಬಂಧಿಯಂತಹ ಗಂಭೀರ ಖಾಯಿಲೆಗಳ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಗುರುತಿಸಲು ವಿಫಲವಾಗುತ್ತಿರುವುದು ಕಳವಳಕಾರಿಯಾಗಿದೆ ಎಂದರು. ಈ ನಿಟ್ಟಿನಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಆಯೋಜಿಸುತ್ತಿರುವ ಆರೋಗ್ಯ ತಪಾಸಣಾ ಶಿಬಿರವು ಶ್ಲಾಘನೀಯ. ಐಎಸ್ಎಫ್ ಕರ್ನಾಟಕ ವಿಭಾಗದ ಅಧ್ಯಕ್ಷರಾದ ಇಮ್ತಿಯಾಜ್ ಅಹ್ಮದ್ ಅರ್ಕುಳ ಮಾತನಾಡುತ್ತಾ, ಇಂಡಿಯನ್ ಸೋಶಿಯಲ್ ಫೋರಮ್’ನಕಾರ್ಯ ವೈಖರಿಯ ಬಗ್ಗೆ ವಿವರಿಸುತ್ತಾ, ಪ್ರಸಾವಿಕ ಭಾಷಣ ಮಾಡಿದರು.  

ಐ ಎಸ್ ಎಫ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ರಫೀಕ್ ಮಂಚಿ ಸ್ವಾಗತಿಸಿ, ಆಸೀಫ್ ಕಾಪು ಕಾರ್ಯಕ್ರಮ ನಿರೂಪಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಬದ್ರ್ ಸಮಾದ ವಿಶಿಷ್ಟ ಕೊಡುಗೆಗಾಗಿ ಈ ಸಂದರ್ಭದಲ್ಲಿ ಫಲಕ ನೀಡಿ ಗೌರವಿಸಲಾಯಿತು.

  

 

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

The Latest

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group