ರಾಷ್ಟ್ರೀಯ ಸುದ್ದಿ

ಪಂಚರಾಜ್ಯ ಚುನಾವಣಾ ಫಲಿತಾಂಶ; ದೇಶದ ರಾಜಕೀಯದಲ್ಲಿ ಬಿಜೆಪಿಯ ಸ್ಥಾನವನ್ನು ತೋರಿಸಿದೆ: ಎಸ್.ಡಿ.ಪಿ.ಐ

ವರದಿಗಾರ (ಡಿ.12): ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನು ಸ್ವಾಗತಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‍ಡಿಪಿಐ), ಈ ಫಲಿತಾಂಶವು, ಅತಿಯಾದ ಆತ್ಮವಿಶ್ವಾಸದ ಬಿಜೆಪಿಯ ಶಕ್ತಿಯನ್ನು ಕುಗ್ಗಿಸಿದ್ದು, ಭಾರತೀಯ ರಾಜಕಾರಣದಲ್ಲಿ ಅದರ ಸ್ಥಾನವನ್ನು ತೋರಿಸಿದೆ. ಇಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಹೇಳುವುದಕ್ಕಿಂತ ಬಿಜೆಪಿ ಸಂಪೂರ್ಣ ಸೋತು ಹೋಗಿದೆ ಎಂದು ಹೇಳಿದರೆ ಸೂಕ್ತವಾಗುತ್ತದೆ.
ಎಸ್‍ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಅವರು ಈ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ, ಬಿಜೆಪಿಯ ಜನವಿರೋಧಿ ನೀತಿಗಳು, ಹಿಂದುತ್ವ ಕಾರ್ಯಸೂಚಿಗೆ ಪ್ರೋತ್ಸಾಹ, ಭಾರತೀಯ ಸಂವಿಧಾನಕ್ಕೆ ಅಗೌರವ ಇತ್ಯಾದಿ ಅದರ ನೀತಿಗಳಿಗೆ ಭಾರೀ ಬೆಲೆ ತೆತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿ, ಅಭಿವೃದ್ಧಿ ಗುರಿಯನ್ನು ಬಿಟ್ಟು ಭಾವನಾತ್ಮಕ ವಿಷಯಗಳಾದ ರಾಮಮಂದಿರ, ಗೋ ಜಾಗೃತಿ, ಗೋಮಾಂಸ, ಲವ್ ಜಿಹಾದ್ ಇತ್ಯಾದಿಗಳನ್ನು ಮುಂದಿಟ್ಟು ಮತದಾರರ ಕಣ್ಣಿಗೆ ಮಣ್ಣೆರಚಲು ಪ್ರಯತ್ನಿಸಿತು. ಆದರೆ ಪ್ರಬುದ್ಧ ಮತದಾರ ಬಿಜೆಪಿಗೆ ಎಂದೂ ಮರೆಯಲಾರದಂತಹ ತಕ್ಕ ಪಾಠ ಕಲಿಸಿದ್ದಾನೆ. ದೇಶದ ಜನರಿಗೆ ಪ್ರತಿಮೆ, ಮಂದಿರ, ಹೆಸರು ಬದಲಾವಣೆಗಳು ಅಗತ್ಯವಿಲ್ಲ. ದೇಶದ ಹೆಚ್ಚಿನ ಗ್ರಾಮಗಳು ಮತ್ತು ನಗರಗಳಲ್ಲಿ ಇಂದಿಗೂ ಅಗತ್ಯ ಮೂಲ ಸೌಲಭ್ಯಗಳಾದ ಗುಣಮಟ್ಟದ ಆರೋಗ್ಯ ಸೇವೆ, ಶಿಕ್ಷಣ, ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ, ತಂತ್ರಜ್ಞಾನ ಸೌಲಭ್ಯಗಳ ಕೊರತೆ ಇದೆ. ರೈತರು ಕೂಡ ಸಂಕಷ್ಟದಿಂದ ಬಳಲುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಭಿವೃದ್ಧಿ ಮತ್ತು ದೇಶದ ಸಮಗ್ರತೆಗೆ ಒತ್ತು ನೀಡುವುದು ಯಶಸ್ವಿಗೆ ನಾಂದಿಯಾಗಲಿದೆ. ಆದರೆ ಅಭಿವೃದ್ಧಿ ಎಲ್ಲಿದೆ ಎಂದು ಪ್ರಶ್ನಿಸಿರುವ ಎಂ.ಕೆ.ಫೈಝಿ, ಭಾರತದಲ್ಲಿ ಮೋದಿ ಅವರು ಯಾವುದಾದರೂ ರೀತಿಯಲ್ಲಿ ಅಭಿವೃದ್ಧಿಯನ್ನು ಮಾಡಿದ್ದಾರೆಯೇ ? ಮೋದಿ ಅವರು ಇದುವರೆಗೆ ನೋಟು ಅಮಾನ್ಯೀಕರಣದ ಮೂಲಕ ಮಧ್ಯಮ ವರ್ಗದ ಹಣವನ್ನು ಲೂಟಿ ಮಾಡಿದ್ದಾರೆಯೇ ಹೊರತು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ರೈತರ ಆತ್ಮಹತ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಭಿವೃದ್ಧಿಯನ್ನು ನಿರ್ಲಕ್ಷಿಸಿ ಅತಿಯಾದ ಆತ್ಮವಿಶ್ವಾಸದಿಂದ ಇದ್ದ ಬಿಜೆಪಿಗೆ ಈ ಫಲಿತಾಂಶ ಉತ್ತಮ ಪಾಠವಾಗಿದೆ. ಭಾರತ ಸರ್ಕಾರ ದೇಶದ ಎಲ್ಲಾ ಜನರಿಗಾಗಿ ಕೆಲಸ ಮಾಡಬೇಕೇ ಹೊರತು ಒಂದು ನಿರ್ದಿಷ್ಟ ಧರ್ಮ ಅಥವಾ ಪ್ರದೇಶದ ಜನರಿಗಾಗಿ ಕೆಲಸ ಮಾಡಬೇಕು ಎಂದು ಯಾರೂ ಕೂಡ ನಿರೀಕ್ಷಿಸುವುದಿಲ್ಲ ಎಂದು ಎಂ.ಕೆ.ಫೈಝಿ ನೆನಪಿಸಿದ್ದಾರೆ.

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Click to comment

You must be logged in to post a comment Login

Leave a Reply

ಮೂವರು ಸಮಾನ ಮನಸ್ಕ ಸ್ನೇಹಿತರ ಸಮಾಜಕ್ಕೇನಾದರೂ ಒಳಿತು ಮಾಡಬೇಕೆಂಬ ತುಡಿತವೇ 'ವರದಿಗಾರ'

ಪತ್ರಿಕೆಯ ಒಳಗಿನ ಪುಟಗಳ ಸಣ್ಣ ಕಾಲಂಗಳಲ್ಲಿ ಅಡಗಿ ಹೋದ, ಸುಳ್ಳನ್ನು ಅಬ್ಬರಿಸಿ ದಿಕ್ಕು ತಪ್ಪಿಸುವ ಮಾಧ್ಯಮದ ಪ್ರಯತ್ನದ ನಡುವೆ ಸದ್ದಿಲ್ಲದೆ ತೆರೆಮರೆಯಲ್ಲಿ ಅಡಗಿ ಹೋದ ಸತ್ಯವನ್ನು ಜಾಲಾಡಿ ನಿಮ್ಮ ಮುಂದೆ ತರುವುದೇ 'ವರದಿಗಾರ'ನ ಪ್ರಯತ್ನ .

'ವರದಿಗಾರ' ನಿಮಗೆ ಆಪ್ತವೇ?? ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

To Top
error: Content is protected !!
WhatsApp Join our WhatsApp group